Just In
- 6 min ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 10 min ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- 35 min ago ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- 1 hr ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
Don't Miss!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ರಾಫಿಕ್ ಪೋಲಿಸ್ ಕಣ್ಣು ತಪ್ಪಿಸಲು ಮಾಡುವ 13 ಪ್ರವೃತ್ತಿಗಳು!
ನಾವು ತಿಳಿದೋ ತಿಳಿಯದೆಯೋ ದಿನನಿತ್ಯ ಹಲವಾರು ಸಂಚಾರ ನಿಯಮ ಉಲ್ಲಂಘಿಸುತ್ತೇವೆ. ಸಿಗ್ನಲ್ ಜಂಪ್ ಮಾಡುವುದು, ಒನ್ ವೇನಲ್ಲಿ ವಿರುದ್ಧ ದಿಕ್ಕಿನಿಂದ ಗಾಡಿ ಓಡಿಸುವುದು.
ನಾವು ತಿಳಿದೋ ತಿಳಿಯದೆಯೋ ದಿನನಿತ್ಯ ಹಲವಾರು ಸಂಚಾರ ನಿಯಮ ಉಲ್ಲಂಘಿಸುತ್ತೇವೆ. ಸಿಗ್ನಲ್ ಜಂಪ್ ಮಾಡುವುದು, ಒನ್ ವೇನಲ್ಲಿ ವಿರುದ್ಧ ದಿಕ್ಕಿನಿಂದ ಗಾಡಿ ಓಡಿಸುವುದು, ಯೂ ಟರ್ನ್ ನಿಷೇಧ ಜಾಗದಲ್ಲಿ ಯೂ ಟರ್ನ್ ತೆಗೆದುಕೊಳ್ಳುವುದು ಹೀಗೆ ಅನೇಕ ತಪ್ಪುಗಳು ಸಹಜವಾಗಿಯೇ ಆಗುತ್ತಿರುತ್ತವೆ.
ಆದರೆ ಕೆಲವೊಮ್ಮೆ ಇದಕ್ಕಿಂತಲೂ ಜಿಪುಣವಾಗಿ ವರ್ತಿಸುವ ಬುದ್ಧಿಜೀವಿ ಚಾಲಕರು ಪೊಲೀಸರ ಕಣ್ಣಿಗೆ ಮಣ್ಣೆರೆಚುವಂತಹ ಪ್ರವೃತ್ತಿಗಳನ್ನು ಮಾಡುತ್ತಿರುತ್ತಾರೆ. ಉದಾಹರಣೆಗೆ ಬೈಕ್ ಸವಾರರು ಟ್ರಾಫಿಕ್ ಪೊಲೀಸ್ ಕಂಡಾಗ ಮಾತ್ರ ಹೆಲ್ಮೆಟ್ ಧರಿಸುವುದು ಹೀಗೆ ಹಲವಾರು ಅಂಶಗಳನ್ನು ಪಟ್ಟಿ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಯಾತ್ರಿಕರು ತಮ್ಮ ಸುಗಮ ಸಂಚಾರ ಹಾಗೂ ಸುರಕ್ಷತೆಗಾಗಿ ನಿಯಮಗಳನ್ನು ರಚಿಸಲಾಗಿದೆ ಎಂಬುದನ್ನು ಮರೆತುಬಿಡುತ್ತಾರೆ. ಭಾರತದಲ್ಲಿ ಮಾತ್ರ ಕಾಣಸಿಗುವುವ ಇಂತಹ ಅಸುರಕ್ಷಿತ ಚಾಲನೆಯನ್ನು ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.
01. ಪೊಲೀಸ್ ಕಂಡರೆ ಸೀಟು ಬೆಲ್ಟ್ ಧರಿಸುವುದು
ನಮ್ಮಲ್ಲಿ ಹಲವರಿಗೂ ಈಗಲೂ ಸೀಟು ಬೆಲ್ಟ್ ಮಹತ್ವದ ಬಗ್ಗೆ ಅರಿವಿಲ್ಲ. ವಾಹನ ಚಾಲಕರು ಪೊಲೀಸರು ಎದುರು ಕಂಡಾಗ ಮಾತ್ರ ತರಾತುರಿಯಲ್ಲಿ ಸೀಟು ಬೆಲ್ಟ್ ಧರಿಸುವುದು ಎಷ್ಟು ಸರಿ? ನೆನಪಿಡಿ ಸೀಟು ಬೆಲ್ಟ್ ಇರುವುದು ನಿಮ್ಮ ಸುರಕ್ಷತೆಗಾಗಿ. ಬದಲಾಗಿ ಸರಕಾರದ ಬೊಕ್ಕಸ ತುಂಬಿಸಲು ಅಲ್ಲ.
02. ಚಾಲಕ ಮಾತ್ರ ಸೀಟು ಬೆಲ್ಟ್ ಧರಿಸಿದರೆ ಸಾಕೇ?
ಅಪಘಾತವಾದಾಗ ಕೇವಲ ಚಾಲಕ ಮಾತ್ರ ಗಾಯಗೊಳ್ಳುತ್ತಾನೆ ಎಂಬುದು ಶುದ್ಧ ಮೂಢತನ. ಇದೇ ಕಾರಣಕ್ಕಾಗಿ ವಾಹನ ತಯಾರಕರು ಎಲ್ಲ ಸೀಟುಗಳಿಗೂ ಸೀಲ್ಟ್ ಬೆಲ್ಟ್ ಸೌಲಭ್ಯಗಳನ್ನು ಒದಗಿಸಿರುವುದು. ದಯವಿಟ್ಟು ಇದರ ಗರಿಷ್ಠ ಪ್ರಯೋಜನ ಪಡೆಯಲು ಮರೆಯದಿರಿ.
03. ಎಡಭಾಗದಿಂದ ಓವರ್ ಟೇಕಿಂಗ್
ಎಡಭಾಗದಿಂದ ಓವರ್ ಟೇಕ್ ಮಾಡುವುದು ಸಂಚಾರ ನಿಯಮ ಉಲ್ಲಂಘನೆ ಎಂಬುದನ್ನು ತಿಳಿದರೂ ತಾಳ್ಮೆ ಕಳೆದುಕೊಳ್ಳುವ ನಮ್ಮ ಚಾಲಕರು ಇಂತಹ ತಪ್ಪುಗಳನ್ನು ಪದೇ ಪದೇ ಆವರ್ತಿಸುತ್ತಾರೆ.
04. ಅಸುರಕ್ಷಿತವಾಗಿ ಹೆಲ್ಮೆಟ್ ಧರಿಸುವುದು
ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರೂ ಬೈಕ್ ಸವಾರನಿಗೆ ಗಂಭೀರ ಪೆಟ್ಟಾಗಿರುವ ಘಟನೆಗಳು ವರದಿಯಾಗಿವೆ. ಇದಕ್ಕಿರುವ ಪ್ರಮುಖ ಕಾರಣ ಅಸುರಕ್ಷಿತವಾಗಿ ಹೆಲ್ಮೆಟ್ ಧರಿಸುವುದು. ಇಂತಹ ಬಹುತೇಕ ಪ್ರಕರಣಗಳಲ್ಲಿ ಹೆಲ್ಮೆಟ್ ಬಿಗಿಗೊಳಿಸುವುದನ್ನು ಸವಾರರು ಮರೆತಿರುತ್ತಾರೆ. ಇದರಿಂದಾಗಿ ಅಪಘಾತ ವೇಳೆ ಹೆಲ್ಮೆಟ್ ಜಾರಿ ಹೋಗುವ ಸಂಭವವಿದ್ದು, ತಲೆಗೆ ಗಂಭೀರ ಗಾಯಗಾಳಾಗುತ್ತವೆ.
05. ಕಳಪೆ ಮಟ್ಟದ ಹೆಲ್ಮೆಟ್ ಧರಿಸುವುದು
ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಹೆಲ್ಮೆಟ್ ಗಳಿಗೆ ನಾವು ಮೊರೆ ಹೋಗುತ್ತೇವೆ. ಇನ್ನು ಕೆಲವು ಫುಲ್ ಫೇಸ್ ಬದಲು ಓಪನ್ ಫೇಸ್ ಮುಂತಾದ ಹೆಲ್ಮೆಟ್ ಗಳನ್ನು ಧರಿಸುತ್ತಾರೆ. ಇವೆಲ್ಲವೂ ಅಪಾಯವನ್ನು ಆಹ್ವಾನಿಸಿದಂತೆ.
06. 1.2.3.4.5...... ಸವಾರಿ
ಕಾಲೇಜಿನಿಂದ ಹೊರಟ ವಿದ್ಯಾರ್ಥಿ ಹೆಲ್ಮೆಟ್ ಧರಿಸದೇ ಇಬ್ಬರು ಮೂವರನ್ನು ತನ್ನ ಹಿಂಬದಿಯಲ್ಲಿ ಕೂರಿಸಿಕೊಂಡು ನಡು ರಸ್ತೆಯಲ್ಲಿ ವೀಲಿಂಗ್ ಹೊಡೆಯುತ್ತಾನೆ. ಇನ್ನು ಮಧ್ಯಮ ವರ್ಗದ ಕುಟುಂಬದಲ್ಲಿ ಅಪ್ಪ, ಅಮ್ಮ, ಮಕ್ಕಳು ಎಲ್ಲರೂ ಬೈಕ್ ಅನ್ನು ಆಶ್ರಯಿಸಿಕೊಂಡಿರುತ್ತಾರೆ.
07. ಓವರ್ ಲೋಡಿಂಗ್
ನಮ್ಮ ಗಾಡಿ ಆಲ್ ರೌಂಡರ್ ಆಗಿರಬೇಕು ಎಂಬುದು ನಮ್ಮ ಭಾವನೆ. ಪ್ರಯಾಣಿಕರನ್ನಷ್ಟೇ ಅಲ್ಲದೆ ನಿಗದಿತ ಭಾರಕ್ಕಿಂತಲೂ ಹೆಚ್ಚು ಲೋಡ್ ಗಳನ್ನು ತಂಬಿಕೊಂಡು ಸಾಗುತ್ತಿರುವುದು ನಿತ್ಯ ದರ್ಶನ.
08. ಸಿಗ್ನಲ್ ಜಂಪ್
ಸಿಗ್ನಲ್ ಜಂಪ್ ಸಾಮಾನ್ಯವಾಗಿ ಕಂಡುಬರುವ ಪ್ರವೃತ್ತಿ. ಸಿಗ್ನಲ್ ಗಳಲ್ಲಿ ಎಲ್ಲಿಯಾದರೂ ಹಳದಿ ಬೆಳಕು ಉರಿಯುತ್ತಿರುವುದ ಕಂಡುಬಂದ್ದಲ್ಲಿ ಇನ್ನು ವೇಗವಾಗಿ ಚಲಿಸುತ್ತಾರೆ.
9. ಸವಾರಿ ವೇಳೆ ಮೊಬೈಲ್ ಫೋನ್ ಬಳಕೆ
ನಮ್ಮ ದ್ವಿಚಕ್ರ ವಾಹನ ಸವಾರರು ಎಷ್ಟು ಬುದ್ಧಿವಂತರು ನೋಡಿ. ಸವಾರಿಯ ವೇಳೆಯಲ್ಲಿ ಮೊಬೈಲ್ ಫೋನ್ ಗಳನ್ನು ಹೆಲ್ಮೆಟ್ ನೊಳಗೆ ತುರುಕಿಸಿಕೊಂಡು ಮಾತನಾಡುತ್ತಿರುತ್ತಾರೆ. ಇಲ್ಲಿ ಮಹಿಳೆಯರೇನು ಕಮ್ಮಿಯೇನಲ್ಲ ಎಂಬುದು ಅಷ್ಟೇ ಮುಖ್ಯ ವಹಿಸುತ್ತದೆ. ಇನ್ನು ಹಲವರು ಹಿಯರ್ ಫೋನ್ ಲಗತ್ತಿಸಿಕೊಂಡು ಹಾಡು ಕೇಳುತ್ತಾ ಸಾಗುತ್ತಾರೆ. ಹಾಗಾಗಿ ನಿಮ್ಮ ಜೀವನವನ್ನೇ ಮೊಬೈಲ್ ಫೋನ್ ಡಿಸ್ಕನೆಕ್ಟ್ ಮಾಡುವ ಮೊದಲು ಇಂತಹ ಹವ್ಯಾಸ ಬಿಟ್ಟುಬಿಡುವುದು ಒಳಿತು.
10. ಓವರ್ ಸ್ಪೀಡಿಂಗ್
ಉಳಿದ ವಾಹನಗಳಿಗೆ ಬಗ್ಗೆ ನಾವು ಗೌರವನೇ ಕೊಡಲ್ಲ. ಅಲ್ಲದೆ ಓವರ್ ಸ್ಪೀಡಿಂಗ್ ನಗರ ಸೇರಿದಂತೆ ಹಳ್ಳಿಗಳಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ.
11. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ
ಅತಿ ಹೆಚ್ಚು ವಾಹನ ದಟ್ಟಣೆ ಕಂಡುಬರುವ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ದ್ವಿಚಕ್ರ ಸವಾರರು ತರಾತುರಿಯಲ್ಲಿ ಪಾದಚಾರಿ ಮಾರ್ಗವನ್ನೇ ಬಳಸುತ್ತಾರೆ. ಇಂತಹ ಘಟನೆಗಳಲ್ಲಿ ಸೆರೆ ಸಿಕ್ಕರೆ ನಿಮ್ಮ ಚಾಲನಾ ಪರವಾನವಿ ರದ್ದಾದಿತು ಎಂಬುದನ್ನು ಗಮನದಲ್ಲಿಡಿ.
12. ವೀಲಿಂಗ್ ಚಾಲನಾ
ಪರವಾನಗಿ ಗಿಟ್ಟಿಸಿಕೊಳ್ಳದ ಮಕ್ಕಳು ನಡು ರಸ್ತೆಯಲ್ಲಿ ವೀಲಿಂಗ್ ಅಭ್ಯಾಸಿಸುತ್ತಾರೆ. ಮುಂದೆ ಏನೇ ದುರ್ಘಟನೆ ನಡೆದರೂ ಮಕ್ಕಳ ಪೋಷಕರು ಸಂಪೂರ್ಣ ಹೊಣೆಗಾರರಾಗಲಿ.
13. ಅಕ್ರಮ ಬಿಡಿಭಾಗಗಳು
ತಮ್ಮ ವಾಹನ ಇತರರಿಗಿಂತ ವಿಭಿನ್ನವಾಗಿ ಗುರುತಿಸಬೇಕೆಂಬ ನಿಟ್ಟಿನಲ್ಲಿ ಕರ್ಕಷ ಶಬ್ದದ ಅಥವಾ ಅತಿ ಹೆಚ್ಚು ಶಬ್ದ ಮಾಲಿನ್ಯವನ್ನುಂಟು ಮಾಡುವ ಹಾರ್ನ್ ಗಳನ್ನು, ಎಕ್ಸಾಸ್ಟ್ ಗಳನ್ನು ಹಾಗೂ ಲೌಡ್ ಸ್ಪೀಕರುಗಳನ್ನು ಲಗತ್ತಿಸುತ್ತೇವೆ. ಇವೆಲ್ಲವೂ ಮತ್ತೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬುದನ್ನು ಮರೆಯದಿರಿ.