ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ವಾಹನ ಚಲಾಯಿಸುವ ಪ್ರತಿಯೊಬ್ಬರ ಜೀವನದಲ್ಲಿ ಒಂದು ಬಾರಿಯಾದರೂ ಅವರ ವಾಹನವು ಸ್ಟಾರ್ಟ್ ಆಗಲು ಹಠ ಮಾಡುವುದನ್ನು ಅನುಭವಿರುತ್ತಾರೆ. ಇದರಲ್ಲಿ ಹಲವು ಬಗೆಯ ಸಮಸ್ಯೆಗಳು ಕಾರಣವಾಗಿರಬಹುದು. ಅಸಲಿಗೆ ಸಮಸ್ಯೆ ಏನೆಂದು ತಿಳಿದುಕೊಂಡರೆ ಕಾರು ಏಕೆ ಸ್ಟಾರ್

By Rahul Ts

ವಾಹನ ಚಲಾಯಿಸುವ ಪ್ರತಿಯೊಬ್ಬರ ಜೀವನದಲ್ಲಿ ಒಂದು ಬಾರಿಯಾದರೂ ಅವರ ವಾಹನವು ಸ್ಟಾರ್ಟ್ ಆಗಲು ಹಠ ಮಾಡುವುದನ್ನು ಅನುಭವಿರುತ್ತಾರೆ. ಇದರಲ್ಲಿ ಹಲವು ಬಗೆಯ ಸಮಸ್ಯೆಗಳು ಕಾರಣವಾಗಿರಬಹುದು. ಅಸಲಿಗೆ ಸಮಸ್ಯೆ ಏನೆಂದು ತಿಳಿದುಕೊಂಡರೆ ಕಾರು ಏಕೆ ಸ್ಟಾರ್ಟ್ ಆಗುತ್ತಿಲ್ಲವೆಂಬುದು ಅರಿತುಕೊಳ್ಳಬಹುದು.

ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಬ್ಯಾಟರಿಗೆ ಸಂಭಂದಿಸಿದ ಸಮಸ್ಯೆ

ಕಾರು ಸ್ಟಾರ್ಟ್ ಆಗದೆ ಹಠ ಮಾಡಲು ಡೆಡ್ ಬ್ಯಾಟರಿ ಅಥವಾ ಒಳ್ಳೆಯ ಕಂಡಿಷನ್‍‍ನಲ್ಲಿಲ್ಲದ ಬ್ಯಾಟರಿಯು ಒಂದು ಕಾರಣವಾಗಿರಬಹುದು. ಬ್ಯಾಟರಿ ಹೀಗೆ ಡೆಡ್ ಆಗಿರಲು ಹಲವಾರು ಕಾರಣಗಳಿವೆ. ಬ್ಯಾಟರಿಯ ಚಾರ್ಜ್ ಖಾಲಿ ಆಗಿರುತ್ತದೆ. ವೆಹಿಕಲ್ ರನ್ನಿಂಗ್‍‍ನಲ್ಲಿಲ್ಲದಿದ್ದಾಗ ಬ್ಯಾಟರಿಯ ಮುಖಾಂತರ ಲೈಟ್‍‍ಗಳು ಮತ್ತು ಇನ್ನಿತರೆಗಳನ್ನು ಆನ್ ಮಾಡುವುದರಿಂದ ಬ್ಯಾಟರಿಯಲ್ಲಿನ ಚಾರ್ಜ್ ಖಾಲಿಯಾಗಿರಬಹುದು.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಇಂತಹ ಪರಿಸ್ಥಿತಿಯಲ್ಲಿ ವೆಹಿಕಲ್ ಸ್ಟಾರ್ಟ್ ಮಾಡಲು, ಹಳೆಯ ಬ್ಯಾಟರಿಯ ಸ್ಥಾನದಲ್ಲಿ ಹೊಸ ಬ್ಯಾಟರಿಯನ್ನು ಬದಲಾಯಿಸುವುದು, ಅಥವಾ ಪುಶ್ ಸ್ಟಾರ್ಟ್ ಮಾಡುವುದು. ಪುಷ್ ಸ್ಟಾರ್ಟ್ ಮಾಡುವುದರಿಂದ ವೆಹಿಕಲ್ ತಕ್ಷಣವೆ ಸ್ಟಾರ್ಟ್ ಆದಾಗ ಬ್ಯಾಟರಿ ಮೊದಲಿನಂತೆಯೆ ಚಾರ್ಜ್ ಆಗುತ್ತದೆ. ಅದೇ ವಿಧವಾಗಿ ಬ್ಯಾಟರಿಯ ಟರ್ಮಿನಲ್ ಅನ್ನು ಶುಭ್ರವಾಗಿಸಿ ಮತ್ತು ಡಿಸ್ಟಲ್‍‍‍ನಲ್ಲಿ ನೀರನ್ನು ತುಂಬಿರಿ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಫ್ಯೂಝ್‍‍ಗಳು

ಫ್ಯೂಝ್‍‍‍ಗಳ ಕಾರಣದಿಂದಾಗಿ ಸ್ಟಾರ್ಟ್ ಆಗದಿರುವ ಸಂದರ್ಭವು ತುಂಬಾ ಅಪರೂಪ. ಮಾರುಕಟ್ಟೆಯಲ್ಲಿ ದೊರೆಯುವ ಕಾರು ಇಂಟೀರಿಯರ್ ಎಲೆಕ್ಟ್ರಾನಿಕ್ಸ್ ಸರಿಯಾಗಿ ಉಪಯೋಗಿಸದಿದ್ದಾಗ ಫ್ಯೂಝ್‍ಗಳ ಮೇಲೆ ಒತ್ತಡವು ಅಧಿಕವಾಗಿ ಅದು ಸುಟ್ಟುಹೋಗುತ್ತದೆ. ಇದರಲ್ಲಿ ಕೀ ಹಾಕಿದ ತಕ್ಷಣ ಸ್ಟಾರ್ಟ್ ಮಾಡಲು ಕೂಡಾ ಒಂದು ಫ್ಯೂಝ್‍ ಇರುತ್ತದೆ, ಆದ್ದರಿಂದ ಫ್ಯೂಝ್‍‍‍ಗಳು ಬರ್ನ್ ಆಗಿದ್ದಲ್ಲಿ ತಕ್ಷಣವೇ ಬದಲಾಯಿರಿ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಇಂಧನಕ್ಕೆ ಸಂಭಂದಿಸಿದ ಕಾರಣ

ಮತ್ತೊಂದು ಸಾಮನ್ಯ ಸಮಸ್ಯೆಗಳಲ್ಲಿ ಫ್ಯುಯಲ್ ಕೂಡಾ ಒಂದು. ಮುಂಜಾನೆಯೆ ವಾಹನವನ್ನು ಹೊರತೆಗೆದಾಗ ಕೀ ಆನ್ ಮಾಡಿದರೆ, ಫ್ಯುಯಲ್ ಗೇಜ್ ಫ್ಯುಯಲ್ ಇದ್ದಹಾಗೆಯೆ ತೋರಿಸುತ್ತದೆ. ಫ್ಯುಯಲ್ ಇರುತ್ತದೆ ಎಂದು ನಿಮ್ಮ ಪಯಣವನ್ನು ಪ್ರಾರಂಭಿಸಿದಾಗ ಮಧ್ಯದಲ್ಲೆ ನಿಂತು ಹೋಗುತ್ತದೆ. ಇದಕ್ಕೆ ಕಾರಣ ಫ್ಯುಯಲ್ ಗೇಜ್ ಸರಿಯಾಗಿ ಕಾರ್ಯನಿರ್ವಹಿಸದಿರುವುದು. ಇಂತಹ ಸಂದರ್ಭದಲ್ಲಿ ಫ್ಯುಯಲ್ ಇರುವ ಹಾಗೆ ಗೇಜ್ ತಪ್ಪಾಗಿ ತೋರಿಸುತ್ತದೆ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಪೆಟ್ರೋಲ್ ಆಧಾರಿತ ವಾಹನವು ಪ್ರಯಾಣದ ಮಧ್ಯದಲ್ಲೆ ನಿಂತು ಹೋದರೆ ಪೆಟ್ರೋಲ್ ತುಂಬಿಸಿಕೊಂಡು ಸ್ಟಾರ್ಟ್ ಮಾಡಬಹುದು. ಆದರೆ, ಡೀಸೆಲ್ ವೆಹಿಕಲ್ ನಿಂತು ಹೋದರೆ ಫ್ಯುಯಲ್ ಟ್ಯಾಂಕ್‍‍ನಲ್ಲಿನ ಗಾಳಿಯನ್ನು ತೊಲಗಿಸಿದರೆ ಸ್ಟಾರ್ಟ್ ಆಗುತ್ತದೆ. ಹೀಗೆ ಗಾಳಿ ಹೋಗಿಸಲು ಇರುವ ಏಕೈಕ ಮಾರ್ಗವೆಂದರೆ ಫ್ಯುಯಲ್ ಫಿಲ್ಟರ್‍‍‍ನ ಹತ್ತಿರ ಕ್ಯಾಪ್ ತೆಗೆದು ಗಾಳಿಯನ್ನು ಮೊತ್ತವಾಗಿ ಹೊರಗೆ ಬಂದ ನಂತರ ಡೀಸೆಲ್ ಬರುವ ವರೆಗು ಕಿಕ್ಕ್ ಮಾಡುತ್ತಿರಬೇಕು.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಇಂಧನಕ್ಕೆ ಸಂಭಂದಿಸಿದ ಸಮಸ್ಯೆಯಲ್ಲಿ ಫ್ಯುಯಲ್ ಟ್ಯಾಂಕ್‍‍ನಿಂದ ಫ್ಯುಯಲ್ ಎಂಜಿನ್‍‍ಗೆ ತಲುಪುವ ವರೆಗು ಮಧ್ಯದಲ್ಲಿ ಎಲ್ಲಿಯಾದರೂ ಸಮಸ್ಯೆ ಇರಬಹುದು. ಪ್ರಧಾನವಾಗಿ ಫ್ಯುಯಲ್ ಪಂಪ್ ಮತ್ತು ಫ್ಯುಯಲ್ ಫಿಲ್ಟರ್ ಆಗದಿದ್ದರೂ ಸ್ಟಾರ್ಟ್ ಆಗುವುದಿಲ್ಲ. ಆದ್ದರಿಂದ ಇದು ಕೂಡಾ ಒಂದು ಸಮಸ್ಯೆಯಾಗಿರಬಹುದು.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಸ್ಪಾರ್ಕ್ ಪ್ಲಗ್ (ಪೆಟ್ರೋಲ್ ಅಥವಾ ಬೈಕ್‍‍ಗಳಲ್ಲಿ)

ಪೆಟ್ರೋಲ್ ಎಂಜಿನ್‍‍ನಲ್ಲಿ ಪೆಟ್ರೋಲ್ ಉರಿಯಲು ಸ್ಪಾರ್ಕ್ ಪ್ಲಗ್ ಖಚಿತವಾಗಿಯು ಇರಬೇಕು. ಸ್ಪಾರ್ಕ್ ಪ್ಲಗ್ ಕಾರ್ಯನಿರ್ವಹಿಸದಿದ್ದರೆ ಎಷ್ಟು ಪ್ರಯತ್ನಿಸಿದರೂ ಎಂಜಿನ್ ಸ್ಟಾರ್ಟ್ ಆಗುವುದಿಲ್ಲ. ಉದಾಹರಣೆಗೆ: ನಾಮ್ಮಲ್ಲಿ ಹಲವರು ಹಲವು ಬಾರಿ ಎಂಜಿನ್ ಸ್ಟಾರ್ಟ್ ಆಗದಿದ್ದಲ್ಲಿ, ಇಂಜಿನ್‍‍ನ ತಲೆಯ ಭಾಗದಲ್ಲಿರುವ ಸ್ಪಾರ್ಕ್ ಪ್ಲಗ್ ಅನ್ನು ಹೊರತೆಗೆದು, ಎಂಜಿನ್‍ಗೆ ಒರಗಿಸಿ ಕಿಕ್ಕ್ ಮಾಡುತ್ತಾರೆ. ಆಗ ಸ್ಪಾರ್ಕ್ ಪ್ಲಗ್ ಕೆಲಸಮಾಡಿದ್ದಲ್ಲಿ ಬೆಂಕಿಯು ಕಾಣಿಸಿಕೊಳ್ಳುತ್ತದೆ, ಹಾಗೆ ಆಗದಿದ್ದಲ್ಲಿ ಸ್ಪಾರ್ಕ್ ಪ್ಲಗ್ ಕೆಲಸ ಮಾಡುತ್ತಿಲ್ಲವೆಂದೆ ಅರ್ಥ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಸ್ಪಾರ್ಕ್ ಪ್ಲಗ್ ಕೆಲಸಮಾಡದಿರಲು ಕಾರಣ

ಕಾರುಗಳಲ್ಲಿ ಒಂದು ಕ್ರಮವಾಗಿ ಸ್ಪಾರ್ಕ್ ಪ್ಲಗ್ ಸ್ಪಾರ್ಕ್ ನೀಡಲು ಇಗ್ನೀಷನ್ ಕಾಯಿಲ್ ಎಂಬುವ ಪರಿಕರಣವು ಇರುತ್ತದೆ. ಅಂದರೆ ಮೂರು ಸಿಲೆಂಡರ್‍‍ಗಳ ಪೆಟ್ರೋಲ್ ಎಂಜಿನ್ ಮೂರು ಸ್ಪಾರ್ಕ್ ಪ್ಲಗ್‍ಗಳಿರುತ್ತದೆ. ಅಂದರೆ ಒಂದೊಂದು ಸಿಲೆಂಡರ್‍‍ಗೆ ಒಂದೊಂದು ಸರಿಸಮಾನವಾಗಿ ಸ್ಪಾರ್ಕ್ ನೀಡಲು ಇಗ್ನೀಷನ್ ಕಾಯಿಲ್ ಸಹಾಯ ಮಾಡುತ್ತದೆ. ಇದರಲ್ಲಿ ಲೋಪವಿರುವ ಪ್ಲಗ್ ಕೆಲಸ ಮಾಡುವುದಿಲ್ಲ. ಅದೇ ವಿಧವಾಗಿ ಪ್ಲಗ್‍‍ಗಳು ಅಧಿಕ ಕಾಲದಿಂದ ಬಳಸದ ಕಾರಣದಿಂದ ಕರಗಿ ಹೋಗಿರುತ್ತದೆ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಸ್ಟಾರ್ಟರ್ ಮೋಟರ್‍‍ನಲ್ಲಿ ಸಮಸ್ಯೆ

ಇದು ಕೂಡಾ ಬಹಳ ಅಪರೂಪದ ಸಮಸ್ಯೆ. ನಿಮ್ಮ ಕಾರಿನಲ್ಲಿ ಹೊಸ ಬ್ಯಾಟರಿ ಇದ್ದು, ಟ್ಯಾಂಕ್ ತುಂಬಾ ಫ್ಯುಯಲ್ ಇದೇ ಎಂದು ತಿಳಿಯಿರಿ, ಆದರೂ ಎಂಜಿನ್ ಸ್ಟಾರ್ಟ್ ಆಗದಿದ್ದಲ್ಲಿ ಆಗ ಸ್ಟಾರ್ಟರ್‍‍ನಲ್ಲಿ ಸಮಸ್ಯೆ ಇದೆ ಎಂದು ಅರ್ಥ.

ನಿಮ್ಮ ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣಗಳಿವು..

ಆಲ್ಟರ್ನೇಟರ್‍‍ನಲ್ಲಿ ಸಮಸ್ಯೆ

ಬ್ಯಾಟರಿ ಖಾಲಿ ಆಗಿದ್ದಾಗ, ಅಥವಾ ಬ್ಯಾಟರಿ ಡೆಡ್ ಆಗಿದ್ದಾಗ ಇತರರ ಸಹಾಯದೊಂದಿಗೆ ಕಾರನ್ನು ತಳ್ಳಿಸಿ ಸ್ಟಾರ್ಟ್ ಮಾಡುತ್ತದೆ. ಈ ಕ್ರಮದಲ್ಲಿ ಎಂಜಿನ್ ರನ್ ಆಗುವುದರಿಂದ ಆಲ್ಟರ್ನೇಟರ್ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಕಾತನ್ನು ಪುಶ್ ಸ್ಟಾರ್ಟ್ ಮಾಡಿದರೂ ಕೂಡಾ ಸ್ಟಾರ್ಟ್ ಆಗದಿದ್ದಲ್ಲಿ ಆಲ್ಟರ್ನೇಟರ್‍‍ನಲ್ಲಿ ಸಮಸ್ಯೆ ಇದೆ ಎಂದು ಅರ್ಥ.

Most Read Articles

Kannada
English summary
Top five reasons why car wont start.
Story first published: Saturday, August 25, 2018, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X