ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ಭಾರತದಲ್ಲಿ ಪ್ರತಿ ವರ್ಷ ಬೇಸಿಗೆಯು ಹೆಚ್ಚಾಗಿಯೆ ಇರುತ್ತದೆ. ಬೆಸಿಗೆ ಕಾಲವಾಗದಿದ್ದರೂ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಉಷ್ಣವು ಒಮ್ಮೊಮ್ಮೆ ಗರಿಷ್ಠ ಸ್ಥಾನಕ್ಕೆ ತಲುಪುತ್ತದೆ. ಇಂತಹ ಸಂದರ್ಭಗಳಲ್ಲಿ ಕಾರಿನಲ್ಲಿ ಪ್ರತಿಯೊಬ್ಬರು 'ಎಸಿ'ಯ ಮೇಲ

By Rahul Ts

ಭಾರತದಲ್ಲಿ ಪ್ರತಿ ವರ್ಷ ಬೇಸಿಗೆಯು ಹೆಚ್ಚಾಗಿಯೆ ಇರುತ್ತದೆ. ಬೆಸಿಗೆ ಕಾಲವಾಗದಿದ್ದರೂ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಉಷ್ಣವು ಒಮ್ಮೊಮ್ಮೆ ಗರಿಷ್ಠ ಸ್ಥಾನಕ್ಕೆ ತಲುಪುತ್ತದೆ. ಇಂತಹ ಸಂದರ್ಭಗಳಲ್ಲಿ ಕಾರಿನಲ್ಲಿ ಪ್ರತಿಯೊಬ್ಬರು 'ಎಸಿ'ಯ ಮೇಲೆ ಹೆಚ್ಚಾಗಿ ಆಧಾರವಾಗಿರುತ್ತಾರೆ.

ಆದರೆ, ಬೇಸಿಗೆ ಕಾಲದಲ್ಲಿ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಏನು ಮಾಡಬೇಕು.? ಈ ಪ್ರಶ್ನೆಗೆ ಇಂದಿನ ಈ ಲೇಖನದಲ್ಲಿ ಡ್ರೈವ್‍‍ಸ್ಪಾರ್ಕ್ ಕನ್ನಡ ಉತ್ತರವನ್ನು ನೀಡಲಿದ್ದೇವೆ.

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ನೆರಳಿನಲ್ಲಿ ಪಾರ್ಕಿಂಗ್ ಮಾಡುವುದು

ನಿಮ್ಮ ಕಾರನ್ನು ತಣ್ಣಗಿರಿಸಲು ನೆರಳಿನ ಪ್ರದೇಶದಲ್ಲಿ ಪಾರ್ಕ್ ಮಾಡತಕ್ಕದ್ದು. ಮರದ ಅಡಿಯಲ್ಲಿ ಅಥವಾ ಸೆಲ್ಲಾರ್‍‍‍ನಲ್ಲಿ ಪಾರ್ಕ್ ಮಾಡುವುದರಿಂದ ನಿಮ್ಮ ಕಾರನ್ನು ತಣ್ಣಗಿರಿಸಬಹುದು. ಹೀಗೆ ಮಾಡುವುದರಿಂದ ಡ್ರೈವಿಂಗ್ ಸ್ಟಾರ್ಟ್ ಮಾಡಿದಮೇಲೆ 'ಎಸಿ'ಯ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ.

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ವಿಂಡ್ ಸ್ಕ್ರೀನ್ ರಿಪ್ಲೆಕ್ಟರ್‍‍ಗಳು

ಹಿಂದಿನ ಕಾಲದಲ್ಲಿ ಹೆಚ್ಚಿನ ಮಂದಿ ಈ ಸಲಹೆಯನ್ನು ಪಾಲಿಸುತ್ತಿದ್ದರು. ಮುಂದೆ ಮತ್ತು ಹಿಂಭಾಗದ ಕಿಟಕಿಗೆ ಕಪ್ಪು ಬಣ್ಣದ ರಿಫ್ಲೆಕ್ಟರ್‍‍ಗಳನ್ನು ಅಂಟಿಸುತ್ತಿದ್ದರು. ಈ ಕಿಟಕಿಗಳು ಕಾರಿನ ಬೇರೆ ಉಪಕರಣಗಳಿಗೆ ಹೋಲಿಸಿದರೆ ಇವು ಗಾತ್ರದಲ್ಲಿ ದೊಡ್ಡದಾಗಿರು ಕಾರಣದಿಂದಾಗಿ ಇವುಗಳ ಮೇಲೆ ಹೆಚ್ಚು ಬಿಸಿಲು ಬಿದ್ದು, ಅಧಿಕವಾಗಿ ಬಿಸಿಯಾಗುತ್ತದೆ. ಸೂರ್ಯನಿಂದ ಬರುವ ಹೆಚ್ಚು ಶಾಖವನ್ನು ಇಂಟೀರಿಯರ್‍‍‍ನ ಒಳಗೆ ಹೋಗದಿರಲು ಈ ರಿಫ್ಲೆಕ್ಟರ್‍‍ಗಳು ಕೆಲಸ ಮಾಡುತ್ತದೆ. ಇದರಿಂದ ಕಾರು ಸ್ಟಾರ್ಟ್ ಮಾದುವ ಮುನ್ನ ಇಂಟೀರಿಯರ್ ಹೀಟ್ ಅಷ್ಟಾಗಿ ಇರುವುದಿಲ್ಲ ಆದುದರಿಂದ ಎಸಿ ಸರಿಯಾಗಿ ಕೆಲಸ ಮಾಡುತ್ತದೆ.

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ಕಾರನ್ನು ಪಾರ್ಕ್ ಮಾಡಿದಾಗ ಮಾತ್ರ ಇವುಗಳನ್ನು ಪಾಲಿಸಿ

ಕಾರು ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಅಧಿಕವಾಗಿ ಬಿಸಿಯಾಗಲು ಸುರುವಾಗುತ್ತದೆ. ಆದರೇ ವಿಂಡೊಗಳನ್ನು ಮುಚ್ಚುವುದರಿಂದಾ ಆ ಗಾಳಿಯು ಹೊರಗೆ ಹೋಗಲಾಗುವುದಿಲ್ಲ. ಇದರಿಂದ ಬಿಸಿಯು ಕಾರಿನ ಇಂಟೀರಿಯರ್ ಅನ್ನು ಸಂಪೂರ್ಣವಾಗಿ ಬಿಸಿ ಮಾಡುತ್ತದೆ.

ಅದೇ ಸ್ವಲ್ಪವಾದರೂ ಕಾರಿನ ವಿಂಡೋವನ್ನು ತೆರೆದಿದ್ದಲ್ಲಿ ಗಾಳಿಯ ಪ್ರಸರಣೆಯು ಇರುತ್ತದೆ. ಇದರಿಂದಾ ಕಾರಿನಲ್ಲಿರುವ ಬಿಸಿ ಗಾಳಿಯು ಹೊರಗಿನ ವಾತವರಣದಲ್ಲಿ ಮಿಶ್ರಿತವಾಗುತ್ತದೆ.

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ಎಸಿ ಆನ್ ಮಾಡುವ ಮುನ್ನ ವಿಂಡೋಗಳನ್ನು ಪೂರ್ತಿಯಾಗಿ ಕೆಳಗಿಳಿಸಿರಿ

ಹೆಚ್ಚು ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಇದನ್ನು ತಪ್ಪದೇ ಅನುಸರಿಸಿರಿ. ಹೆಚ್ಚು ಕಾಲ ಬಿಸಿಲಿನಲ್ಲಿ ಪಾರ್ಕ್ ಮಾದುವುದರಿಂದ ಇಂಟೀರಿಯರ್ ಪೂರ್ಣವಾಗಿ ಬಿಸಿಯಾಗಿರುತ್ತದೆ. ತಕ್ಷಣವೇ ಡ್ರೈವಿಂಗ್ ಸ್ಟಾರ್ಟ್ ಮಾಡಿ ಎಸಿ ಆನ್ ಮಾಡಿದರೆ ಒಳಭಾಗವನ್ನು ತಣ್ಣಗಾಗಿಸಲು ಎಸಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಆದ್ದರಿಂದ, ಪ್ರಯಾಣಕ್ಕು ಮುನ್ನವೇ ವಿಂಡೋಗಳನ್ನು ಪೂರ್ತಿಯಾಗಿ ಕೆಳಕ್ಕಿಳಿಸಿರಿ, ಹೊರಗಿನ ವಾತಾವರಣದಲ್ಲಿ ಗಾಳಿಯಲ್ಲಿ ಕಾರು ಒಳಗಡೆ ಹೋಗಿ ಅದರಲ್ಲಿ ಗಾಳಿಯೊಂದಿಗೆ ಸೇರಿಹೋಗುತ್ತದೆ. ಇದರಿಂದ ಇಂಟೀರಿಯರ್ ಕೊಂಚ ತಣ್ಣಗಾಗುತ್ತದೆ. ಹೀಗೆ ಮಾಡಿದ ನಂತರ ವಿಂಡೋಗಳನ್ನು ಮೇಲಕ್ಕೆರಿಸಿ 'ಎಸಿ'ಯನ್ನು ಆನ್ ಮಾಡಿರಿ.

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸಿರಿ

ಬಿಸಿಲು ಕಾಲವು ಶುರುವಾಗುವ ಮುನ್ನ ಮನೆಗೆ ಅಳವಡಿಸಲಾಗಿರುವ ಎಸಿಯನ್ನು ಹೇಗೆ ಸರ್ವೀಸಿಂಗ್ ಮಾಡಿಸುತ್ತೀ"ರೊ, ಹಾಗೆಯೆ ಕಾರಿನ ಎಸಿಯನ್ನು ಕೂಡ ಸರ್ವೀಸಿಂಗ್ ಮಾಡಿಸಬೇಕು. ಇದರಿಂದಾ ದೂರ ಸಂಚಾರಕ್ಕೆ ಹೋಗುವ ಸಂದರ್ಭಗಳಲಿ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ.

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ಕಾರಿನ ಎಸಿ ಸರ್ವೀಸಿಂಗ್‍‍ನಲ್ಲಿ ಪ್ರಧಾನವಾಗಿ ಚೆಕ್ ಮಾಡಬೇಕಾದವುಗಳಿವು :

1. ಎಯಿರ್ ವೆಂಟ್ ಟೆಂಪ್ರೇಚರ್ ಚೆಕ್

2. ಎಸಿ ಗ್ಯಾಸ್ ಬದಲಾಯಿಸುವುದು

3. ಎಸಿಯಲ್ಲಿನ ಡ್ರೈವ್ ಬೆಲ್ಟ್ ಮತ್ತು ಪುಲ್ಲಿಗಳನ್ನು ಅಡ್ಜಸ್ಟ್ ಮಾಡುವುದು

4. ಎಸಿ ಫಿಲ್ಟರ್ ಅನ್ನು ಬದಲಾಯಿಸುವುದು

5. ವ್ಯಾಲ್ವ್ಸ್ ಮತ್ತು ಥರ್ಮೋಸ್ಪಾರ್ಟ್ಸ್ ಕಾರಕ್ಷಮತೆಯನ್ನು ಗಮನಿಸುವುದು

6. ಎಸಿ ವ್ಯವಸ್ಥೆಯು ಮೊತ್ತವಾಗಿ ಲೀಕ್ ಟೆಸ್ಟ್ ಮಾಡಿಸುವುದು

7. ಕಂಡೆನ್ಸರ್ ಫಿನ್ಸ್ ಕ್ಲೀನ್ ಮಾಡುವುದು

8. ಎಸಿ ಸಿಸ್ಟಮ್ ಮೊತ್ತವಾಗಿ ಪರಿಶುಭ್ರವಾಗಿಸುದು

ನಿಮ್ಮ ಕಾರಿನ ಎಸಿ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಹೀಗೆ ಮಾಡಿ..

ಈ ಎಲ್ಲಾ ಸರ್ವೀಸಿಂಗ್‍‍ಗಾಗಿ ಸುಮಾರಾಗಿ ಅರ್ಧ ದಿನದ ಕಾಲಾವಕಾಶ ಬೇಕಾಗಬಹುದು. ಆದ್ದರಿಂದಾ ಜೊತೆಗಿದ್ದು ಎಸಿಯನ್ನು ಸರ್ವೀಸಿಂಗ್ ಮಾಡಿಸಿಕೊಳ್ಳುವುದರಿಂದಾ ಯಾವ ತರಹದ ತೊಂದರೆಗಳು ಬರುವುದಿಲ್ಲ. ಆದರೇ, ಅಧಿಕೃತ ಎಸಿ ಮೆಕಾನಿಕ್ ಹತಿರವೇ ಸರ್ವೀಸ್ ಮಾಡಿಸಿರಿ.

Most Read Articles

Kannada
Read more on auto tips four wheeler tips
English summary
Summer special five ways to make your cars ac super effective.
Story first published: Saturday, August 11, 2018, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X