ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

By Manoj B.k

ಹೊಸ ಕಾರು ಖರೀದಿಸುವಾಗ ಸಾಮಾನ್ಯವಾಗಿ ಬಹುತೇಕ ಗ್ರಾಹಕರು ಕಾರಿನ ತಾಂತ್ರಿಕ ಅಂಶಗಳನ್ನ ಪರಿಶೀಲನೆ ಬದಲಾಗಿ ಬೆಲೆ ಮತ್ತು ಮೈಲೇಜ್ ವಿಚಾರವಾಗಿ ಹೆಚ್ಚು ಆಲೋಚನೆ ಮಾಡುವುದನ್ನ ನಾವೆಲ್ಲಾ ನೋಡಿದ್ದೇವೆ. ಆದ್ರೆ ಅದಕ್ಕಿಂತ ಮುಂಚಿತವಾಗಿ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳ ಬಗೆಗೆ ಅರಿತುಕೊಳ್ಳುವುದು ಮುಖ್ಯ ಎನ್ನುವುದು ನಮ್ಮ ಅಭಿಪ್ರಾಯ. ಯಾಕೆಂದ್ರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕುತ್ತಿರುವಾಗ ಸುರಕ್ಷಾ ವಿಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಅಪಾಯದ ಮೊದಲ ಹೆಜ್ಜೆ ಅಂದ್ರೆ ತಪ್ಪಾಗುವುದಿಲ್ಲ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ವಾಹನ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ವಾಹನಗಳು ಬಿಡುಗಡೆಗೊಳ್ಳುತ್ತಲೇ ಇರುತ್ತವೆ ಇವುಗಳಲ್ಲಿ ಬಹುತೇಕ ಕಾರುಗಳು ಅಗ್ಗದ ಬೆಲೆಗೆ ಲಭ್ಯವಿದ್ದರೂ ಸುರಕ್ಷಾ ದೃಷ್ಠಿಯಿಂದ ಖರೀದಿಗೆ ಯೋಗ್ಯವಾಗಿರುವುದಿಲ್ಲ ಎನ್ನುವುದನ್ನ ಗ್ರಾಹಕರು ಈ ಬಗ್ಗೆ ಎಚ್ಚರ ವಹಿಸಬೇಕು. ಅವುಗಳಲ್ಲಿ ಮುಖ್ಯ ಬ್ರೇಕಿಂಗ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾರುಗಳಲ್ಲಿ ಏನೆಲ್ಲಾ ಸೌಲಭ್ಯಗಳಿಗೆ ಎನ್ನುವ ಬಗ್ಗೆ ಕೆಲವರಿಗೆ ಗೊತ್ತೆ ಇರುವುದಿಲ್ಲ. ಅಂತವುಗಳಲ್ಲಿ ಬ್ರೇಕ್ ಅಸಿಸ್ಟ್ ಸೌಲಭ್ಯ ಕೂಡಾ ಒಂದು.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಹಾಗಾದ್ರೆ ಕಾರುಗಳಲ್ಲಿ ಒದಗಿಸಲಾಗುವ ಬ್ರೇಕ್ ಅಸಿಸ್ಟ್ ಅಂದ್ರೆ ಏನು? ಅದು ಕಾರ್ಯನಿರ್ವಹಣೆ ಮಾಡುತ್ತೆ? ಬ್ರೇಕ್ ಅಸಿಸ್ಟ್ ನಿಮ್ಮ ವಾಹನ ಚಾಲನೆ ವೇಳೆ ಯಾವ ರೀತಿ ಸಹಾಯಕ್ಕೆ ಬರುತ್ತೆ? ಎನ್ನುವ ಕುರಿತು ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನ ನೀಡಿದ್ದೇವೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಬ್ರೇಕ್ ಅಸಿಸ್ಟ್ (Brake assist)

ಕಾರುಗಳಲ್ಲಿ ಅಳವಡಿಸಲಾಗುವ ಮುಖ್ಯ ತಾಂತ್ರಿಕ ಅಂಶವಾದ ಬ್ರೇಕ್ ಅಸಿಸ್ಟ್ ಸೌಲಭ್ಯವು ತುರ್ತುಪರಿಸ್ಥಿತಿಯಲ್ಲಿ ಕಾರಿನ ವೇಗದ ಮೇಲೆ ಅತಿ ಕಡಿಮೆ ಅವಧಿಯಲ್ಲಿ ನಿಯಂತ್ರಣ ಸಾಧಿಸಲು ಅನೂಕಲಕರವಾಗುವಂತೆ ಜೋಡಣೆ ಮಾಡಿರುವ ಒಂದು ಸುರಕ್ಷಾ ಸೌಲಭ್ಯವಾಗಿರುತ್ತೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಅಂದರೇ, ಕಾರಿನಲ್ಲಿರುವ ಸಾಮಾನ್ಯ ಬ್ರೇಕ್ ಸೌಲಭ್ಯ ಹೊರತುಪಡಿಸಿ ಕೆಲವು ತುರ್ತು ಸಂದರ್ಭಗಳಲ್ಲಿ ಚಾಲಕನ ಸಹಾಯಕ್ಕೆ ಬರುವ ಬ್ರೇಕ್ ಅಸಿಸ್ಟ್ ಸೌಲಭ್ಯವು ಕೆಲವೇ ಸೇಕೆಂಡುಗಳಲ್ಲಿ ವೇಗದ ಕಾರನ್ನ ಯಾವುದೇ ಹಾನಿಯಾಗದಂತೆ ನಿಲುಗಡೆ ಮಾಡಬಲ್ಲ ಗುಣಲಕ್ಷಣ ಹೊಂದಿದೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಆದರೆ, ಬ್ರೇಕ್ ಅಸಿಸ್ಟ್ ಇಲ್ಲದ ವಾಹನಗಳಿಗೂ ಮತ್ತು ಬ್ರೇಕ್ ಅಸಿಸ್ಟ್ ಹೊಂದಿರುವ ವಾಹನಗಳಿಗೂ ಹೋಲಿಕೆ ಮಾಡಿದಾಗ ಅಪಘಾತ ಪ್ರಕರಣಗಳಲ್ಲಿ ತಡೆಯುವಲ್ಲಿ ಬ್ರೇಕ್ ಅಸಿಸ್ಟ್ ಪರಿಣಾಮಕಾರಿಯಾಗಿ ಚಾಲಕನ ಸಹಾಯಕ್ಕೆ ಬರುವುದಲ್ಲದೇ ಆಕಸ್ಮಿಕವಾಗಿ ಚಲಿಸುತ್ತಿರುವ ಕಾರಿಗೆ ಅಡ್ಡವಾಗಿ ಬರುವ ಪಾದಾಚಾರಿಗಳು ಮತ್ತು ಪ್ರಾಣಿಗಳ ಜೀವ ಉಳಿಸಬಹುದಾಗಿದೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಬ್ರೇಕ್ ಅಸಿಸ್ಟ್ ವಿಧಗಳು

ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್ (ಇಬಿಎ)

ಪ್ರಿಡಿಕ್ಟಿವ್ ಬ್ರೇಕ್ ಅಸಿಸ್ಟ್ (ಪಿಬಿಎ)

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ವಿವಿಧ ಹೆಸರುಗಳಿಂದ ಕರೆಯಲಾಗುವ ಬ್ರೇಕ್ ಅಸಿಸ್ಟ್ ಸೌಲಭ್ಯಗಳ ಉದ್ದೇಶ ಒಂದೇ ಆಗಿದ್ದರೂ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುವ ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್ ಮತ್ತು ಪ್ರಿಡಿಕ್ಟಿವ್ ಬ್ರೇಕ್ ಅಸಿಸ್ಟ್ ಸೌಲಭ್ಯಗಳು ಎಬಿಎಸ್(ಆ್ಯಂಟಿ ಬ್ರೇಕ್ ಸಿಸ್ಟಂ) ಜೊತೆಗೂಡಿ ಕಾರ್ಯನಿರ್ವಹಣೆ ಮಾಡುತ್ತವೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಬ್ರೇಕ್ ಅಸಿಸ್ಟ್ ಯಾವಾಗ ಸಹಾಯಕವಾಗುತ್ತದೆ?

ನೀವು ಕಾರು ಚಾಲನೆ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ರಸ್ತೆ ಮಧ್ಯೆಯಲ್ಲಿ ಅಡ್ಡಲಾಗಿ ಪ್ರಾಣಿಯೋ ಅಥವಾ ರಸ್ತೆ ದಾಟುತ್ತಿರುವವರು ಬಂದಲ್ಲಿ ಬಹುತೇಕ ವಾಹನ ಚಾಲಕರು ನಿಯಂತ್ರಣಕೊಂಡು ದುರಂತ ಸಂಭವಿಸಿದ ಘಟನೆಗಳ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಹಾಗಾಂತ ಎಲ್ಲಾ ಪ್ರಕರಣಗಳಲ್ಲೂ ಹೀಗೆ ಆಗಿರುವುದಿಲ್ಲ. ಚಾಲಕನ ಸಮಯ ಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿದ್ದಲ್ಲಿ ಆಗಬಹುದಾದ ದುರಂತಗಳನ್ನು ತಪ್ಪಿಸಿರಬಹುದು. ಆದರೂ ಬ್ರೇಕ್ ಅಸಿಸ್ಟ್ ಸೌಲಭ್ಯವಿದ್ದಲ್ಲಿ ಗರಿಷ್ಠ ಮಟ್ಟದ ಸುರಕ್ಷೆಯನ್ನ ಖಾತ್ರಿಪಡಿಸಬಹುದು ಅಂದ್ರೆ ತಪ್ಪಾಗುದಿಲ್ಲ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಬ್ರೇಕ್ ಅಸಿಸ್ಟ್ ಹೇಗೆ ಕೆಲಸ ಮಾಡುತ್ತದೆ?

ಯುನೈಟೆಡ್ ಸ್ಟೇಟ್ಸ್‌ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಪ್ರಕಾರ, ಬ್ರೇಕ್ ಅಸಿಸ್ಟ್ ಸೌಲಭ್ಯವು ವಿದ್ಯುನ್ಮಾನ ಮತ್ತು ಯಾಂತ್ರಿಕವಾಗಿ ನಿಯಂತ್ರಿಸಬಹುದಾದ ಸಾಧನವಾಗಿದ್ದು, ಬ್ರೇಕ್ ಅಸಿಸ್ಟ್ ಹೊಂದಿರುವ ವಾಹನಗಳಿಂದಾಗಿಯೇ ಅಮೆರಿಕ ಒಂದರಲ್ಲೇ ಪ್ರತಿ ವರ್ಷ 4,17, 000 ಸಾಮಾನ್ಯ ಅಪಘಾತಗಳ ತಡೆಗೆ ಮತ್ತು 3 ಸಾವಿರಕ್ಕೂ ಹೆಚ್ಚು ಭೀಕರ ಅಪಘಾತಗಳನ್ನು ತಡೆಯುವಲ್ಲಿ ಸಹಕಾರಿಯಾಗಿಯೆಂತೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ಹೀಗಾಗಿ ಕಾರುಗಳಲ್ಲಿ ಬ್ರೇಕ್ ಅಸಿಸ್ಟ್ ಸೌಲಭ್ಯವು ಪ್ರಯಾಣಿಕರ ಸುರಕ್ಷೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದ್ದು, ಮುಂದುವರಿದ ರಾಷ್ಟ್ರಗಳಲ್ಲಿ ಈ ಸೌಲಭ್ಯವನ್ನು ಕಾರುಗಳಲ್ಲಿ ಮತ್ತು ವಾಣಿಜ್ಯ ವಾಹನಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಭಾರತದಲ್ಲೂ ಈಗಾಗಲೇ ಬ್ರೇಕ್ ಅಸಿಸ್ಟ್ ಸೌಲಭ್ಯವು ಬಹುತೇಕ ಮಧ್ಯಮ ಗಾತ್ರದ ಕಾರು ಮಾದರಿಗಳಲ್ಲಿ ಅಳವಡಿಕೆ ಹೊಂದಿದ್ದರು ಅದು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ.

ಕಾರುಗಳಲ್ಲಿ ಅಳವಡಿಸಲಾಗುವ ಬ್ರೇಕ್ ಅಸಿಸ್ಟ್ ಯಾವ ರೀತಿ ಸಹಕಾರಿಯಾಗಿದೆ ಗೊತ್ತಾ?

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಓವರ್ ಸ್ಪೀಡಿಂಗ್ ದುರಂತಗಳನ್ನು ತಡೆಯಲು ಇದು ಸಹಕಾರಿಯಾಗಲಿದ್ದು, ಈ ಸೌಲಭ್ಯವನ್ನು ಹೊಂದಿರುವ ಕಾರುಗಳ ಬೆಲೆಯು ತುಸು ದುಬಾರಿ ಎನ್ನಿಸಲಿವೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಪ್ರತಿ ಕಾರುಗಳಲ್ಲೂ ಅಳವಡಿಕೆಯಾಗುವಂತೆ ಹೊಸ ನಿಯಮ ಜಾರಿ ಕೂಡಾ ಅವಶ್ಯವಿದೆ.

Most Read Articles

Kannada
English summary
What is Brake Assist? Brake Assist System Explained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X