ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

By Manoj Bk

ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಎಸ್‌ಯುವಿ ಹಾಗೂ ಸೆಡಾನ್ ಕಾರುಗಳು ಜನಪ್ರಿಯವಾಗಿವೆ. ಕೆಲವೊಮ್ಮೆ ಗ್ರಾಹಕರಿಗೆ ಎಸ್‌ಯುವಿ ಖರೀದಿಸಬೇಕೇ ಅಥವಾ ಸೆಡಾನ್ ಕಾರು ಖರೀದಿಸಬೇಕೇ ಎಂಬ ಬಗ್ಗೆ ಗೊಂದಲವುಂಟಾಗುತ್ತದೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಇತ್ತೀಚಿಗೆ ಭಾರತೀಯ ಗ್ರಾಹಕರು ಎಸ್‌ಯುವಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಮತ್ತೊಂದೆಡೆ ಸೆಡಾನ್ ಕಾರುಗಳು ನಿಧಾನವಾಗಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ. ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುವ ಮುಂಬಯಿಯಂತಹ ಮಹಾ ನಗರಗಳಿಗೆ ಎಸ್‌ಯುವಿಗಳು ಸೂಕ್ತವಾಗಿವೆ. ಎಲ್ಲಾ 4 ವ್ಹೀಲ್'ಗಳಿಗೆ ಎಂಜಿನ್ ಪವರ್ ಹೋಗುವುದರಿಂದ ಎಸ್‌ಯುವಿಗಳು ಯಾವುದೇ ರಸ್ತೆಯಲ್ಲಿ ಸರಾಗವಾಗಿ ಸಾಗುತ್ತವೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಮತ್ತೊಂದೆಡೆ ಸೆಡಾನ್ ಕಾರುಗಳ ಪರ್ಫಾಮೆನ್ಸ್ ಹಾಗೂ ಮೆಂಟೆನೆನ್ಸ್ ಉತ್ತಮವಾಗಿರುತ್ತದೆ. ಪ್ರಯಾಣಿಕರಿಗೆ ಹೆಚ್ಚು ಸ್ಥಳಾವಕಾಶವು ಸಹ ದೊರೆಯುತ್ತದೆ. ಸೆಡಾನ್ ಕಾರುಗಳು ದೈನಂದಿನ ಬಳಕೆಗೆ ಸೂಕ್ತವಾಗಿವೆ. ಹ್ಯಾಚ್‌ಬ್ಯಾಕ್ ಕಾರುಗಳಿಗಿಂತ ಭಿನ್ನವಾದ ಕಾರುಗಳನ್ನು ಬಯಸುವವರಿಗೆ ಸೆಡಾನ್ ಕಾರುಗಳು ಪ್ರಾಥಮಿಕ ಆಯ್ಕೆಯಾಗಿವೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಒಂದು ನಾಣ್ಯದಲ್ಲಿ ಎರಡು ಮುಖಗಳಿರುವಂತೆಯೇ ಎಸ್‌ಯುವಿ ಹಾಗೂ ಸೆಡಾನ್ ಕಾರುಗಳಲ್ಲಿಯೂ ಸಾಧಕ ಬಾಧಕಗಳಿವೆ. ಆದರೂ ಗ್ರಾಹಕರು ತಮ್ಮ ಅಗತ್ಯಗಳಿಗೆಸರಿಹೊಂದುವ ಕಾರನ್ನು ಖರೀದಿಸುವುದು ಒಳ್ಳೆಯದು. ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳನ್ನು ಈ ಲೇಖನದಲ್ಲಿ ನೋಡೋಣ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಬೆಲೆ:

ಎಸ್‌ಯುವಿಗಳು ಸಾಮಾನ್ಯವಾಗಿ ಸೆಡಾನ್‌ಗಳಿಗಿಂತ ದುಬಾರಿಯಾಗಿವೆ. ಎಸ್‌ಯುವಿಗಳಲ್ಲಿ ಹೆಚ್ಚು ಟೆಕ್ನಿಕಲ್ ಫೀಚರ್'ಗಳನ್ನು ಅಳವಡಿಸಿರುವುದರಿಂದ ಅವು ದುಬಾರಿಯಾಗಿರುತ್ತವೆ. ಆಲ್ ವ್ಹೀಲ್ ಡ್ರೈವ್ ಅಥವಾ 4 ವ್ಹೀಲ್ ಡ್ರೈವ್ ಸೌಲಭ್ಯವಿದ್ದರೆ ಆ ಎಸ್‌ಯುವಿಯ ಬೆಲೆ ದುಬಾರಿಯಾಗಿರುತ್ತದೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಸೆಡಾನ್ ಕಾರುಗಳು ಸಾಮಾನ್ಯವಾಗಿ 2 ವ್ಹೀಲ್ ಡ್ರೈವ್‌ ಹೊಂದಿರುತ್ತವೆ. ಬಜೆಟ್ ಸೀಮಿತವಾಗಿದ್ದರೆ ಸೆಡಾನ್ ಕಾರು ಸೂಕ್ತವಾಗಿದೆ. ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೆ ಎಸ್‌ಯುವಿಗಳನ್ನು ಖರೀದಿಸಬಹುದು.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಎಸ್‌ಯುವಿಗಳಿಗಿಂತ ಸೆಡಾನ್‌ಗಳು ಅಗ್ಗವಾಗಿರುತ್ತವೆ. ಕೆಲವು ಕಂಪನಿಗಳ ಟಾಪ್ ಎಂಡ್ ಸೆಡಾನ್ ಕಾರುಗಳಲ್ಲಿ ಆಧುನಿಕ ಫೀಚರ್'ಗಳನ್ನು ನೀಡಲಾಗುತ್ತದೆ. ಎಂಟ್ರಿ ಲೆವೆಲ್ ಸೆಡಾನ್ ಕಾರುಗಳಿಗಿಂತ ಟಾಪ್ ಎಂಡ್ ಸೆಡಾನ್ ಕಾರುಗಳು ಹೆಚ್ಚು ಫೀಚರ್ ಹೊಂದಿರುತ್ತವೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಗಾತ್ರ:

ಎಸ್‌ಯುವಿಗಳು ಸಾಮಾನ್ಯವಾಗಿ ಸೆಡಾನ್‌ ಕಾರುಗಳಿಗಿಂತ ಎತ್ತರವಾಗಿರುತ್ತವೆ. ಇದರಿಂದ ಎಸ್‌ಯುವಿಗಳಲ್ಲಿ ಲಗೇಜ್ ಸಂಗ್ರಹಿಸಲು ಹೆಚ್ಚು ಸ್ಥಳಾವಕಾಶ ದೊರೆಯುತ್ತದೆ. ಎಸ್‌ಯುವಿಗಳ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿರುವುದರಿಂದ ಯಾವುದೇ ರಸ್ತೆಯಲ್ಲಿ ಸರಾಗವಾಗಿ ಪ್ರಯಾಣಿಸಬಹುದು.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಸೆಡಾನ್ ಕಾರುಗಳಲ್ಲಿ ಕೆಟ್ಟ ರಸ್ತೆಗಳಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಕಾರಿನ ಅಂಡರ್ ಬಾಡಿ ಹಾಳಾಗುವ ಸಾಧ್ಯತೆಗಳಿರುತ್ತವೆ. ಎಸ್‌ಯುವಿಗಳ ಗಾತ್ರ ಸೆಡಾನ್‌ಗಳಿಗಿಂತ ದೊಡ್ಡದಾಗಿರುತ್ತದೆ. ಎಸ್‌ಯುವಿಯನ್ನು ಚಾಲನೆ ಮಾಡುವಾಗ ಮುಂದಿರುವ ರಸ್ತೆಯನ್ನು ಸ್ಪಷ್ಟವಾಗಿ ಕಾಣಬಹುದು.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಪಾರ್ಕಿಂಗ್:

ಸೆಡಾನ್‌ ಕಾರುಗಳು ಎಸ್‌ಯುವಿಗಳಷ್ಟು ದೊಡ್ಡ ಗಾತ್ರವನ್ನು ಹೊಂದಿರುವುದಿಲ್ಲ. ಆದರೆ ನಗರದ ಕಿಕ್ಕಿರಿದ ರಸ್ತೆಗಳಲ್ಲಿ ಚಾಲನೆ ಮಾಡಲು ಸಣ್ಣ ಕಾರುಗಳು ಉತ್ತಮ. ಸಣ್ಣ ಕಾರುಗಳನ್ನು ಪಾರ್ಕ್ ಮಾಡುವುದು ಸುಲಭ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಮೈಲೇಜ್:

ಎಸ್‌ಯುವಿಗಳಿಗಿಂತ ಸೆಡಾನ್ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ. ಸೆಡಾನ್ ಕಾರುಗಳು ಎಸ್‌ಯುವಿಗಳಿಗಿಂತ ಚಿಕ್ಕ ಗಾತ್ರವನ್ನು ಹೊಂದಿರುವುದರಿಂದ ಹಾಗೂಕಡಿಮೆ ತೂಕವನ್ನು ಹೊಂದಿರುವುದರಿಂದ ಹೆಚ್ಚು ಮೈಲೇಜ್ ನೀಡುತ್ತವೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಪ್ರಯಾಣಿಕರ ಸಂಖ್ಯೆ:

ದೊಡ್ಡ ಕುಟುಂಬವನ್ನು ಹೊಂದಿರುವವರು ಸೆಡಾನ್ ಕಾರುಗಳ ಬದಲು ಎಸ್‌ಯುವಿಗಳನ್ನು ಖರೀದಿಸಬಹುದು. ಈಗ ಭಾರತದಲ್ಲಿ 7 ಸೀಟುಗಳನ್ನು ಹೊಂದಿರುವ ಎಸ್‌ಯುವಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಜನಪ್ರಿಯತೆ:

ಈಗ ಹೆಚ್ಚಿನ ಸಂಖ್ಯೆಯ ಭಾರತೀಯ ಗ್ರಾಹಕರು ಎಸ್‌ಯುವಿಗಳನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಹೆಚ್ಚು ಜನಪ್ರಿಯವಾಗಿವೆ. ಸೆಡಾನ್‌ ಕಾರುಗಳಿಗಿಂತ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲು ಕಾರು ತಯಾರಕ ಕಂಪನಿಗಳು ಉತ್ಸುಕವಾಗಿವೆ.

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಭಾರತದಲ್ಲಿ ಜನಪ್ರಿಯವಾಗಿರುವ ಎಸ್‌ಯುವಿಗಳು:

ಹ್ಯುಂಡೈ ವೆನ್ಯೂ

ಹ್ಯುಂಡೈ ಕ್ರೆಟಾ

ಕಿಯಾ ಸೊನೆಟ್

ಕಿಯಾ ಸೆಲ್ಟೋಸ್

ಟಾಟಾ ನೆಕ್ಸಾನ್

ಟಾಟಾ ಹ್ಯಾರಿಯರ್

ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಎಂ.ಜಿ.ಹೆಕ್ಟರ್

ಟೊಯೊಟಾ ಫಾರ್ಚೂನರ್

ಎಸ್‌ಯುವಿ ಹಾಗೂ ಸೆಡಾನ್ ಕಾರುಗಳ ನಡುವಿನ ವ್ಯತ್ಯಾಸಗಳಿವು

ಭಾರತದಲ್ಲಿ ಜನಪ್ರಿಯವಾಗಿರುವ ಸೆಡಾನ್ ಕಾರುಗಳು

ಮಾರುತಿ ಸುಜುಕಿ ಡಿಜೈರ್

ಹ್ಯುಂಡೈ ಒರಾ

ಹ್ಯುಂಡೈ ವರ್ನಾ

ಹೋಂಡಾ ಸಿಟಿ

Most Read Articles

Kannada
English summary
Difference between SUV and Sedan cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X