ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

By Manoj Bk

ಕಾರಿನಲ್ಲಿ ಪ್ರಯಾಣಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸುರಕ್ಷತೆಯ ವಿಷಯಕ್ಕೆ ಬಂದರೆ, ಕಾರಿನ ಬ್ರೇಕ್ ಸಿಸ್ಟಂ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಬ್ರೇಕ್ ಸಿಸ್ಟಂ ಅನ್ನು ಸರಿಯಾಗಿ ನಿರ್ವಹಿಸುವುದು ಅವಶ್ಯಕ. ಕೆಲವು ಸರಳ ವಿಧಾನಗಳ ಮೂಲಕ ಬ್ರೇಕ್ ಸಿಸ್ಟಂನ ಜೀವಿತಾವಧಿಯನ್ನು ಹೆಚ್ಚಿಸಬಹುದು. ಆ ಸರಳ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬ್ರೇಕ್ ಹಾಕುವ ಮುನ್ನ ಕಾರ್ ಅನ್ನು ನಿಧಾನವಾಗಿ ಓಡಿಸಿ

ಕಾರು ಅತಿ ವೇಗದಲ್ಲಿ ಹೋಗುವಾಗ ಸಡನ್ ಆಗಿ ಬ್ರೇಕ್ ಹಾಕಿದರೆ ಬ್ರೇಕ್ ಹಾಳಾಗುತ್ತದೆ. ಇದರ ಹಿಂದಿರುವ ಸರಳ ಕಾರಣವೆಂದರೆ ಚಲನ ಶಕ್ತಿಯು ಅಧಿಕವಾದಾಗ, ಸವಕಳಿ (ಡಿಪ್ರಿಸಿಯೇಶನ್) ಹೆಚ್ಚಾಗುತ್ತದೆ. ಬ್ರೇಕ್ ಪ್ಯಾಡ್‌ಗಳು ಬ್ರೇಕ್ ಪ್ರಕ್ರಿಯೆಯಲ್ಲಿ ಉಂಟಾಗುವ ಶಾಖವನ್ನು ಹೀರಿಕೊಳ್ಳುವುದರಿಂದ ಹೀಗಾಗುತ್ತದೆ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಹಾಗಾಗಿ ಕಡಿಮೆ ವೇಗದಲ್ಲಿ ಬ್ರೇಕ್ ಹಾಕಿದಾಗ ಕಡಿಮೆ ಶಾಖ ಉತ್ಪತ್ತಿಯಾಗುತ್ತದೆ. ಇದರಿಂದ ಕಡಿಮೆ ಸವಕಳಿ ಉಂಟಾಗುತ್ತದೆ. ಕಾರು ಚಾಲನೆ ಮಾಡುವವರು ಇದನ್ನು ಅನುಸರಿಸಿದರೆ ಪದೇ ಪದೇ ಬ್ರೇಕ್ ಗಳನ್ನು ಬದಲಿಸಬೇಕಾದ ಅಗತ್ಯವಿರುವುದಿಲ್ಲ. ಕಡಿಮೆ ವೇಗದಲ್ಲಿ ಪ್ರಯಾಣಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಇದು ರಸ್ತೆ ಅಪಘಾತಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಬ್ರೇಕ್ ಪ್ಯಾಡ್‌ಗಳನ್ನು ಸಹ ರಕ್ಷಿಸುತ್ತದೆ. ಆದ್ದರಿಂದ ಯಾವಾಗಲೂ ನಿಗದಿತ ವೇಗದಲ್ಲಿ ಕಾರು ಚಾಲನೆ ಮಾಡಿ. ಆತುರಾತುರವಾಗಿ ವಾಹನ ಚಾಲನೆ ಮಾಡುವುದನ್ನು ತಪ್ಪಿಸಲು ಎಲ್ಲಿಗಾದರೂ ಹೋಗುವುದರೆ ಬೇಗನೆ ಮನೆಯಿಂದ ಹೊರಡಿ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕಾಲ ಕಾಲಕ್ಕೆ ಬ್ರೇಕ್ ಫ್ಲೂಯಿಡ್ ಬದಲಾಯಿಸಿ

ಬ್ರೇಕ್ ಫ್ಲೂಯಿಡ್ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ತೇವಾಂಶವು ಆಂತರಿಕ ತುಕ್ಕಿಗೆ ಕಾರಣವಾಗಬಹುದು. ಜೊತೆಗೆ ಇದು ರಬ್ಬರ್ ಸೀಲುಗಳನ್ನು ನಾಶಪಡಿಸುತ್ತದೆ. ಇದರಿಂದ ಪದೇ ಪದೇ ಬ್ರೇಕ್‌ ಹಾಕಿದಾಗ ಈ ತೇವಾಂಶದಿಂದ ಬ್ರೇಕಿಂಗ್ ದಕ್ಷತೆ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಫಾರಸು ಮಾಡಿರುವಂತೆ ಕಾಲ ಕಾಲಕ್ಕೆ ಬ್ರೇಕ್ ಫ್ಲೂಯಿಡ್ ಬದಲಾಯಿಸಿ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಇದು ಬ್ರೇಕ್ ಸಿಸ್ಟಂನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಬ್ರೇಕಿಂಗ್ ಸಿಸ್ಟಂನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಬ್ರೇಕ್ ಫ್ಲೂಯಿಡ್ ಬದಲಾಯಿಸಿ. ಈ ವಿಷಯವನ್ನು ಸದಾ ನೆನಪಿನಲ್ಲಿಡಿ, ಏಕೆಂದರೆ ಸಣ್ಣದೊಂದು ನಿರ್ಲಕ್ಷ್ಯವೂ ಸಹ ಭಾರೀ ಅನಾಹುತವನ್ನುಂಟು ಮಾಡಬಹುದು.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬಲಗಾಲಿನಿಂದ ಬ್ರೇಕ್ ಹಾಕಿ

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರ್ ಅನ್ನು ಚಾಲನೆ ಮಾಡುವ ಚಾಲಕರಲ್ಲಿ ಸಾಮಾನ್ಯ ಅಭ್ಯಾಸವೊಂದಿದೆ. ಅದು ಎಡಗಾಲಿನಿಂದ ಬ್ರೇಕ್ ಅನ್ನು ಲಘುವಾಗಿ ಒತ್ತುವುದು. ಬ್ರೇಕ್ ಸಿಸ್ಟಂ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಎಂದು ಬಯಸಿದರೆ, ಈ ಅಭ್ಯಾಸವನ್ನು ಬಿಟ್ಟುಬಿಡಿ. ಯಾವಾಗಲೂ ಬಲಗಾಲಿನಿಂದ ಬ್ರೇಕ್ ಹಾಕಲು ಪ್ರಯತ್ನಿಸಿ. ಅದೂ ತೀರಾ ಅಗತ್ಯವಿದ್ದಾಗ ಮಾತ್ರ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕಾರ್ ಅನ್ನು ಓವರ್ ಲೋಡ್ ಮಾಡದಿರಿ

ಕಾರ್ ಅನ್ನು ಅನಗತ್ಯವಾಗಿ ಲೋಡ್ ಮಾಡದಿರಿ. ಕಾರಿನ ತೂಕ ಹೆಚ್ಚಾದರೆ ಬ್ರೇಕ್ ಗಳ ಕಾರ್ಯಚಟುವಟಿಕೆ ಮಾತ್ರವಲ್ಲದೇ ಟಯರ್ ಗಳಿಗೂ ತೊಂದರೆಯಾಗುತ್ತದೆ. ಹಾಗಾಗಿ ಕಾರಿನಲ್ಲಿ ಅನಗತ್ಯ ವಸ್ತುಗಳಿದ್ದರೆ ಅವುಗಳನ್ನು ತೆಗೆದು ಹಾಕಿ. ಇದು ಬ್ರೇಕ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಕಾರಿನ ಒಟ್ಟಾರೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬ್ರೇಕ್ ಅನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ

ಕಡಿಮೆ ಬೆಲೆಯ ಹಾಗೂ ಕಳಪೆ ಗುಣಮಟ್ಟದ ಬ್ರೇಕ್‌ಗಳು ಬೇಗನೆ ಸವೆಯುತ್ತವೆ. ಈ ಕಾರಣಕ್ಕೆ ಸುರಕ್ಷತೆ ಹಾಗೂ ಕಾರ್ಯಕ್ಷಮತೆಯಲ್ಲಿ ನಿಮ್ಮ ಅಗತ್ಯವನ್ನು ಪೂರೈಸುವ ಬ್ರೇಕ್‌ಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದೆ. ಸವೆದ ತಕ್ಷಣ ಅವುಗಳನ್ನು ಬದಲಾಯಿಸುವುದು ಒಳ್ಳೆಯದು.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಕಾರಿನ ಭಾಗಗಳಲ್ಲಿ ಬ್ರೇಕ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ. ಇಲ್ಲವಾದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಬ್ರೇಕ್ ನಿರ್ವಹಣೆ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡಿ. ಇದರಿಂದ ಅನಗತ್ಯ ವೆಚ್ಚಗಳನ್ನು ತಪ್ಪಿಸಬಹುದು.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬ್ರೇಕ್ ಮಾತ್ರವಲ್ಲದೆ ಟಯರ್ ನಂತಹ ಭಾಗಗಳ ಕಡೆಗೂ ಹೆಚ್ಚು ಗಮನ ಕೊಡಿ. ಸಮಯಕ್ಕೆ ಸರಿಯಾಗಿ ಕಾರಿನ ಸರ್ವೀಸ್ ಮಾಡಿಸುವ ಮೂಲಕ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಆದ್ದರಿಂದ ಕಾರು ತಯಾರಕ ಕಂಪನಿಗಳು / ಅಧಿಕೃತ ಸೇವಾ ಕೇಂದ್ರಗಳು ಶಿಫಾರಸು ಮಾಡಿದ ಸಮಯಕ್ಕೆ ಸರಿಯಾಗಿ ಕಾರುಗಳನ್ನು ಸರ್ವೀಸ್ ಮಾಡಿಸಿ.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬ್ರೇಕ್ ಗಳಂತೆಯೇ ಕ್ಲಚ್ ಸಹ ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಆದರೆ ಕೆಲವರು ಕ್ಲಚ್ ಬಳಸುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳ ಮೂಲಕ ಕ್ಲಚ್'ನ ಜೀವಿತಾವಧಿಯನ್ನು ಹೆಚ್ಚಿಸಬಹುದು. ಆ ವಿಧಾನಗಳು ಯಾವುವು ಎಂಬುದನ್ನು ನೋಡುವುದಾದರೆ...

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ ಎಂದು ಹಲವರಿಗೆ ತಿಳಿದಿಲ್ಲ. ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ. ಕಾರ್ ಕ್ಲಚ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಸರಳ ಮಾರ್ಗಗಳಲ್ಲಿ ಇದು ಸಹ ಒಂದು.

ಕಾರಿನ ಬ್ರೇಕ್ ಸಿಸ್ಟಂ ಜೀವಿತಾವಧಿ ಹೆಚ್ಚಿಸುವ ಸರಳ ವಿಧಾನಗಳಿವು

ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಕಾರ್ ಅನ್ನು ನ್ಯೂಟ್ರಲ್'ನಲ್ಲಿಡಿ. ಇದು ತುಂಬಾ ಸರಳ ವಿಧಾನ. ಆದರೆ ಹಲವಾರು ಚಾಲಕರು ಸಿಗ್ನಲ್‌ಗಳಲ್ಲಿ ಕಾಯುವಾಗ ಕ್ಲಚ್ ಅನ್ನು ಬಳಸುತ್ತಾರೆ. ಸಿಗ್ನಲ್‌ಗಳಿಗಾಗಿ ಕಾಯುತ್ತಿರುವಾಗ ಕ್ಲಚ್ ಅನ್ನು ತುಳಿಯುವುದು ಕೆಟ್ಟ ಅಭ್ಯಾಸ. ಆದರೆ ಕೆಲವರು ಕೆಲವೇ ಕೆಲವು ಸೆಕೆಂಡುಗಳು ಮಾತ್ರ ಕ್ಲಚ್ ತುಳಿಯುತ್ತೇವೆ ಎಂದು ಲಘುವಾಗಿ ಪರಿಗಣಿಸುತ್ತಾರೆ. ಕ್ಲಚ್ ಬಳಕೆ 10 ಸೆಕೆಂಡುಗಳಾಗಿದ್ದರೂ ಅನಗತ್ಯ ಬಳಕೆ ಹೆಚ್ಚಾಗುತ್ತದೆ ಎಂದು ಅವರು ತಿಳಿಯುವುದಿಲ್ಲ.

Most Read Articles

Kannada
English summary
Simple tips to improve life of car braking system life details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X