Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ
ಹೆಚ್ಚುತ್ತಿರುವ ವಾಯುಮಾಲಿನ್ಯವು ಜಗತ್ತಿನ ಜನರಿಗೆ ಆತಂಕವನ್ನುಂಟು ಮಾಡುತ್ತಿದೆ. ಕಾರ್ಖಾನೆ ಹಾಗೂ ವಾಹನಗಳಿಂದ ಹೊರಹೊಮ್ಮುವ ಮಾಲಿನ್ಯದಿಂದಾಗಿ ನಮ್ಮ ಪರಿಸರವು ಕಲುಷಿತಗೊಳ್ಳುತ್ತಿದೆ. ಲಾಕ್ಡೌನ್ ಅವಧಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿತ್ತು.

ಸದಾ ವಾಯುಮಾಲಿನ್ಯದಿಂದ ತತ್ತರಿಸುತ್ತಿದ್ದ ನಗರಗಳ ಗಾಳಿಯು ಲಾಕ್ಡೌನ್ ಅವಧಿಯಲ್ಲಿ ಶುದ್ಧವಾಗಿತ್ತು. ನಮ್ಮ ಪರಿಸರವು ಎಷ್ಟು ಕಲುಷಿತಗೊಂಡಿತ್ತು ಎಂಬುದು ಇದರಿಂದ ಸ್ಪಷ್ಟವಾಗಿತ್ತು. ಇಂದು ವಿಶ್ವ ಪರಿಸರ ದಿನವಾಗಿದ್ದು, ಬೈಕ್ನಲ್ಲಿ ಇಂಧನವನ್ನು ಉಳಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1. ಒಂದೇ ವೇಗದಲ್ಲಿ ಬೈಕ್ ಚಾಲನೆ ಮಾಡಿ
ಇಂಧನದ ಬಳಕೆ ಕಡಿಮೆಯಾದಾಗ ವಾಹನಗಳಿಂದ ಉಂಟಾಗುವ ಮಾಲಿನ್ಯವು ಕಡಿಮೆಯಾಗುತ್ತದೆ. ಈ ಕಾರಣಕ್ಕೆ ವಾಹನವನ್ನು ಒಂದೇ ವೇಗದಲ್ಲಿ ಚಾಲನೆ ಮಾಡುವುದು ಅವಶ್ಯಕ. ವೇಗವಾಗಿ ಅಥವಾ ನಿಧಾನವಾಗಿ ಚಾಲನೆ ಮಾಡುವುದರಿಂದ ಎಂಜಿನ್ನ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ಇಂಧನದ ಬಳಕೆ ಹೆಚ್ಚಾಗುತ್ತದೆ. ಪದೇ ಪದೇ ಬ್ರೇಕ್ ಹಾಕುವುದರಿಂದ ಹಾಗೂ ಬೈಕ್ನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದರಿಂದ ಇಂಧನ ಬಳಕೆಯು ಹೆಚ್ಚಾಗುತ್ತದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

2. ಟಯರ್ ಪ್ರೆಷರ್ ಪರಿಶೀಲಿಸಿ
ಎಂಜಿನ್ ಎಫಿಶಿಯನ್ಸಿ ಸರಿಯಾಗಿರಬೇಕಾದರೆ ಟಯರ್ ಪ್ರೆಷರ್ ಸರಿಯಾಗಿರಬೇಕು. ಟಯರ್ಗಳಲ್ಲಿ ಕಡಿಮೆ ಗಾಳಿಯಿದ್ದರೆ, ವಾಹನವನ್ನು ಚಲಿಸುವಂತೆ ಮಾಡಲು ಎಂಜಿನ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಇಂಧನ ಬಳಕೆ ಹೆಚ್ಚಾಗುತ್ತದೆ. ಕಂಪನಿಗಳು ಸೂಚಿಸಿದ ಟಯರ್ಗಳನ್ನು ಬಳಸುವುದು ಸೂಕ್ತ.

3. ಟ್ರಾಫಿಕ್ ಸಿಗ್ನಲ್ನಲ್ಲಿ ಎಂಜಿನ್ ಆಫ್ ಮಾಡಿ
30 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಟ್ರಾಫಿಕ್ ಸಿಗ್ನಲ್ನಲ್ಲಿ ನಿಲ್ಲಬೇಕಾದಲ್ಲಿ, ಎಂಜಿನ್ ಅನ್ನು ಆಫ್ ಮಾಡಿ. ಇದರಿಂದಲೂ ಸಹ ಮಾಲಿನ್ಯವನ್ನು ನಿವಾರಿಸಬಹುದು. ಒಂದು ಅಂದಾಜಿನ ಪ್ರಕಾರ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾರ್ಷಿಕವಾಗಿ ಹಲವಾರು ಲೀಟರ್ಗಳ ಇಂಧನವು ವ್ಯರ್ಥವಾಗುತ್ತಿದೆ. ಟ್ರಾಫಿಕ್ ಸಿಗ್ನಲ್ನಲ್ಲಿ ಎಂಜಿನ್ ಆಫ್ ಮಾಡುವುದರಿಂದ ತೈಲ ಉಳಿತಾಯವಾಗುವುದರ ಜೊತೆಗೆ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

4. ಮೆಂಟೆನೆನ್ಸ್
ಬೈಕ್ ಅಥವಾ ಸ್ಕೂಟರ್ಗಳನ್ನು ಸರಿಯಾಗಿ ನೋಡಿಕೊಂಡರೆ, ಉತ್ತಮ ಇಂಧನ ದಕ್ಷತೆಯನ್ನು ಪಡೆಯಬಹುದು. ಕಾಲಕಾಲಕ್ಕೆ ಎಂಜಿನ್ ಆಯಿಲ್ ಬದಲಿಸುವುದು ಸೂಕ್ತ. ಇದರ ಜೊತೆಗೆ ಬ್ರೇಕ್ ಫ್ಲೂಯಿಡ್, ಚೈನ್ ಹಾಗೂ ಬ್ರೇಕ್ ಸೇರಿದಂತೆ ಇತರ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಕಾಲಕಾಲಕ್ಕೆ ಸರ್ವೀಸ್ ಮಾಡಿಸುವುದು ಒಳ್ಳೆಯದು.

5. ಎಮಿಷನ್
ಮಾಲಿನ್ಯವನ್ನು ಕಡಿಮೆ ಮಾಡಲು, ಬೈಕ್ನಿಂದ ಹೊರಹೋಗುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಬೇಕು. ಹೊರಸೂಸುವಿಕೆಯು ನಿಗದಿತ ಪ್ರಮಾಣವನ್ನು ಮೀರಿದರೆ, ಬೈಕ್ ಎಂಜಿನ್, ಬೈಕ್ ಕಾರ್ಬ್ಯುರೇಟರ್ ಹಾಗೂ ಸ್ಪಾರ್ಕ್ ಪ್ಲಗ್ಗಳನ್ನು ಕಂಪನಿಯ ಅಧಿಕೃತ ಸರ್ವೀಸ್ ಸೆಂಟರ್ಗಳಲ್ಲಿ ಸರಿಪಡಿಸಿ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪೆಟ್ರೋಲ್ ಕಲಬೆರಕೆಯಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ಪೆಟ್ರೋಲ್ ಅನ್ನು ಅಧಿಕೃತ ಪೆಟ್ರೋಲ್ ಬಂಕ್ನಲ್ಲಿ ಹಾಕಿಸಿ. ಪ್ರತಿ ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡಿಸಿ.