ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

By Manoj Bk

ಕಾರು ಚಾಲನೆ ಮಾಡುವಾಗ ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವುದು ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ಸಾಮಾನ್ಯವಾಗಿ ನಿಯಮ 10 ಹಾಗೂ 2ರ ಪ್ರಕಾರ ಸ್ಟೀರಿಂಗ್ ವ್ಹೀಲ್ ಹಿಡಿಯಲು ಶಿಫಾರಸು ಮಾಡಲಾಗುತ್ತದೆ.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ನಿಯಮ 10 ಹಾಗೂ 2 ನಿಯಮ ಏನು ಎಂದು ಪ್ರಶ್ನೆ ಮೂಡಬಹುದು. ಕಾರಿನ ಸ್ಟೀಯರಿಂಗ್ ವ್ಹೀಲ್ ಅನ್ನು ಗಡಿಯಾರದಲ್ಲಿರುವ 10 ಹಾಗೂ 2 ಸಂಖ್ಯೆಗಳ ರೀತಿ ಹಿಡಿಯಬೇಕು. ಎಡಗೈ 10ನೇ ಸಂಖ್ಯೆಯ ಸ್ಥಾನದಲ್ಲಿದ್ದರೆ ಬಲಗೈ 2ನೇ ಸಂಖ್ಯೆಯ ಸ್ಥಾನದಲ್ಲಿರಬೇಕು. ಇದೇ ನಿಯಮ 10 ಮತ್ತು 2. ಹಿಂದೆ ಈ ನಿಯಮವನ್ನು ಅನುಸರಿಸಲಾಗುತ್ತಿತ್ತು.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಈಗ ಕಾಲ ಬದಲಾಗಿದ್ದು, ಸಾಂಪ್ರದಾಯಿಕ 10 ಮತ್ತು 2 ನಿಯಮವನ್ನು ಅನುಸರಿಸಬೇಡಿ ಎಂದು ಹೇಳಲಾಗುತ್ತದೆ. ಎಲ್ಲಾ ಕಾರು ಚಾಲಕರು ಈ ನಿಯಮದ ಬದಲಿಗೆ ನಿಯಮ 9 ಹಾಗೂ 3ಕ್ಕೆ ಬದಲಾಗಬೇಕು ಎಂದು ಈ ಕೆಲ ಕಂಪನಿಗಳು ಸೂಚಿಸುತ್ತವೆ.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಪೊಲೀಸ್ ಇಲಾಖೆ ಹಾಗೂ ಡ್ರೈವಿಂಗ್ ಸ್ಕೂಲ್'ಗಳು ಸಹ ನಿಯಮ 10 ಮತ್ತು 2 ಅನುಸರಿಸದಂತೆ ಸಲಹೆ ನೀಡುತ್ತವೆ. ಬದಲಿಗೆ ನಿಯಮ 9 ಮತ್ತು 3 ಅನ್ನು ಅನುಸರಿಸಲು ಸೂಚಿಸುತ್ತವೆ. 9 ಮತ್ತು 3ರ ನಿಯಮವೆಂದರೆ ಸ್ಟೀಯರಿಂಗ್ ವ್ಹೀಲ್ ಗಡಿಯಾರದಲ್ಲಿರುವ 9 ಹಾಗೂ 3 ಸಂಖ್ಯೆಗಳು ಇರುವ ರೀತಿಯಲ್ಲಿ ಸ್ಟೀಯರಿಂಗ್ ವ್ಹೀಲ್ ಹಿಡಿಯುವುದು.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಭದ್ರತಾ ಕಾರಣಗಳಿಗಾಗಿ ಈ ನಿಯಮಗಳನ್ನು ಬದಲಿಸಲಾಗಿದೆ. ಈ ಹಿಂದೆ ಕಾರುಗಳು ಏರ್‌ಬ್ಯಾಗ್‌ಗಳನ್ನು ಹೊಂದಿರಲಿಲ್ಲ. ಆದರೆ ಈಗ ಕಡಿಮೆ ಬೆಲೆಯಕಾರುಗಳಲ್ಲಿಯೂ ಏರ್‌ಬ್ಯಾಗ್‌ಗಳನ್ನು ನೀಡುವುದು ಕಡ್ಡಾಯವಾಗಿದೆ.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಅದರಂತೆ ಈಗ ಸ್ಟೀಯರಿಂಗ್ ವ್ಹೀಲ್ ಮಧ್ಯದಲ್ಲಿ ಏರ್‌ಬ್ಯಾಗ್ ನೀಡಲಾಗುತ್ತದೆ. ಅಪಘಾತ ಸಂಭವಿಸಿದಾಗ ಏರ್ ಬ್ಯಾಗ್ ಗಂಟೆಗೆ 150-200 ಮೈಲಿ ವೇಗದಲ್ಲಿ ವಿಸ್ತರಿಸುತ್ತದೆ. ಈ ವೇಳೆ 10 ಮತ್ತು 2 ನಿಯಮಗಳ ಪ್ರಕಾರ ಸ್ಟೀಯರಿಂಗ್ ವ್ಹೀಲ್ ಹಿಡಿದಿದ್ದರೆ, ಕೈಗಳು ವೇಗವಾಗಿ ವಿಸ್ತರಿಸುತ್ತಿರುವ ಏರ್‌ಬ್ಯಾಗ್‌ಗೆ ಅಡ್ಡಿಯಾಗುತ್ತವೆ.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಏರ್‌ಬ್ಯಾಗ್‌ಗಳನ್ನು ಅಪಘಾತದ ಸಂದರ್ಭದಲ್ಲಿ ಜೀವ ಉಳಿಸಲು ಒದಗಿಸಲಾಗುತ್ತದೆ. ಕೈಗಳು ತಪ್ಪಾದ ಸ್ಥಾನದಲ್ಲಿದ್ದರೆ ಏರ್‌ಬ್ಯಾಗ್ ವಿಸ್ತರಿಸಿದಾಗ ಕೈಗಳಿಗೆ ಪೆಟ್ಟು ಬೀಳುವ ಸಾಧ್ಯತೆಗಳು ಹೆಚ್ಚು.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಈ ಹಿಂದೆ ಇದೇ ರೀತಿಯ ಹಲವು ಘಟನೆಗಳು ಸಂಭವಿಸಿವೆ. ಈಗಿರುವ ಸ್ಟೀಯರಿಂಗ್ ವ್ಹೀಲ್'ಗಳಿಗೆ ಹೊಲಿಸಿದರೆ ಹಿಂದೆ ಇದ್ದ ಸ್ಟೀಯರಿಂಗ್ ವ್ಹೀಲ್'ಗಳು ಹೆಚ್ಚು ದೊಡ್ಡದಾಗಿದ್ದವು. ಈ ದೊಡ್ಡ ಸ್ಟೀಯರಿಂಗ್ ವ್ಹೀಲ್'ಗಳನ್ನು ಸುರಕ್ಷಿತವಾಗಿ ಆನ್ ಮಾಡಲು 10 ಮತ್ತು 2 ನಿಯಮಗಳನ್ವಯ ಕೈ ಇಡುವುದು ಅವಶ್ಯಕವಾಗಿತ್ತು.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಆದರೆ ಆಧುನಿಕ ಕಾರುಗಳಲ್ಲಿ ಇರುವ ಸ್ಟೀಯರಿಂಗ್ ವ್ಹೀಲ್'ಗಳ ಗಾತ್ರ ಬಹಳ ಕಡಿಮೆ. ಈ ಕಾರುಗಳನ್ನು ಸುರಕ್ಷಿತವಾಗಿ ತಿರುಗಿಸಲು ಸ್ಟೀಯರಿಂಗ್ ವ್ಹೀಲ್'ಗಳನ್ನು 10 ಮತ್ತು 2 ನಿಯಮಗಳ ಅನ್ವಯ ಹಿಡಿದಿಟ್ಟು ಕೊಳ್ಳಬೇಕಾಗಿಲ್ಲ.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ನಿಯಮ 9 ಮತ್ತು 3 ರ ಪ್ರಕಾರ ಸ್ಟೀಯರಿಂಗ್ ವ್ಹೀಲ್ ಹಿಡಿದಿದ್ದರೆ ಕಾರನ್ನು ಸುಲಭವಾಗಿ ಹಾಗೂ ಸುರಕ್ಷಿತವಾಗಿ ತಿರುಗಿಸಬಹುದು. ಕಾರನ್ನು ಸುರಕ್ಷಿತವಾಗಿ ಚಾಲನೆ ಮಾಡಲು ಸ್ಟೀಯರಿಂಗ್ ವ್ಹೀಲ್ ಸರಿಯಾಗಿ ಹಿಡಿಯುವುದು ಸಹ ಮುಖ್ಯವಾಗಿದೆ.

ಸ್ಟೀಯರಿಂಗ್ ವ್ಹೀಲ್ ಅನ್ನು ಸರಿಯಾಗಿ ಹಿಡಿಯುವ ಸುರಕ್ಷಿತ ವಿಧಾನಗಳಿವು

ಇನ್ನು ಮುಂದೆ ಕಾರನ್ನು ಚಾಲನೆ ಮಾಡುವಾಗ ನಿಯಮಗಳ 9 ಮತ್ತು 3ರ ಅನ್ವಯ ಸ್ಟೀಯರಿಂಗ್ ವ್ಹೀಲ್ ಹಿಡಿಯುವುದನ್ನು ಮರೆಯದಿರಿ. ಯಾವುದೇ ಕಾರಣಕ್ಕೂ ಸ್ಟೀಯರಿಂಗ್ ವ್ಹೀಲ್ ಅನ್ನು ಕೇವಲ ಒಂದು ಕೈಯಿಂದ ತಿರುಗಿಸಲು ಪ್ರಯತ್ನ ಪಡಬೇಡಿ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ.

Most Read Articles

Kannada
English summary
Safest method to hold the steering wheel. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X