ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

By Manoj Bk

ಕಾರಿನಲ್ಲಿರುವ ಇಂಧನ ಕಡಿಮೆಯಾದರೆ ಕಾರಿನ ಡ್ಯಾಶ್ ಬೋರ್ಡ್ ನಲ್ಲಿರುವ ಅಲರ್ಟ್ ಲೈಟ್ ಅದರ ಬಗ್ಗೆ ಸೂಚನೆ ನೀಡುತ್ತದೆ. ಇಂಧನ ಕಡಿಮೆಯಾಗಿದೆ ಎಂದು ಸೂಚಿಸಲು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿರುವ ಅಲರ್ಟ್ ಲೈಟ್ ಆನ್ ಆಗುತ್ತದೆ. ಈ ಲೈಟ್ ಆನ್ ಆದರೆ ಇಂಧನ ಕಡಿಮೆಯಾಗಿದೆ ಎಂದರ್ಥ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಇಂಧನ ಕಡಿಮೆಯಾಗಿದೆ ಎಂದು ಕಾರು ಚಾಲಕರಿಗೆ ಎಚ್ಚರಿಕೆ ನೀಡುವುದು ಈ ಅಲರ್ಟ್ ಲೈಟ್'ನ ಏಕೈಕ ಕಾರ್ಯವಾಗಿದೆ. ಈ ಅಲರ್ಟ್ ಲೈಟ್ ಆನ್ ಆಗಿದ್ದರೆ, ಕಾರಿನಲ್ಲಿ ಇನ್ನೂ ಸ್ವಲ್ಪ ಇಂಧನವಿದೆ ಎಂದರ್ಥ. ಆದರೆ ಹೆಚ್ಚು ಇಂಧನವಿಲ್ಲ, ತುಂಬಾ ಕಡಿಮೆ ಇಂಧನವಿದೆ ಎಂದರ್ಥ. ಈ ಲೈಟ್ ಆನ್ ಆದ ತಕ್ಷಣ ಇಂಧನ ತುಂಬಿಸುವುದು ಒಳ್ಳೆಯದು.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಈ ಅಲರ್ಟ್ ಲೈಟ್ ಆನ್ ಆಗಿದ್ದರೆ ಕಾರಿನಲ್ಲಿ ಸ್ವಲ್ಪ ದೂರ ಪ್ರಯಾಣಿಸಬಹುದು. ಎಷ್ಟು ದೂರ ಪ್ರಯಾಣಿಸಬಹುದು ಎಂಬುದು ಕಾರಿನಿಂದ ಕಾರಿಗೆ ಭಿನ್ನವಾಗಿರುತ್ತದೆ. ಇದು ರಸ್ತೆಯ ಸ್ಥಿತಿ ಹಾಗೂ ಚಾಲಕರ ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ. ಇಂಧನ ಕಡಿಮೆಯಾಗಿದೆ ಎಂಬ ಅಲರ್ಟ್ ಲೈಟ್ ಆನ್ ಆಗಿದ್ದಾಗ ಸಣ್ಣ ಕಾರುಗಳಾದರೆ 50 - 60 ಕಿ.ಮೀಗಳವರೆಗೆ ಚಲಿಸಬಹುದು.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಇನ್ನು ಎಸ್‌ಯುವಿ ಮಾದರಿಯ ಕಾರುಗಳಲ್ಲಿ 30 - 50 ಕಿ.ಮೀಗಳವರೆಗೆ ಚಲಿಸಬಹುದು. ಅಲರ್ಟ್ ಲೈಟ್ ಆನ್ ಆಗಿದ್ದಾಗ ಇಷ್ಟು ಪ್ರಯಾಣಿಸುವ ಇಂಧನ ಮಾತ್ರ ಉಳಿದಿರುತ್ತದೆ. ಆದರೆ ಇದು ಅಂದಾಜು ಅಂಕಿ ಅಂಶವಾಗಿದ್ದು, ಕಾರು ಮಾದರಿಗಳ ಮೇಲೆ ವ್ಯಾಪ್ತಿ ಭಿನ್ನವಾಗಿರುತ್ತದೆ. ಆದ್ದರಿಂದ ಅಲರ್ಟ್ ಲೈಟ್ ಆನ್ ಆದ ಕೂಡಲೇ ಜಾಗರೂಕರಾಗಿ ಇಂಧನ ತುಂಬಿಸುವುದು ಒಳ್ಳೆಯದು. ಇಲ್ಲದಿದ್ದರೆ ದಾರಿ ಮಧ್ಯೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಇದರಿಂದ ನಿಮಗೆ ಮಾತ್ರವಲ್ಲದೇ ನಿಮ್ಮೊಂದಿಗೆ ಪ್ರಯಾಣಿಸುವವರಿಗೂ ಒತ್ತಡವನ್ನುಂಟು ಮಾಡುತ್ತದೆ, ಜೊತೆಗೆ ಅನಗತ್ಯವಾಗಿ ಸಮಯ ವ್ಯರ್ಥವಾಗುತ್ತದೆ. ಇದರ ಜೊತೆಗೆ ಕಡಿಮೆ ಇಂಧನದಿಂದ ಕಾರನ್ನು ಚಾಲನೆ ಮಾಡುವುದರಿಂದ ಕಾರಿನಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತವೆ. ಕಾರಿನ ಭಾಗಗಳಿಗೂ ಹಾನಿಯಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಕಾರಿನ ಫ್ಯೂಯಲ್ ಟ್ಯಾಂಕ್‌ನಲ್ಲಿ ಯಾವಾಗಲೂ ಹೆಚ್ಚು ಇಂಧನವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಎಲ್ಲಾ ಸಮಯದಲ್ಲೂ ಫ್ಯೂಯಲ್ ಟ್ಯಾಂಕ್‌ನ ಒಟ್ಟು ಸಾಮರ್ಥ್ಯದ ಕನಿಷ್ಠ 25% ನಷ್ಟು ಇಂಧನ ಹೊಂದಿರುವುದು ಸೂಕ್ತ. ಒಂದು ವೇಳೆ ಇಂಧನ ಕಡಿಮೆಯಾಗಿರುವ ಬಗ್ಗೆ ಅಲರ್ಟ್ ಲೈಟ್ ಆನ್ ಆದರೆ ಹತ್ತಿರದಲ್ಲಿ ಪೆಟ್ರೋಲ್ ಬಂಕ್ ಇಲ್ಲದಿದ್ದರೆ ಏನು ಮಾಡುವುದು ಎಂಬ ಪ್ರಶ್ನೆ ಮೂಡ ಬಹುದು.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಅಂತಹ ಪರಿಸ್ಥಿತಿಯಲ್ಲಿ ಕಾರ್ ಅನ್ನು ಗಂಟೆಗೆ 65 ಕಿ.ಮೀ ವೇಗದಲ್ಲಿ ಚಲಿಸಲು ಪ್ರಯತ್ನಿಸಿ. ಈ ವೇಗವನ್ನು ಇಂಧನ ಮಿತವ್ಯಯಕ್ಕೆ ಅತ್ಯುತ್ತಮ ವೇಗವೆಂದು ಹೇಳಲಾಗುತ್ತದೆ. ಆದರೆ ಈ ವೇಗದಲ್ಲಿ ಕಾರನ್ನು ಯಾವ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದೀರಿ ಎಂಬುದು ಸಹ ಮುಖ್ಯವಾಗುತ್ತದೆ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಇದಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುವುದು ಇಂಧನ ವೆಚ್ಚಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಒಂದು ವೇಳೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರೆ ಕ್ರೂಸ್ ಕಂಟ್ರೋಲ್ ಫೀಚರ್ ಅನ್ನು ಬಳಸಬಹುದು. ಕ್ರೂಸ್ ಕಂಟ್ರೋಲ್ ನಿಗದಿಪಡಿಸಿರುವ ವೇಗದಲ್ಲಿಯೇ ಕಾರ್ ಅನ್ನು ಚಾಲನೆ ಮಾಡುತ್ತದೆ. ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್ ಫೀಚರ್ ನೀಡಲಾಗುತ್ತಿದೆ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಇನ್ನು ವಾಹನಗಳಲ್ಲಿ ಎಂಜಿನ್ ಎಷ್ಟು ಮುಖ್ಯವೋ, ಎಂಜಿನ್ ಆಯಿಲ್ ಉತ್ತಮವಾಗಿ ಕಾರ್ಯ ನಿರ್ವಹಿಸುವುದು ಸಹ ಅಷ್ಟೇ ಮುಖ್ಯ. ಒಂದು ವೇಳೆ ಎಂಜಿನ್ ಆಯಿಲ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಎಂಜಿನ್‌ನಲ್ಲಿ ತೊಂದರೆಗಳು ಕಂಡು ಬರುವುದು ಖಚಿತ. ಈ ಕಾರಣಕ್ಕಾಗಿಯೇ ವಾಹನ ಚಾಲಕರಿಗೆ ಕಾಲ ಕಾಲಕ್ಕೆ ತಮ್ಮ ವಾಹನಗಳ ಎಂಜಿನ್ ಆಯಿಲ್ ಬದಲಿಸುವಂತೆ ಸೂಚಿಸಲಾಗುತ್ತದೆ. ಎಂಜಿನ್ ಆಯಿಲ್ ಬದಲಾಯಿಸುವ ಸಮಯ ಬಂದಾಗ ವಾಹನಗಳೇ ಸಂಕೇತಗಳನ್ನು ನೀಡುತ್ತವೆ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಆದರೆ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಈ ಸಂಕೇತಗಳನ್ನು ಗಮನಿಸುವುದಿಲ್ಲ. ಆ ಸಂಕೇತಗಳು ಯಾವುವು ಎಂಬುದನ್ನು ನೋಡುವುದಾದರೆ, ವಾಹನದಲ್ಲಿರುವ ಎಂಜಿನ್ ಆಯಿಲ್ ಹಳೆಯದು ಎಂದೆನಿಸಿದರೆ ಮೆಕ್ಯಾನಿಕ್ ಬಳಿ ಕೊಂಡೊಯ್ದು ಅಥವಾ ಸ್ವತಃ ನೀವೇ ಪರಿಶೀಲಿಸಬಹುದು. ವಾಹನದಲ್ಲಿರುವ ಎಂಜಿನ್ ಆಯಿಲ್ ಅನ್ನು ತೆಗೆದು ಬೆರಳ ತುದಿಯಲ್ಲಿ ಇಡಬಹುದು ಅಥವಾ ಬಿಳಿ ಕಾಗದದ ಮೇಲೆ ಹಾಕಿ ಅದರ ಗುಣಲಕ್ಷಣಗಳನ್ನು ಪರಿಶೀಲಿಸಬಹುದು.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಎಂಜಿನ್ ಆಯಿಲ್ ಹಳೆಯದಾದರೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹಾಗಿದ್ದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ. ಎಂಜಿನ್ ಆಯಿಲ್ ತುಂಬಾ ಹಳೆಯದಾಗಿದ್ದರೆ ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ. ಎಂಜಿನ್ ಆಯಿಲ್ ಅನ್ನು ದೀರ್ಘಕಾಲದವರೆಗೆ ಬದಲಾಯಿಸದಿದ್ದರೆ, ಘರ್ಷಣೆಯಿಂದಾಗಿ ಎಂಜಿನ್'ನಲ್ಲಿ ತ್ಯಾಜ್ಯವು ಸಂಗ್ರಹಗೊಂಡು ವಾಹನದ ಚಲನೆಗೆ ಅಡ್ಡಿಪಡಿಸುತ್ತದೆ. ಇದರ ಜೊತೆಗೆ ಹೆಚ್ಚಿನ ಶಾಖವನ್ನು ಹೊರಸೂಸುತ್ತದೆ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಎಂಜಿನ್ ಆಯಿಲ್ ಹಳೆಯದಾಗಿದ್ದರೆ ಎಂಜಿನ್'ನಿಂದ ಹೆಚ್ಚುವರಿ ಶಬ್ದ ಬರುತ್ತದೆ. ಎಂಜಿನ್‌ನಿಂದ ಹೆಚ್ಚುವರಿ ಶಬ್ದ ಬರುತ್ತದೆಯೇ ಎಂದು ಗಮನಿಸಿ. ಈ ರೀತಿಯ ಶಬ್ದ ಬಂದರೆ ಎಂಜಿನ್ ಆಯಿಲ್ ಹಳೆಯದಾಗಿದೆ ಎಂದರ್ಥ. ಎಂಜಿನ್ ಆಯಿಲ್ ಸ್ವಲ್ಪ ಹಳೆಯದಾದರೆ ವಾಹನವು ಐಡ್ಲಿಂಗ್'ನಲ್ಲಿದ್ದಾಗ ಸ್ವಲ್ಪ ಹೆಚ್ಚು ವೈಬ್ರೇಟ್ ಆಗುತ್ತದೆ. ಇಂದು ಎಂಜಿನ್ ಆಯಿಲ್ ಹಳೆಯದಾಗಿದೆ ಎಂಬುದರ ಸಂಕೇತವಾಗಿದೆ.

ಫ್ಯೂಯಲ್ ಲೆವೆಲ್ ವಾರ್ನಿಂಗ್ ಲೈಟ್ ಆನ್ ಆದಾಗ ಇಷ್ಟು ದೂರ ಮಾತ್ರ ಚಲಿಸಿ..!

ಇದನ್ನು ತಪ್ಪಿಸಲು ತಕ್ಷಣ ಎಂಜಿನ್ ಆಯಿಲ್ ಬದಲಾಯಿಸುವುದು ಒಳ್ಳೆಯದು. ಸಾಮಾನ್ಯ ಹೊಗೆಗಿಂತ ಹೆಚ್ಚಿನ ಹೊಗೆ ಹೊರಬಂದರೆ, ಹೊಗೆ ಬೇರೆ ಬಣ್ಣದಲ್ಲಿದ್ದರೆ ಎಂಜಿನ್ ಆಯಿಲ್ ಹಳೆಯದಾಗಿದೆ ಎಂದರ್ಥ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ದೊಡ್ಡ ಸಮಸ್ಯೆಗಳು ಉಂಟಾಗಬಹುದು.

Most Read Articles

Kannada
English summary
How far to drive car when low fuel level warning lights are on details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X