ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಕಾರುಗಳ ಮರು ಮಾರಾಟದ ಸಂದರ್ಭದಲ್ಲಿ ಪ್ರತಿ ಕಾರು ಮಾಲೀಕರು ಕೂಡಾ ಉತ್ತಮ ರೀ ಸೆಲ್ ಮೌಲ್ಯವನ್ನು ನೀರಿಕ್ಷೆ ಮಾಡದೇ ಇರಲಾರರು. ಯಾಕೇಂದ್ರೆ ದುಬಾರಿ ಮೊತ್ತ ಪಾವತಿಸಿ ಖರೀದಿಸಿದ ಕಾರುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲು ಯಾರು ಕೂಡಾ ಒಪ್ಪುವುದಿಲ್ಲ. ಆದ್ರೆ ವಾಸ್ತಂಶಕ್ಕೆ ಬಂದಲ್ಲಿ ಕಾರಿನ ಸ್ಥಿತಿಗತಿಯು ಕೂಡಾ ಕಾರಿನ ರೀ ಸೇಲ್ ಮೌಲ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಹೀಗಾಗಿ ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸಲು ಕಾರು ಮಾಲೀಕರು ಸಹ ಕಾರಿನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಕೂಡಾ ಅಷ್ಟೇ ಮುಖ್ಯ. ಇದೇ ಕಾರಣಕ್ಕೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮುಖ್ಯ ಸಲಹೆಗಳನ್ನು ನೀಡುತ್ತಿದ್ದು, ಇವುಗಳಲ್ಲಿ ತಪ್ಪದೇ ಪಾಲಿಸಿದ್ದಲ್ಲಿ ನೀವು ನೀರಿಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮೌಲ್ಯ ದೊರೆಯಲಿದೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಇದಲ್ಲದೇ ಇತ್ತೀಚೆಗೆ ಹೊಸ ಕಾರು ಖರೀದಿಸುವುದಕ್ಕಿಂತ ಅದರ ರಿಪೇರಿ ತುಂಬಾ ದುಬಾರಿಯಾಗುತ್ತಿದೆ. ಕಾರನ್ನು ಬೇಕಾಬಿಟ್ಟಿಯಾಗಿ ಚಲಾಯಿಸಿ, ಸರಿಯಾಗಿ ಕೇರ್ ತೆಗೆದುಕೊಳ್ಳದಿದ್ದರೆ ನಿತ್ಯ ಕಿಸೆಗೆ ಕತ್ತರಿ ಬೀಳೋದು ಗ್ಯಾರಂಟಿ. ಹೀಗಾಗಿ ಕಾರಿನ ಕಾರಿನ ಮೌಲ್ಯ ಹೆಚ್ಚಿಸಲು ಇಲ್ಲೊಂದಿಷ್ಟು ಸಲಹೆಗಳಿವೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಿ:

ಕಾರು ಉತ್ಪಾದಕರು ಸೂಚಿಸಿದ ಸಮಯಕ್ಕೆ ತಕ್ಕಂತೆ ಸರ್ವಿಸ್ ಮಾಡಿಸಿ. ಅಂದ್ರೆ ಕೂಲಿಂಗ್ ಸಿಸ್ಟಮ್, ಸಸ್ಪೆನ್ಷನ್ ಇತ್ಯಾದಿ ಬಿಡಿಭಾಗಕ್ಕೆ ಹಾನಿಯಾದರೆ ರಿಪೇರಿ ವೆಚ್ಚ ದುಬಾರಿಯಾಗಬಹುದು. ಕಂಪನಿ ತಿಳಿಸಿದಂತೆ ಸೂಕ್ತವಾಗಿ ಸಮರ್ಪಕವಾಗಿ ಕಾರನ್ನು ನಿರ್ವಹಣೆ ಮಾಡಿದರೆ ಕಾರಿನ ರೀ ಸೇಲ್ ಮೌಲ್ಯಕ್ಕೆ ಧಕ್ಕೆಯಾಗದು.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಅನವಶ್ಯಕ ಕಾರು ಚಾಲನೆ ಬೇಡ:

ಎಂಜಿನ್ ಸ್ಟಾರ್ಟ್ ಮಾಡಿದ್ಮೇಲೆ ಕೊಂಚ ದೂರವಾದರೂ ಪ್ರಯಾಣಿಸಲೇಬೇಕು. ಹೀಗಾಗಿ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲದಕ್ಕೂ ಕಾರು ಚಾಲನೆಯನ್ನೇ ಅವಲಂಬಿಸಬೇಡಿ. ಇದರಿಂದ ಟ್ರಾಫಿಕ್ ಕಿರಿಕಿರಿ ತಪ್ಪಿಸಬಹುದಲ್ಲದೇ ನಿಮ್ಮ ಆರೋಗ್ಯ ದೃಷ್ಠಿಯಿಂದಲೂ ಒಳ್ಳೆಯದು.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಫ್ಲೂಯಿಡ್ಸ್ ಚೆಕ್ ಮಾಡಿ:

ಆಂಟಿ ಪ್ರೀಜ್, ಆಯಿಲ್ ಟ್ರಾನ್ಸ್ ಮಿಷನ್, ಪವರ್ ಸ್ಟಿಯರಿಂಗ್ ಪ್ಲೂಯಿಡ್ ಮತ್ತು ಬ್ರೇಕ್ ಫ್ಲೂಯಿಡ್ ಇತ್ಯಾದಿಗಳನ್ನು ನಿಯಮಿತವಾಗಿ ಚೆಕ್ ಮಾಡುತ್ತಿರಿ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಏರ್ ಫಿಲ್ಟರ್ ಬದಲಾವಣೆ:

ಏರ್ ಫಿಲ್ಟರ್ ಬದಲಾಯಿಸುವುದು ಕಷ್ಟವಲ್ಲ. ಸುಮಾರು 12 ಸಾವಿರ ಮೈಲು ಪ್ರಯಾಣಕ್ಕೊಮ್ಮೆಯಾದರೂ ಏರ್ ಫಿಲ್ಟರ್ ಬದಲಾಯಿಸಬೇಕು. ನಿಮ್ಮ ಕಾರಿಗೆ ಸೂಕ್ತವಾದ ಏರ್ ಫಿಲ್ಟರ್ ಖರೀದಿಸಿ ನೀವೇ ಅಳವಡಿಸಬಹುದು. ಕೊಳಕು ತುಂಬಿದ ಏರ್ ಫಿಲ್ಟರಿನಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಕಾರಿನ ಘಟಕಗಳಿಗೂ ಕಾಲಮಿತಿ ಇರುತ್ತೇ:

ತಮ್ಮ ಕನಸಿನ ಕಾರನ್ನು ತಮ್ಮದಾಗಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಹಾಗಂತ ನೀವು ಕಾರೊಂದನ್ನು ಖರೀದಿಸಿದ ಮಾತ್ರಕ್ಕೆ ನಿಮ್ಮ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಇದಕ್ಕೆ ಕಾರಣ, ಕಾರಿನಲ್ಲಿ ಅಡಕವಾಗಿರುವ ಬಿಡಿಭಾಗಗಳಿಗೂ ಒಂದು ಕಾಲಮಿತಿ ಅವಧಿ ನಿಗದಿಯಾಗಿರುತ್ತದೆ. ಇದನ್ನು ಕೂಲಂಕುಷವಾಗಿ ಪರಿಶೋಧಿಸಿ ಸೂಕ್ತ ಸಮಯಕ್ಕೆ ಬದಲಾವಣೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿರುತ್ತದೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಎಂಜಿನ್ ಆಯಿಲ್:

ಸಾಮಾನ್ಯವಾಗಿ ಪ್ರತಿ 12ರಿಂದ 18 ತಿಂಗಳಲ್ಲಿ ಅಥವಾ 10,000 ಕೀ.ಮೀ.ಗಳಲ್ಲಿ ಎಂಜಿನ್ ಒಯಿಲ್ ಬದಲಾಯಿಸಬೇಕಾಗುತ್ತದೆ. ಹಳೆಯ ಎಂಜಿನ್ ಆಯಿಲ್ ಬಳಕೆ ಮಾಡಿದ್ದಲ್ಲಿ ಲ್ಯೂಬ್ರಿಕಂಟ್ (ಚಾಲನೆಯನ್ನು ಸುಲಭಗೊಳಿಸುವ ಎಣ್ಣೆ) ವ್ಯಾಲೂ ಕಡಿಮೆಯಾಗಲಿದ್ದು, ಎಂಜಿನ್‌ಗೆ ಮಾರಕವಾಗಲಿದೆ.

MOST READ: ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ.!

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಕಾರಿನಲ್ಲಿ ಈ ಆಕ್ಸೆರಿಸ್‌ಗಳು ಬೇಡ:

ಹೌದು, ಕಾರು ಮಾಲೀಕರು ಈ ವಿಚಾರವನ್ನು ತಪ್ಪದೇ ಓದಬೇಕು. ಕಾರಿನ ಅಂದವನ್ನು ಹೆಚ್ಚಿಸಲು ಹೆಚ್ಚುವರಿಯಾಗಿ ಹಣ ಸುರಿದು ಮಾಡಿಫೈ ಮಾಡಿಸುವಾಗ ಸ್ಪಲ್ಪ ಗಮನಹರಿಸಿ. ಒಂದು ವೇಳೆ ಹೆಚ್ಚಿನ ಮಟ್ಟದಲ್ಲಿ ಮಾಡಿಫೈ ಮಾಡಿಸಿದ್ದಲ್ಲಿ ಕಾರು ಅಂದವು ಹೆಚ್ಚುತ್ತದೇ ಹೊರತು, ಕಾರಿನ ರೀ ಸೇಲ್ ಮೌಲ್ಯ ಹೆಚ್ಚಿಸಲಾರದು.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಇದಕ್ಕೆ ಕಾರಣ ಇಂತಹ ಬಳಸಿದ ಕಾರಗಳನ್ನು ಖರೀದಿಸುವ ಬಹುತೇಕ ಗ್ರಾಹಕರು ಖರೀದಿಸುವ ಕಾರಿನಿಂದ ಹೆಚ್ಚಿನ ಮೈಲೇಜ್ ನೀರಿಕ್ಷೆ ಹೊಂದಿರುತ್ತಾರೆ. ಆಗ ಮಾಡಿಫೈ ಮತ್ತು ದುಬಾರಿ ಆಕ್ಸೆಸರಿಗಳ ಅಳವಡಿಕೆಯು ಲೆಕ್ಕಕ್ಕೆ ಬರುವುದಿಲ್ಲ. ಅಲ್ಲದೇ ಮಾಡಿಫೈ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಕಡಿಮೆ ಮೈಲೇಜ್ ನೀಡುತ್ತವೆ ಎನ್ನುವುದೇ ಮುಖ್ಯ ಕಾರಣ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ನಿಯಮಿತವಾಗಿ ಕಾರನ್ನು ವಾಷ್ ಮಾಡಿ:

ರಸ್ತೆಯಲ್ಲಿರುವ ಉಪ್ಪಿನಂಶ ಇತ್ಯಾದಿಗಳು ಕಾರಿನ ಆಯಸ್ಸು ತಗ್ಗಿಸುತ್ತದೆ. ಕಾರಿನ ಪ್ರಮುಖ ಬಿಡಿಭಾಗಗಳಿಗೆ ತುಕ್ಕು ಹಿಡಿಯುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿ ಕಾರನ್ನು ನಿಯಮಿತವಾಗಿ ತೊಳೆಯಲು ಮರೆಯದಿರಿ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ವಾರಂಟಿ ಪ್ಯಾಕ್‌ಗಳನ್ನು ಮುಂದುವರಿಸಿ:

ನೀವು ಹೊಸ ಕಾರು ಖರೀದಿಸಿದ ನಂತರ ಕಾರುಗಳಿಗೆ ಇಂತಿಷ್ಟು ವರ್ಷಗಳ ಸರ್ವಿಸ್ ಪ್ಯಾಕ್ ಅಥವಾ ವಾರಂಟಿ ಪ್ಯಾಕ್‌ಳನ್ನು ನೀಡಲಾಗುತ್ತೆ. ಇದನ್ನು ನೀವು ಹೆಚ್ಚುವರಿ ಮೊತ್ತ ನೀಡಿ ಸರ್ವಿಸ್ ಪ್ಯಾಕ್ ಅವಧಿಯನ್ನು ಹೆಚ್ಚಿಸಬಹುದು. ಇದರಿಂದ ಕಾರಿನ ಬಿಡಿಭಾಗಗಳಿಗೆ ಹೆಚ್ಚಿನ ಕಾಳಜಿ ಸಿಗಲಿದೆ.

MOST READ: ಮಾರುಕಟ್ಟೆಗೆ ಲಗ್ಗೆಯಿಟ್ಟ ಅತಿ ಹೆಚ್ಚು ಮೈಲೇಜ್ ನೀಡುವ ಹೊಸ ಎರ್ಟಿಗಾ..!

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಕಾರಿನೊಳಗಿನ ಸ್ವಚ್ಛತೆಗೂ ಆದ್ಯತೆ ನೀಡಿ:

ಕಾರು ಚಾಲನೆ ಎಂಬುದು ಉತ್ತಮ ಕೌಶಲ್ಯವಾಗಿದ್ದು, ನಿಮ್ಮ ದೈನಿಂದಿನ ಪಯಣಗಳನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಆದರೆ ಡ್ರೈವಿಂಗ್ ಜತೆ ನಿಮ್ಮ ಪಯಣವನ್ನು ಮತ್ತಷ್ಟು ಚೆಂದವಾಗಿಸಲು ಇನ್ನೊಂದು ಮಹತ್ವಪೂರ್ಣ ಅಂಶವಿದೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಅದೇನೆಂದರೆ ನಿಮ್ಮ ಕಾರಿನ ಒಳಗಿನ ವಾತಾವರಣ. ಕಾರಿನೊಳಗಿನ ಸುವಾಸನೆಯು ನಿಮ್ಮ ಯಾತ್ರೆಯನ್ನು ಇನ್ನಷ್ಟು ಮಧುರವಾಗಿಸಬಲ್ಲದ್ದು. ಜೊತೆಗೆ ಕಾರಿನ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವಲ್ಲಿ ಕೂಡಾ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಸುರಕ್ಷಿತ ಚಾಲನೆ ಮಾಡಿ:

ತಮ್ಮ ಪಯಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲಿಕನ ಕರ್ತವ್ಯವಾಗಿದೆ. ಜೊತೆಗೆ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವುದು ಕೂಡಾ ಕಾರಿನ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು.

Most Read Articles

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಎರ್ಟಿಗಾ ಕಾರಿನ ಚಿತ್ರಗಳು..!

Kannada
Read more on auto tips
English summary
10 tips to boost your car’s resale value.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X