ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ವಾಹನ ಚಾಲನೆ ಮಾಡುವಾಗ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕು. ಅನೇಕ ಬಾರಿ ಡ್ರೈವಿಂಗ್ ಲೈಸೆನ್ಸ್ ಅಥವಾ ಇನ್ನಿತರ ವಾಹನ ಸಂಬಂಧಿತ ದಾಖಲೆಗಳನ್ನು ವಾಹನದ ಜೊತೆಗೆ ಕೊಂಡೊಯ್ಯಲು ಮರೆತುಬಿಡುತ್ತೇವೆ. ಇಂತಹ ಸಂದರ್ಭದಲ್ಲಿ ಸಂಚಾರಿ ಪೊಲೀಸರು ತಪಾಸಣೆ ನಡೆಸಿ ದಂಡ ವಿಧಿಸುವ ಸಾಧ್ಯತೆಗಳಿರುತ್ತವೆ.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಆದರೆ ಆ್ಯಪ್ ವೊಂದನ್ನು ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡು ನಿಮ್ಮ ಜೊತೆಯಲ್ಲಿ ವಾಹನದ ದಾಖಲೆಗಳಿಲ್ಲದಿದ್ದರೂ ಪೊಲೀಸರು ದಂಡ ವಿಧಿಸುವುದರಿಂದ ಪಾರಾಗಬಹುದು. ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಇರಿಸಿಕೊಳ್ಳುವ mParivahan ಆ್ಯಪ್ ಅನ್ನು ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಮೂಲಕ ಸಮಸ್ಯೆಗಳಿಂದ ಪಾರಾಗಬಹುದು. ಈ ಆ್ಯಪ್ ಬಗೆಗಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಎಂಪರಿವಾಹನ್ ಆ್ಯಪ್ ಎಂದರೇನು?

ದೇಶದ ಎಲ್ಲಾ ವಾಹನ ಸವಾರರು ತಮ್ಮ ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ), ಡ್ರೈವಿಂಗ್ ಲೈಸೆನ್ಸ್ (ಡಿಎಲ್), ವಿಮೆ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ತಮ್ಮ ಮೊಬೈಲ್‌ನಲ್ಲಿ ಇರಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು mParivahan ಆ್ಯಪ್ ಆರಂಭಿಸಿದೆ.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಈ ಆ್ಯಪ್ ಮೂಲಕ ವಾಹನ ಸವಾರರು ಸಾರಿಗೆ ಕಚೇರಿಗಳ ಬಗ್ಗೆ, ಟ್ರಾಫಿಕ್ ದಟ್ಟಣೆ ಬಗ್ಗೆ ಮಾಹಿತಿ ಪಡೆಯಬಹುದು. ಜೊತೆಗೆ ವರ್ಚುಯಲ್ ಆರ್‌ಸಿ, ಪರವಾನಗಿ ಮುಂತಾದ ದಾಖಲೆಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿಯೇ ಪಡೆಯಬಹುದು. mParivahan ಆ್ಯಪ್'ನಲ್ಲಿರುವ ದಾಖಲೆಗಳಿಗೆ ಸಾರಿಗೆ ಇಲಾಖೆಯು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆ ದಾಖಲೆಗಳನ್ನು ಮೂಲ ದಾಖಲೆಗಳೆಂದು ಪರಿಗಣಿಸಲಾಗುತ್ತದೆ.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಟ್ರಾಫಿಕ್ ಪೊಲೀಸರ ವಾಹನ ತಪಾಸಣೆ ವೇಳೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಅಥವಾ ಆರ್‌ಸಿಗಳನ್ನು ಕೇಳಿದರೆ, ವಾಹನ ಸವಾರರು ಯಾವುದೇ ಹಿಂಜರಿಕೆಯಿಲ್ಲದೆ mParivahan ಆ್ಯಪ್'ನಲ್ಲಿರುವ ದಾಖಲೆಗಳನ್ನು ಅವರಿಗೆ ತೋರಿಸಬಹುದು. ಇದರಿಂದ ದಂಡ ಪಾವತಿಸುವುದನ್ನು ತಪ್ಪಿಸಬಹುದು.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

mParivahan ಆ್ಯಪ್'ನಿಂದಾಗುವ ಪ್ರಯೋಜನಗಳು

mParivahan ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳ ವರ್ಚುಯಲ್ ಪ್ರತಿಗಳನ್ನು ಹೊಂದುವ ಸೌಲಭ್ಯವನ್ನು ಒದಗಿಸಲಾಗಿದೆ. ಈ ವರ್ಚುಯಲ್ ದಾಖಲೆಗಳು ಮೂಲ ದಾಖಲೆಗಳಂತೆ ಮಾನ್ಯವಾಗಿರುತ್ತವೆ. ಈ ದಾಖಲೆಗಳನ್ನು ಅರ್ಜಿದಾರರು ತಮ್ಮ ಮೊಬೈಲ್ ಫೋನ್ ಮೂಲಕ ಎಲ್ಲಿ ಬೇಕಾದರೂ ಬಳಸಬಹುದು.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಈ ಆ್ಯಪ್ ಮೂಲಕ ವಾಹನದ ಮಾಲೀಕರ ಹೆಸರು, ನೋಂದಣಿ ದಿನಾಂಕ, ನೋಂದಣಿ ಪ್ರಾಧಿಕಾರ, ಇಂಧನ ಪ್ರಕಾರ, ವಾಹನದ ವಯಸ್ಸು, ವಾಹನದ ವರ್ಗ, ವಿಮಾ ಮಾನ್ಯತೆ, ಫಿಟ್ನೆಸ್ ಸಿಂಧುತ್ವ ಸೇರಿದಂತೆ ವಾಹನದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಇದರ ಜೊತೆಗೆ ಕಳುವು ಮಾಡಲಾದ ಅಥವಾ ಯಾವುದೇ ಅನುಮಾನಾಸ್ಪದ ವಾಹನದ ಮಾಹಿತಿಯನ್ನು ಹೊರತೆಗೆಯಲು ಈ ಆ್ಯಪ್ ಬಳಸಬಹುದು. ವಾಹನದ ಮೇಲೆ ಯಾವುದಾದರೂ ದಂಡ ವಿಧಿಸಲಾಗಿದೆಯೇ ಇಲ್ಲವೇ ಎಂಬ ವಿವರಗಳನ್ನು ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಪಡೆಯಬಹುದು.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

mParivahan ಆ್ಯಪ್ ಡೌನ್‌ಲೋಡ್ ಮಾಡುವ ವಿಧಾನಗಳು

ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಎರಡರಿಂದಲೂ mParivahan ಆ್ಯಪ್ ಡೌನ್‌ಲೋಡ್ ಮಾಡಬಹುದು.

ಆ್ಯಪ್ ಡೌನ್‌ಲೋಡ್ ಮಾಡಿದ ನಂತರ, ಅದರಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ ಸೈನ್ ಅಪ್ ಮಾಡಬೇಕು.

ಮೊಬೈಲ್ ಸಂಖ್ಯೆಗೆ OTP ಸ್ವೀಕರಿಸಿದ ನಂತರ, ಸೈನ್ ಅಪ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನಂತರ ಲಾಗಿನ್ ಆಗಬೇಕು.

ಲಾಗಿನ್ ಆದ ನಂತರ, ಆ್ಯಪ್ ಮುಖಪುಟದಲ್ಲಿ ವರ್ಚುವಲ್ ಡಿಎಲ್, ಆರ್‌ಸಿ ಇತರ ದಾಖಲೆಗಳ ಆಯ್ಕೆಯನ್ನು ನೋಡುತ್ತೀರಿ.

ಮೂಲ ಡಿಎಲ್, ಆರ್‌ಸಿ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಅವುಗಳ ವರ್ಚುಯಲ್ ಫಾರ್ಮ್ಯಾಟ್‌ ಡೌನ್‌ಲೋಡ್ ಮಾಡಬಹುದು.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಡ್ರೈವಿಂಗ್ ಲೈಸೆನ್ಸ್'ಗಳ ನಕಲನ್ನು ತಡೆಯಲು ಕೇಂದ್ರ ಸರ್ಕಾರವು ಮುಂದಾಗಿದೆ.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಡ್ರೈವಿಂಗ್ ಲೈಸೆನ್ಸ್'ಗೆ ಇನ್ನೂ ಆಧಾರ್ ಕಾರ್ಡ್ ಲಿಂಕ್ ಮಾಡಿರದಿದ್ದರೆ ಶೀಘ್ರದಲ್ಲಿಯೇ ಲಿಂಕ್ ಮಾಡುವುದು ಒಳಿತು. ಒಂದು ವೇಳೆಮಾಡದಿದ್ದರೆ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಸೇವೆಗಳನ್ನು ಪಡೆಯಲು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ ಕಾರ್ಡ್'ನೊಂದಿಗೆ ಲಿಂಕ್ ಮಾಡುವುದು ಹೇಗೆ ಎಂಬುದನ್ನು ನೋಡುವುದಾದರೆ...

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು , ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://parivahan.gov.inಗೆ ಭೇಟಿ ನೀಡಬೇಕು. ನಂತರ ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಡ್ರಾಪ್-ಡೌನ್'ನಲ್ಲಿ ಡ್ರೈವಿಂಗ್ ಲೈಸೆನ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ಡ್ರೈವಿಂಗ್ ಲೈಸೆನ್ಸ್ ನಂಬರ್ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ನಮೂದಿಸಬೇಕು.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ನಂತರ ವಿವರಗಳನ್ನು ಪಡೆಯಿರಿ (ಗೆಟ್ ಡಿಟೆಲ್ಸ್) ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದಾದ ಬಳಿಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು. ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

ವಾಹನ ಸವಾರರೇ ಗಮನಿಸಿ.. ಈ ಆ್ಯಪ್ ಬಳಸಿ ದಂಡ ಕಟ್ಟುವುದರಿಂದ ಪಾರಾಗಿ

ಅದರ ಸಹಾಯದಿಂದ ನಿಮ್ಮ ಆಧಾರ್ ಸಂಖ್ಯೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ. ಒಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಡ್ರೈವಿಂಗ್ ಲೈಸೆನ್ಸ್'ನೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬುದು ದೃಢಪಡುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mparivahan app saves motorists from challan details
Story first published: Saturday, November 20, 2021, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X