ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

By Rahul Ts

ಇದೀಗ ಸುಡುಬಿಸಿಲು ಆರಂಭವಾಗುತ್ತಿದೆ. ಹೀಗಾಗಿ ವಾಹನ ಸವಾರಿಯು ಈ ಸಮಯದಲ್ಲಿ ಕೊಂಚ ಕಷ್ಟಸಾಧ್ಯ. ಅದರಲ್ಲೂ ಕಾರ್ ಸವಾರರು ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದ್ದು, ವಿಶೇಷಯಾಗಿ ದೀರ್ಘ ಕಾಲದ ಪ್ರಯಾಣ ಮಾಡುವ ಮುನ್ನ ಕೆಲವೊಂದು ಸುರಕ್ಷಾ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಆದ್ದರಿಂದಾಗಿ ಕಾರು ಚಲಾಯಿಸುವವರು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರಲಾರದು. ಇದೇ ಉದ್ದೇಶದಿಂದ ನಾವಿಂದು ನಿಮಗೆ ಹೇಳಿಕೊಡುವ ಕೆಲ ಅಂಶಗಳ ಕಡೆ ಗಮನ ಕೊಟ್ಟರೆ ನಿಮ್ಮ ಸಂಚಾರವನ್ನು ಆನಂದದಾಯಕವಾಗಿಸಬಹುದು. ಹಾಗಿದ್ದರೆ ನೀವೇನು ಮಾಡಬೇಕು? ಬನ್ನಿ ನೋಡೋಣ..

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಕಾರ್ ಚಲಾಯಿಸುವಾಗ ಎಚ್ಚರದಿಂದಿರಿ

ಬಿಸಿಲು ಕಾಲದಲ್ಲಿ ವಾಹನ ಚಲಾಯಿಸುವಾಗ ಎಚ್ಚರದಿಂದ ಇರಬೇಕಾಗಿದ್ದು ಅನಿವಾರ್ಯ. ಮಾಹಿತಿಗಳ ಪ್ರಕಾರ ವಾತವರಣವು 22 ಡಿಗ್ರಿಗಿಂತ ಹೆಚ್ಚು ಇದ್ದಲ್ಲಿ ಡ್ರೈವರ್‍‍ಗೆ ನಿದ್ದೆಬರಿಸುವ ಹಾಗೆ ಮತ್ತು ಸುಸ್ತಾಗುವ ಹಾಗೆ ಮಾಡುತ್ತದೆ. ಇಂತಹ ಸಮಯದಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ನೀವು ನಿದ್ದೆಗೆ ಜಾರದಿರಲು ನಿಮ್ಮ ಕಾರಿನ ಏರ್ ಕಂಡಿಶನ್ ಅನ್ನು ಆನ್ ಮಾಡಿ ನಿದ್ದೆಯಿಂದ ದೂರವಿರಿ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಸೂಕ್ಷ್ಮ ವೀಕ್ಷಣೆಗಾಗಿ ನಿಮ್ಮ ಕಾರಿನ ಎಸಿ ಆನ್ ಮಾಡಿ

ಬೆಟ್ಟ ಹಾಗು ಎತ್ತರದ ಪ್ರದೇಶಗಳತ್ತ ಪ್ರಯಾಣಿಸುವ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಕಾರಿನ ವಿಂಡ್‍ಸ್ಕ್ರೀನ್ ಮೇಲೆ ಬಿದ್ದು ದಾರಿ ಸರಿಯಾಗಿ ಕಾಣದಿರುವ ಹಾಗೆ ಮಾಡುತ್ತದೆ. ಇಂತಹ ಸಮಯದಲ್ಲಿ ರಸ್ತೆಯ ಸೂಕ್ಷ್ಮ ವೀಕ್ಷಣೆಗಾಗಿ ಕಾರಿನ ಎಸಿಯನ್ನು ಆನ್ ಮಾಡಿ ಡ್ರೈವ್ ಮಾಡಿರಿ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಕಾರಿನ ಒಳಗಾಳಿಯು ಸ್ವಚ್ಚವಾಗಿರಲಿ

ಕಾರಿನ ಒಳಗಿನ ಗಾಳಿಯನ್ನು ಸ್ವಚ್ಚವಾಗಿರಿಸಲು ನಿಮ್ಮ ಕಾರಿನ ಎಸಿ ಮುಖ್ಯವಾಗಿ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಎಸಿ ನಿಮ್ಮ ಕಾರಿನ ಒಳಭಾಗದಲಿ ಇರುವ ಗಾಳಿಯನ್ನು ಶೇಕಡ 88 ರಷ್ಟು ಸ್ವಚ್ಚಗೊಳಿಸುತ್ತದೆ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಶೀಘ್ರ ವಿರಾಮ ತೆಗೆದುಕೊಳ್ಳಿ

ಬಿಸಿಲಿನಲ್ಲಿ ದೀರ್ಘವಾಗಿ ಡ್ರೈವ್ ಮಾಡುವಾಗ ನಿಮ್ಮ ನಿರ್ದಿಷ್ಟ ಸ್ಥಳವನ್ನು ತಲುಪಲು ಬ್ರೇಕ್ ತೆಗೆದುಕೊಳ್ಳದೇ ನಿರಂತರವಾಗಿ ಕಾರ್ ರೈಡ್ ಮಾಡುವುದು ಬೇಡ. ಇದರಿಂದಲೂ ಕೂಡಾ ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುತ್ತದೆ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಜೊತಗೆ ಬಿಸಿಲಿನಲ್ಲಿ ನಿರಂತರ ಡ್ರೈವ್ ಮಾಡುವುದರ ಮೂಲಕ ನೀವು ಆಯಾಸವಾಗುವಿರಿ ಇದರಿಂದ ಚಾಲನೆಯಲ್ಲಿ ಕಂಟ್ರೋಲ್ ತಪ್ಪುವ ಸಾಧ್ಯತೆಗಳಿದ್ದು, ಆದ್ದರಿಂದ ಪ್ರತಿ 2 ಗಂಟೆಯ ರೈಡ್ ನಂತರ 10 ನಿಮಿಷವಾದ್ರು ವಿಶ್ರಾಂತಿ ತೆಗೆದುಕ್ಕೊಳ್ಳಲೇ ಬೇಕು. ನೀವು ಹೆಚ್ಚು ಆಯಾಸವಾದಲ್ಲಿ 15 ರಿಂದ 20 ನಿಮಿಷಗಳಾದರು ವಿಶ್ರಾಂತಿ ತೆಗೆದುಕೊಳ್ಳಬೇಕು.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಬ್ರೇಕ್ ಜೊತೆಗೆ ನಿಮ್ಮ ಕೈ-ಕಾಲುಗಳಿಗೂ ವಿಶ್ರಾಂತಿ ನೀಡಿ

ರೈಡ್ ಮಾಡುವಾಗ ಕೈ ಮತ್ತು ಕಾಲುಗಳು ಹೆಚ್ಚು ಕೆಲಸ ಮಾಡುತ್ತಿರುತ್ತವೆ. ಆದ್ದರಿಂದ ಆಯಾಸವನ್ನು ನೀಗಿಸಲು ಕಾರನ್ನು ಸುರಕ್ಷಿತ ಪ್ರದೇಶದಲ್ಲಿ ಪಾರ್ಕ್ ಮಾಡಿ, ನಿಮ್ಮ ಕೈ ಕಾಲಿಗಳಿಗೆ ಮತ್ತು ನಿಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡಿ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ವೇಗದ ಕಾರ್ ಚಾಲನೆ ಬೇಡ

ಕಾರನ್ನು ವೇಗವಾಗಿ ಚಾಲನೆ ಮಾಡುವುದರಿಂದಲೂ ನೀವು ಆಯಾಸಕ್ಕೆ ಒಳಗಾಗುವಿರಿ. ಅಲ್ಲದೇ ಅತಿ ವೇಗವ ರಸ್ತೆ ಅಪಘಾತಕ್ಕೂ ದಾರಿತೋರುತ್ತದೆ. ಆದ್ದರಿಂದ ನಿಮ್ಮ ವೇಗವನ್ನು ನಿಯಮಿತಗೊಳಿಸಿ ವಾಹನ ಚಲಾಯಿಸಿ. ಇದು ನಿಮಗೂ ಹಾಗು ಇತರರಿಗೂ ಒಳ್ಳೆಯದು.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ನಿಯಮಗಳನ್ನು ಅನುಸರಿಸಿ

ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ರೈಡಿಂಗ್ ಟಿಪ್ಸ್ ಅನುಸರಿಸುವುದು ಎಷ್ಟು ಮುಖ್ಯವೋ ರಸ್ತೆ ನಿಯಮಗಳನ್ನು ಕೂಡ ಅನುಸರಿಸುವುದು ಅಷ್ಟೇ ಮುಖ್ಯ. ಹೀಗಾಗಿ ಸುಖಕರ ಪ್ರಯಾಣಕ್ಕಾಗಿ ರಸ್ಥೆಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಮೊಬೈಲ್ ಫೋನ್ ಬಳಸಬೇಡಿ

ಇತ್ತೀಚೆಗಿನ ವರದಿಗಳ ಪ್ರಕಾರ ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಅಪಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಕಾಳಜಿವಹಿಸಿದ್ದಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರಿ.

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಮಧ್ಯಪಾನ ಮಾಡಿ ವಾಹನ ಚಲಾಯಿಸದಿರಿ

ಮಧ್ಯಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವುದು ದುರಂತಗಳ ಮೂಲ ಕಾರಣವಾಗಿದೆ. ಹೀಗಾಗಿ ಮಧ್ಯಪಾನ ಮಾಡಿ ದಯವಿಟ್ಟು ವಾಹನ ಚಾಲನೆ ಮಾಡಲೇಬೇಡಿ. ಹ್ಯಾಪಿ ಜರ್ನಿ....

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

1. ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

2. ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

3. ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

4. ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

5. ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

6. ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

Most Read Articles

Kannada
Read more on auto tips summer
English summary
9 SUMMER DRIVING SAFETY TIPS WHEN DRIVING A CAR IN INDIA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more