ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿರುವುದು ಯಾಕೆ ಗೊತ್ತಾ?

ವಿಶ್ವದಲ್ಲಿ ಅತಿ ದೊಡ್ಡ ರೈಲ್ವೇ ಮಾರ್ಗಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದ್ದು, ನಿತ್ಯ ಲಕ್ಷಾಂತರ ಮಂದಿ ಕಡಿಮೆ ವೆಚ್ಚದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಹಾಗೇಯೆ ಲಕ್ಷಾಂತರ ಮಂದಿಗೆ ರೈಲ್ವೇ ಇಲಾಖೆ ಉದ್ಯೋಗ ನೀಡಿ ಪೋಷಿಸುತ್ತಿದೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಸ್ವತಂತ್ರ ಪೂರ್ವದಿಂದ ತನ್ನ ಅವಿರತ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ರೈಲ್ವೆಯು, ಇಂದು ಕೇವಲ ಧ್ವನಿ ಮೂಲಕ ಬೇಕಾದ ಕೆಲಸಗಳನ್ನು ಯಂತ್ರಗಳಿಂದ ಮಾಡಿಸಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿಗೊಂಡಿದ್ದರೂ, ಇನ್ನೂ ಹಸಿರು ಬಾವುಟಗಳನ್ನು ರೈಲು ಸಾಂಚಾರದ ವೇಳೆ ಬಳಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿ ನಮ್ಮನ್ನು ಅಚ್ಚರಿಗೊಳಿಸುವ ಇಂತಹ ಹಲವು ಸಂಗತಿಗಳಿವೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಕೆಲವೊಮ್ಮೆ ನಾವು ಕೆಲವು ವಿಷಯಗಳನ್ನು ಕಣ್ಣಾರೆ ಕಂಡಿದ್ದರೂ ಅವುಗಳ ಬಗ್ಗೆ ಹೆಚ್ಚಾಗಿ ಗಮನ ಕೊಡುವುದಿಲ್ಲ. ಆದರೆ ರೈಲ್ವೆಯಲ್ಲಿ ಇಂತಹ ಪ್ರತಿಯೊಂದು ಕಾರ್ಯದ ಹಿಂದೆಯು ಒಂದು ಕಾರಣವಿರುತ್ತದೆ. ಕಾರಣವಿಲ್ಲದೆ ರೈಲ್ವೆ ಇಲಾಖೆ ಯಾವುದೇ ವಸ್ತುವನ್ನು ಬಳಸುವುದಿಲ್ಲ. ಹಾಗಾದರೆ ತಂತ್ರಜ್ಞಾನ ಮುಂದುವರಿದರೂ ರೈಲ್ವೆ ಏಕೆ ಇನ್ನೂ ಬಾವುಟಗಳನ್ನು ಬಳಸುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಮೊದಲಿಗೆ ಈ ಧ್ವಜಗಳಿಂದ ಯಾವ ರೀತಿ ಸಂಹವನ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ. ರೈಲುಗಳು ನಿಲ್ದಾಣ ಅಥವಾ ರೈಲ್ವೆ ಗೇಟ್ ಅನ್ನು ಹಾದುಹೋದಾಗ ಸ್ಟೇಷನ್ ಮಾಸ್ಟರ್ ಅಥವಾ ಪಾಯಿಂಟ್‌ಮ್ಯಾನ್ ಮತ್ತು ಎಂಜಿನ್ ಚಾಲಕರು ಹಸಿರು ಧ್ವಜವನ್ನು ತೋರಿಸುತ್ತಾರೆ. ನಾವು ರೈಲಿನಲ್ಲಿ ಪ್ರಯಾಣಿಸುವಾಗ ಬಾಲ್ಯದಿಂದಲೂ ಇದನ್ನು ನೋಡುತ್ತಲೇ ಬಂದಿದ್ದೇವೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಈ ಹಸಿರು ಧ್ವಜವನ್ನು ರೈಲ್ವೇ ಸ್ಟೇಷನ್ ಮಾಸ್ಟರ್‌ಗಳು ಎಂಜಿನ್ ನಿರ್ಗಮನದ ಬಗ್ಗೆ ತಿಳಿಸಲು ಮತ್ತು ರೈಲ್ವೇ ಸ್ಟೇಷನ್ ಮಾಸ್ಟರ್‌ಗೆ ರೈಲನ್ನು ಹಾದುಹೋಗಲು ಅನುಮತಿಸಲು ಎಂಜಿನ್ ಪೈಲೆಟ್‌ಗಳು ಬಳಸುತ್ತಾರೆ. ಒಂದು ವೇಳೆ ರೈಲು ಸ್ಟೇಷನ್‌ನಲ್ಲಿ ಇದ್ದಾಗ ಈ ಸಿಗ್ನಲ್ ಬಂದರೆ ಕೂಡಲೇ ರೈಲ್ ಹಾರ್ನ್ ಮಾಡಲಾಗುತ್ತದೆ. ಕೂಡಲೇ ಕೆಳಗಿಳಿದ ಪ್ರಯಾಣಿಕರು ಎಚ್ಚರಗೊಂಡು ರೈಲು ಹತ್ತುತ್ತಾರೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ರೈಲುಗಳು ಹೆಚ್ಚಾಗಿ ರಾತ್ರಿಯಲ್ಲಿ ಚಲಿಸುತ್ತವೆ. ದೂರದ ಪ್ರಯಾಣಕ್ಕಾಗಿ ರೈಲುಗಳು ಸ್ಲೀಪರ್ ಸೌಲಭ್ಯವನ್ನು ಹೊಂದಿರುವುದರಿಂದ, ಜನರು ಪ್ರಯಾಣದಲ್ಲಿ ಹಗಲು ಸಮಯವನ್ನು ವ್ಯರ್ಥ ಮಾಡದಂತೆ ರಾತ್ರಿಯಲ್ಲಿ ಪ್ರಯಾಣಿಸುತ್ತಾರೆ. ಈ ವೇಳೆ ರೈಲು ಚಾಲಕರು ರಾತ್ರಿಯಿಡೀ ರೈಲು ಓಡಿಸಬೇಕಾಗಿರುತ್ತದೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಆದರೆ ರೈಲು ಚಾಲಕರು ಮಧ್ಯರಾತ್ರಿಯ ಸಮಯದಲ್ಲಿ ನಿದ್ರೆ ಮಾಡಬಾರದು. ಹಾಗೆ ಮಲಗಿದರೆ ರೈಲು ಅಪಘಾತವೂ ಆಗಬಹುದು. ಆದರೆ ಅದಕ್ಕೊಂದು ಟೆಕ್ನಿಕಲ್ ಮ್ಯಾಟರ್ ಇದೆ, ರೈಲು ನಿಲ್ದಾಣವನ್ನು ಹಾದು ಹೋದಾಗ, ರೈಲ್ವೇ ನಿಲ್ದಾಣದಲ್ಲಿ ಉದ್ಯೋಗಿ ರೈಲನ್ನು ನೋಡಿ ಹಸಿರು ಬಾವುಟವನ್ನು ಬೀಸುತ್ತಾನೆ ಮತ್ತು ರೈಲು ಚಾಲಕನು ಅವನಿಗೆ ಹಸಿರು ಬಾವುಟವನ್ನು ಬೀಸುತ್ತಾನೆ, ಆದ್ದರಿಂದ ರೈಲು ಚಾಲಕ ಎಚ್ಚರದಿಂದಿರುವುದು ತಿಳಿಯುತ್ತದೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಕರ್ತವ್ಯ ನಿರತ ರೈಲು ಚಾಲಕ ಹಸಿರು ಬಾವುಟವನ್ನು ಬೀಸದಿದ್ದರೆ, ರೈಲ್ವೆ ನಿಲ್ದಾಣದ ಸಿಬ್ಬಂದಿ ತಕ್ಷಣ ನಿಯಂತ್ರಣ ಕೊಠಡಿಗೆ ತಿಳಿಸುತ್ತಾರೆ. ಅವರು ತಕ್ಷಣವೇ ನಿರ್ದಿಷ್ಟ ರೈಲು ಚಾಲಕನನ್ನು ಸಂಪರ್ಕಿಸಿ ಅವರನ್ನು ಅಲರ್ಟ್ ಆಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಒಂದು ವೇಳೆ ರೈಲು ಚಾಲಕನನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ಕಾರ್ಡ್ ಅನ್ನು ಸಂಪರ್ಕಿಸಿ ಮತ್ತು ರೈಲನ್ನು ನಿಲ್ಲಿಸಲು ಆದೇಶಿಸಲಾಗುತ್ತದೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಅದೇ ರೀತಿ, ಕೆಲವು ಗ್ರಾಮೀಣ ರೈಲು ನಿಲ್ದಾಣಗಳು ಪಟ್ಟಣದ ಹೊರಗೆ ಜನಸಂದಣಿ ಇಲ್ಲದ ಪ್ರದೇಶಗಳಲ್ಲಿರುತ್ತವೆ. ಅಲ್ಲಿನ ನಿಲ್ದಾಣದ ಸಿಬ್ಬಂದಿಗೂ ಕೆಲವೊಮ್ಮೆ ಆ ಸ್ಥಳ ಅಸುರಕ್ಷಿತವಾಗಿರಬಹುದು. ಕೆಲವು ನಿಲ್ದಾಣಗಳಲ್ಲಿ ಸ್ಟೇಷನ್ ಮಾಸ್ಟರ್ ಹಸಿರು ಬಾವುಟ ತೋರಿಸದಿದ್ದರೆ ರೈಲು ಚಾಲಕರು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುತ್ತಾರೆ. ಕಂಟ್ರೋಲ್ ರೂಂ ಅಧಿಕಾರಿಗಳು ತಕ್ಷಣ ಆ ಸ್ಟೇಷನ್ ಮಾಸ್ಟರ್‌ಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಅಂತಹ ಸಂವಹನ ಸಾಧ್ಯವಾಗದಿದ್ದರೆ, ಆ ಪ್ರದೇಶದ ಮೂಲಕ ಹಾದುಹೋಗುವ ಮುಂದಿನ ರೈಲನ್ನು ನಿಗದಿತ ರೈಲು ನಿಲ್ದಾಣದಲ್ಲಿ ನಿಲ್ಲಿಸಲು ಆದೇಶಿಸಲಾಗುತ್ತದೆ. ಆ ರೈಲಿನಲ್ಲಿರುವ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ನಿಲ್ದಾಣವನ್ನು ಪರಿಶೀಲಿಸಲು ಸೂಚಿಸಲಾಗುತ್ತದೆ. ನಿರ್ದಿಷ್ಟ ನಿಲ್ದಾಣವು ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲ್ವೆ ಸಿಬ್ಬಂದಿ ಇನ್ನೂ ಹಸಿರು ಬಾವುಟ ಬಳಸುತ್ತಿದ್ದಾರೆ ಯಾಕೆ ಗೊತ್ತಾ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ರೈಲ್ವೆಯು ಅಗ್ಗದ ಸಾರಿಗೆಯಾದರೂ ಪ್ರಯಾಣಿಕರ ಭದ್ರತೆಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಾರೆ. ಇದೇ ಕಾರಣದಿಂದಲೇ ಇಂದು ತಂತ್ರಜ್ಞಾನ ಎಷ್ಟೇ ಬೆಳೆದರೂ ರೈಲುಗಳು ಹಸಿರು ಬಾವುಟ ತೋರಿಸುತ್ತಿವೆ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವು ಕೆಲಸಗಳನ್ನು ಕೈಯಾರೆ ಮಾಡಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

Most Read Articles

Kannada
Read more on ರೈಲು train
English summary
Do you know why the railway staff still use the green flag no matter how advanced the technology is
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X