ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

By Nagaraja

ಹೊಸ ಕಾರು ಖರೀದಿಸುವುದಕ್ಕಿಂತಲೂ ಮಿಗಿಲಾಗಿ ಬಳಿಕ ಅದನ್ನು ಶುಚಿಯಾಗಿಡುವುದೇ ಹಲವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದು ಮನುಷ್ಯ ಸಹಜ ಗುಣ. ಕೆಲವರು ತಮ್ಮ ಕಾರನ್ನು ಶುಚಿಯಾಗಿಸುವ ಕೆಲಸದಲ್ಲಿ ಆನಂದವನ್ನು ಹುಡುಕುವುದಾದ್ದಲ್ಲಿ ಇನ್ನು ಕೆಲವರಿಗಿದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

Also Read : ಬೇಸಿಗೆಯಲ್ಲಿ ಕಾರು ವಾಶಿಂಗ್ ನಮ್ಮ ಟಿಪ್ಸ್ ನಿಮ್ಮ ಕೇರ್

ಹಾಗಿರುವಾಗ ಕಾರನ್ನು ಶುಚಿಯಾಗಿಡಲಿರುವ 10 ಸರಳ ವಿಧಾನ ಗೊತ್ತೇನು? ಹೆಚ್ಚು ಶ್ರಮ ವಹಿಸದೇ ಅತಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕಾರನ್ನು ಹೇಗೆ ಶುಚಿಯಾಗಿಡಬಹುದು ಎಂಬುದಕ್ಕೆ ಸಂಬಂಧಪಟ್ಟಂತೆ 10 ರಹಸ್ಯಗಳನ್ನು ನಾವಿಲ್ಲಿ ಬಿಚ್ಚಿಡಲಿದ್ದೇವೆ. ಇದಕ್ಕಾಗಿ ನಮ್ಮ ಚಿತ್ರಪುಟದತ್ತ ಮುಂದುವರಿಯಿರಿ.

01. ಉತ್ಪನ್ನ

01. ಉತ್ಪನ್ನ

ಕಾರು ತೊಳೆಯಲೆಂದೇ ಮಾರುಕಟ್ಟೆಯಲ್ಲಿರುವ ಸಿಗುವ ಉತ್ಪನ್ನಗಳನ್ನು ಬಳಸಿರಿ. ಇದಕ್ಕಾಗಿ ಡೀಲರ್ ಗಳ ಬಳಿ ವಿಚಾರಿಸಿದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಲಿದೆ. ಅಲ್ಲದೆ ನಯವಾದ ಸ್ಪಾಂಜ್ ಹಾಗೂ ಮೃದುವಾದ ಬಟ್ಟೆ ಬಳಕೆ ಮಾಡಿರಿ.

02. ಕಾರಿನ ಹೆಡ್ ಲೈಟ್

02. ಕಾರಿನ ಹೆಡ್ ಲೈಟ್

ದೈನಂದಿನ ಹಲ್ಲುಜ್ಜಲು ಬಳಸುವ ಕಾಲ್ಗೇಟ್ ಕ್ರೀಮ್ ಗಳನ್ನು ಉಪಯೋಗಿಸಿಕೊಂಡು ಕಳೆಗುಂದಿರುವ ಹೆಡ್ ಲೈಟ್ ಶುಭ್ರವಾಗಿಸಬಹುದಾಗಿದೆ.

03. ರಿಮ್ ಮತ್ತು ಚಕ್ರಗಳು

03. ರಿಮ್ ಮತ್ತು ಚಕ್ರಗಳು

ಟೈರ್, ರಿಮ್ ಇತ್ಯಾದಿಗಳನ್ನು ತೊಳೆಯಲು ಪಾತ್ರೆಗಳನ್ನು ತೊಳೆಯುವ ಡಿಶ್ ವಾಶ್ ಸೋಪನ್ನು ಬಳಕೆ ಮಾಡಬುದು. ರಸ್ತೆಗೆ ನೇರ ಸಂಪರ್ಕ ಹೊಂದಿರುವುದರಿಂದ ಚಕ್ರ ಹಾಗೂ ರಿಮ್ ಗಳಲ್ಲಿ ಅತಿ ಹೆಚ್ಚು ಕೊಳಕು ಅಂಟಿಕೊಳ್ಳುತ್ತದೆ. ವೇಗವಾಗಿ ನೀರು ಸಿಂಪಡಿಸುವ ಮೂಲಕ ಈ ಸ್ಥಳಗಳನ್ನು ತೊಳೆಯಬಹುದು.

04. ಕೀಟನಾಶಕ

04. ಕೀಟನಾಶಕ

ದೂರ ಪ್ರಯಾಣದಿಂದ ಹಿಂತಿರುಗಿದ ಬಳಿಕ ನಿಮ್ಮ ಕಾರಿನ ವಿಂಡ್ ಶೀಲ್ಡ್ ಗಳಲ್ಲಿ ಕೀಟ, ನೊಣಗಳಂತಹ ಸೂಕ್ಷ್ಮಾಣುಗಳು ಸತ್ತು ಬಿದ್ದಿರುವುದು ಗಮನಕ್ಕೆ ಬರಬಹುದು. ಇದರ ನಿವಾರಣೆಗಾಗಿ ಕೋಲಾ (Cola)ಬಳಕೆ ಮಾಡಿರಿ. ಆದರೆ ಯಾವುದೇ ಕಾರಣಕ್ಕೂ ಕೋಲಾ ಕಾರಿನ ಬಣ್ಣಕ್ಕೆ ತಗಲದಂತೆ ಎಚ್ಚರ ವಹಿಸಿರಿ.

05. ಟಾರು

05. ಟಾರು

ಭಾರತದಂತಹ ರಸ್ತೆ ಪರಿಸ್ಥಿತಿ ಸದಾ ಸಾರ್ವಜನಿಕ ಇಲಾಖೆಯಿಂದ ರಸ್ತೆಗಳ ಡಾಮರು ಕೆಲಸ ಕಾಮಗಾರಿಗಳು ನಡೆಯುತ್ತಲೇ ಇರುತ್ತದೆ. ಇದರಿಂದ ಕಾರಿಗೆ ಟಾರು ಅಂಟಿಕೊಳ್ಳುವ ಭೀತಿಯಿರುತ್ತದೆ. ನಿಮ್ಮ ಹೊಸ ಕಾರಿಗೆ ಇಂತಹದೊಂದು ಸಮಸ್ಯೆ ಎದುರಾದ್ದಲ್ಲಿ ಪರಿಸ್ಥಿತಿ ಹೇಗಿರಬಹುದು? ಒಮ್ಮೆ ಊಹಿಸಿ ನೀಡಿ. ಇದನ್ನು ತಪ್ಪಿಸಲು ಮೇಯನೇಸ್ (mayonnaise)ಸಾಸ್‌ನ ಪ್ರಯೋಜನ ಪಡೆಯಿರಿ. ಟಾರು ಅಂಟಿಕೊಂಡಿರುವ ಜಾಗದಲ್ಲಿ ಇದನ್ನು ಉಜ್ಜಿದ ಐದು ನಿಮಿಷಗಳ ಬಳಿಕ ಬಟ್ಟೆಯಿಂದ ಶುಚಿಗೊಳಿಸಬಹುದಾಗಿದೆ.

06. ಹಕ್ಕಿ ಹಿಕ್ಕೆ

06. ಹಕ್ಕಿ ಹಿಕ್ಕೆ

ಹಕ್ಕಿಗಳು ತಮ್ಮ ಅಭಿವ್ಯಕ್ತಿ ಸ್ವಾಂತಂತ್ರ್ಯವನ್ನು ವ್ಯಕ್ತಪಡಿಸುವ ಏಕ ಮಾತ್ರ ಜಾಗ ಇದಾಗಿದೆ. ಇದನ್ನು ತೊಳಗಿಸಲು ಮಾಡಲು ಸೋಡಾ ಪಾನೀಯದ (club soda) ಬಳಕೆ ಮಾಡಿರಿ. ನೆನಪಿಡಿ ವಿಂಡ್ ಶೀಲ್ಡ್ ನಲ್ಲಿ ಮಾತ್ರ ಇದರ ಪ್ರಯೋಗ ಸಾಕು.

07. ಕ್ರೋಮ್ ಭಾಗ

07. ಕ್ರೋಮ್ ಭಾಗ

ಕಾರಿನ ಕ್ರೋಮ್ ಭಾಗವು ಹೊಸತನದಿಂದ ಹೊಳೆಯಲು ಮಾರುಕಟ್ಟೆಯಲ್ಲಿರುವ ದೊರಕುವ ಪಾಲಿಶ್ ಗಳನ್ನು ಬಳಕೆ ಮಾಡಿರಿ. ನಿಮ್ಮದ್ದು ಹಳೆಯ ಕಾರಾಗಿದ್ದಲ್ಲಿ ಬೂದಿಯ ಬಳಕೆ ಮಾಡಬಹುದು.

08. ಕಾರು ಮ್ಯಾಟ್

08. ಕಾರು ಮ್ಯಾಟ್

ಕಾರಿನೊಳಗಿನ ಫ್ಲೋರ್ ಮ್ಯಾಟ್ ಗಳು ಅತಿ ಹೆಚ್ಚು ಧೂಳಿನ ಕಣಗಳನ್ನು ಹೊಂದಿರುತ್ತದೆ. ಕನಿಷ್ಠ ವಾರಕ್ಕೊಮ್ಮೆಯಾದರೂ ಇದನ್ನು ಶುಚಿಯಾಗಿಸಲು ಮರೆಯದಿರಿ. ಇದಕ್ಕಾಗಿ ಸಾಧಾರಣ ಸೋಪ್ ಹಾಗೂ ಬ್ರಶ್ ಬಳಕೆ ಮಾಡಬಹುದಾಗಿದೆ.

09. ದುರ್ವಾಸನೆ

09. ದುರ್ವಾಸನೆ

ನಿಮಗೆ ಕಾರು ಚಾಲನೆ ಮಾಡುವಾಗ ಧೂಮಪಾನ ಸೇದುವ ಹವ್ಯಾಸವಿದೆಯೇ? ಕುಟುಂಬದ ಜೊತೆ ತೆರಳುವಾಗ ಕಾರಿನೊಳಗೆ ಭೋಜನ ಸ್ವೀಕರಿಸುವೀರಾ? ಈ ಎಲ್ಲದರಿಂದಾಗಿ ಕಾರಿನೊಳಗೆ ದುರ್ವಾಸನೆ ಸೃಷ್ಟಿಯಾಗಬಹುದು. ಇಂತಹ ಸಮಸ್ಯೆಗಳನ್ನು ಯಾವುದೇ ಖರ್ಚಿಲ್ಲದೆ ನಿವಾರಿಸಲು ಒಂದೆರಡು ದಿನಗಳಷ್ಟು ಮನೆಯಲ್ಲಿ ದೊರಕುವ ಇದ್ದಿಲುಗಳನ್ನು ಇರಿಸಿದರೆ ದುರ್ವಾಸನೆ ನಿವರಾಣೆಯಾಗಲಿದೆ.

10. ಕಾರಿನ ಡೋರ್

10. ಕಾರಿನ ಡೋರ್

ನಿಮ್ಮ ಕಾರಿನ ಡೋರ್ ಕಿರಚು ಧ್ವನಿಯನ್ನುಂಟು ಮಾಡುವುದಾದ್ದಲ್ಲಿ ಸ್ವಲ್ಪ ಆಲಿವ್ ಎಣ್ಣೆಯನ್ನು (olive oil) ಹಚ್ಚಿರಿ. ಈ ಮೂಲಕ ಸಮಸ್ಯೆ ನಿವಾರಿಸಬಹುದಾಗಿದೆ.

ಮಿತವಾದ ನೀರಿನ ಬಳಕೆ

ಮಿತವಾದ ನೀರಿನ ಬಳಕೆ

ಇಷ್ಟೆಲ್ಲ ಆದರೂ ಜಾಸ್ತಿ ನೀರು ಪೋಳು ಮಾಡದೇ ಕಾರು ತೊಳೆಯುವ ವೇಳೆ ಮಿತವಾದ ನೀರಿನ ಬಳಕೆಗೆ ಆದ್ಯತೆ ಕೊಡಿ.

ಇವನ್ನೂ ಓದಿ

ಮಾದಕ ತಾರೆಯರ ಬೆಲ್ಲು ಬ್ರೇಕ್ ಇಲ್ಲದ ಕಾರು ವಾಶಿಂಗ್


Most Read Articles

Kannada
English summary
So, try out these simple methods at home to make your car look like new again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X