ಕಾರು ವಿಮಾ ಖರೀದಿಗಾರರಿಗೆ ಉಪಯುಕ್ತ ಸಲಹೆಗಳು

ಹಿಂದೆಲ್ಲ ನಮ್ಮ ಸಮಾಜದಲ್ಲಿ ಕಾರು ಖರೀದಿ ಶ್ರೀಮಂತರಿಗೆ ಮಾತ್ರ ಹೇಳಿದ ಕೆಲಸವೆಂಬ ತಪ್ಪು ಭಾವನೆಗಳಿದ್ದವು. ಆದರೆ ಕಾಲಕ್ರಮೇಣ ಉದ್ಯೋಗವಕಾಶಗಳು ವರ್ಧಿಸಿದಂತೆ ಜನರು ಸ್ವಾವಲಂಬಿಗಳಾಗತೊಡಗಿದರು. ಇದರ ಪರಿಣಾಮವೆಂಬಂತೆ ದೇಶದ ರಸ್ತೆಗಳಲ್ಲಿ ಹೆಚ್ಚಿನ ಕಾರುಗಳು ಓಡಾಟತೊಡಗಿದವು.

ಹಾಗೆಯೇ ಸಮಯ ಸಾಗಿದಂತೆ ಶ್ರೀಮಂತರ ಪ್ರತಿಷ್ಠೆಯ ಸಂಕೇತವಾಗಿದ್ದ ಕಾರುಗಳು ದೇಶದ ಮಧ್ಯಮ ವರ್ಗದ ಮನೆ ಬಾಗಿಲಿಗೂ ಬಂದು ತಲುಪಿತ್ತು. ಬರಬರುತ್ತಾ ಇಂದಿನ ಆಧುನಿಕ ಯುಗದಲ್ಲಿ ಜನ ಸಾಮಾನ್ಯರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಕಾರುಗಳನ್ನು ಬಳಕೆ ಮಾಡತೊಡಗಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ದೇಶದ ಕಾರು ಮಾರಾಟದಲ್ಲಿ ದಾಖಲಾಗಿರುವ ವರ್ಧನೆಯೇ ಇದಕ್ಕೆ ಸಾಕ್ಷಿಯಾಗಿದೆ.

ಒಟ್ಟಿನಲ್ಲಿ ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆಯೇ ಕಾರುಗಳ ಓಡಾಟ ಒಂದೆಡೆಯಾಗಿದ್ದರೆ ಅಪಘಾತಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ವರ್ಧಿಸುತ್ತಲೇ ಇವೆ. ಇಂತಹ ಅಪಘಾತದಿಂದ ಬಚಾವಾಗುವ ಜನರು ನಿಜವಾಗಿಯೂ ಅದೃಷ್ಟವಂತರೇ ಸರಿ. ಆಗಿದ್ದರೂ ಜೀವ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಅಪಘಾತಗಳು ಯಾವುದೇ ಸಂದರ್ಭದಲ್ಲಾದರೂ ಸಂಭವಿಸಬಹುದು. ಹಾಗಾಗಿ ಅಪಾಯ ಸಹ ಯಾವತ್ತೂ ಕಟ್ಟಿಟ್ಟ ಬುತ್ತಿ.

ಪರಿಹಾರ

ಪರಿಹಾರ

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಮೋಟಾರು ವಿಮೆ ಸೇವೆಯನ್ನು ಆರಂಭಿಸಲಾಗಿದೆ. ನಿಮ್ಮ ವಾಹನಗಳಿಗೆ ವಿಮೆ ಪಡೆದುಕೊಳ್ಳುವ ಮೂಲಕ ಅಪಘಾತವು ನಿಮ್ಮ ಜೀವನ ರೇಖೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಖಚಿತಪಡಿಸಲು ಸಾಧ್ಯ.

ಯಾವ ರೀತಿಯ ಅಪಾಯಗಳ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ?

ಯಾವ ರೀತಿಯ ಅಪಾಯಗಳ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ?

ಅಪಘಾತದಲ್ಲಿ ನಿಮ್ಮ ಕಾರಿಗೆ ಹಾನಿಯಾದ್ದಲ್ಲಿ,

ರಸ್ತೆ ಅಪಘಾತದಿಂದ ನೀವು ತೀವ್ರವಾಗಿ ಗಾಯಗೊಂಡ್ಡಲ್ಲಿ,

ರಸ್ತೆಯಲ್ಲಿ ನಿಮ್ಮ ಕಾರು ಇನ್ನೊಂದು ವಾಹನದ ಜತೆ ಢಿಕ್ಕಿಯಾಗಿ ಹಾನಿಯಾದ ಸಂದರ್ಭ,

ಅಪಘಾತವೊಂದರಲ್ಲಿ ನಿಮ್ಮ ಕಾರು ಮತ್ತೊಂದು ವಾಹನದ ಚಾಲಕ, ಪ್ರಯಾಣಿಕ ಅಥವಾ ಪಾದಚಾರಿಗಳನ್ನು ಗಂಭೀರ ಗಾಯಗೊಳಿಸಿದ್ದಲ್ಲಿ,

ಬಲಿಪಶುವಾದ ಮೂರನೇ ವ್ಯಕ್ತಿ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಂಡ್ಡಲ್ಲಿ,

ನಿಮ್ಮ ಕಾರು ಅಪಘಾತದಿಂದಾಗಿ ಮತ್ತೊಂದು ವಾಹನದ ಚಾಲಕ, ಪ್ರಯಾಣಿಕ ಅಥವಾ ಪಾದಚಾರಿಗಳ ಮರಣಕ್ಕೆ ಕಾರಣವಾಗಿದ್ದಲ್ಲಿ,

ನಿಮ್ಮ ಕಾರು ಕಳವಾದ್ದಲ್ಲಿ,

ನಿಮ್ಮ ಕಾರಿಗೆ ದುಬಾರಿ ರಿಪೇರಿ ಅಗತ್ಯವಿದ್ದಲ್ಲಿ,

ಒಂದು ಮರ ನಿಮ್ಮ ಕಾರಿನ ಮೇಲೆ ಬಿದ್ದು ಹಾನಿ ಸಂಭವಿಸಿದ್ದಲ್ಲಿ,

ಕಾರಿಗೆ ಬೆಂಕಿ ಆಕಸ್ಮಿಕವಾದ್ದಲ್ಲಿ,

ಹಾಗೂ ಇತರೆ...

ಕಾರು ವಿಮೆ

ಕಾರು ವಿಮೆ

ಮೇಲೆ ತಿಳಿಸಲಾದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಕಾರು ವಿಮಾ ಪದ್ಧತಿಯನ್ನು ಆಳವಡಿಸಲಾಗಿದೆ. ಈ ಮೂಲಕ ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತಗಳು ನಿಮ್ಮ ಜೀವನದ ಪಯಣಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಲಿದೆ.

ಕಾರು ವಿಮೆ ಎಂದರೇನು?

ಕಾರು ವಿಮೆ ಎಂದರೇನು?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಅರಿಯಲ್ಪಡುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ. ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ರಕ್ಷಣೆ

ರಕ್ಷಣೆ

ತಾಂತ್ರಿಕ ಭಾಷೆಯಲ್ಲಿ ಹೇಳಬೇಕೆಂದರೆ ಇದು ವಾಹನ ಮಾಲಿಕ (insured) ಹಾಗೂ ಕಾರು ವಿಮಾ ಸಂಸ್ಥೆ (insurer) ನಡುವಣ ಒಪ್ಪಂದವಾಗಿದೆ. ಈ ಕರಾರಿನ ಮುಖಾಂತರ ವಾಹನ ಮಾಲಿಕರು ತುರ್ತು ಅಪಘಾತ ಪರಿಸ್ಥಿತಿ ಎದುರಾದ್ದಲ್ಲಿ ಪರಿಹಾರ ನೀಡಲು ವಿಮೆ ಕಂಪನಿಗಳು ಭಾದಕವಾಗಿರುತ್ತದೆ. ಇಲ್ಲಿ ವಾಹನ ಮಾಲಿಕರು ವಿಮಾ ಕಂಪನಿಗೆ ನಿಯಮಿತವಾಗಿ ನಿಗದಿತ ಮೊತ್ತ ಪಾವತಿಸುವ ಭರವಸೆ ನೀಡುವ ಮೂಲಕ ಭವಿಷ್ಯದಲ್ಲಿ ಪರಿಹಾರ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕಾರು ವಿಮಾ ಯಾತಕ್ಕಾಗಿ ಖರೀದಿಸಬೇಕು? ಇದನ್ನು ತಪ್ಪಿಸಿಕೊಳ್ಳುವ ಮಾರ್ಗವಿದೆಯೇ?

ಕಾರು ವಿಮಾ ಯಾತಕ್ಕಾಗಿ ಖರೀದಿಸಬೇಕು? ಇದನ್ನು ತಪ್ಪಿಸಿಕೊಳ್ಳುವ ಮಾರ್ಗವಿದೆಯೇ?

ಭಾರತದಲ್ಲಿ ಕಾರು ವಿಮೆ ಖರೀದಿಸಲು ಎರಡು ಪ್ರಮುಖ ಕಾರಣಗಳಿವೆ:

ಕಾನೂನಿನ ಪ್ರಕಾರ ಕಡ್ಡಾಯ,

ಇದು ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಕೋಪಗಳು ಸೇರಿದಂತೆ ಹಲವಾರು ತುರ್ತು ಸಂದರ್ಭಗಳಲ್ಲಿ ವಾಹನ ಹಾಗೂ ಅದರ ಮಾಲಿಕರಿಗೆ ಎದುರಾಗಬಹುದಾದ ಪರಿಣಾಮಗಳಿಂದ ರಕ್ಷಣೆ ನೀಡುತ್ತವೆ.

ಕಾನೂನಿನ ಕಟ್ಟುಪಾಡು

ಕಾನೂನಿನ ಕಟ್ಟುಪಾಡು

ನಮ್ಮ ದೇಶದಲ್ಲಿ ಕಡ್ಡಾಯವಾಗಿ ವಾಹನ ವಿಮಾ ಮಾಡಿಸಿಕೊಳ್ಳತಕ್ಕದ್ದು. 1988ನೇ ಮೋಟಾರು ವಾಹನ ಕಾಯ್ದೆ ಪ್ರಕಾರ ದೇಶದ ಪ್ರತಿಯೊಬ್ಬ ಕಾರು ಮಾಲಿಕರೂ ವಾಹನ ವಿಮೆಯನ್ನು ಹೊಂದಿರತಕ್ಕದ್ದಾಗಿದೆ. ಈ ಪದವನ್ನು ಇನ್ನಷ್ಟು ಲಘುಕರಿಸುವ ಮೊದಲು ಕಾರು ವಿಮೆಯಲ್ಲಿ ಎಷ್ಟು ವಿಧಗಳಿವೆ ಎಂಬುದನ್ನು ತಿಳಿದುಕೊಂಡ್ಡಲ್ಲಿ ಇನ್ನು ಉತ್ತಮವಾಗಿರಲಿದೆ.

ಭಾರತದಲ್ಲಿ ಕಾರು ವಿಮೆ ಸಾಮಾನ್ಯವಾಗಿ ಎರಡು ವಿಧಗಳಿವೆ.

ಭಾರತದಲ್ಲಿ ಕಾರು ವಿಮೆ ಸಾಮಾನ್ಯವಾಗಿ ಎರಡು ವಿಧಗಳಿವೆ.

ಭಾರತದಲ್ಲಿ ಕಾರು ವಿಮೆ ಸಾಮಾನ್ಯವಾಗಿ ಎರಡು ವಿಧಗಳಿವೆ. ಮೂರನೇ ವ್ಯಕ್ತಿ ವಿಮಾ ಹಾಗೂ ಸಮಗ್ರ ಪಾಲಿಸಿ.

ಎರಡು ವಿಧ

ಎರಡು ವಿಧ

ಮೂರನೇ ವ್ಯಕ್ತಿ ವಿಮಾ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಬದಲಾಗಿ ಶಾರೀರಿಕ ಹಾನಿ, ಮರಣ ಅಥವಾ ಮೂರನೇ ವ್ಯಕ್ತಿಯ ಆಸ್ತಿಗಾಗುವ ನಷ್ಟವನ್ನು ಭರಿಸುತ್ತದೆ. ಇನ್ನೊಂದೆಡೆ ಸಮಗ್ರ ವಿಮಾ ಪಾಲಿಸಿಯಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದು ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ವಿಪತ್ತುಗಳನ್ನು ಒಳಗೊಂಡಿರುತ್ತವೆ. ಹಾಗಾಗಿ ಕಾನೂನಿನ ಕಟ್ಟುಪಾಡನ್ನು ಅನುಸರಿಸುವ ನಿಟ್ಟಿನಲ್ಲಿ ನೀವು ಮೂರನೇ ವ್ಯಕ್ತಿಯ ಹೊಣೆಗಾರಿಕೆಯ ಯೋಜನೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳತಕ್ಕುದ್ದು.

ಮೂರನೇ ವ್ಯಕ್ತಿ ಹೊಣೆಗಾರಿಕೆ ಯೋಜನೆಯನ್ನು ಯಾತಕ್ಕಾಗಿ ಖರೀದಿಸಬೇಕು? ಇದನ್ನು ತಪ್ಪಿಸಿಕೊಳ್ಳಲು ಮಾರ್ಗಗಳಿವೇ?

ಮೂರನೇ ವ್ಯಕ್ತಿ ಹೊಣೆಗಾರಿಕೆ ಯೋಜನೆಯನ್ನು ಯಾತಕ್ಕಾಗಿ ಖರೀದಿಸಬೇಕು? ಇದನ್ನು ತಪ್ಪಿಸಿಕೊಳ್ಳಲು ಮಾರ್ಗಗಳಿವೇ?

ಸಹಜವಾಗಿಯೇ ಮೂರನೇ ವ್ಯಕ್ತಿ ಹೊಣೆಗಾರಿಕೆ ವಿಮಾ ಯೋಜನೆ ಕಾನೂನಿನ ಮೂಲಕ ಕಡ್ಡಾಯಾಗಿರುವುದರಿಂದ ಪ್ರತಿಯೊಬ್ಬ ನೂತನ ಕಾರು ಖರೀದಿ ಗ್ರಾಹಕರು ಇದನ್ನು ಖರೀದಿಸುವುದು ಮೊದಲ ಕರ್ತವ್ಯವಾಗಿರುತ್ತದೆ. ಅಲ್ಲದೆ ಇದನ್ನು ತಪ್ಪಿಸಿಕೊಳ್ಳುವ ಯಾವುದೇ ಮಾರ್ಗಗಳಿಲ್ಲ. ಹಾಗೊಂದು ವೇಳೆ ನೀವಿದನ್ನು ಪಾಲಿಸದಿದ್ದಲ್ಲಿ ಕೆಳಕಂಡ ಪ್ರತಿಘಾತಕ್ಕೆ ನೀವೇ ಹೊಣೆಯಾಗುತ್ತಿರಿ.

ಶಾಸನಬದ್ಧ ಅಪರಾಧ

ಶಾಸನಬದ್ಧ ಅಪರಾಧ

ದೇಶದಲ್ಲಿ ಮೂರನೇ ವ್ಯಕ್ತಿ ಹೊಣೆಗಾರಿಕೆ ಕಾರು ವಿಮೆ ಇಲ್ಲದೆ ಕಾರು ಚಾಲನೆ ಮಾಡುವುದು ಶಾಸನಬದ್ಧ ಅಪರಾಧವಾಗಿದೆ. ಒಂದು ವೇಳೆ ಸಿಕ್ಕಿಬಿದ್ದಲ್ಲಿ, ನೀವು ಕೆಳಕಂಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ರು. 1000 ದಂಡ (ದೇಶದಲ್ಲಿ ಈಗಿರುವ ನಿಯಮಗಳನ್ನು ಅವಲಂಬಿಸಿರುತ್ತದೆ.) ನ್ಯಾಯಾಲಯಕ್ಕೆ ಭೇಟಿ

ಕಾನೂನು ತೊಡಕು

ಕಾನೂನು ತೊಡಕು

ಮೂರನೇ ವ್ಯಕ್ತಿಯ ಹೊಣೆಗಾರಿಕೆ ವಿಮಾ ಯೋಜನೆ ಖರೀದಿಸಲಿರುವ ಇನ್ನೊಂದು ಪ್ರಮುಖ ಕಾರಣವೆಂದರೆ ನಿಮ್ಮ ಕಾರು ಅಪಘಾತದಿಂದ ಉಂಟಾಗುವ ಕಾನೂನು ತೊಡಕುಗಳಿಂದ ದೂರವಿರಬಹುದಾಗಿದೆ.

ಇದನ್ನೊಮ್ಮೆ ಊಹಿಸಿ ನೋಡಿ

ಇದನ್ನೊಮ್ಮೆ ಊಹಿಸಿ ನೋಡಿ

ನಿಮ್ಮ ಕಾರು ಇನ್ನೊಂದು ವಾಹನಕ್ಕೆ ಢಿಕ್ಕಿಯಾಗಿ ಗಂಭೀರ ಹಾನಿಯುಂಟಾಗಿದೆ ಎಂದು ಗ್ರಹಿಸಿಕೊಳ್ಳಿ. ಕಾರಿನ ಮಾಲಿಕರು ರಿಪೇರಿ ಮೊತ್ತ ಪಾವತಿಸಲು ನಿರ್ಬಂಧಿಸುತ್ತಾರೆ. ಮೊತ್ತ ಪಾವತಿಸಲು ನೀವು ಒಪ್ಪದಿದ್ದಲ್ಲಿ ಅಥವಾ ಸಾಧ್ಯವಾಗದಿದ್ದಲ್ಲಿ ಆತ ನಿಮ್ಮ ವಿರುದ್ಧ ಮೊಕದ್ದಮೆ ಹೂಡುವ ಮೂಲಕ ಕಾನೂನು ಕ್ರಮಕ್ಕೆ ಮುಂದಾಗಬಹುದಾಗಿದೆ.

ವಿಮಾ ಕಂಪನಿಗಳ ಜವಾಬ್ದಾರಿ

ವಿಮಾ ಕಂಪನಿಗಳ ಜವಾಬ್ದಾರಿ

ನೀವು ನಿಯಮಿತವಾಗಿ ವಿಮಾ ಕಂಪನಿಗೆ ಕಂತುಗಳನ್ನು ಪಾವತಿ ಮಾಡುತ್ತಿದ್ದೀರಿ ಅಂದರೆ ಈ ತುರ್ತು ನೀತಿಗಳನ್ನು ವಿಮಾ ಸಂಸ್ಥೆಗಳು ಅನುಸರಿಸಬೇಕಾಗುತ್ತದೆ. ಕಂಪನಿಯು ಮೂರನೇ ವ್ಯಕ್ತಿಯ (ಯಾರ ಕಾರು ಅಪಘಾತದಲ್ಲಿ ಹಾನಿಯಾಗುತ್ತದೆಯೇ) ವಾಹನ ದುರಸ್ತಿಗಳಿಗಾಗುವ ವೆಚ್ಚವನ್ನು ಭರಿಸಬೇಕಾಗುತ್ತದೆ. ಹಣದ ಪ್ರಮಾಣವು ವಿಮಾ ದಸ್ತಾವೇಜಿನಲ್ಲಿ ಸೂಚಿಸಿದ ನಿಯಮ ಹಾಗೂ ಷರತ್ತುಗಳನ್ನು ಅವಲಂಬಿಸಿರುತ್ತದೆ. ಅಂದರೆ ಇದು ನಿಮ್ಮನ್ನು ಕಾನೂನಿಕ ತೊಡಕು ಹಾಗೂ ವಾಹನ ದುರಸ್ತಿಗೆ ತಗಲುವ ವೆಚ್ಚಗಳಿಂದ ರಕ್ಷಿಸುತ್ತದೆ.

ಸಮಗ್ರ ಕಾರು ವಿಮಾ ಯೋಜನೆ ಎಂದರೇನು? ಇದನ್ನು ತಪ್ಪಿಸಿಕೊಳ್ಳಲು ಮಾರ್ಗಗಳಿವೇ?

ಸಮಗ್ರ ಕಾರು ವಿಮಾ ಯೋಜನೆ ಎಂದರೇನು? ಇದನ್ನು ತಪ್ಪಿಸಿಕೊಳ್ಳಲು ಮಾರ್ಗಗಳಿವೇ?

ಯಾವುದೇ ಕಾರು ಮಾಲಿಕನಿಗಾದರೂ ಇಂದೊಂದು ಬೆಲೆಬಾಳುವ ಯೋಜನೆಯಾಗಿರುತ್ತದೆ. ಇದು ಸಾಮಾನ್ಯವಾಗಿ ರಸ್ತೆಗಳಲ್ಲಿ ಎದುರಾಗಬಹುದಾದ ವಿಭಿನ್ನ ರೀತಿಯ ರಸ್ತೆ ಅಪಘಾತ ಸೇರಿದಂತೆ ಇತರ ನಾಶನಷ್ಟಗಳನ್ನು ಭರಿಸಲಿದೆ.

ಇದನ್ನೊಮ್ಮೆ ಊಹಿಸಿ ನೋಡಿ:

ಇದನ್ನೊಮ್ಮೆ ಊಹಿಸಿ ನೋಡಿ:

ನೀವು ರಸ್ತೆಯಲ್ಲಿ ಅಪಘಾತವೊಂದನ್ನು ಎದುರಿಸಬೇಕಾಗುತ್ತದೆ. ಕಾರಿಗೆ ಹಾನಿ ಸಂಭವಿಸಿರುತ್ತದೆ ಹಾಗೆಯೇ ನಿಮಗೆ ತಕ್ಷಣ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ. ಈ ಇಡೀ ಪ್ರಕ್ರಿಯೆಯ ಅನಾನುಕೂಲತೆಗೆ ಬಹಳಷ್ಟು ವೆಚ್ಚವಾಗಲಿದೆ.

ವಿಮಾ ಕಂಪನಿಗಳ ಜವಾಬ್ದಾರಿ

ವಿಮಾ ಕಂಪನಿಗಳ ಜವಾಬ್ದಾರಿ

ಮೇಲಿನ ಪ್ರಕರಣದಲ್ಲಿ ನೀವು ನಿಮ್ಮ ಕಾರನ್ನು ಹತ್ತಿರದ ಗ್ಯಾರೇಜ್‌ನಲ್ಲಿ ದುರಸ್ತಿ ಮಾಡಿಕೊಂಡು ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. ಹಾಗೆಯೇ ವೈದ್ಯಕೀಯ ಪರೀಕ್ಷೆಯ ಬಿಲ್‌ಗಳು ಆಸ್ಪತ್ರೆಯಿಂದ ಪಡೆದುಕೊಳ್ಳಬಹುದು. ಇಲ್ಲಿ ವಿಮಾ ಕಂಪನಿಗಳು ಕಾರು ದುರಸ್ತಿ ಸೇರಿದಂತೆ ಆಸ್ಪತ್ರೆ, ಚಿಕಿತ್ಸೆ ಇತ್ಯಾದಿ ವೆಚ್ಚಗಳನ್ನು ಭರಿಸುತ್ತದೆ.

ಬೋನಸ್

ಬೋನಸ್

ಈ ಸಂದರ್ಭದಲ್ಲಿ ತುರ್ತು ಆಸ್ಪತ್ರೆ ದಾಖಲಾತಿಗೆ ಅಥವಾ ಕಾರು ದುರಸ್ತಿಗೆ ನಿಮ್ಮ ಬಳಿಯಲ್ಲಿ ಹಣವಿಲ್ಲದಿದ್ದಲ್ಲಿ ವಿಮಾ ಸಂಸ್ಥೆಯು ನಿಮ್ಮ ನೆರವಿಗೆ ಬರಲಿದೆ. ಈ ಸೌಲಭ್ಯವು ಯಾವುದೇ ಖರ್ಚಿಲ್ಲದೆ ನೆರವೇರಿಸಲಾಗುತ್ತಿದ್ದು, ವಿಮಾ ಕಂಪನಿಯು ಜಾಲದಲ್ಲಿರುವ ಆಸ್ಪತ್ರೆಯಲ್ಲಿ ನಿಮಗೆ ಚಿಕಿತ್ಸೆ ಹಾಗೂ ಪಟ್ಟಿಯಲ್ಲಿರುವ ಗ್ಯಾರೇಜ್‌ನಲ್ಲಿ ಕಾರು ದುರಸ್ತಿ ನೇರವೇರಿಸಲಾಗುತ್ತದೆ. ನಿಮ್ಮ ವಿಮಾ ಯೋಜನೆಯು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿದ್ದಲ್ಲಿ ಆಸ್ಪತ್ರೆ ಅಥವಾ ಗ್ಯಾರೇಜ್ ಅಧಿಕಾರಿಗಳು ಯಾವುದೇ ನಗದು ಬೇಡಿಕೆಯನ್ನಿಡುವುದಿಲ್ಲ. ಈ ಎಲ್ಲ ಬಿಲ್‌ಗಳನ್ನು ವಿಮಾ ಕಂಪನಿಗಳೇ ಭರಿಸುತ್ತವೆ.

ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಸಮಗ್ರ ಕಾರು ಯೋಜನೆಯು ಮಾನವ ನಿರ್ಮಿತ ಹಾಗೂ ನೈಸರ್ಗಿಕ ವಿಪತ್ತಿನಿಂದಾಗಿ ಉಂಟಾಗುವ ಈ ಕೆಳಗಿನ ಅನೇಕ ಹಾನಿಗಳ ನಷ್ಟವನ್ನು ಸಹ ಭರಿಸುತ್ತವೆ.

ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳು

ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳು

ನೈಸರ್ಗಿಕ ವಿಪತ್ತುಗಳು: ಬೆಂಕಿ ಆಕಸ್ಮಿಕ, ಭೂಕಂಪ, ಮುಳುಗಡೆ, ಸ್ಫೋಟ, ಆಲಿಕಲ್ಲು ಮಳೆ, ಚಂಡಮಾರುತ, ಬೆಂಕಿ ಹಚ್ಚುವಿಕೆ, ಸಿಡಿಲು-ಮಿಂಚು, ಬಂಡೆಕುಸಿತ, ಪ್ರವಾಹ, ಬಿರುಗಾಳಿ, ಸುಂಟರಗಾಳಿ, ತುಫಾನು, ಚಂಡಮಾರುತ, ಸುಳಿಗಾಳಿ, ಹಿಮಪಾತ, ಭೂಕುಸಿತ.

ಮಾನವ ನಿರ್ಮಿತ ವಿಪತ್ತುಗಳು: ಕಳ್ಳತನ, ಕನ್ನಹಾಕುವುದು, ಗಲಭೆ, ಹಗೆತನ, ಭಯೋತ್ಪಾದಕ ಚಟುವಟಿಕೆ, ಮುಷ್ಕರ, ಬಾಹ್ಯ ಮೂಲಕ ಅಪಘಾತ, ಒಳನಾಡಿನ ಜಲಮಾರ್ಗ ಮೂಲಕ ಕಳ್ಳತನ, ರಸ್ತೆ, ಲಿಫ್ಟ್, ರೈಲು, ಏರು ಯಂತ್ರ ಅಥವಾ ಗಾಳಿ.

Most Read Articles

Kannada
English summary
Buying a car was a ritual practised by the rich people of the society in the past. And then, with gradual transition in societal norms, industrial revolution and rise in jobs lead to the empowerment of common man. The buying power soared and soon more cars were seen on Indian roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X