ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹೊಸ ಕಾರುಗಳ ಮಾರಾಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ಕಾರುಗಳು ಮಾರಾಟವಾಗುತ್ತಿದ್ದು, ಇದಕ್ಕೆ ಕಾರಣ ಹಲವಾರು. ಆದ್ರೆ ಹಳೆ ಕಾರು ಖರೀದಿ ವಿಚಾರಕ್ಕೆ ಬಂದಾಗ ಅನೇಕ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.

By Praveen Sannamani

ಸದ್ಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಮಾರಾಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ಕಾರುಗಳು ಮಾರಾಟವಾಗುತ್ತಿದ್ದು, ಇದಕ್ಕೆ ಕಾರಣ ಹಲವಾರು. ಆದ್ರೆ ಹಳೆ ಕಾರು ಖರೀದಿ ವಿಚಾರಕ್ಕೆ ಬಂದಾಗ ಅನೇಕ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತಲ್ಲದೇ ಈ ನಿಟ್ಟಿನಲ್ಲಿ ತುಂಬಾನೇ ಜಾಗರೂಕರಾಗಿರಬೇಕಾಗುತ್ತದೆ.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹೊಸ ಕಾರುಗಳನ್ನು ಹೋಲಿಸಿದರೆ ಬಳಕೆಯಾದ ಕಾರುಗಳನ್ನು ಖರೀದಿಸುವುದು ತುಂಬಾನೇ ಕಷ್ಟಕರ. ಹೊಸ ಕಾರು ಖರೀದಿಸುವಾಗ ನಮಗೆ ನೈಜ ಮಾಹಿತಿ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಇಂದಿನ ಈ ಲೇಖನದ ಮೂಲಕ ಹಳೆ ಕಾರು ಖರೀದಿಸುವಾಗ ಗಮನಹರಿಸಬೇಕಾದ ಮಹತ್ವಪೂರ್ಣ ವಿಚಾರಗಳ ಬಗ್ಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಮಾಹಿತಿ ಕೊಡುವ ಪ್ರಯತ್ನ ಮಾಡಲಿದೆ.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಕಾರಿನ ಬಟೆಟ್

ಹೊಸ ಕಾರಿನಂತೆ ಹಳೆ ಕಾರು ಖರೀದಿ ವಿಚಾರದಲ್ಲೂ ಮೊದಲು ನೀವು ಕೊಂಡುಕೊಳ್ಳುವ ಕಾರಿನ ಬಜೆಟ್ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರಬೇಕಾಗುತ್ತದೆ. ನಿಮ್ಮದ್ದು ಸಣ್ಣ ಕುಟುಂಬವಾಗಿದ್ದು, ನಾಲ್ಕು ಪ್ರಯಾಣಿಕರನ್ನಷ್ಟೇ ಹೊಂದಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತವೆನಿಸುವುದು.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಅದೇ ಹೊತ್ತಿಗೆ ದೀರ್ಘ ಪಯಣ ಬಯಸುವುದಾದ್ದಲ್ಲಿ ಹಾಗೆಯೇ 5ಕ್ಕಿಂತ ಹೆಚ್ಚು ಸದಸ್ಯರನ್ನು ನಿಮ್ಮ ಕುಟುಂಬ ಹೊಂದಿರುವುದಲ್ಲಿ ಸೆಡಾನ್, ಎಸ್‌ಯುವಿ ಅಥವಾ ಎಂಪಿವಿ ಆಯ್ಕೆ ಮಾಡಿಕೊಳ್ಳಬಹುದು.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಅವಲೋಕನ

ಎರಡನೇಯದಾಗಿ ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಸದ್ಯದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಹಾಗಾಗಿ ಸ್ವಲ್ಪ ಹೊತ್ತು ಅಂತರ್ಜಾಲದಲ್ಲಿ ಜಾಲಾಡಿದರೆ ಒಳಿತು.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಸರಿಯಾದ ಡೀಲರುಗಳ ಆಯ್ಕೆ

ನೀವು ಮಾಡಬೇಕಾಗಿರುವ ಇನ್ನೊಂದು ಮಹತ್ವಪೂರ್ಣ ಕೆಲಸವೆಂದರೆ ಹಳೆ ಕಾರು ಖರೀದಿ ವೇಳೆ ಸರಿಯಾದ ವಿತರಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೀಲರುಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಮೋಸ ಮಾಡುವ ಸಾಧ್ಯತೆಯಿದ್ದು, ಹಾಗಾಗಿ ಸ್ಟಾಂಡರ್ಡ್ ಡೀಲರುಗಳನ್ನು ಆಯ್ಕೆ ಮಾಡಿಕೊಳ್ಳಿರಿ...

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹಣಕಾಸು ನೆರವು

ನಿಮ್ಮ ಕಾರು ಖರೀದಿ ಆಸೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಹಲವಾರು ಫಿನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತವೆ. ಹಾಗಿರುವಾಗ ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಜ್ಞರಿಂದ ಅರಿತುಕೊಳ್ಳುವುದು ಉತ್ತಮ.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಟೆಸ್ಟ್ ಡ್ರೈವ್

ನೀವು ಖರೀದಿಸುವ ಹಳೆ ಕಾರು ನೋಡಲು ತುಂಬಾನೇ ಅಂದವಾಗಿರಬಹುದು. ಆದರೆ ಅದರ ಎಂಜಿನ್ ಅಥವಾ ಬಿಡಿಭಾಗಗಳ ದೌರ್ಬಲ್ಯ ಬಗ್ಗೆ ಅರಿಯಲು ನಿಮ್ಮಿಂದ ಹೇಗೆ ಸಾಧ್ಯ? ಹಾಗಿರುವಾಗ ಹಳೆ ಕಾರುಗಳನ್ನು ಸಹ ಒಂದೆರಡು ಬಾರಿ ಓಡಿಸಿ ನೋಡುವುದು ಹೆಚ್ಚು ಸೂಕ್ತ.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹಳೆ ಕಾರಿನ ದಾಖಲೆ ಪತ್ರ

ಇನ್ನು ಕಾರಿನ ಆರ್‌ಸಿ ಬುಕ್, ಎಮಿಷನ್ ಟೆಸ್ಟ್ ಕಾರ್ಡ್, ವಿಮಾ ಕಾರ್ಡ್ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಹಾಗೆಯೇ ಕಾರಿನ ಮಾಡೆಲ್ ಯಾವುದು? ಲೋನ್ ಕ್ಲಿಯರ್ ಆಗಿದೆಯೇ? ಎಷ್ಟು ಮಾಲಿಕರು ಹಸ್ತಾಂತರದ ಬಳಿಕ ನಿಮ್ಮ ಬಳಿಗೆ ತಲುಪುತ್ತಿದೆ? ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿರಿ.

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಚೌಕಾಶಿ, ಕಾರ್ ಡೀಲ್

ಮೇಲೆ ತಿಳಿಸಿದ ಎಲ್ಲ ವಿಷಯವೂ ಓಕೆ ಆಗಿದ್ದಲ್ಲಿ ಕಾರು ಉತ್ತಮ ಕಂಡೀಷನ್‌ನಲ್ಲಿದ್ದು, ಖರೀದಿಗೆ ಸೂಕ್ತ ಎಂಬ ವಿಚಾರ ಮನಗಂಡಲ್ಲಿ ಮಾತ್ರ ಡೀಲ್‌ಗೆ ಸಿದ್ಧರಾಗಿರಿ. ಆದರೆ ಡೀಲರುಗಳು ಮುಂದಿಡುವ ಆಫರ್‌ಗೆ ಮುಂದಾಗದೇ ಆದಷ್ಟು ಚೌಕಾಶಿ ಮಾಡಿಕೊಂಡು ಡೀಲ್ ಮುಗಿಸಿ...

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿ ಅಂತಿಮವಾಗಿ ವ್ಯವಹಾರ ಮುಗಿದ ಮೇಲೆ ಕಾರನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿರಿ. ಒಟ್ಟಿನಲ್ಲಿ ಹೊಸ ಕಾರಿನಂತೆ ಹಳೆ ಕಾರು ಖರೀದಿ ವೇಳೆಯೂ ಹೆಚ್ಚು ಜಾಗರೂಕರಾಗಬೇಕಾಗಿರುವುದು ಅಷ್ಟೇ ಮುಖ್ಯ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ.

Most Read Articles

Kannada
Read more on auto tips cars
English summary
Important Things to Look for While Buying a Secondhand Car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X