ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

By Manoj B.k

ಹೊಸ ಕಾರು ಖರೀದಿಸುವುದಕ್ಕಿಂತಲೂ ಮಿಗಿಲಾಗಿ ಬಳಿಕ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದೇ ಹಲವರಿಗೆ ದೊಡ್ಡ ಸವಾಲು. ಕೆಲವರಗೆ ತಮ್ಮ ಕಾರನ್ನು ಶುಚಿಯಾಗಿಸುವ ಕೆಲಸದಲ್ಲಿ ಆನಂದ ಕಂಡುಕೊಂಡರೆ ಇನ್ನು ಕೆಲವರಿಗಿದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದೇ ಕಾರಣಕ್ಕೆ ಕಾರು ಶುಚಿಯಾಗಿಡಲು ಕೆಲವು ಸರಳ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

ನೀವು ದೊಡ್ಡ ಮೊತ್ತದ ಹಣ ಕೊಟ್ಟು ಖರೀದಿ ಮಾಡಿರುವ ಕಾರಿನ ಬಗೆಗೆ ಅಲಕ್ಷ್ಯ ಬೇಡ. ಇದೇ ಕಾರಣಕ್ಕೆ ಹೆಚ್ಚು ಶ್ರಮ ವಹಿಸದೇ ಅತಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕಾರನ್ನು ಹೇಗೆ ಶುಚಿಯಾಗಿಡಬಹುದು ಎಂಬುದಕ್ಕೆ ಸಂಬಂಧಪಟ್ಟಂತೆ ಕೆಲವು ಸರಳ ಉಪಾಯಗಳನ್ನು ನಾವಿಲ್ಲಿ ಚರ್ಚೆ ಮಾಡುತ್ತಿದ್ದೇವೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

1. ನಿರ್ವಹಣೆ

ಎರಡು ವಾರಗಳಿಗೊಮ್ಮೆಯಾದರೂ ನಿಮ್ಮ ಕಾರನ್ನು ತಪ್ಪದೇ ತೊಳೆಯಿರಿ. ಹಾಗೆಯೇ ಮಳೆಗಾಲದಲ್ಲಿ ಕಾರು ಚಲಾಯಿಸುವಾಗ ಕಾರಿನ ಮೇಲೆ ಕೆಸರು ಎಗುರುವುದು ಸಹಜ ಇಂತಹ ಸಮಯದಲ್ಲಿ ವಾರಕೊಮ್ಮೆ ನಿಮ್ಮ ಕಾರನ್ನು ತಪ್ಪದೇ ಶುಚಿಯಾಗಿಸುವುದನ್ನು ಮರೆಯಬೇಡಿ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

2. ವ್ಯಾಕ್ಸಿಂಗ್ (Waxing)

ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ನಿಮ್ಮ ಕಾರನ್ನು ವ್ಯಾಕ್ಸಿಂಗ್ ಮಾಡಿಸಿದ್ದೆ ಆದಲ್ಲಿ ನಿಮ್ಮ ಕಾರನ್ನು ತುಕ್ಕುಹಿಡಿಯುವುದರಿಂದ ಕಾಪಾಡಿಕೊಳ್ಳಬಹುದು. ನಿಮ್ಮ ಕಾರಿಗೆ ವ್ಯಾಕ್ಸಿಂಗ್ ಮಾಡಿಸುವುದರಿಂದ ಕಾರಿನ ಮೌಲ್ಯವನ್ನು ಕೂಡಾ ನೀವು ಸ್ಥಿರವಾಗಿ ಹೆಚ್ಚಿಸುತ್ತದೆ ಹಾಗು ಹೊಳಪನ್ನು ಕೂಡಾ ನೀಡುತ್ತದೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

3. ಕಾರಿನ ಇಂಟಿರಿಯರ್ ಶುಚಿಯಾಗಿಡಿ

ನಿಮ್ಮ ಕಾರು ಕೇವಲ ಸಾರಿಗೆಗೆ ಮಾತ್ರವಲ್ಲ ಅದು ಕೆಲವು ಬಾರಿ ನಿಮ್ಮ ಮನೆಯಾಗಿರುತ್ತದೆ. ಕುಡಿದ ಕಾಫಿ ಕಪ್, ಖಾಲಿ ಚಿಪ್ಸ್ ಅಥವಾ ಬಿಸ್ಕೆಟ್ ಪ್ಯಾಕೆಟ್ ಗಳನ್ನು ನೀವು ನಿಮ್ಮ ಕಾರಿನ ಒಳಗೆಯೇ ಬಿಸಾಡುತ್ತೀರಿ. ಕಾಫಿ ಅಥವಾ ಜ್ಯೂಸ್ ಬಾಟಲ್‌ಗಳನ್ನು ಕಾಲಕಾಲಕ್ಕೆ ಸ್ವಚ್ಚಗೊಳಿಸದೇ ಹೋದಲ್ಲಿ ಕಾರಿನ ಒಳಭಾಗದಲ್ಲಿ ವಾಸನೆ ಶುರುವಾಗುವುದಲ್ಲದೆ ತುಕ್ಕು ಹಿಡಿಯಲು ಕಾರಣವಾಗುತ್ತವೆ.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

4. ಲವಣಗಳು (Salt)

ನೀವು ಚಳಿಗಾಲದಲ್ಲಿ ಕರಾವಳಿ ಪ್ರದೇಶಗಳಲ್ಲಿ ಕಾರನ್ನು ಚಲಾಯಿಸುತ್ತಿದ್ದರೆ ಅದರಿಂದ ಬರುವ ಲವಣಾಂಶವು ನಿಮ್ಮ ಕಾರನ್ನು ತುಕ್ಕುಹಿಡಿಸಬಲ್ಲದು. ಕಾರನ್ನು ನಿಯಮಿತವಾಗಿ ತೊಳೆಯುವುದರಿಂದ ಅಂಟಿರುವ ಲವಣಗಳನ್ನು ತೊಲಗಿಸಬಹುದು.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

5. ಕಾರಿನ ಕೆಳಭಾಗವನ್ನು ಕೂಡe ಶುಚಿಯಾಗಿಡಿ

ನಿಮ್ಮ ಕಾರನ್ನು ಒಳಗೆ ಮತ್ತು ಹೊರಗೆ ತೊಳೆಯುವುದಲ್ಲದೆ ಕಾರಿನ ಕೆಳಭಾಗದಲ್ಲಿ ಕೂಡಾ ಶುಚಿಮಾಡವುದನ್ನು ಮರೆಯಬೇಡಿ. ಏಕೆಂದರೆ ಕಾರಿನ ಕೆಳಭಾಗದಲ್ಲಿಯೇ ಹೆಚ್ಚು ಧೂಳು ಮತ್ತು ಕೆಸರು ತುಂಬಿರುತ್ತದೆ ಅದರಿಂದಾಗಿ ಕಾರಿನ ಕೆಳಭಾಗವನ್ನು ಕೂಡಾ ನಿಯಮಿತವಾಗಿ ಶುಚಿಯಾಗಿಟ್ಟುಕೊಳ್ಳಬೇಕು.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

6. ಕಾರನ್ನು ತೊಳೆದನಂತರ ಶುಚಿಯಾಗಿಸಿ

ನಿಮ್ಮ ಕಾರನ್ನು ತೊಳೆದ ನಂತರ ಎಲ್ಲಿಯೂ ನೀರು ಶೇಖರಣೆಯಾಗದಿರುವ ಹಾಗೆ ಅವುಗಳನ್ನು ಸರಿಯಾಗಿ ಒಣ ಬಟ್ಟೆಯಿಂದ ಶುಚಿಗೊಳಿಸಿ. ಕಾರಿನ ಹಲವಾರು ಭಾಗಗಳು ಸ್ಟೀಲ್‌ನಿಂದಲೇ ಕೂಡಿದ್ದು, ಒಂದು ವೇಳೆ ಕಾರಿನಲ್ಲಿ ಯಾವುದೇ ಭಾಗದಲ್ಲಿ ನೀರು ತುಂಬಿಕೊಂಡರು ಸಹ ಅದು ಕಾರು ತುಕ್ಕು ಹಿಡಿಯಲು ಕಾರಣವಾಗಬಹುದು.

ಕಾರುಗಳು ಯಾವಾಗಲೂ ಹೊಸತರಂತೆ ಕಾಣಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ..

7. ಕಾರನ್ನು ಕವರ್ ಮಾಡಿ

ಕಾರನ್ನು ಬಳಸದಿರುವಾಗ ಅದನ್ನು ಬಿಸಿಲು, ಮಳೆ ಮತ್ತು ಗಾಳಿಯಿಂದ ಕಾಪಾಡಿಕೊಳ್ಳಿ. ಅದಕ್ಕಾಗಿ ಕಾರನ್ನು ಬ್ರಾಂಡೆಡ್ ಕಾರ್ ಕವರ್ ನಿಂದ ರಕ್ಷಿಸಿ. ಇದನ್ನು ಮಾಡುವುದರಿಂದ ನೀವು ನಿಮ್ಮ ಕಾರಿನ ಮೌಲ್ಯ ಕಾಪಾಡಿಕೊಳ್ಳುವುದಲ್ಲದೇ ಕಾರಿನ ಕಾರ್ಯಕ್ಷಮತೆಗೂ ಅನುಕೂಲಕರವಾಗುತ್ತದೆ.

Most Read Articles

Kannada
Read more on auto tips tips
English summary
How to prevent rusted car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X