ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಂತಹ ವಂಚಕರಿಂದ ಎಚ್ಚರವಾಗಿರಿ!

ಕಳೆದ ಕೆಲ ವರ್ಷಗಳಿಂದ ಹೊಸ ವಾಹನ ಮಾರಾಟವು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಬಹುತೇಕ ಗ್ರಾಹಕರು ವಾಹನಗಳ ಖರೀದಿಗಾಗಿ ಲೋನ್ ಮೇಲೆ ಅವಲಂಬನೆಯಾಗುತ್ತಾರೆ. ಆದರೆ ಈ ವೇಳೆ ವಾಹನ ಖರೀದಿದಾದರು ಆಯ್ಕೆ ಮಾಡಿಕೊಳ್ಳುವ ಬ್ಯಾಂಕ್ ಅಥವಾ ವಿವಿಧ ಹಣಕಾಸು ಸಂಸ್ಥೆಗಳ ಕುರಿತಾಗಿ ಕೂಲಂಕುಶ ಪರಿಶೀಲನೆ ಅಗತ್ಯವಾಗಿರುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಹಣಕಾಸು ಸೌಲಭ್ಯಗಳು ಹೆಚ್ಚುತ್ತಿರುವುದರಿಂದ ಜನರು ಇದೀಗ ಸಾಲದ ಮೂಲಕ ವಾಹನಗಳನ್ನು ಖರೀದಿಸುವ ಪ್ರಕ್ರಿಯೆ ಹೆಚ್ಚುತ್ತಿದ್ದು, ಶ್ರೀಮಂತರು ಮಾತ್ರವಲ್ಲದೇ ಜನಸಾಮಾನ್ಯರೂ ಕೂಡಾ ಸ್ವಂತ ವಾಹನವನ್ನು ಅತಿ ಕಡಿಮೆ ಪತ್ರ ವ್ಯವಹಾರಗಳೊಂದಿಗೆ ಮಾಲೀಕತ್ವ ಪಡೆದುಕೊಳ್ಳಲು ಸಹಕಾರಿಯಾಗುತ್ತಿದೆ. ಸಾಲಕ್ಕೆ ಮಾಸಿಕ ಆದಾಯದಲ್ಲಿ ಇಂತಿಷ್ಟು ಮೊತ್ತವನ್ನು ಇಎಂಐ ಕಟ್ಟಿದರೆ ಸಾಕು ಎಂಬ ಕಾರಣಕ್ಕೆ ಬಹುತೇಕರು ಇದೀಗ ಸ್ವಂತ ವಾಹನಗಳನ್ನು ಬಳಸಲು ಬಯಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಸಾಲ ಸೌಲಭ್ಯ ನೀಡುವ ಹಣಕಾಸು ಸಂಸ್ಥೆಗಳು ಕೂಡಾ ಹೆಚ್ಚುತ್ತಿವೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಕೈತುಂಬಾ ಹಣವಿದ್ದವರು ಮಾತ್ರ ವಾಹನಗಳನ್ನು ಖರೀದಿಸುತ್ತಾರೆ ಎನ್ನುವ ಪರಿಸ್ಥಿತಿ ಇದೀಗ ಬದಲಾಗಿದ್ದು, ವಾಹನ ಖರೀದಿಗೆ ಬ್ಯಾಂಕ್, ಖಾಸಗಿ ಸಂಸ್ಥೆಗಳು ಸುಲಭ ಮತ್ತು ಆಕರ್ಷಕ ಬಡ್ಡಿ ಸಾಲ ನೀಡುವುದರಿಂದ ಪರಿಸ್ಥಿತಿ ಇದೀಗ ಹಿಂದಿನಂತಿಲ್ಲ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಹೀಗಿರುವಾಗ ವಾಹನಗಳ ಖರೀದಿಗೆ ನೀಡಲಾಗುವ ಸಾಲವನ್ನು ಕೆಲವು ಹಣಕಾಸು ಸಂಸ್ಥೆಗಳು ಸರಿಯಾದ ಮಾನದಂಡಗಳೊಂದಿಗೆ ಗ್ರಾಹಕರಿಗೆ ಅನುಕೂಲಕರವಾಗಿದ್ದರೆ ಇನ್ನು ಕೆಲವು ಹಣಕಾಸು ಸಂಸ್ಥೆಗಳು ಅನಧಿಕೃತ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಹಕರನ್ನು ವಂಚಿಸುತ್ತವೆ. ಮೋಸದ ಸಾಲ ಸೌಲಭ್ಯಗಳಿಂದ ಗ್ರಾಹಕರು ಹೊಸ ವಾಹನವನ್ನು ಖರೀದಿ ಮಾಡಿದ್ದೆ ತಪ್ಪಾಯ್ತು ಎನ್ನುವಂತಹ ಪರಿಸ್ಥಿತಿಗೆ ಸಿಲುಕಿಸುತ್ತವೆ. ಇದರಿಂದ ವಂಚನೆ ಇಲ್ಲದೆ ವಾಹನ ಸಾಲ ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಹಾಗಾದರೆ ವಂಚನೆ ಇಲ್ಲದೆ ವಾಹನ ಸಾಲ ಪಡೆಯುದು ಹೇಗೆ? ಲೋನ್ ತೆಗೆದುಕೊಳ್ಳುವಾಗ ನಾವು ಗಮನಿಸಬೇಕಾದ ಪ್ರಮುಖ ಅಂಶಗಳು ಯಾವುವು? ಎನ್ನುವುದು ತಪ್ಪದೇ ತಿಳಿದುಕೊಳ್ಳಬೇಕಿದ್ದು, ಸಾಲ ಪಡೆದುಕೊಳ್ಳುವ ಮುನ್ನ ಈ ವಿಚಾರಗಳನ್ನು ತಿಳಿಯುವುದನ್ನು ಮರೆಯಬೇಡಿ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ವಾಹನ ಸಾಲ ಎಂದರೇನು?

ವಾಹನ ಸಾಲ ಎನ್ನುವುದು ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್ ಇಲ್ಲವೇ ಖಾಸಗಿ ಹಣಕಾಸು ಸಂಸ್ಥೆಗಳು ನಿರ್ದಿಷ್ಟ ವ್ಯಕ್ತಿಗೆ ಅವರು ಖರೀದಿ ಮಾಡುವ ವಾಹನದ ಮೌಲ್ಯಕ್ಕೆ ನೀಡುವ ಹಣಕಾಸು ಸಹಾಯವಾಗಿದೆ. ಹಣಕಾಸು ಸಹಾಯ ಪಡೆದ ವ್ಯಕ್ತಿಯು ಅದನ್ನು ಮಾಸಿಕ ಕಂತುಗಳಲ್ಲಿ ನಿರ್ದಿಷ್ಟ ಬಡ್ಡಿಯೊಂದಿಗೆ ಹಿಂತಿರುಗಿಸಬೇಕಾಗುತ್ತದೆ. ವಾಹನ ಸಾಲ ಮಾತ್ರವಲ್ಲ ಗೃಹ ಸಾಲ, ಚಿನ್ನಾಭರಣ ಸಾಲಗಳನ್ನು ಸಹ ಇದೇ ರೀತಿ ನೀಡಲಾಗುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಯಾವೆಲ್ಲಾ ವಾಹನಗಳಿಗೆ ಸಾಲ ನೀಡಲಾಗುತ್ತದೆ?

ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳು ಇಂದು ಎಲ್ಲಾ ಮಾದರಿಯ ವಾಹನಗಳಿಗೆ ಸಾಲ ಸೌಲಭ್ಯ ಒದಗಿಸಲಿದ್ದು, ನೀವು ಸ್ಕೂಟರ್‌, ಬೈಕ್‌, ಕಾರು, ವಾಣಿಜ್ಯ ವಾಹನ, ಬಸ್‌, ಟ್ರಕ್‌ಗಳು ಮತ್ತು ಭಾರೀ ಗಾತ್ರ ವಾಣಿಜ್ಯ ವಾಹನಗಳಿಗೂ ಸಾಲ ಪಡೆಯಬಹುದಾಗಿದೆ. ವಾಹನ ಸಾಲದಲ್ಲಿ ಪ್ರತಿಯೊಂದು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ವಿಭಿನ್ನವಾದ ನೀತಿಯನ್ನು ಹೊಂದಿದ್ದು, ಅದರಂತೆ ಯಾವ ವಾಹನಗಳಿಗೆ ಎಷ್ಟು ಸಾಲ ನೀಡಬಹುದು ಎಂಬುವುದನ್ನು ನಿರ್ಧರಿಸುತ್ತವೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ವಾಹನ ಸಾಲ ಪಡೆಯಲು ಅರ್ಹತೆ ಏನು?

ಯಾವುದೇ ಒಬ್ಬ ವ್ಯಕ್ತಿ ವಾಹನ ಸಾಲ ತೆಗೆದುಕೊಳ್ಳಲು ಬಯಸಿದರೆ ಮೊದಲಿಗೆ ಅವರು ಈ ದೇಶದ ಪ್ರಜೆಯಾಗಿರಬೇಕು. 18 ರಿಂದ 75 ವರ್ಷಗಳ ನಡುವೆ ಇರಬೇಕಲ್ಲದೆ ಮಾಸಿಕ ಆದಾಯದ ಜೊತೆಗೆ ಒಂದು ಶಾಶ್ವತ ವಿಳಾಸವನ್ನು ಹೊಂದಿರಬೇಕಿದ್ದು, ನಿರ್ದಿಷ್ಟ ವಿಳಾಸದಲ್ಲಿ 1 ವರ್ಷಕ್ಕಿಂತಲೂ ಹೆಚ್ಚು ಕಾಲ ವಾಸವಾಗಿರಬೇಕು. ತದನಂತವಷ್ಟೇ ಸಾಲ ನೀಡುವ ಕಂಪನಿಯು ನಿರ್ದಿಷ್ಟ ವ್ಯಕ್ತಿಗೆ ವಾಹನ ಸಾಲವನ್ನು ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ವಾಹನ ಸಾಲ ಅಗತ್ಯವಿರುವ ದಾಖಲೆಗಳೇನು?

ವಾಹನ ಸಾಲ ಪಡೆಯಲು ಬಯಸುವ ವ್ಯಕ್ತಿಯು ಅಗತ್ಯ ಗುರುತಿನ ಚೀಟಿ, ವಯಸ್ಸಿನ ಗುರುತಿನ ಚೀಟಿ, ವಸತಿ ವಿಳಾಸದ ಮಾಹಿತಿ ಪತ್ರ, ಆದಾಯದ ಪುರಾವೆಗಳು, ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಖಾತೆ ವಿವರಗಳು ಮತ್ತು ಚೆಕ್ ಲೀಫ್‌ಗಳನ್ನು ನೀಡಬೇಕಾಗುತ್ತದೆ. ಇದರ ಹೊರತಾಗಿ ಕೆಲವು ಹಣಕಾಸು ಕಂಪನಿಗಳು ಇನ್ನು ಹೆಚ್ಚಿನ ಮಾಹಿತಿ ಬಯಸಬಹುದಾಗಿದ್ದು, ಅವು ವ್ಯಕ್ತಿಯ ಆಧಾಯವನ್ನು ಆಧರಿಸಿರುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಎಷ್ಟು ಪ್ರಮಾಣದಲ್ಲಿ ವಾಹನ ಸಾಲ ಸೌಲಭ್ಯ ಸಿಗುತ್ತದೆ?

ವಾಹನ ಸಾಲ ನೀಡುವಾಗ ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳು ಗ್ರಾಹಕರನ ಅರ್ಹತೆಯ ಆಧಾರದ ಮೇಲೆ ಎಷ್ಟು ಪ್ರಮಾಣದಲ್ಲಿ ಸಾಲವನ್ನು ನೀಡಬೇಕೆಂದು ನಿರ್ಧರಿಸುತ್ತದೆ. ಹಾಗೆಯೇ ನಿರ್ದಿಷ್ಟ ವ್ಯಕ್ತಿಯ ಆದಾಯ, ಅವರು ಈಗಾಗಲೇ ಬೇರೆ ಕಾರಣವಾಗಳಿಗೆ ತೆಗೆದುಕೊಂಡಿರುವ ಸಾಲದ ವಿವರಗಳು ಮತ್ತು ಅವರು ಹಿಂದೆ ಸಾಲವನ್ನು ಹೇಗೆ ಮರು ಪಾವತಿಸಿದ್ದಾರೆ ಎಂಬುದರ ಆಧಾರದ ಮೇಲೆ ಎಷ್ಟು ಪ್ರಮಾಣದ ಸಾಲ ನೀಡಬೇಕು ಎಂಬುವುದನ್ನು ನಿರ್ಧರಿಸಲಾಗುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಸಾಮಾನ್ಯವಾಗಿ ಬಹುತೇಕ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಹೊಸ ವಾಹನದ ಒಟ್ಟು ಮೌಲ್ಯದ ಮೇಲೆ ಶೇ. 80 ರಷ್ಟು ಸಾಲ ಪ್ರಮಾಣ ಒದಗಿಸಲಿದ್ದರೆ ಕೆಲವು ಬ್ಯಾಂಕ್‌ಗಳು ಗ್ರಾಹಕರನ್ನು ಆಧರಿಸಿ ಶೇ. 100 ರಷ್ಟು ಹಣಕಾಸು ಸೌಲಭ್ಯವನ್ನು ಒದಗಿಸುತ್ತವೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಸಾಲದ ಖರೀದಿ ಪ್ರಕ್ರಿಯೆಯು ಹೇಗೆ ನಡೆಯುತ್ತದೆ?

ವಾಹನ ಖರೀದಿದಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ನಿರ್ದಿಷ್ಟ ಕಂಪನಿಯು ತನ್ನ ಸಂಭಾವ್ಯ ಗ್ರಾಹಕನ ಸಿಬಿಲ್ ಸ್ಕೋರ್ (CIBIL) ಪರಿಶೀಲನೆ ಮಾಡುತ್ತದೆ. ಅದರಲ್ಲಿ ಅವರು ಹಿಂದಿನ ಸಾಲದ ವಿವರಗಳನ್ನು ತಿಳಿದುಕೊಳ್ಳುವದರ ಜೊತೆಗೆ ಅವರ ಆದಾಯವನ್ನು ಲೆಕ್ಕಹಾಕುತ್ತದೆ. ತದನಂತರ ನಿರ್ದಿಷ್ಟ ವ್ಯಕ್ತಿಯು ಎಷ್ಟು ಮಾಸಿಕ ಕಂತುಗಳನ್ನು ಪಾವತಿಸಬಹುದು ಮತ್ತು ನಿಗದಿತ ಮಾಸಿಕ ಕಂತನ್ನು ತಲುಪಲು ಎಷ್ಟು ಸಾಲವನ್ನು ಪಡೆದುಕೊಳ್ಳಬಹುದು ಎಂಬುವುದನ್ನು ಲೆಕ್ಕಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಹಕನ ಬಗ್ಗೆ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಬ್ಯಾಂಕ್‌ಗಳು ಸಾಲದ ಅರ್ಜಿಯನ್ನು ರದ್ದುಗೊಳಿಸಬಹುದು.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಸಾಲ ಪಡೆಯುವ ಸಂದರ್ಭದಲ್ಲಿ ಹೇಗೆ ನಡೆಯುತ್ತದೆ ವಂಚನೆ?

ವಾಹನ ಸಾಲ ಒದಗಿಸುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾಯಿಸಲ್ಪಟ್ಟಿರಬೇಕು ಮತ್ತು ಸೆಬಿ ನಿಯಂತ್ರಣದಲ್ಲಿರಬೇಕು. ಹೀಗಿರುವಾಗ ಸಾಲ ನೀಡಲು ಕೆಲವು ಕಾನೂನುಗಳು ಮತ್ತು ನಿಬಂಧನೆಗಳ ಪಾಲನೆ ಅಗತ್ಯವಿರುತ್ತದೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಆದರೆ ಕೆಲವು ಖಾಸಗಿ ಕಂಪನಿಗಳು ಔಪಚಾರಿಕ ನೋಂದಣಿ ಇಲ್ಲದೆ ಗ್ರಾಹಕರಿಗೆ ಯಾವುದೇ ನಿಯಂತ್ರಣವಿಲ್ಲದೆ ಸಾಲ ಸೌಲಭ್ಯಗಳನ್ನು ಒದಗಿಸುತ್ತವೆ. ಈ ರೀತಿಯಾಗಿ ಸಾಲ ನೀಡುವ ಕಂಪನಿಗಳು ಹೆಚ್ಚಿನ ಬಡ್ಡಿಯನ್ನು ವಿಧಿಸುವುದರ ಜೊತೆಗೆ ಹಲವಾರು ಕಾನೂನು ಬಾಹಿರ ನಿಬಂಧನೆ ವಿಧಿಸುತ್ತವೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಒಂದು ವೇಳೆ ನೀವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವಲ್ಲಿ ವಿಫಲರಾದರೆ ತಕ್ಷಣಕ್ಕೆ ಯಾವುದೇ ಮುನ್ಸೂಚಣೆ ನೀಡದೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತವೆ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ಆದ್ದರಿಂದ ನೀವು ಸಾಲವನ್ನು ತೆಗೆದುಕೊಳ್ಳುವಾಗ ಪ್ರಮುಖ ಹಣಕಾಸು ಕಂಪನಿಗಳು ನಿಮ್ಮ ಸಾಲ ಮನವಿಯನ್ನು ನಿರಾಕರಿಸಿದ ತಕ್ಷಣ ನೋಂದಾಯಿಸದ ಕೆಲವು ಖಾಸಗಿ ಕಂಪನಿಯು ನಿಮಗೆ ದೊಡ್ಡ ಮೊತ್ತವನ್ನು ನೀಡುವುದಾಗಿ ಹೇಳಬಹುದು. ಜೊತೆಗೆ ನಿರ್ದಿಷ್ಟ ದಾಖಲೆಗಳಿಲ್ಲದೆಯೂ ಹೆಚ್ಚಿನ ಸಾಲ ನೀಡುವುದಾಗಿಯೂ ಹೇಳಬಹುದು. ಆದರೆ ಅದರಿಂದ ಅಪಾಯ ಹೆಚ್ಚು ಎನ್ನುವುದನ್ನು ಮರೆಯಬೇಡಿ.

ಹೊಸ ವಾಹನಗಳ ಖರೀದಿಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಾ?

ವಾಹನ ಖರೀದಿ ಸಂದರ್ಭದಲ್ಲಿ ನಿಮ್ಮ ವಾಹನ ಸಾಲವನ್ನು ಕಡಿಮೆ ಮೊತ್ತವಾದ ಸರಿ ಅಧಿಕೃತ ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್‌ಗಳಲ್ಲಿಯೇ ಪಡೆದುಕೊಳ್ಳುವ ಸೂಕ್ತ. ಇದರಿಂದ ವಂಚಕ ಕಂಪನಿಗಳಿಂದ ಆಗುವ ಮೋಸಗಳಿಂದ ರಕ್ಷಣೆ ಮಾಡಿಕೊಳ್ಳಬಹುದು. ಜೊತೆಗೆ ಜೊತೆಗೆ ಕೆಲವು ಅನಧಿಕೃತ ಹಣಕಾಸು ಸಂಸ್ಥೆಗಳು ಹೊಸ ವಾಹನಗಳಿಗಿಂತ ಹಳೆಯ ವಾಹನಗಳ ಮೇಲೆ ಸಾಲ ನೀಡುವಲ್ಲಿ ಹೆಚ್ಚು ಸಕ್ರಿಯವಾಗುತ್ತಿದ್ದು, ಇದರಿಂದ ಸಾಕಷ್ಟು ಗ್ರಾಹಕರು ಹೆಚ್ಚಿನ ಮಟ್ಟದ ಬಡ್ಡಿಯೊಂದಿಗೆ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಪ್ರಕರಣಗಳು ಸಾಕಷ್ಟಿವೆ.

Most Read Articles

Kannada
English summary
This things to keep in mind before taking a vehicle loans details
Story first published: Friday, September 23, 2022, 22:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X