ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

ಮೈಲೇಜ್, ಮೈಲೇಜ್, ಮೈಲೇಜ್! ಇದು ಭಾರತೀಯ ವಾಹನೋದ್ಯಮದಲ್ಲಿ ಬಳಕೆಯಲ್ಲಿರುವ ಅತಿ ಸಾಮಾನ್ಯ ಪದ. ಪ್ರತಿಯೊಬ್ಬ ಗ್ರಾಹಕನೂ ಯಾವುದೇ ಒಂದು ಹೊಸತಾದ ಅಥವಾ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಮೊದಲು ಮೈಲೇಜ್ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅದು ಬೈಕು ಹಾಗಿರಬಹುದು ಅಥವಾ ಕಾರು ಆಗಿರಬಹುದು ಮೈಲೇಜ್ ಮುಖ್ಯವಾಗಿರುತ್ತೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

ಪ್ರತಿಯೊಂದು ವಾಹನಗಳಿಗೂ ಭಾರತೀಯ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮೈಲೇಜ್ ಮಾನ್ಯತಾ ಸರ್ಟಿಫೀಕೇಟ್ ನೀಡಿರುತ್ತದೆ. ಇದು ನೈಜ ರಸ್ತೆ ಪರಿಸ್ಥಿತಿಗೂ ಭಿನ್ನವಾಗಿದ್ದರೂ ವಾಹನ ಮಾರಾಟ ವೇಳೆ ಇದೇ ಪ್ರಯಾಣವನ್ನು ಸಂಸ್ಥೆಗಳು ಬಳಸಿಕೊಳ್ಳುತ್ತವೆ. ಆದ್ರೂ ಸಂಸ್ಥೆಗಳು ನೀಡುವ ಮಾಹಿತಿಗಿಂತ ವಾಸ್ತವ ಬೇರೆ ಆಗಿರುತ್ತದೆ. ಹೀಗಾಗಿ ನಿಮ್ಮ ಕಾರಿನಿಂದ ಗರಿಷ್ಠ ಮೈಲೇಜ್ ಹೇಗೆ ಗಿಟ್ಟಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

ಖಂಡಿತವಾಗಿಯೂ ಇಲ್ಲಿ ಕೊಡಲಾಗಿರುವ ಅಮೂಲ್ಯ ಟಿಪ್ಸ್‌ಗಳು ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ನೆರವಿಗೆ ಬರುವ ನಂಬಿಕೆ ನಮ್ಮದ್ದು. ಇದಕ್ಕಾಗಿ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಮುಂದೆ ಸಾಗಿರಿ...

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

1. ನಿಯಮಿತ ಕಾರು ವೇಗ

ಬಹುತೇಕ ಕಾರುಗಳು ಗಂಟೆಗೆ 60ರಿಂದ 80 ಕೀ.ಮೀ. ವೇಗತದಲ್ಲಿ ಸಂಚರಿಸಿದ್ದಲ್ಲಿ ಅತ್ಯುತ್ತಮ ಇಂಧನ ಕ್ಷಮತೆಯನ್ನು ನೀಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮೇಲೆ ತಿಳಿಸಲಾದ ವೇಗತೆಯಲ್ಲಿ ಕಾರು ಚಾಲನೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಗಂಟೆಗೆ 80-90 ಕೀ.ಮೀ.ಗಿಂತಲೂ ಹೆಚ್ಚು ವೇಗತೆಯಲ್ಲಿ ಚಲಿಸಿದ್ದಲ್ಲಿ ಇಂಧನ ಕ್ಷಮತೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

2. ನಯವಾದ ಚಾಲನೆ

ಬಹುಶ: ಇದು ಹೆಚ್ಚಿನ ಇಂಧನ ದಕ್ಷತೆ ಪಡೆಯಲಿರುವ ಅತ್ಯುತ್ತಮ ಸಲಹೆಯಾಗಿರಲಿದೆ. ಕಾರಿನಲ್ಲಿ ಸಂಚರಿಸುವಾಗ ಗೇರ್ ಬದಲಾವಣೆ ಹಾಗೂ ವೇಗವರ್ಧನೆಯನ್ನು (accelerator) ನಯವಾಗಿ ಬಳಕೆ ಮಾಡಿ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

3. ಸರಿಯಾದ ರೀತಿಯಲ್ಲಿ ಗೇರ್ ಬಳಕೆ

ಹೆಚ್ಚಿನ ಮೈಲೇಜ್ ಗಿಟ್ಟಿಸಿಕೊಳ್ಳಲು ಸಹಜ ಚಾಲನಾ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ನಾವು ನೋಡಿರುವಂತೆಯೇ ಅನೇಕ ಮಂದಿ ಚಾಲಕರು ವಾಹನ ಚಲಿಸುತ್ತಿರುವಾಗಿ ಗೇರ್ ಕಡಿಮೆ (low Gear) ಮಾಡಲು ಮರೆತುಬಿಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಇದರಿಂದ ಇಂಧನ ಉಳಿತಾಯದ ಬದಲು ಹೆಚ್ಚು ಪೋಲಾಗುತ್ತದೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

4. ಟ್ರಾಫಿಕ್‌ಗಳಲ್ಲಿ ಗಾಡಿ ಆಫ್ ಮಾಡಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಂದೊಂದು ಸಾಧಾರಣ ನಿಯಮ. ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ 30 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ವಾಹನ ನಿಲ್ಲಿಸುತ್ತಿದ್ದಲ್ಲಿ ನಿಮ್ಮ ಗಾಡಿಯ ಎಂಜಿನ್ ಆಫ್ ಮಾಡಿರಿ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

5. ಎಸಿ ಮಿತವಾಗಿ ಬಳಸಿ

ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುವುದು ತುಂಬಾ ಕಷ್ಟಕರ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹಾಗೂ ತಾಪಮಾನ ಏರಿಕೆಯಿಂದಾಗಿ ಎಸಿ ಬಳಕೆ ಮಾಡಲು ಪ್ರೇರಿತರಾಗುತ್ತೀರಿ. ಆದರೆ ಎಸಿಯಿಂದಾಗಿ ಹೆಚ್ಚು ಪವರ್ ಹಾಗೂ ಇಂಧನ ವ್ಯಯವಾಗುತ್ತದೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

6. ನಿಯಮಿತವಾಗಿ ಕಾರು ಸರ್ವೀಸ್ ಮಾಡಿಸಿ

ಸರಿಯಾಗಿ ಸರ್ವೀಸ್ ಮಾಡದ ಕಾರುಗಳಿಂದ ಉತ್ತಮ ಮೈಲೇಜ್ ನಿರೀಕ್ಷಿಸುವುದು ತಪ್ಪು. ಈ ನಿಟ್ಟಿನಲ್ಲಿ ನಿಯಮಿತವಾಗಿ ಕಾರನ್ನು ಸರ್ವೀಸ್ ಮಾಡಿಸಿಕೊಳ್ಳಿರಿ. ಏರ್ ಫಿಲ್ಟರ್, ಫ್ಯೂಯಲ್ ಫಿಲ್ಟರ್ ಹಾಗೂ ಸ್ಪಾರ್ಕ್ ಪ್ಲಗ್‌ಗಳನ್ನು ಪರಿಶೀಲಿಸುವುದನ್ನು ರೂಢಿ ಮಾಡಿಸಿಕೊಳ್ಳಿ. ಜತೆಗೆ ಪ್ರತಿ 60,000 ಕೀ.ಮೀ.ಗಳಿಗೆ ಕಾರಿನ ಓಕ್ಸಿಜನ್ ಸೆನ್ಸಾರ್ ಪರೀಶೀಲಿಸಿಕೊಳ್ಳಿ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

7. ಕಾರನ್ನು ಹಗುರವಾಗಿಸಿ

ನಿಮ್ಮ ಕಾರಿನ ಭಾರ ಹೆಚ್ಚಾದಷ್ಟು ಹೆಚ್ಚು ಇಂಧನ ಪೋಲಾಗುತ್ತದೆ. ಹಾಗಾಗಿ ಅವಶ್ಯಕವಲ್ಲದ ಲಗ್ಗೇಜ್‌ಗಳನ್ನು ಕಾರಿನಿಂದ ಹೊರಗಿಡಿರಿ. ಇದು ಇಂಧನ ಕ್ಷಮತೆಯ ಜೊತೆ ಕಾರು ನಯವಾಗಿ ಚಾಲನೆ ಮಾಡಲು ನೆರವಾಗಲಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

8. ತಂಪಾದ ದಿನಗಳಲ್ಲಿ ಇಂಧನ ಖರೀದಿಸಿ

ಕೂಲಾದ ಇಂಧನ ಸಾಂದ್ರತೆ ಹೆಚ್ಚಲಿದೆ. ಹಾಗಾಗಿ ಬೆಳ್ಳಂಬೆಳಗ್ಗೆ ಬೇಗನೇ ಎದ್ದು ಇಂಧನ ತುಂಬಿಸುವುದು ಉತ್ತಮ. ಈ ಸಂದರ್ಭದಲ್ಲಿ ಪಂಪ್‌ಗಳು ಪರಿಮಾಣಕ್ಕೆ ತಕ್ಕ ಇಂಧನ ಅಳತೆ ಮಾಡುವುದರಿಂದ ನಿಮ್ಮ ಹಣಕ್ಕೆ ತಕ್ಕ ಇಂಧನ ದೊರೆಯಲು ನೆರವಾಗಲಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ಬೆಳಗ್ಗಿನ ಸಮಯದಲ್ಲೇ ಇಂಧನ ತುಂಬಿಸುವುದು ಉತ್ತಮ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

9. ಶಿಫಾರಸು ಮಾಡಿರುವ ಇಂಧನ ಬಳಕೆ ಮಾಡಿ

ಕೆಲವೊಂದು ಪಂಪ್‌ಗಳಲ್ಲಿ 'ಸ್ಪೆಷಲ್ ಇಂಧನ'ಗಳೆಂಬ ಬೋರ್ಡ್‌ಗಳನ್ನು ಲಗತ್ತಿಸಿರುವುದು ಗಮನಿಸಿರಬಹುದು. ಇದು ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದನ್ನು ಅಧಿಕೃತರು ವಾದಿಸಬಹುದು. ಆದರೆ ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತುಕೊಳ್ಳಿ.

MOST READ: ಹೊಸ ನಿಯಮ ಜಾರಿಯಾದ್ರೆ ರಾಜ್ಯದಲ್ಲಿ ಗುಜುರಿ ಸೇರಲಿವೆ 45 ಲಕ್ಷ ಹಳೆಯ ವಾಹನಗಳು..!

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

10. ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿ ಚಾಲನೆ ಮಾಡಿರಿ

ಸಾಧ್ಯವಾದ್ದಲ್ಲಿ ನಿಮ್ಮ ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿಯೇ ಚಾಲನೆ ಮಾಡಲು ಪ್ರಯತ್ನಿಸಿ. ಸಾಧಾರಣವಾಗಿ ಆಟೋಮ್ಯಾಟಿಕ್ ಬಾಕ್ಸ್‌ಗಳಲ್ಲಿ ನಿರ್ದಿಷ್ಟ ವೇಗದ ಬಳಿಕವೇ ಅಪ್‌ಶಿಫ್ಟ್ ಮಾಡಲಾಗುತ್ತದೆ. ಇಲ್ಲಿ ಅಪ್‌ಶಿಫ್ಟ್ ವೇಳೆ ಸರಿಯಾದ ಟಾರ್ಕ್ ಜತೆಗೆ ಇಂಧನ ವ್ಯಯವಾಗುತ್ತದೆ.

(ವಿ.ಸೂ: ಎಲ್ಲ ಆಟೋಮ್ಯಾಟಿಕ್ ಕಾರಿನಲ್ಲೂ ಮ್ಯಾನುವಲ್ ಮೋಡ್ ಇರುವುದಿಲ್ಲ)

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

11. ರಿವರ್ಸ್ ಪಾರ್ಕ್

ನಿಮ್ಮ ದೈನಂದಿನ ಚಟುವಟಿಕೆಗಳ ಬಳಿಕ ಮನೆಗೆ ಹಿಂತಿರುಗಿದ ಬಳಿಕ ಮೇಲೆ ತಿಳಿಸಿದ ರೀತಿಯಲ್ಲೇ ನಿಮ್ಮ ಕಾರನ್ನು ರಿವರ್ಸ್ ಪಾರ್ಕ್ ಮಾಡಿಟ್ಟುಕೊಳ್ಳಿರಿ. ಇದರಿಂದ ಬೆಳಗ್ಗಿನ ಜಾವದಲ್ಲಿ ಎಂಜಿನ್ ಕೂಲಾಗಿದ್ದಾಗ ರಿವರ್ಸ್ ಮಾಡುವ ಗೋಜಿನಿಂದ ತಪ್ಪಿಸಬಹುದಾಗಿದೆ. ಈ ಮೂಲಕ ಬಹುಮೂಲ್ಯ ಇಂಧನವನ್ನು ಬಚತ್ ಮಾಡಬಹುದಾಗಿದೆ. ವಿ.ಸೂ: ಸಮತಲ ಪಾರ್ಕಿಂಗ್ ಪ್ರದೇಶ ಹೊಂದಿದವರು ಮಾತ್ರ ಹೀಗೆ ಮಾಡಬೇಕು. ಇಲ್ಲದಿದ್ದಲ್ಲಿ ಮೇಲ್ಗುಖದತ್ತ ರಿವರ್ಸ್ ಮಾಡುವುದರಿಂದ ಹೆಚ್ಚಿನ ಇಂಧನ ವ್ಯಯವಾಗಲಿದೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ವಿಧಾನಗಳನ್ನು ತಪ್ಪದೇ ಪಾಲಿಸಿ..

ಈ ಉಪಯುಕ್ತ ಲೇಖನ ನಿಮ್ಮ ನೆರವಿಗೆ ಬಂದಿರುವ ವಿಶ್ವಾಸ ನಮ್ಮದ್ದು. ಇದು ಇಂಧನ ಜತೆಗೆ ನಿಮ್ಮ ದುಡ್ಡನ್ನು ಉಳಿತಾಯ ಮಾಡಲಿದೆ. ಒಂದು ವೇಳೆ ಕೆಲವೊಂದು ಮಹತ್ವದ ಟಿಪ್ಸ್‌ಗಳನ್ನು ನಾವಿಲ್ಲಿ ಉಲ್ಲೇಖಿಸಲು ಮಿಸ್ ಮಾಡಿಕೊಂಡಿದ್ದೇವೆ ಎಂಬ ಭಾವನೆ ನಿಮ್ಮಲ್ಲಿದ್ದರೆ ನಿಮ್ಮ ಚಾಲನಾ ಅನುಭವದ ಮಹತ್ವದ ಟಿಪ್ಸ್‌ಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

Most Read Articles

Kannada
English summary
How To Improve A Car's Mileage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X