ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ದೇಶದಲ್ಲಿ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಇದರಿಂದ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಬೈಕುಗಳ ಮಾಲೀಕರು ತಮ್ಮ ವಾಹನಗಳನ್ನು ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಬೈಕ್ ಅಥವಾ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಸುರಕ್ಷಿತ ಪಾರ್ಕಿಂಗ್

ನಿಮ್ಮ ಎಲೆಕ್ಟ್ರಿಕ್ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಾಹನವು ನಿಂತಿರುವ ಸ್ಥಳದಲ್ಲಿ, ಮೇಲೆ ಮುಚ್ಚಿದ ಶೆಡ್ ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ಶೆಡ್ ಇರದಿದ್ದರೆ ವಾಹನವನ್ನು ಕವರ್'ನಿಂದ ಮುಚ್ಚಿ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ವಾಹನಗಳ ಮೇಲೆ ಮುಚ್ಚಲಾಗುವ ಕವರ್ ವಾಹನವನ್ನು ಸೂರ್ಯ ಬಿಸಿಲು, ಧೂಳು ಹಾಗೂ ಕೊಳಕಿನಿಂದ ರಕ್ಷಿಸುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರವಲ್ಲದೆ ಎಲ್ಲಾ ರೀತಿಯ ವಾಹನಗಳಿಗೂ ಸುರಕ್ಷಿತ ಪಾರ್ಕಿಂಗ್ ಅಗತ್ಯ.

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಬ್ಯಾಟರಿಯನ್ನು ನಿಯಮಿತವಾಗಿ ಚಾರ್ಜ್ ಮಾಡಿ

ಎಲೆಕ್ಟ್ರಿಕ್ ವಾಹನವು ದೀರ್ಘಕಾಲದವರೆಗೆ ನಿಂತಿದ್ದರೆ, ಅದರಲ್ಲಿರುವ ಬ್ಯಾಟರಿ ಪೂರ್ತಿಯಾಗಿ ಡಿಸ್ ಚಾರ್ಜ್ ಆಗದಂತೆ ನೋಡಿಕೊಳ್ಳುವುದು ಒಳ್ಳೆಯದು. ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕಿನಲ್ಲಿ ಬದಲಿಸಬಹುದಾದ ಅಥವಾ ತೆಗೆಯಬಹುದಾದ ಬ್ಯಾಟರಿ ಇದ್ದರೆ, ಬ್ಯಾಟರಿಯನ್ನು ಹೊರ ತೆಗೆದು ಚಾರ್ಜ್ ಮಾಡಿ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ವಾಹನದ ಬ್ಯಾಟರಿಯಲ್ಲಿ 10%ನಿಂದ 15%ನಷ್ಟು ಚಾರ್ಜ್ ಉಳಿದಿರುವಾಗ ಅದನ್ನು ಚಾರ್ಜ್ ಮಾಡಿ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯನ್ನು 3 ಅಥವಾ 4 ದಿನಗಳಿಗೊಮ್ಮೆ ಚಾರ್ಜ್ ಮಾಡುವುದು ಒಳ್ಳೆಯದು.

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ವಾಹನ ತಪಾಸಣೆ

ಎಲೆಕ್ಟ್ರಿಕ್ ಬೈಕುಗಳು ಅಥವಾ ಸ್ಕೂಟರ್‌ಗಳು ಕಡಿಮೆ ಮೆಕಾನಿಕಲ್ ಭಾಗಗಳನ್ನು ಹೊಂದಿರುತ್ತವೆ. ಆದ್ದರಿಂದ ಅವುಗಳನ್ನು ಹೆಚ್ಚು ನಿರ್ವಹಿಸುವ ಅಗತ್ಯವಿರುವುದಿಲ್ಲ. ಆದರೆ ಕಾಲ ಕಳೆದಂತೆ ಕೆಲವು ಸಾಧನಗಳ ಲೂಬ್ರಿಕೆಂಟ್‌ಗಳು ಒಣಗುವುದರಿಂದ ಅವುಗಳಿಗೆ ಆರೈಕೆಯ ಅಗತ್ಯವಿರುತ್ತದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಹಲವು ರೀತಿಯ ಎಲೆಕ್ಟ್ರಾನಿಕ್ ಭಾಗಗಳಿರುತ್ತವೆ. ಅವುಗಳನ್ನು ಕಾಲ ಕಾಲಕ್ಕೆ ಪರಿಶೀಲಿಸುವ ಅಗತ್ಯವಿರುತ್ತದೆ. ಈ ಕಾರಣಕ್ಕೆ ಅವುಗಳನ್ನು ಆಗಾಗ ಪರಿಶೀಲಿಸುವುದು ಒಳ್ಳೆಯದು.

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಟಯರ್‌ಗಳಲ್ಲಿ ಏರ್ ಪ್ರೆಷರ್ ಪರಿಶೀಲಿಸಿ

ಪೆಟ್ರೋಲ್ ಬೈಕ್ ಹಾಗೂ ಸ್ಕೂಟರ್‌ಗಳಂತೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿಯೂ ಟಯರ್‌ಗಳ ಏರ್ ಪ್ರೆಷರ್ ಪರಿಶೀಲಿಸುವುದು ಅವಶ್ಯಕ. ದೀರ್ಘಕಾಲದವರೆಗೆ ಟಯರ್‌ಗಳಲ್ಲಿ ಕಡಿಮೆ ಏರ್ ಪ್ರೆಷರ್ ಕಂಡು ಬಂದರೆ ಬಿರುಕುಗಳು ಸಂಭವಿಸಬಹುದು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಟಯರ್‌ಗಳಲ್ಲಿ ಕಡಿಮೆ ಏರ್ ಇದ್ದರೆ ಸ್ಕೂಟರ್ ಸರಿಯಾಗಿ ಚಲಿಸುವುದಿಲ್ಲ. ಇದು ಸ್ಕೂಟರಿನಲ್ಲಿರುವ ಮೋಟರ್‌ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ.ಟಯರ್‌ಗಳ ಪ್ರೆಷರ್ ಮೀಟರ್ ಪ್ರಕಾರ ಯಾವಾಗಲೂ ಏರ್ ತುಂಬಿಸುವುದು ಸೂಕ್ತ.

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ವೆಕೇಶನ್ ಮೋಡ್ ಆನ್ ಮಾಡಿ

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ವೆಕೇಶನ್ ಮೋಡ್ ನೀಡಲಾಗುತ್ತದೆ. ಈ ಮೋಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ದೀರ್ಘಕಾಲ ಇರಿಸಲು ನೆರವಾಗುತ್ತದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಲಾಕ್‌ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಿಸುವ ವಿಧಾನಗಳಿವು

ಕೆಲವು ದಿನಗಳವರೆಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಳಸದಿದ್ದರೆ, ಅದನ್ನು ವೆಕೇಶನ್ ಮೋಡ್'ನಲ್ಲಿರಿಸಿ. ವೆಕೇಶನ್ ಮೋಡ್ ಸ್ಕೂಟರ್‌ನ ಎಲ್ಲಾ ಎಲೆಕ್ಟ್ರಿಕ್ ಬಿಡಿ ಭಾಗಗಳಿಂದ ಎಲೆಕ್ಟ್ರಿಕ್ ಸರಬರಾಜನ್ನು ಕಡಿತಗೊಳಿಸುತ್ತದೆ.

Most Read Articles

Kannada
English summary
Steps to protect electric scooters during lockdown. Read in Kannada.
Story first published: Friday, May 28, 2021, 12:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X