Just In
- 37 min ago
ಯಾವುದೇ ಏರ್ಪೋರ್ಟ್ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ
- 46 min ago
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
- 1 hr ago
ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್ನಲ್ಲೇ ಸಾಗಿಸಿದ ಮಗ
- 1 hr ago
ಹೊಸ ಆಫ್-ರೋಡರ್ ಆರ್ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ
Don't Miss!
- Sports
CWG 2022: ಬೆಳ್ಳಿ ಪದಕ ಗೆದ್ದ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ಗೆ ಕರ್ನಾಟಕ ಸರ್ಕಾರದಿಂದ ನಗದು ಬಹುಮಾನ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Movies
ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!
- Lifestyle
ನಿಶ್ಚಿತಾರ್ಥ ಆದ ಮೇಲೆ ಈ ರೀತಿ ಅನಿಸಿದರೆ ಮದುವೆಯಾಗದಿರುವುದೇ ಬೆಸ್ಟ್
- Finance
4 ತಿಂಗಳಲ್ಲೇ ಭಾರಿ ಏರಿಕೆ ಕಂಡ ಸೆನ್ಸೆಕ್ಸ್: ಆಟೋ, ಪವರ್ ಸ್ಟಾಕ್ ಬಲ
- News
ಬಲವಂತವಾಗಿ ಹಿಡಿದ ಅಭಿಮಾನಿಯ ಕೈಯಿಂದ ತಂದೆಯನ್ನು ರಕ್ಷಿಸಿದ ಆರ್ಯನ್ ಖಾನ್
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
ವರ್ಷದಲ್ಲಿ ಒಮ್ಮೆ ಬರುವ ಮಳೆಗಾಲದಲ್ಲೇ ಅಪಘಾತಗಳು ಹೆಚ್ಚಾಗಿ ದಾಖಲಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಸವಾರರಿಗೆ ಇತರ ಸಂದರ್ಭಗಳಲ್ಲಿ ಬೈಕ್ ನಿಯಂತ್ರಣದಲ್ಲಿದ್ದಷ್ಟು ಮಳೆ ಬಿದ್ದಾಗ ಇರುವುದಿಲ್ಲ. ಇದೇ ಕಾರಣಕ್ಕೆ ನಿಯಂತ್ರಣ ಕಳೆದುಕೊಂಡು ವಾಹನಗಳು ಸ್ಕಿಡ್ ಆಗುವುದು ಅಥವಾ ಬ್ರೇಕ್ ಸರಿಯಾಗಿ ಅನ್ವಯಿಸದೆ ಅಪಘಾತಗಳು ಸಂಭವಿಸುತ್ತವೆ.

ಅಲ್ಲದೇ ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ರಸ್ತೆಗಳು ಸಹ ಸರಿಯಾಗಿ ಕಾಣುವುದಿಲ್ಲ. ಈ ವೇಳೆ ಸವಾರರು ಕುರುಡಾಗಿ ಓಡಿಸಿ ಜಾರು ರಸ್ತೆಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ. ಆದ್ದರಿಂದ ಮಳೆಗಾಲದಲ್ಲಿ ಆದಷ್ಟು ಬೈಕ್ ಸವಾರಿಯಿಂದ ದೂರವಿರುವುದೇ ಒಳಿತು. ಅನುವಾರ್ಯ ಎಂದುಕೊಂಡರೆ ಎಚ್ಚರ ವಹಿಸಿ ವಾಹನ ಚಾಲನೆ ಮಾಡಬೇಕು.

ಕೆಲವು ಸಂದರ್ಭಗಳಲ್ಲಿ ಬೈಕ್ ಓಡಿಸುವಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೆ ಬಲಿಯಾಗಬಹುದು. ಇಂತಹ ಪ್ರಾಣಾಂತಕ ಸನ್ನಿವೇಶಗಳಿಂದ ಜಾಗರೂಕರಾಗಿ ಬೈಕ್ ಓಡಿಸಲು ನಾವು ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಇಲ್ಲಿ ತಿಳಿಸಲಾದ ಪ್ರತಿಯೊಂದು ಟಿಪ್ ಕೂಡ ಮುಂಬರುವ ಮಳೆಗಾಲದಲ್ಲಿ ಉಪಯೋಗವಾಗಬಹುದು.

1. ಗುಂಡಿಗಳ ಬಗ್ಗೆ ಎಚ್ಚರವಿರಲಿ
ಕೆಲವೊಮ್ಮೆ ಮೋಜಿಗಾಗಿ ನಾವು ಬೈಕನ್ನು ಜಲಾವೃತಗೊಂಡ ರಸ್ತೆಗೆ ಇಳಿಸುತ್ತೇವೆ. ಹೀಗೆ ಮಾಡುವುದರಿಂದ ಬೈಕ್ ಗುಂಡಿಯಲ್ಲಿ ಸಿಲುಕಿಕೊಳ್ಳಬಹುದು, ಈ ವೇಳೆ ಕಡಿಮೆ ವೇಗದಲ್ಲಿದ್ದರೇ ಯಾವುದೇ ಅಪಾಯಿಲ್ಲ. ಆದರೆ ತುಸು ವೇಗಾವಗಿ ಬಂದರೂ ವಾಹನ ಸಮೇತ ಗುಂಡಿಗೆ ಬಿದ್ದು ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನು ಬೈಕ್ನ ಎಂಜಿನ್ಗೆ ನೀರು ಸೇರುವುದರಿಂದ ಬೈಕ್ಗೆ ಹಾನಿಯಾಗಬಹುದು. ನೀರಿನಿಂದ ತುಂಬಿದ ರಸ್ತೆಗಳು ಸಮತಟ್ಟಾಗಿರುತ್ತವೆ ಎಂದುಕೊಳ್ಳುವುದು ನಮ್ಮ ದಡ್ಡತನವೇ ಸರಿ. ಏಕೆಂದರೆ ಬಹುತೇಕ ಗುಂಡಿಗಳು ಮಳೆ ಬೀಳುವುದರಿಂದಲೇ ಏರ್ಪಡುತ್ತವೆ. ಹಾಗಾಗಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರೆ ಅಂತಹ ರಸ್ತೆಗಳಿಗೆ ಹೋಗದಿರುವುದು ಒಳಿತು.

2. ಜೀವ ರಕ್ಷಕ ಹೆಲ್ಮೆಟ್
ಮಳೆ ಬೀಳದೇ ಸಾಮಾನ್ಯ ಸಂದರ್ಭಗಳಲ್ಲಿಯೇ ಹೆಲ್ಮೆಟ್ ಧರಿಸಿ ಎಂದು ಸರ್ಕಾರ ಹೇಳುತ್ತದೆ. ಇನ್ನು ಮಳೆ ಬಿದ್ದಾಗ ಸಂಭವನೀಯ ಅಪಘಾತಗಳು ಹೆಚ್ಚು, ಇಂತಹ ಸಂದರ್ಭಗಳಲ್ಲಿ ಹೆಲ್ಮೆಟ್ಗಳು ನಿರ್ಣಾಯಕವಾಗಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಹೆಲ್ಮೆಟ್ ಧರಿಸುವುದು ಇನ್ನಷ್ಟು ಅನಿವಾರ್ಯವಾಗುತ್ತದೆ.

ಅಪಘಾತದ ಸಮಯದಲ್ಲಿ ಸವಾರನ ಜೀವ ಉಳಿಸುವ ಹೆಲ್ಮೆಟ್ ಮಳೆಯಿಂದಲೂ ರಕ್ಷಣೆ ನೀಡುತ್ತದೆ. ಮಳೆ ನೀರು ಕಣ್ಣಿಗೆ ಅಡ್ಡಿಪಡಿಸದಂತೆ ಹೆಲ್ಮೆಟ್ನ ಗ್ಲಾಸ್ ನಮಗೆ ರಕ್ಷಣೆ ನೀಡುತ್ತದೆ. ಹಾಗಾಗಿ ಸವಾರರು ಮಳೆಯಲ್ಲಿ ಅನಿವಾರ್ಯ ಸವಾರಿ ಕೈಗೊಂಡರೆ ಹೆಲ್ಮೆಟ್ ಬಳಸುವುದನ್ನು ಮರೆಯಿದಿರಿ.

4. ವೇಗ ಕಡಿಮೆ ಇರಲಿ
ಬೈಕ್ ಓಡಿಸುವಾಗ ಬೈಕ್ ಟೈರ್ ಜಾರುತ್ತಿದೆ ಎಂದು ಅನಿಸಿದರೆ ವೇಗ ಕಡಿಮೆ ಮಾಡಿ. ರಸ್ತೆಯಲ್ಲಿ ತಿರುವುಗಳನ್ನು ತೆಗೆದುಕೊಳ್ಳುವಾಗ, ಬೈಕ್ನ ವೇಗವನ್ನು ನಿಧಾನಗೊಳಿಸಿ ಮತ್ತು ನೇರವಾದ ರಸ್ತೆಗಳಲ್ಲಿಯೂ ಸಹ ಬೈಕಿನ ವೇಗವು ತುಂಬಾ ವೇಗವಾಗಿರಬಾರದು. ಮಳೆಯಿಂದಾಗಿ ರಸ್ತೆಯಲ್ಲಿ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ.

5. ಹೆಡ್ಲೈಟ್ ಮುಖ್ಯ
ಮಳೆಗಾಲದಲ್ಲಿ ರಸ್ತೆಯ ಗೋಚರತೆ ಕಡಿಮೆಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮುಂಭಾಗದಿಂದ ಬರುವ ವಾಹನಗಳನ್ನು ನೋಡಲು ನಿಮಗೆ ತೊಂದರೆಯಾಗಬಹುದು. ಆದರೆ ನೀವು ಬೈಕ್ನ ಹೆಡ್ಲೈಟ್ಗಳನ್ನು ಆನ್ನಲ್ಲಿ ಇರಿಸಿದರೆ, ಸವಾರಿ ಮಾಡುವಾಗ ನಿಮಗೆ ನೋಡಲು ತುಂಬಾ ಸಹಾಯಕವಾಗುತ್ತದೆ, ಜೊತೆಗೆ ರಸ್ತೆಯಲ್ಲಿರುವ ಇತರ ಚಾಲಕರು ನಿಮ್ಮನ್ನು ನೋಡಲು ಸಾಧ್ಯವಾಗುತ್ತದೆ.

6. ಬ್ರೇಕ್ ನಿಯಂತ್ರಣದಲ್ಲಿರಲಿ
ಮಳೆಯ ಸಮಯದಲ್ಲಿ ಹಠಾತ್ ಬ್ರೇಕ್ ಮಾಡುವುದನ್ನು ತಪ್ಪಿಸಿ. ನೀವು ಇದ್ದಕ್ಕಿದ್ದಂತೆ ಬ್ರೇಕ್ ಮಾಡಬೇಕಾದರೆ, ಮುಂಭಾಗ ಮತ್ತು ಹಿಂಭಾಗದ ಬ್ರೇಕ್ಗಳನ್ನು ಏಕಕಾಲದಲ್ಲಿ ಬಳಸಿ. ಹೀಗೆ ಮಾಡುವುದರಿಂದ ಬೈಕ್ನ ಎರಡೂ ಚಕ್ರಗಳು ಏಕಕಾಲದಲ್ಲಿ ನಿಲ್ಲುತ್ತವೆ ಮತ್ತು ಸ್ಕಿಡ್ ಆಗುವ ಅಪಾಯ ಕಡಿಮೆ ಇರುತ್ತದೆ. ನೆನಪಿನಲ್ಲಿಡಬೇಕಾದ ಮತ್ತೊಂದು ವಿಷಯವೆಂದರೆ ಹಠಾತ್ ಆಗಿ ಮುಂಭಾಗದ ಬ್ರೇಕ್ ಹಿಡಿಯುವುದನ್ನು ಮಾಡಬೇಡಿ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಮಳೆಗಾಲದಲ್ಲಿ ವಾಹನ ಸವಾರಿ ಮಾಡುವಾಗ ಬಹಳ ಎಚ್ಚರಿಕೆಯಿಂದರಬೇಕು, ಸ್ವಲ್ಪ ಯಾಮಾರಿದರು ಸ್ಕಿಡ್ ಆಗಿ ಬೀಳುವುದು ಖಚಿತ. ಆದಷ್ಟು ವಾಹನವನ್ನು ನಿಧಾನವಾಗಿ ಓಡಿಸುವುದು ಒಳ್ಳೆಯದು. ಮೇಲೆ ತಿಳಿಸಿರುವ ಸಲಹೆಗಳನ್ನು ಪಾಲಿಸಿ ಗುಣಮಟ್ಟದ ರೈನ್ಕೋಟ್ ತೊಟ್ಟು ಮಳೆಯಲ್ಲಿ ಸವಾರಿ ಮಾಡುವುದರಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು.