ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

By Manoj Bk

ಸುಮಾರು ವರ್ಷಗಳ ಹಿಂದೆ ಬಿಡುಗಡೆಯಾಗುತ್ತಿದ್ದ ಕಾರುಗಳು ಎಸಿಯನ್ನು ಹೊಂದಿರುತ್ತಿರಲಿಲ್ಲ. ಆದರೆ ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳು ಎಸಿಗಳನ್ನು ಹೊಂದಿರುತ್ತವೆ. ಕಾರುಗಳಲ್ಲಿರುವ ಎಸಿಗಳು ಬೇಸಿಗೆ ಕಾಲದಲ್ಲಿ ಅನುಕೂಲಕರವಾಗಿರುತ್ತವೆ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಕೆಲವೊಮ್ಮೆ ಕಾರು ಐಡ್ಲಿಂಗ್'ನಲ್ಲಿರುವಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ. ಕಾರು ಐಡ್ಲಿಂಗ್'ನಲ್ಲಿರುವಾಗ ಕಾರುಗಳಲ್ಲಿರುವ ಎಸಿಗಳು ಕಾರ್ಯ ನಿರ್ವಹಿಸದೇ ಇರಲು ಕಾರಣಗಳೇನು, ಅವುಗಳನ್ನು ಸರಿಪಡಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಕಂಡೆನ್ಸರ್ ಫ್ಯಾನ್'ನಲ್ಲಿ ಸಮಸ್ಯೆ

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯನಿರ್ವಹಿಸದೇ ಇದ್ದರೆ ಮೊದಲು ಕಂಡೆನ್ಸರ್‌ನಲ್ಲಿರುವ ಕೂಲಿಂಗ್ ಫ್ಯಾನ್ ಅನ್ನು ಗಮನಿಸಿ. ಈ ಫ್ಯಾನ್ ಹಾನಿಗೊಳಗಾಗಿದ್ದರೆ ಕಂಡೆನ್ಸರ್ ಮೂಲಕ ಫ್ರೀಯಾನ್‌ನಿಂದ ಬರುವ ಶಾಖವನ್ನು ತಣ್ಣಗಾಗಿಸಲು ಸಾಧ್ಯವಾಗುವುದಿಲ್ಲ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಕಾರು ವೇಗವಾಗಿ ಹೋಗುತ್ತಿರುವಾಗ, ಫ್ರೀಯಾನ್ ಅನ್ನು ತಂಪಾಗಿಸಲು ಕಂಡೆನ್ಸರ್'ಗೆ ಫ್ಯಾನ್ ಅಗತ್ಯವಿಲ್ಲ. ಏಕೆಂದರೆ ಸಾಕಷ್ಟು ಗಾಳಿಯು ಪಾಸ್ ಆಗುತ್ತದೆ. ಆದರೆ ಕಾರು ಐಡ್ಲಿಂಗ್'ನಲ್ಲಿದ್ದಾಗ ಫ್ರೀಯಾನ್ ಅನ್ನು ತಂಪಾಗಿಡಲು ಕಂಡೆನ್ಸರ್ ಫ್ಯಾನ್ ಅವಶ್ಯಕವಾಗಿದೆ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಫ್ರೀಯಾನ್ ಪ್ರಮಾಣ

ಫ್ರೀಯಾನ್ ಪ್ರಮಾಣವು ಕಡಿಮೆಯಾಗಿದ್ದರೂ ಸಹ, ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ. ಕಾರು ವೇಗವಾಗಿ ಸಾಗುವಾಗ ಕಂಪ್ರೆಸರ್ ಫ್ರೀಯಾನ್ ಅನ್ನು ಸುಲಭವಾಗಿ ಪಂಪ್ ಮಾಡುತ್ತದೆ. ಆದರೆ ಕಾರು ಐಡ್ಲಿಂಗ್'ನಲ್ಲಿದ್ದಾಗ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಈ ಕಾರಣದಿಂದಲೂ ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸಲು ವಿಫಲವಾಗುತ್ತದೆ. ಈ ಕಾರ್ಯವಿಧಾನವನ್ನು ತಿಳಿದರೆ ಕಾರಿನಲ್ಲಿರುವ ಎಸಿ ಕಾರ್ಯನಿರ್ವಹಿಸದೇ ಇದ್ದಾಗ ನೀವೇ ಸರಿಪಡಿಸಿಕೊಳ್ಳಬಹುದು.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಕಸ

ಯಾವುದಾದರೂ ಕಸ ಅಥವಾ ಮತ್ತಿತರ ವಸ್ತುಗಳು ಕಂಡೆನ್ಸರ್ ಒಳಗೆ ಪ್ರವೇಶಿಸಿ ರೆಕ್ಕೆಗಳಲ್ಲಿ ಸೇರಿಕೊಂಡರೆ ಎಸಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಅದರಲ್ಲೂ ಕಾರು ಐಡ್ಲಿಂಗ್'ನಲ್ಲಿದ್ದಾಗ ಕೂಲಿಂಗ್ ಸರಿಯಾಗಿ ಕೆಲಸ ಮಾಡುವುದಿಲ್ಲ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಈ ಸಮಸ್ಯೆಯನ್ನು ಪರಿಹರಿಸಲು, ಕಂಡೆನ್ಸರ್ ರೆಕ್ಕೆ ಹಾಗೂ ಇತರ ಭಾಗಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಹಾಕುವುದರಿಂದ ಏನಾದರೂ ತೊಂದರೆಗಳಾಗುತ್ತವೆಯೇ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿಯನ್ನು ದೀರ್ಘ ಕಾಲ ಆನ್ ಮಾಡಿದರೆ ಎಂಜಿನ್ ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ. ಕಾರಿನಲ್ಲಿ ದಕ್ಷ ರೇಡಿಯೇಟರ್ ವ್ಯವಸ್ಥೆ ಇಲ್ಲದಿದ್ದರೆ ಮಾತ್ರ ಎಂಜಿನ್ ಹಾನಿಯಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಹಳೆಯ ಮಾದರಿ ಕಾರುಗಳು ದಕ್ಷ ರೇಡಿಯೇಟರ್ ವ್ಯವಸ್ಥೆಯನ್ನು ಹೊಂದಿಲ್ಲ. ಈ ಕಾರುಗಳು ಐಡ್ಲಿಂಗ್'ನಲ್ಲಿದ್ದಾಗ ಎಸಿ ಆನ್ ಮಾಡಿದರೆ ಎಂಜಿನ್‌ನಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯ ನಿರ್ವಹಿಸದೇ ಇರಲು ಕಾರಣಗಳಿವು

ಆದರೆ ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಈ ರೀತಿಯ ಸಮಸ್ಯೆಗಳಿಲ್ಲ. ಈ ಕಾರುಗಳಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದರೂ ಅಥವಾ ಕಾರು ಐಡ್ಲಿಂಗ್'ನಲ್ಲಿದ್ದರೂ ಎಸಿ ಆನ್ ಮಾಡಬಹುದು.

Most Read Articles

Kannada
English summary
Reasons for AC not working when car is in idle mode. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X