ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

By Manoj Bk

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಕಾರು ಮಾಲೀಕರು ತತ್ತರಿಸುವಂತಾಗಿದೆ. ಪೆಟ್ರೋಲ್, ಡೀಸೆಲ್ ವಾಹನಗಳು ವಾಯುಮಾಲಿನ್ಯವನ್ನು ಸಹ ಉಂಟು ಮಾಡುತ್ತವೆ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ವಾಹನಗಳು ಈ ಎರಡೂ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳಾಗಿವೆ. ಎಲೆಕ್ಟ್ರಿಕ್ ಕಾರುಗಳ ಬೆಲೆ ದುಬಾರಿಯಾಗಿರುವುದರಿಂದ ಎಲ್ಲರಿಗೂ ಅವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸಿಎನ್‌ಜಿ ವಾಹನಗಳನ್ನು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವೆಂದು ಹಾಗೂ ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ನೀಡಲು ಸೂಕ್ತವೆಂದು ಹೇಳಲಾಗುತ್ತದೆ. ಇದಕ್ಕಾಗಿ ಹೊಸ ಸಿಎನ್‌ಜಿ ಕಾರುಗಳನ್ನು ಖರೀದಿಸಬೇಕಾಗಿಲ್ಲ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ನೀವು ಹೊಂದಿರುವ ಕಾರುಗಳಲ್ಲಿಯೇ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಿಕೊಳ್ಳಬಹುದು. ಪೆಟ್ರೋಲ್, ಡೀಸೆಲ್‌ಗೆ ಹೋಲಿಸಿದರೆ ಸಿಎನ್‌ಜಿ ಇಂಧನದ ಬೆಲೆ ತೀರಾ ಕಡಿಮೆ. ಜೊತೆಗೆ ಪೆಟ್ರೋಲ್, ಡೀಸೆಲ್ ಎಂಜಿನ್'ಗಳ ರೀತಿ ಸಿಎನ್‌ಜಿ ವಾಹನಗಳು ಪರಿಸರವನ್ನು ಕಲುಷಿತಗೊಳಿಸುವುದಿಲ್ಲ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಸಾಕಷ್ಟು ಜನರು ತಮ್ಮ ಕಾರುಗಳಲ್ಲಿ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಆದರೆ ಕಾರಿನಲ್ಲಿ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಈ ವಿಷಯಗಳು ಭವಿಷ್ಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಆ ವಿಷಯಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

1. ಎಲ್ಲಾ ಕಾರುಗಳಲ್ಲಿ ಸಿಎನ್‌ಜಿ ಕಿಟ್‌ ಅಳವಡಿಕೆ ಅಸಾಧ್ಯ

ಕಾರಿನಲ್ಲಿ ಸಿಎನ್‌ಜಿ ಕಿಟ್ ಅಳವಡಿಸುವ ಮೊದಲು ಕಾರಿನ ಇಂಧನ ಪ್ರಕಾರವನ್ನು ಪರಿಶೀಲಿಸಬೇಕಾಗುತ್ತದೆ. ಎಲ್ಲಾ ಕಾರುಗಳನ್ನು ಸಿಎನ್‌ಜಿಗೆ ಬದಲಿಸಲು ಸಾಧ್ಯವಿಲ್ಲ. ವಿಶೇಷವಾಗಿ ಹಳೆಯ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವ ಸಾಧ್ಯತೆಗಳು ಕಡಿಮೆ. ಪೆಟ್ರೋಲ್ / ಡೀಸೆಲ್ ಕಾರನ್ನು ಸಿಎನ್‌ಜಿ ಕಾರ್ ಆಗಿ ಬದಲಿಸಬಹುದೇ ಎಂಬುದನ್ನು ಪರಿಶೀಲಿಸಬೇಕು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಗಮನಿಸಬೇಕಾದ ಸಂಗತಿಯೆಂದರೆ ಪೆಟ್ರೋಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವುದು ಸುಲಭ. ಆದರೆ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವುದು ಕಷ್ಟ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸಲು ಹೆಚ್ಚಿನ ಮಾಡಿಫೈ ಮಾಡಬೇಕಾಗುತ್ತದೆ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಅದೇ ರೀತಿ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವುದು ಹೆಚ್ಚು ದುಬಾರಿ. ಕಾರನ್ನು ಸಿಎನ್‌ಜಿಗೆ ಬದಲಿಸುವ ಮುನ್ನ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ. ಯಾವ ಕಾರುಗಳಲ್ಲಿ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಬಹುದು ಎಂಬ ಪಟ್ಟಿಯನ್ನು ಆರ್‌ಟಿಒ ಕಚೇರಿಗಳು ಪ್ರಕಟಿಸುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ನಿಮ್ಮ ಕಾರಿನ ಮಾದರಿ ಆ ಪಟ್ಟಿಯಲ್ಲಿದ್ದರೆ ಸಿಎನ್‌ಜಿ ಕಿಟ್‌ ಅಳವಡಿಸಿಕೊಳ್ಳಬಹುದು. ಆದರೆ ಸಿಎನ್‌ಜಿಗೆ ಬದಲಿಸಲು ನೀಡಲಾಗುವ ಕಾರುಗಳ ಪಟ್ಟಿ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಈ ಕಾರಣಕ್ಕೆ ಹತ್ತಿರದ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸುವುದು ಉತ್ತಮ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

2. ಆರ್‌ಟಿಒ ಅನುಮೋದನೆ ಅಗತ್ಯ

ಪೆಟ್ರೋಲ್ ಕಾರನ್ನು ಸಿಎನ್‌ಜಿಗೆ ಬದಲಿಸಿದರೆ ಆರ್‌ಟಿಒ ಕಚೇರಿಯಿಂದ ಅನುಮತಿ ಪಡೆಯಬೇಕು. ಆರ್‌ಟಿಒ ಅನುಮತಿಯಿಲ್ಲದಿದ್ದರೆ ಆ ಕಾರನ್ನು ಕಾನೂನುಬದ್ಧವಾಗಿಬಳಸಲು ಸಾಧ್ಯವಿಲ್ಲ. ಕಾರಿನ ಆರ್‌ಸಿ ಬುಕ್'ನಲ್ಲಿ ಇಂಧನ ಪ್ರಕಾರವನ್ನು ಪೆಟ್ರೋಲ್‌ನಿಂದ ಸಿಎನ್‌ಜಿ ಎಂದು ಬದಲಿಸಬೇಕಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಪರವಾನಗಿ ನೀಡಿದ ನಂತರ ಇಂಧನ ಬದಲಾವಣೆ ಬಗ್ಗೆ ಆರ್‌ಟಿಒ ಮುದ್ರೆ ಒತ್ತುತ್ತದೆ. ನಂತರ ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಿಸಿದ ಕಾರನ್ನು ಯಾವುದೇ ತೊಂದರೆಗಳಿಲ್ಲದೆ ಕಾನೂನುಬದ್ಧವಾಗಿ ಬಳಸಬಹುದು.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

3. ಎಲ್ಲಾ ಸಿಎನ್‌ಜಿ ಕಿಟ್‌ಗಳು ಅಸಲಿಯಲ್ಲ

ಇಂದು ಬಹುತೇಕ ಎಲ್ಲಾ ವಸ್ತುಗಳು ನಕಲಿಯಾಗಿವೆ. ಸಿಎನ್‌ಜಿ ಕಿಟ್‌ಗಳು ಸಹ ಇದರಿಂದ ಹೊರತಾಗಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಸಿಎನ್‌ಜಿ ಕಿಟ್‌ಗಳು ಅಸಲಿಯಲ್ಲ. ಈ ಕಾರಣಕ್ಕೆ ಕಾರಿನಲ್ಲಿ ಅಳವಡಿಸುವ ಮೊದಲು ಸಿಎನ್‌ಜಿ ಕಿಟ್‌ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಮುಖ್ಯ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಸಮಸ್ಯೆಗಳಾಗುವುದನ್ನು ತಪ್ಪಿಸಲು ಗುಣಮಟ್ಟದ ಸಿಎನ್‌ಜಿ ಕಿಟ್‌ಗಳನ್ನು ಖರೀದಿಸುವುದು ಸೂಕ್ತ. ಈ ಕಿಟ್‌ಗಳನ್ನು ಅಧಿಕೃತ ವಿತರಕರಿಂದ ಖರೀದಿಸಿದರೆ ಒಳ್ಳೆಯದು. ಆದಷ್ಟು ಲೋಕಲ್ ಕಿಟ್‌ಗಳನ್ನು ಖರೀದಿಸದೇ ಇರುವುದು ಸೂಕ್ತ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

4. ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳಲು ಹೆಚ್ಚು ಬೆಲೆ ತೆರಬೇಕು

ಪೆಟ್ರೋಲ್, ಡೀಸೆಲ್‌ ಇಂಧನಕ್ಕೆ ಹೋಲಿಸಿದರೆ ಸಿಎನ್‌ಜಿ ಇಂಧನದ ಬೆಲೆ ಅಗ್ಗವಾಗಿದೆ. ಸಾಮಾನ್ಯವಾಗಿ ಅಧಿಕೃತ ಮಾರಾಟಗಾರರಿಂದ ಗುಣಮಟ್ಟದ ಸಿಎನ್‌ಜಿ ಕಿಟ್ ಖರೀದಿಸಿ ಕಾರಿನಲ್ಲಿ ಅಳವಡಿಸಿಕೊಳ್ಳಲು ರೂ.50,000ದಿಂದ ರೂ.60,000ಗಳವರೆಗೆ ವ್ಯಯಿಸಬೇಕಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಕಾರು ಮಾದರಿಯ ಮೇಲೆ ಸಿಎನ್‌ಜಿ ಕಿಟ್ ವೆಚ್ಚವು ಬದಲಾಗುತ್ತದೆ. ಆದರೆ ಸಿಎನ್‌ಜಿ ಬೆಲೆ ಪೆಟ್ರೋಲ್, ಡೀಸೆಲ್ ಬೆಲೆಗಿಂತ ಅಗ್ಗವಾಗಿರುವುದರಿಂದ ಇಂಧನಕ್ಕಾಗಿ ಹೆಚ್ಚು ಹಣ ತೆರುವುದನ್ನು ತಪ್ಪಿಸಬಹುದು.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಸಿಎನ್‌ಜಿ ಕಿಟ್ ಹೊಂದಿರುವ ಸುಸಜ್ಜಿತ ಕಾರುಗಳ ನಿರ್ವಹಣೆ ತುಸು ದುಬಾರಿಯಾಗಿರುತ್ತದೆ. ಆದರೆ ಸಿಎನ್‌ಜಿ ಇಂಧನ ಅಗ್ಗವಾಗಿರುವುದರಿಂದ ಈ ವೆಚ್ಚವನ್ನು ಸರಿದೂಗಿಸಿ ಕೊಳ್ಳಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

5. ವಿಮಾ ಕಂಪನಿಗೆ ಮಾಹಿತಿ ನೀಡಿ

ಕಿಟ್ ಅಳವಡಿಸಿದ ತಕ್ಷಣ, ಇಂಧನ ಪ್ರಕಾರವನ್ನು ಸಿಎನ್‌ಜಿಗೆ ಬದಲಿಸಲಾಗಿದೆ ಎಂದು ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ಈ ಮಾಡಿಫೈ ಬಗ್ಗೆ ವಿಮಾ ಕಂಪನಿಗೆ ಮಾಹಿತಿ ನೀಡಲು ಪಾಲಿಸಿಯನ್ನು ನವೀಕರಿಸುವವರೆಗೆ ಕಾಯುವ ಅಗತ್ಯವಿಲ್ಲ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಇಂಧನ ಪ್ರಕಾರದ ಬದಲಾವಣೆಯ ಬಗ್ಗೆ ಮಾಹಿತಿ ನೀಡದಿದ್ದರೆ ವಿಮಾ ಕಂಪನಿಗಳು ಕ್ಲೈಮ್ ಮಾಡುವ ಹಕ್ಕನ್ನು ತಿರಸ್ಕರಿಸುವ ಸಾಧ್ಯತೆಗಳಿರುತ್ತವೆ. ಕ್ಲೈಮ್ ಮೊತ್ತವನ್ನು ಪಾವತಿಸುವ ಮೊದಲು ವಿಮಾ ಕಂಪನಿಗಳು ತಪಾಸಕರನ್ನು ಕಳುಹಿಸುತ್ತವೆ. ಅವರು ಕಾರನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಾರೆ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ವಿಮಾ ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ಅವರು ಪರಿಶೀಲಿಸುತ್ತಾರೆ. ಯಾವುದಾದರೂ ಮಾಡಿಫಿಕೇಶನ್ ಕಂಡು ಬಂದಲ್ಲಿ ಕ್ಲೈಮ್ ಹಕ್ಕು ತಿರಸ್ಕರಿಸುವಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಕಿಟ್ ಸಿಎನ್‌ಜಿ ಅಳವಡಿಸಿದ ಕೂಡಲೇ ಈ ವಿಷಯವನ್ನು ವಿಮಾ ಕಂಪನಿಗಳಿಗೆ ತಿಳಿಸುವುದು ಒಳ್ಳೆಯದು.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

6. ಸಿಎನ್‌ಜಿ ಲಭ್ಯತೆ

ಕಾರಿನಲ್ಲಿ ಸಿಎನ್‌ಜಿ ಕಿಟ್‌ ಅಳವಡಿಸಿಕೊಳ್ಳುವ ಮೊದಲು ಸಿಎನ್‌ಜಿ ಕೇಂದ್ರಗಳ ಲಭ್ಯತೆಯ ಬಗ್ಗೆ ಪರಿಶೀಲಿಸಿ. ಭಾರತದಲ್ಲಿ ಪೆಟ್ರೋಲ್ ಬಂಕ್'ಗಳ ಸಂಖ್ಯೆ ಹೆಚ್ಚಾಗಿದ್ದರೂ, ಸಿಎನ್‌ಜಿ ಕೇಂದ್ರಗಳ ಸಂಖ್ಯೆ ತುಂಬಾ ಕಡಿಮೆ.

ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಸಂಗತಿಗಳಿವು

ಮೆಟ್ರೋ ನಗರಗಳಲ್ಲಿಯೂ ಸಹ ಸಿಎನ್‌ಜಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಕಡಿಮೆ ಸಂಖ್ಯೆಯ ಸಿಎನ್‌ಜಿ ಕೇಂದ್ರಗಳಿದ್ದರೆ ಕಾರುಗಳಿಗೆ ಸಿಎನ್‌ಜಿ ಇಂಧನ ತುಂಬಲು ಗಂಟೆ ಗಟ್ಟಲೇ ಕಾಯಬೇಕಾಗುತ್ತದೆ.

Most Read Articles

Kannada
English summary
Things to know before installing a cng kit in petrol diesel car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X