ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕ್ಲಚ್ ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಆದರೆ ಕೆಲವರು ಕ್ಲಚ್ ಬಳಸುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳ ಮೂಲಕ ಕ್ಲಚ್'ನ ಜೀವಿತಾವಧಿಯನ್ನು ಹೆಚ್ಚಿಸಬಹುದು. ಆ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಈ ವಿಧಾನಗಳು ಕಷ್ಟವೇನಲ್ಲ. ಅನುಸರಿಸಲು ತುಂಬಾ ಸರಳವಾಗಿವೆ. ಸಾಮಾನ್ಯವಾಗಿ ಕ್ಲಚ್ ಅನ್ನು ಬದಲಿಸಲು ಹೆಚ್ಚು ವೆಚ್ಚವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಲೇಖನದಲ್ಲಿ ನೀಡಿರುವ ಸಲಹೆಗಳು ನಿಮಗೆ ಸಹಕಾರಿಯಾಗಬಹುದು.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕಾಲುಗಳನ್ನು ಕ್ಲಚ್ ಮೇಲಿಟ್ಟು ವಿರಮಿಸಬೇಡಿ

ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ ಎಂದು ಹಲವರಿಗೆ ತಿಳಿದಿಲ್ಲ. ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ. ಕಾರ್ ಕ್ಲಚ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಸರಳ ಮಾರ್ಗಗಳಲ್ಲಿ ಇದು ಸಹ ಒಂದು.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಸಿಗ್ನಲ್‌ನಲ್ಲಿ ಕಾರ್ ಅನ್ನು ನ್ಯೂಟ್ರಲ್ ಆಗಿಡಿ

ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಕಾರ್ ಅನ್ನು ನ್ಯೂಟ್ರಲ್'ನಲ್ಲಿಡಿ. ಇದು ತುಂಬಾ ಸರಳ ವಿಧಾನ. ಆದರೆ ಹಲವಾರು ಚಾಲಕರು ಸಿಗ್ನಲ್‌ಗಳಲ್ಲಿ ಕಾಯುವಾಗ ಕ್ಲಚ್ ಅನ್ನು ಬಳಸುತ್ತಾರೆ. ಸಿಗ್ನಲ್‌ಗಳಿಗಾಗಿ ಕಾಯುತ್ತಿರುವಾಗ ಕ್ಲಚ್ ಅನ್ನು ತುಳಿಯುವುದು ಕೆಟ್ಟ ಅಭ್ಯಾಸ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಆದರೆ ಕೆಲವರು ಕೆಲವೇ ಕೆಲವು ಸೆಕೆಂಡುಗಳು ಮಾತ್ರ ಕ್ಲಚ್ ತುಳಿಯುತ್ತೇವೆ ಎಂದು ಲಘುವಾಗಿ ಪರಿಗಣಿಸುತ್ತಾರೆ. ಕ್ಲಚ್ ಬಳಕೆ 10 ಸೆಕೆಂಡುಗಳಾಗಿದ್ದರೂ ಅನಗತ್ಯ ಬಳಕೆ ಹೆಚ್ಚಾಗುತ್ತದೆ ಎಂದು ಅವರು ತಿಳಿಯುವುದಿಲ್ಲ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಸಿಗ್ನಲ್‌ನಲ್ಲಿ ಕ್ಲಚ್ ತುಳಿಯುವ ಬದಲು ಕಾರ್ ಅನ್ನು ನ್ಯೂಟ್ರಲ್ ನಲ್ಲಿಡ ಬಹುದು. ಬಳಕೆಯಲ್ಲಿಲ್ಲದಿದ್ದಾಗ ಕ್ಲಚ್ ಪೆಡಲ್ ಅನ್ನು ತುಳಿಯುವುದರಿಂದ ಅದರ ಜೀವಿತಾವಧಿಯು ಕಡಿಮೆಯಾಗುತ್ತದೆ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬ್ರೇಕ್ ಹಿಡಿದಾಗ ಕ್ಲಚ್ ತುಳಿಯುವ ಅವಶ್ಯಕತೆಯಿಲ್ಲ

ಹಾಗೆಯೇ ಬ್ರೇಕ್ ಹಾಕಿದಾಗಲೆಲ್ಲಾ ಕ್ಲಚ್ ಬಳಸಬಾರದೆಂಬುದನ್ನು ನೆನಪಿನಲ್ಲಿಡಿ. ಬ್ರೇಕ್ ಹಾಕುವಾಗ ಹಲವರು ಬ್ರೇಕ್ ಪೆಡಲ್ ಹಾಗೂ ಕ್ಲಚ್ ಪೆಡಲ್ ಎರಡನ್ನೂ ಒತ್ತಿ ಹಿಡಿಯುತ್ತಾರೆ. ಇದು ಇನ್ನೊಂದು ಕೆಟ್ಟ ಅಭ್ಯಾಸ. ಕ್ಲಚ್ ಅನ್ನು ಅನಗತ್ಯವಾಗಿ ಈ ರೀತಿ ಬಳಸದಿರಿ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಪಾರ್ಕಿಂಗ್ ಬ್ರೇಕ್ ಬಳಸಿ

ಕಾರಿನ ಪಾರ್ಕಿಂಗ್ ಬ್ರೇಕ್ ಅನ್ನು ಸಂಪೂರ್ಣವಾಗಿ ಬಳಸಿ. ಕಾರ್ ಅನ್ನು ಗೇರ್‌ನಲ್ಲಿಡುವುದರಿಂದ ಅದು ಉರುಳುವುದನ್ನು ತಡೆಯಬಹುದು. ಆದರೆ ಈ ಕ್ರಿಯೆಯು ಕ್ಲಚ್ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ ಎಂಬುದನ್ನು ನೆನಪಿಡಿ. ಕ್ಲಚ್ ಅನ್ನು ನಿಯಮಿತವಾಗಿ ಪರೀಕ್ಷಿಸುವುದು ಹಾಗೂ ನಿರ್ವಹಿಸುವುದು ಒಳ್ಳೆಯದು.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ನಿಧಾನವಾಗಿ ಚಲಿಸಿ

ಕಾರ್ ಅನ್ನು ಯಾವಾಗಲೂ ಅತಿಯಾದ ವೇಗದಲ್ಲಿ ಚಾಲನೆ ಮಾಡುವ ಅಗತ್ಯವಿಲ್ಲ. ವೇಗವನ್ನು ಹೆಚ್ಚಿಸುವಾಗ ನಿಧಾನವಾಗಿ ಕ್ಲಚ್ ಅನ್ನು ನಿರ್ವಹಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಾಗುತ್ತದೆ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಅಗತ್ಯವಿದ್ದಾಗ ಮಾತ್ರ ಕ್ಲಚ್ ಬಳಸಿ

ಕಾರ್ ಅನ್ನು ಚಾಲನೆ ಮಾಡುವಾಗ ಕ್ಲಚ್ ಬಳಸುವುದು ಬಹಳ ಮುಖ್ಯ. ದಟ್ಟಣೆ ಇರುವ ಪ್ರದೇಶಗಳಲ್ಲಿ ಕ್ಲಚ್ ಬಳಕೆ ಹೆಚ್ಚಾಗುತ್ತಿದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಕ್ಲಚ್ ಅನ್ನು ಸಂಪೂರ್ಣವಾಗಿ ಬಳಸುವುದನ್ನು ನಿಲ್ಲಿಸಿ ಎಂದು ಹೇಳುತ್ತಿಲ್ಲ. ಅಗತ್ಯವಿದ್ದಾಗ ಮಾತ್ರ ಕ್ಲಚ್ ಬಳಸುವಂತೆ ನಾವು ನಿಮಗೆ ಸಲಹೆ ನೀಡುತ್ತಿದ್ದೇವೆ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕ್ಲಚ್ ಶಬ್ದವನ್ನು ಆಲಿಸಿ

ಕಾಲ ಕಾಲಕ್ಕೆ ಕಾರು ಹಾಗೂ ಕ್ಲಚ್ ಬಗ್ಗೆ ಗಮನ ಹರಿಸಿ. ವಾರಕ್ಕೊಮ್ಮೆಯಾದರೂ ಕಾರಿನಿಂದ ಬರುವ ಶಬ್ದಗಳ ಮೇಲೆ ಹೆಚ್ಚು ಗಮನ ಹರಿಸಿ. ಕಾರಿನಿಂದ ಹೆಚ್ಚು ಶಬ್ದ ಕೇಳಿಸುತ್ತಿದ್ದರೆ ನಿರ್ಲಕ್ಷ್ಯ ಮಾಡದೇ ತಕ್ಷಣವೇ ಸರಿ ಪಡಿಸಿ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕ್ಲಚ್ ಜೊತೆಗೆ ಕಾರಿನ ಎಂಜಿನ್ ಆಯಿಲ್ ಅನ್ನು ಕೂಡ ಕಾಲ ಕಾಲಕ್ಕೆ ಬದಲಿಸ ಬೇಕು. ಆದರೂ ಕೆಲವು ಎಂಜಿನ್ ಗಳು ಹೆಚ್ಚು ಇಂಧನವನ್ನು ಬಳಸುತ್ತವೆ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ದೋಷಯುಕ್ತ ಎಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ರೀತಿಯ ಎಂಜಿನ್'ಗಳು ಹೆಚ್ಚು ಇಂಧನವನ್ನು ಬಳಸುತ್ತವೆ. ಕೆಲವೊಮ್ಮೆ ಎಂಜಿನ್‌ನಲ್ಲಿ ಯಾವುದೇ ತೊಂದರೆ ಇಲ್ಲದಿದ್ದಲ್ಲಿ ಇತರ ಪ್ರಮುಖ ಭಾಗಗಳಲ್ಲಿ ಸಮಸ್ಯೆಗಳಿರುವ ಸಾಧ್ಯತೆಗಳಿರುತ್ತವೆ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಪೆಟ್ರೋಲ್ ಎಂಜಿನ್‌ಗಳಲ್ಲಿ ಸ್ಪಾರ್ಕ್ ಪ್ಲಗ್‌ಗಳು ಅಥವಾ ಒ 2 ಸೆನ್ಸಾರ್'ಗಳ ದುರಸ್ತಿ ಅಥವಾ ಡೀಸೆಲ್ ಎಂಜಿನ್‌ಗಳಲ್ಲಿ ಫ್ಯೂಯಲ್ ಇಂಜೆಕ್ಟರ್‌ ಮೇಲೆ ಕೊಳೆಯಿದ್ದರೆ ಹೆಚ್ಚು ಇಂಧನ ಬಳಕೆಗೆ ಕಾರಣವಾಗಬಹುದು. ಇದರಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ. ಕಾರು ಹೆಚ್ಚು ಇಂಧನ ಬಳಸುತ್ತಿದ್ದರೆ ಈ ಸಮಸ್ಯೆಗಳನ್ನು ಪರಿಶೀಲಿಸಿ.

ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ತಪ್ಪಾದ ಎಂಜಿನ್ ಆಯಿಲ್ ಸಹ ಕಾರುಗಳು ಹೆಚ್ಚು ಇಂಧನ ಬಳಸಲು ಕಾರಣವಾಗುತ್ತದೆ. ಎಂಜಿನ್‌ನ ಸರಿಯಾದ ಕಾರ್ಯನಿರ್ವಹಣೆಗೆ ಎಂಜಿನ್ ಆಯಿಲ್ ಅತ್ಯಗತ್ಯ. ಎಂಜಿನ್ ಆಯಿಲ್'ನಲ್ಲಿ ವಿಭಿನ್ನ ಸರಣಿಗಳಿವೆ. ಕಾರಿಗೆ ಎಂಜಿನ್ ಆಯಿಲ್ ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸುವುದು ಬಹಳ ಮುಖ್ಯ.

Most Read Articles

Kannada
English summary
Easiest tips to increase the life of car s clutch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X