ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ವಿಶ್ವ ಆಟೋ ಉದ್ಯಮದಲ್ಲಿ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ. ಇತ್ತೀಚಿಗೆ ಜರ್ಮನಿಯನ್ನೂ ಮೀರಿಸಿ ವಿಶ್ವದ ನಾಲ್ಕನೇ ಅತಿ ದೊಡ್ಡ ವಾಹನ ಮಾರುಕಟ್ಟೆಯಾಗಿ ಭಾರತವು ಹೊರಹೊಮ್ಮಿದೆ. ಇಂದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಫೈ ಮಾಡಿಸುವ ಕಾರು ಮಾಲೀಕರು ನಮ್ಮ ದಕ್ಷಿಣ ಭಾರತದಲ್ಲಿದ್ದಾರೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಬಹು ಸೆಟ್ ಎಂಜಿನ್‌ಗಳು, ಗೇರ್‌ಬಾಕ್ಸ್ ಆಯ್ಕೆಗಳು ಮತ್ತು ಇತರ ಅತ್ಯಾಧುನಿಕ ವೈಶಿಷ್ಟ್ಯ ವ್ಯವಸ್ಥೆಗಳನ್ನು ಹಳೆಯ ಕಾರುಗಳಿಗೆ ಒದಗಿಸಿ ಮರುಮಾರಾಟ (ಸಕೆಂಡ್ ಹ್ಯಾಂಡ್) ಮಾಡುವ ಮಾರುಕಟ್ಟೆಯು ಇಂದು ಭಾರತದಲ್ಲಿ ಬೃಹತ್‌ ಆಗಿ ಬೆಳೆದು ನಿಂತಿದೆ. ಹೊಸ ಮಾದರಿಗಳು ಮಾತ್ರವಲ್ಲದೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಕೂಡ ನಮ್ಮ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಉಪಯೋಗಿಸಿದ ಕಾರು ಮಾರುಕಟ್ಟೆಯು ಇಂದು ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಕಾರಿನ ಮರುಮಾರಾಟ ಮೌಲ್ಯವು ವಾಹನದ ಬಣ್ಣವನ್ನು ಅವಲಂಬಿಸಿ ಬದಲಾಗುತ್ತದೆ. ಬಣ್ಣದ ಆಯ್ಕೆಗಳಿಗೆ ಬಂದಾಗ ಕಾರುಗಳ ಮೌಲ್ಯವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾದರೆ ಭಾರತದಲ್ಲಿನ ಕೆಲವು ಉತ್ತಮ ಮತ್ತು ಕಳಪೆ ಮರುಮಾರಾಟ ಮೌಲ್ಯದ ಕಾರು ಬಣ್ಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ...

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಹೆಚ್ಚು ಮೌಲ್ಯದ ಕಾರು ಬಣ್ಣಗಳು

ಬಿಳಿ

ಬಿಳಿ ಬಣ್ಣವು ನಮ್ಮ ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ಬಣ್ಣಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಯಾವುದೇ ಭಾಗದಲ್ಲಿ ಆಯ್ಕೆ ಮಾಡಲು ಸುರಕ್ಷಿತ ಬಣ್ಣವಾಗಿದೆ. ಕಾರುಗಳಲ್ಲಿ ಅತ್ಯಂತ ಸಾಮಾನ್ಯವಾದ ಬಣ್ಣವು ಬಿಳಿಯಾಗಿರುವುದರಿಂದ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚು.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಜನರು ಬಿಳಿಯನ್ನು ಇಷ್ಟಪಡುವ ಇನ್ನೊಂದು ಕಾರಣವೆಂದರೆ ಮತ್ತೆ ಬಣ್ಣ ಹಾಕಿದಾಗ ಈಗಿರುವ ಬಣ್ಣವನ್ನು ಹೊಂದಿಸಲು ಸ್ವಲ್ಪ ಸುಲಭವಾಗುತ್ತದೆ. ಆದ್ದರಿಂದ ಬಿಳಿ ಬಣ್ಣವು ಅತ್ಯುತ್ತಮ ಮರುಮಾರಾಟ ಮೌಲ್ಯದ ಕಾರುಗಳ ಬಣ್ಣಗಳಲ್ಲಿ ಒಂದಾಗಿದೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಹಳದಿ

ಹಳದಿ ಬಣ್ಣವು ಅತ್ಯುತ್ತಮ ಮರುಮಾರಾಟ ಮೌಲ್ಯವನ್ನು ನೀಡುವ ಕಾರುಗಳ ಬಣ್ಣಗಳಲ್ಲಿ ಒಂದಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಹಳದಿ ಬಣ್ಣವು ರಸ್ತೆಯಲ್ಲಿ ಅಸಾಮಾನ್ಯ ಬಣ್ಣವಾಗಿದೆ. ಲ್ಯಾಂಬೋರ್ಗಿನಿಗಿಂತಲೂ ಫ್ಯಾಕ್ಟರಿ ಬಣ್ಣದ ಹಳದಿ ಕಾರುಗಳು ಭಾರತಕ್ಕೆ ಬರುವ ಸಾಧ್ಯತೆ ಕಡಿಮೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಬಜೆಟ್ ವಿಭಾಗದಲ್ಲಿ ಅನೇಕ ಬ್ರ್ಯಾಂಡ್ಗಳು ಹಳದಿ ಬಣ್ಣದ ಆಯ್ಕೆಯೊಂದಿಗೆ ಅಪರೂಪವಾಗಿ ಬರುತ್ತವೆ. ಅದರಲ್ಲಿ ಟಾಟಾ ಟಿಯಾಗೋ ಕೂಡ ಒಂದು. ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಮಾದರಿ ಶ್ರೇಣಿಯಿಂದ ಈ ಬಣ್ಣವನ್ನು ನಿಲ್ಲಿಸಿದೆ. ಹಾಗಾಗಿ ಅಪರೂಪವಾಗಿರುವ ಈ ಬಣ್ಣಕ್ಕೆ ಬೇಡಿಕೆ ಹೆಚ್ಚು.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಸಿಲ್ವರ್

ಭಾರತದಲ್ಲಿ ವೈಟ್ ನಂತರ ಸಿಲ್ವರ್ ಬಣ್ಣ ಮರು ಮಾರಾಟದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಕಾರು. ಯೋಗ್ಯವಾದ ಮರುಮಾರಾಟ ಮೌಲ್ಯವನ್ನು ನಿರೀಕ್ಷಿಸಿದರೆ ಬೆಳ್ಳಿಯನ್ನು ಎರಡನೇ ಸುರಕ್ಷಿತ ಬಣ್ಣವೆಂದು ಪರಿಗಣಿಸಬಹುದು. ಇದು ಯಾವುದೇ ವಿಭಾಗವನ್ನು ಲೆಕ್ಕಿಸದೆ ಬಹುತೇಕ ಪ್ರತಿಯೊಂದು ಬ್ರ್ಯಾಂಡ್‌ನಲ್ಲೂ ಲಭ್ಯವಿದೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಈ ಬಣ್ಣವು ಯಾವುದೇ ವಾಹನಕ್ಕೆ ಸಂಪೂರ್ಣವಾಗಿ ಸೂಕ್ತವಾಗಿರುತ್ತದೆ ಎಂದು ಗಮನಿಸಬೇಕಾದ ಅಂಶ. ಹಾಗಾಗು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಬೂದು

ಬಿಳಿ ಮತ್ತು ಸಿಲ್ವರ್ ನಂತರ ಬೂದು ಬಣ್ಣವು ಇಂದು ಬೀದಿಗಳಲ್ಲಿ ಹೆಚ್ಚು ಕಾಣಸಿಗುವ ಬಣ್ಣವಾಗಿದೆ. ಸಿಲ್ವರ್ ಮತ್ತು ಗ್ರೇ ಹಗಲು ರಾತ್ರಿಯಂತೆ ವಿಭಿನ್ನವಾಗಿವೆ. ಆದಾಗ್ಯೂ, ಬೂದು ಅತ್ಯಂತ ಜನಪ್ರಿಯ ಬಣ್ಣಗಳಲ್ಲಿ ಒಂದಾಗಿದೆ. ಆದ್ದರಿಂದ ಬೂದು ಖಂಡಿತವಾಗಿಯೂ ಉತ್ತಮ ಮರುಮಾರಾಟ ಮೌಲ್ಯದ ಬಣ್ಣಗಳಲ್ಲಿ ಒಂದಾಗಿದೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಕಡಿಮೆ ಮರುಮಾರಾಟ ಮೌಲ್ಯದ ಬಣ್ಣಗಳು

ಕೆಂಪು

ಹೊಚ್ಚ ಹೊಸದನ್ನು ಖರೀದಿಸುವಾಗ ಅತ್ಯಂತ ಆಕರ್ಷಕವಾಗಿ ಕಾಣುವ ಕಾರ್ ಬಣ್ಣ ಕೆಂಪು. ಆದರೆ ಕಾಲಾನಂತರದಲ್ಲಿ ಅದು ಬದಲಾಗುವ ಸಾಧ್ಯತೆಯಿದೆ. ಆದ್ದರಿಂದ, ಕೆಂಪು ಕಾರುಗಳ ಮರುಮಾರಾಟ ಮೌಲ್ಯವು ತೀರಾ ಕಡಿಮೆ ಇರುತ್ತದೆ. ಹಳದಿ ಬಣ್ಣದಂತೆ ಕೆಂಪು ಬಣ್ಣವು ಹೆಚ್ಚಿನ ಕಾರು ಕಾರ್‌ ಬ್ರ್ಯಾಂಡ್‌ಗಳಲ್ಲಿ ಲಭ್ಯವಿಲ್ಲ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಆದರೆ ಫೋಕ್ಸ್‌ವ್ಯಾಗನ್ ಪೊಲೊದಂತಹ ಕೆಲವು ಕಾರುಗಳು ಕೆಂಪು ಬಣ್ಣದಲ್ಲಿ ಸುಂದರವಾಗಿವೆ. ಎಷ್ಟು ಕಾಲವಾದರೂ ಆ ವೈಭವ ಹಾಗೆಯೇ ಇರುತ್ತದೆ. ಇದು ಬಿಟ್ಟರೆ ಇತರ ಬ್ರ್ಯಾಂಡ್‌ಗಳಲ್ಲಿ ಮಾರುತಿ ಸ್ವಿಫ್ಟ್‌ ಬಿಟ್ಟರೆ ಇಷ್ಟು ಹೆಸರು ಮಾಡಿರುವ ಕೆಂಪು ಬಣ್ಣದ ಮಾದರಿಗಳು ಕಡಿಮೆಯಿವೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ನೀಲಿ

ಕಡಿಮೆ ಮರುಮಾರಾಟ ಮೌಲ್ಯದೊಂದಿಗೆ ಬರುವ ಮುಂದಿನ ಬಣ್ಣ ನೀಲಿ. ತಿಳಿ ನೀಲಿ ಬಣ್ಣವು ಕಡಿಮೆ ಮರುಮಾರಾಟ ಮೌಲ್ಯವನ್ನು ಹೊಂದಿದೆ, ಏಕೆಂದರೆ ಇದು ನೀಲಿ ಬಣ್ಣದ ಬಹು ಛಾಯೆಗಳನ್ನು ಹೊಂದಿದೆ. ಆದರೆ ಕಾರ್ಯಕ್ಷಮತೆ ಆಧಾರಿತ ಕಾರುಗಳಿಗೆ ನೀಲಿ ಆಯ್ಕೆಯು ಪರಿಪೂರ್ಣತೆ ನೀಡುತ್ತದೆ. ಹಾಗಾಗಿ ಮರುಮಾರಾಟ ಮಾರುಕಟ್ಟೆಯಲ್ಲಿ ನೀಲಿಗೆ ಮಾರುಕಟ್ಟೆ ಇದ್ದರೂ ಅದು ತುಂಬಾ ಕಡಿಮೆ ಇದೆ ಎಂಬುದನ್ನು ಗಮನಿಸಬೇಕು.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಕಪ್ಪು

ವಾಹನಗಳಿಗೆ ಕಪ್ಪು ಬಣ್ಣವು ಅತ್ಯಂತ ಸ್ಪೋರ್ಟಿ ಲುಕ್‌ ಎಂದು ಹಲವರು ವಾದಿಸುತ್ತಾರೆ. ವಾಸ್ತವವಾಗಿ ಕಪ್ಪು ಕಾರುಗಳ ಮರುಮಾರಾಟ ಮೌಲ್ಯವು ತುಂಬಾ ಕಡಿಮೆಯಾಗಿದೆ. ಅಲ್ಲದೆ, ಭಾರತದಲ್ಲಿ ಕಪ್ಪು ಬಣ್ಣವನ್ನು ಪವಿತ್ರವೆಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ, ಕಪ್ಪು ಬಣ್ಣವು ಹೆಚ್ಚಿನ ಶಾಖವನ್ನು ಹೀರಿಕೊಳ್ಳುವ ಬಣ್ಣವಾಗಿದೆ. ಹಾಗಾಗಿ ಕ್ಯಾಬಿನ್ ಸಾಮಾನ್ಯಕ್ಕಿಂತ ಬಿಸಿಯಾಗುವುದರಿಂದ ಸೆಕೆಂಡ್ ಹ್ಯಾಂಡ್ ನಲ್ಲಿ ಈ ಬಣ್ಣದ ವಾಹನಗಳನ್ನು ಖರೀದಿಸುವವರು ತೀರಾ ಕಡಿಮೆ.

ಕಾರುಗಳ ಮರುಮಾರಾಟದಲ್ಲಿ ಬಣ್ಣಗಳು ಸಹ ದೊಡ್ಡ ಪಾತ್ರ ವಹಿಸುತ್ತವೆ: ಯಾವ ಬಣ್ಣಕ್ಕೆ ಹೆಚ್ಚು ಮೌಲ್ಯ?

ಇತರ ಬಣ್ಣಗಳು

ವೈಲೆಟ್, ಮೆಜೆಂಟಾ ಮತ್ತು ಬ್ರೌನ್‌ನಂತಹ ಇತರ ಕಾರ್ ಬಣ್ಣಗಳು ಮರುಮಾರಾಟ ಮೌಲ್ಯದಲ್ಲಿ ತುಲನಾತ್ಮಕವಾಗಿ ಕಡಿಮೆ. ಭಾರತದಲ್ಲಿ ಡ್ಯುಯಲ್-ಟೋನ್ ಬಣ್ಣದ ಯೋಜನೆಗಳನ್ನು ನೀಡುವ ಕಾರುಗಳಿವೆ. ಬೇಕಿದ್ದರೆ ಈ ಅಂಕಣದಲ್ಲಿ ಅವನ್ನೂ ಸೇರಿಸಬಹುದು. ಆದರೆ ಕೆಲವೊಮ್ಮೆ ಅವು ಸೀಮಿತ ಆವೃತ್ತಿಯ ಮಾದರಿಗಳಾಗಿದ್ದರೆ ವಾಹನದ ಮರುಮಾರಾಟ ಮೌಲ್ಯವು ಸಾಮಾನ್ಯಕ್ಕಿಂತ ಹೆಚ್ಚಿರಬಹುದು.

Most Read Articles

Kannada
English summary
The car colours that have the best and the worst resale value
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X