ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

By Manoj Bk

ಬೈಕ್ ಸವಾರಿ ಮಾಡುವಾಗ ಬೈಕಿನಲ್ಲಿರುವ ಚೈನ್ ಗೆ ಸಂಬಂಧಿಸಿದ ಹಲವು ಸಮಸ್ಯೆಗಳು ತಲೆದೋರುತ್ತವೆ. ಕೆಲವು ಬಾರಿ ಚೈನ್ ಗಳು ಸಡಿಲಗೊಂಡರೆ ಇನ್ನೂ ಕೆಲವು ಬಾರಿ ತುಕ್ಕು ಹಿಡಿಯುತ್ತವೆ.

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

ಚೈನ್ ಸಡಿಲಗೊಂಡರೆ ಬೈಕ್ ಚಾಲನೆ ಮಾಡುವಾಗ ಚೈನ್‌ಪ್ಯಾಡ್ ಬಡಿದುಕೊಳ್ಳುತ್ತದೆ. ಬೈಕ್ ಚೈನ್ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸದಿದ್ದರೆ ಚೈನುಗಳು ತುಕ್ಕು ಹಿಡಿದು, ಹಾಳಾಗುತ್ತವೆ. ಬೈಕ್ ಚೈನ್ ಗಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

1. ಲೂಬ್ರಿಕಂಟ್ ಬಳಸಿ

ಚೈನ್ ಹಾಳಾಗಲು ಮುಖ್ಯ ಕಾರಣ ಚೈನ್ ಗಳಲ್ಲಿ ಲೂಬ್ರಿಕಂಟ್ ಬಳಸದಿರುವುದು. ಇದರಿಂದಾಗಿ ಚೈನ್ ಗಳ ಮೃದುತ್ವ ಹಾಳಾಗಿ ಚೈನ್ ಸ್ಪ್ರಾಕೆಟ್ ಹದಗೆಡುತ್ತದೆ. ಚೈನ್ ಗಳಲ್ಲಿ ದೀರ್ಘಕಾಲದವರೆಗೆ ಲೂಬ್ರಿಕಂಟ್ ಬಳಸದಿದ್ದರೆ, ತುಕ್ಕು ಹಿಡಿದು ಚೈನ್ ಗಳು ಹಾಳಾಗುತ್ತವೆ. ಈ ಕಾರಣಕ್ಕೆ ಚೈನ್ ಗಳಲ್ಲಿ ಯಾವಾಗಲೂ ಲೂಬ್ರಿಕಂಟ್ ಬಳಸುವುದು ಮುಖ್ಯ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

2. ಚೈನ್ ಗಳನ್ನು ಸಾಕಷ್ಟು ಬಿಗಿಯಾಗಿಡಿ

ಚೈನ್ ಗಳನ್ನು ಸರಿಯಾದ ರೀತಿಯಲ್ಲಿ ಬಿಗಿಗೊಳಿಸದಿದ್ದರೆ ಚೈನ್ ತ್ವರಿತವಾಗಿ ಹದಗೆಡುತ್ತದೆ. ಚೈನ್ ತುಂಬಾ ಸಡಿಲವಾಗಿದ್ದರೆ ಅಥವಾ ತುಂಬಾ ಬಿಗಿಯಾಗಿದ್ದರೆ, ಅದು ಹಾಳಾಗುವ ಸಾಧ್ಯತೆಗಳಿರುತ್ತವೆ.

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

ಚೈನ್ ತುಂಬಾ ಸಡಿಲವಾದರೆ, ಬೈಕು ಸವಾರಿ ವೇಳೆ ಚೈನ್ ಬಡಿದುಕೊಳ್ಳುವ ಶಬ್ದ ಬರುತ್ತದೆ. ತುಂಬಾ ಸಡಿಲವಾದರೆ ಚೈನ್ ಸ್ಪ್ರಾಕೆಟ್‌ನಿಂದ ಬೀಳಬಹುದು. ಇದರಿಂದ ಬೈಕಿಗೆ ಹೆಚ್ಚಿನ ಹಾನಿಯಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

ತರಬೇತಿ ಪಡೆದ ಮೆಕ್ಯಾನಿಕ್ ಬಳಿ ಚೈನ್ ಬಿಗಿಗೊಳಿಸುವುದು ಸೂಕ್ತ. ಚೈನ್ ಅನ್ನು ಹೆಚ್ಚು ಬಿಗಿಗೊಳಿಸಿದರೆ ಸ್ಪ್ರಾಕೆಟ್ ಗೆ ತೊಂದರೆಯಾಗಬಹುದು. ಚೈನ್ ಗಳು 0.5 ಇಂಚು - 1 ಇಂಚುಗಳಷ್ಟು ಸಡಿಲವಾಗಿರಬೇಕು. ಇದರಿಂದಾಗಿ ಬೈಕಿನ ಪಿಕಪ್ ಕೂಡ ಉತ್ತಮವಾಗಿರುತ್ತದೆ.

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

3. ಜಿಗುಟಾದ ಲೂಬ್ರಿಕಂಟ್‌ಗಳ ಬಳಕೆಯನ್ನು ತಪ್ಪಿಸಿ

ಬೈಕ್ ಚೈನ್ ಗಳಿಗೆ ಲೂಬ್ರಿಕಂಟ್ ಗ್ರೀಸ್ ಅನ್ನು ಹೇಗೆ ಬಳಸಬೇಕು ಎಂದು ಹಲವಾರು ಜನರಿಗೆ ತಿಳಿದಿಲ್ಲ. ಲೂಬ್ರಿಕೆಂಟ್ ಗ್ರೀಸ್ ಅನ್ನು ಸರಿಯಾಗಿ ಬಳಸದಿದ್ದರೆ, ಚೈನ್ ಮೇಲೆ ಧೂಳು ಸಂಗ್ರಹವಾಗಿ ಚೈನ್ ಗಳು ಹಾಳಾಗುವ ಸಾಧ್ಯತೆಗಳಿರುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

ಎಂಜಿನ್ ಆಯಿಲ್ ನಂತಹ ತೆಳುವಾಗಿರುವ ಲೂಬ್ರಿಕಂಟ್‌ಗಳನ್ನು ಬಳಸುವುದು ಸೂಕ್ತ. ಇದರ ಜೊತೆಗೆ ಚೈನ್ ಗಳಿಗಾಗಿಯೇ ತಯಾರಿಸಲಾದ ವಿಶೇಷ ಲೂಬ್ರಿಕಂಟ್‌ಗಳನ್ನು ಸಹ ಬಳಸಬಹುದು.

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

4. ಚೈನ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ

ಚೈನ್ ಗಳನ್ನು ಸುಸ್ಥಿತಿಯಲ್ಲಿಡಲು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ. ಹೆಚ್ಚು ಧೂಳು ಹಿಡಿಯುವುದರಿಂದ ಚೈನ್ ಗಳು ಹಾಳಾಗಬಹುದು. ಈ ಕಾರಣಕ್ಕೆ ಧೂಳು ಕೂರದಂತೆ ಆಗಾಗ್ಗೆ ಚೈನುಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

5. ಚೈನ್ ಕವರ್ ತೆರೆದಿಡಬೇಡಿ

ಚೈನ್ ಕವರ್ ಚೈನ್ ಹಾಗೂ ಸ್ಪ್ರಾಕೆಟ್ ಗೆ ರಕ್ಷಣೆ ನೀಡುತ್ತದೆ. ಈ ಕವರ್ ತೆರೆದರೆ ಚೈನ್ ಬೇಗನೇ ಹಾಳಾಗುತ್ತದೆ. ಚೈನ್ ಕವರ್ ತೆರೆಯುವುದರಿಂದ ಚೈನ್ ಮೇಲೆ ಹೆಚ್ಚು ಧೂಳು ಹಾಗೂ ಮಣ್ಣು ಸಂಗ್ರಹವಾಗುತ್ತದೆ.

ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

ಚೈನ್ ಕವರ್ ತೆರೆದಿರುವಾಗ ಬೈಕ್ ಸವಾರಿ ಮಾಡದೇ ಇರುವುದು ಒಳ್ಳೆಯದು. ಆಧುನಿಕ ಸ್ಪೋರ್ಟ್ಸ್ ಬೈಕುಗಳನ್ನು ಹೆಚ್ಚಾಗಿ ತೆರೆದ ಚೈನ್ ಕವರ್ ಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ. ಈ ಕಾರಣಕ್ಕೆ ಚೈನ್ ಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ.

Most Read Articles

Kannada
English summary
Simple tips to safeguard motorcycle chain. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X