ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

By Manoj Bk

ಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ರಸ್ತೆಯಲ್ಲಿ ಚಾಲನೆ ಮಾಡುವ ಅನುಭವವು ಬಹಳಷ್ಟು ವಿನೋದಮಯವಾಗಿರುತ್ತದೆ. ಚಾಲನೆ ಮಾಡುವಾಗ ತೋರುವ ಸಣ್ಣದೊಂದು ಅಜಾಗರೂಕತೆಯು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಹಲವು ಬಾರಿ ವಾಹನ ಚಲಾಯಿಸುವಾಗ ಉದ್ದೇಶಪೂರ್ವಕವಾಗಿ ತಪ್ಪುಗಳು ನಡೆಯುತ್ತವೆ. ಕೆಲವೊಮ್ಮೆ ಇತರೆ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಅಪಘಾತಗಳು ಸಂಭವಿಸುತ್ತವೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ವಾಹನ ಚಲಾಯಿಸುವಾಗ ತಪ್ಪಾಗಿ ಓವರ್ ಟೇಕ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಸುರಕ್ಷಿತ ರೀತಿಯಲ್ಲಿ ಇತರ ವಾಹನಗಳನ್ನು ಹಿಂದಿಕ್ಕುವ ವಿಧಾನಗಳನ್ನು ತಿಳಿದಿರುವುದು ಮುಖ್ಯ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ಇತರ ವಾಹನಗಳನ್ನು ಎಚ್ಚರಿಕೆಯಿಂದ ಹೇಗೆ ಹಿಂದಿಕ್ಕಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

1. ರೇರ್ ವೀವ್ ಮಿರರ್ ಬಳಸಿ

ಇತ್ತೀಚಿನ ದಿನಗಳಲ್ಲಿ ಬೈಕ್‌ಗಳಿಂದ ರೇರ್ ವೀವ್ ಮಿರರ್ ತೆಗೆಯುವುದು ಫ್ಯಾಷನ್ ಆಗಿದೆ. ರೇರ್ ವೀವ್ ಮಿರರ್ ಬಳಸದಿರುವುದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಮೋಟಾರು ವಾಹನ ಕಾಯ್ದೆಯಡಿ ವಾಹನದಲ್ಲಿ ರೇರ್ ವೀವ್ ಮಿರರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ವಾಹನಗಳಿಂದ ರೇರ್ ವೀವ್ ಮಿರರ್ ತೆಗೆದು ಹಾಕುವುದು ತುಂಬಾ ಅಪಾಯಕಾರಿ. ವಾಹನಗಳಲ್ಲಿ ರೇರ್ ವೀವ್ ಮಿರರ್ ಇಲ್ಲದಿದ್ದರೆ ರಸ್ತೆಯಲ್ಲಿ ಹಿಂಬದಿಯಿಂದ ಬರುವ ವಾಹನಗಳು ಕಾಣುವುದಿಲ್ಲ. ಈ ವೇಳೆ ಓವರ್‌ಟೇಕ್ ಮಾಡುವಾಗ ಹಿಂದಿನಿಂದ ಬರುವ ವಾಹನಗಳಿಗೆ ನಿಮ್ಮ ವಾಹನವು ಡಿಕ್ಕಿ ಹೊಡೆಯುವ ಸಾಧ್ಯತೆಗಳಿರುತ್ತವೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

2. ಟರ್ನ್ ಸಿಗ್ನಲ್‌ಗಳನ್ನು ಬಳಸಿ

ಟರ್ನ್ ಮಾಡುವಾಗ ಟರ್ನ್ ಸಿಗ್ನಲ್ ಬಳಸದೇ ಇರುವುದನ್ನು ಬಹುತೇಕ ಚಾಲಕರು ರೂಢಿಸಿಕೊಂಡಿದ್ದಾರೆ. ಟರ್ನ್ ಸಿಗ್ನಲ್‌ಗಳು ನಿಮ್ಮ ವಾಹನಕ್ಕೆ ಸುರಕ್ಷತೆ ನೀಡುತ್ತವೆ. ಟರ್ನ್ ಸಿಗ್ನಲ್‌ಗಳನ್ನು ಬಳಸುವುದರಿಂದ ನಿಮ್ಮ ವಾಹನದ ಹಿಂದೆ ಮುಂದೆ ಬರುವ ವಾಹನ ಸವಾರರಿಗೆ ನೀವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೀರಿ ಎಂಬುದನ್ನು ತಿಳಿಸುತ್ತವೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ವಾಹನವನ್ನು ಹಿಂದಿಕ್ಕುವ ಸಂದಭದಲ್ಲಿ ಟರ್ನ್ ಸಿಗ್ನಲ್ ಅನ್ನು ಬಳಸುವುದರಿಂದ ನಿಮ್ಮ ಹಿಂದಿನಿಂದ ಬರುವ ವಾಹನಗಳಿಗೆ, ಲೇನ್ ಬದಲಾಯಿಸಬೇಕೇ ಅಥವಾ ಎದುರಿನ ವಾಹನಗಳನ್ನು ಓವರ್ ಟೇಕ್ ಮಾಡಬೇಕೇ ಎಂದು ತಿಳಿಯುತ್ತದೆ. ಹೆದ್ದಾರಿ ಅಥವಾ ನಗರದ ದಟ್ಟಣೆಯ ರಸ್ತೆಗಳಲ್ಲಿ ವಾಹನಗಳಿಗೆ ನಿರ್ದೇಶನ ನೀಡಲು ಟರ್ನ್ ಟರ್ನ್ ಸಿಗ್ನಲ್‌ಗಳ ಬಳಕೆ ತುಂಬಾ ಸಹಾಯಕವಾಗುತ್ತದೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

3. ಅಂಕು ಡೊಂಕಾದ ರಸ್ತೆಗಳಲ್ಲಿ ಇರಲಿ ಮುನ್ನೆಚ್ಚರಿಕೆ

ಅಂಕು ಡೊಂಕಾದ ಅಥವಾ ಚೂಪಾದ ತಿರುವುಗಳಲ್ಲಿ ಇತರ ವಾಹನಗಳನ್ನು ಹಿಂದಿಕ್ಕುವುದು ತುಂಬಾ ಅಪಾಯಕಾರಿ. ಇಂತಹ ರಸ್ತೆಗಳಲ್ಲಿ ಎದುರಿನಿಂದ ಬರುವ ವಾಹನಗಳಾಗಲಿ, ಹಿಂದಿನಿಂದ ಬರುವ ವಾಹನಗಳಾಗಲಿ ಕಾಣುವುದಿಲ್ಲ. ಈ ಸ್ಥಳಗಳಲ್ಲಿ ಓವರ್ ಟೇಕ್ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ಯಾವುದೇ ಕಾರಣಕ್ಕೆ ರಸ್ತೆಯ ತಿರುವುಗಳಲ್ಲಿ ಇತರ ವಾಹನಗಳನ್ನು ಓವರ್ ಟೇಕ್ ಮಾಡುವ ತಪ್ಪು ಮಾಡದಿರಿ. ತಿರುವು ಮುಗಿದ ನಂತರ ಎದುರಿನ ವಾಹನಕ್ಕೆ ಸಿಗ್ನಲ್ ಕೊಟ್ಟು ಓವರ್ ಟೇಕ್ ಮಾಡಿದರೆ ಒಳ್ಳೆಯದು.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

4. ಒಂದೇ ಸಮಯದಲ್ಲಿ ಹಲವು ವಾಹನಗಳನ್ನು ಓವರ್‌ಟೇಕ್ ಮಾಡದಿರಿ

ಕೆಲವು ವಾಹನ ಸವಾರರು ರಸ್ತೆಯಲ್ಲಿರುವ ಇತರ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಒಂದೇ ಬಾರಿ ಹಲವು ವಾಹನಗಳನ್ನು ಹಿಂದಿಕ್ಕುವ ತಪ್ಪನ್ನು ಮಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ಓವರ್ ಟೇಕ್ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ರಸ್ತೆಯ ಪ್ರತಿಯೊಂದು ವಾಹನವೂ ವಿಭಿನ್ನ ವೇಗದಲ್ಲಿ ಚಲಿಸುವುದರಿಂದ ಇತರ ವಾಹನಗಳ ಸರಿಯಾದ ವೇಗವನ್ನು ಅರ್ಥಮಾಡಿಕೊಳ್ಳದೆ ಓವರ್‌ಟೇಕ್ ಮಾಡುವುದು ಅಪಾಯಕಾರಿ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ವೇಗವಾಗಿ ಓವರ್‌ಟೇಕ್ ಮಾಡುವಾಗ ನಿಧಾನವಾಗಿ ಚಲಿಸುವುದರಿಂದ ಇತರ ವಾಹನಗಳಿಗೆ ಡಿಕ್ಕಿ ಹೊಡೆಯಬಹುದು. ಆದ್ದರಿಂದ ಒಂದು ಬಾರಿಗೆ ಒಂದು ವಾಹನವನ್ನು ಮಾತ್ರ ಹಿಂದಿಕ್ಕಿ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

5. ಓವರ್ ಟೇಕ್ ಮಾಡುವ ವಾಹನಗಳನ್ನು ಓವರ್ ಟೇಕ್ ಮಾಡದಿರಿ

ರಸ್ತೆಯಲ್ಲಿ ಸಾಗುವಾಗ ಬೇರೊಂದು ವಾಹನವು ನಿಮ್ಮ ವಾಹನವನ್ನು ಓವರ್ ಟೇಕ್ ಮಾಡಿದರೆ, ಹಟಕ್ಕೆ ಬಿದ್ದಂತೆ ಆ ವಾಹನವನ್ನು ಓವರ್ ಟೇಕ್ ಮಾಡದಿರಿ. ಈಗಾಗಲೇ ಇನ್ನೊಂದು ವಾಹನವನ್ನು ಹಿಂದಿಕ್ಕುತ್ತಿರುವ ವಾಹನವನ್ನು ಹಿಂದಿಕ್ಕಲು ರಸ್ತೆಯಲ್ಲಿ ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ. ಒಂದು ವೇಳೆ ಆ ರಸ್ತೆ ಚಿಕ್ಕದಾಗಿದ್ದಾರೆ, ಎದುರುಗಡೆಯಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯಬಹುದು ಅಥವಾ ನೀವು ವಾಹನದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ಬಿಡಿಭಾಗಗಳು ವಾಹನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಂದು ಬಿಡಿಭಾಗಗಳು ಇಲ್ಲದಿದ್ದರೆ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಾಗುವುದೇ ಇಲ್ಲ. ಈ ಕಾರಣಕ್ಕೆ ಬಿಡಿಭಾಗಗಳನ್ನು ಖರೀದಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ ನಕಲಿ ಬಿಡಿ ಭಾಗಗಳನ್ನು ಖರೀದಿಸಬೇಕಾಗುತ್ತದೆ. ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ವಾಹನ ತಯಾರಕ ಕಂಪನಿಗಳ ಅನುಮತಿಯಿಲ್ಲದೆ ತಯಾರಿಸಲಾಗುತ್ತದೆ.

ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಈ ವಿಧಾನಗಳನ್ನು ಅನುಸರಿಸಿ

ಈಗಿನ ಸನ್ನಿವೇಶದಲ್ಲಿ ಅಸಲಿ ಹಾಗೂ ನಕಲಿ ಬಿಡಿ ಭಾಗಗಳ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟ. ಅಷ್ಟರ ಮಟ್ಟಿಗೆ ನಿಜವಾದ ಬಿಡಿ ಭಾಗಗಳು, ನಕಲಿ ಬಿಡಿ ಭಾಗಗಳು ಒಂದೇ ರೀತಿ ಇರುತ್ತವೆ. ನಕಲಿ ಬಿಡಿಭಾಗಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ಕಾರಣಕ್ಕೆ ಬಹುತೇಕ ಜನರು ಅವುಗಳನ್ನು ಖರೀದಿಸುತ್ತಾರೆ. ಆದರೆ ನಕಲಿ ಬಿಡಿಭಾಗಗಳು ಅಸಲಿ ಬಿಡಿಭಾಗಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನಕಲಿ ಬಿಡಿಭಾಗಗಳು ಕಾರುಗಳಿಗೆ ಹಾಗೂ ಅವುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tips to overtake other vehicles while driving details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X