ಟ್ಯೂಬ್‌ಲೆಸ್ ಟೈರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ

ಸಾಂಪ್ರಾದಾಯಿಕ ಚಕ್ರಗಳ ವಿರುದ್ಧವಾಗಿ ಆಧುನಿಕ ಜಗತ್ತಿನಲ್ಲಿ ಟ್ಯೂಬ್ ಲೆಸ್ ಟಯರ್ ಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ.

By Rahul Ts

ಸಾಂಪ್ರಾದಾಯಿಕ ಚಕ್ರಗಳ ವಿರುದ್ಧವಾಗಿ ಆಧುನಿಕ ಜಗತ್ತಿನಲ್ಲಿ ಟ್ಯೂಬ್ ಲೆಸ್ ಟಯರ್ ಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ. ವಾಹನದ ತಯಾರಕರೂ ಸಹ ತಮ್ಮ ವಾಹನ ಬಿಡುಗಡೆಗೊಳಿಸುವ ಸಮಯದಲ್ಲಿ ಟ್ಯೂಬ್‌ಲೆಸ್ ಟೈರುಗಳ ವ್ಯಶೀಷ್ಟತೆ ಬಗ್ಗೆ ಹೆಚ್ಚು ಜಾಹಿರಾತು ನೀಡುವುದನ್ನು ನೀವು ಸಹ ನೋಡಿರಬಹುದು.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

ಎಷ್ಟೋ ಜನಕ್ಕೆ ಈಗಲೂ ಟ್ಯೂಬ್ ಲೆಸ್ ಟೈರುಗಳ ಬಗ್ಗೆ ಸಾಕಷ್ಟು ಅನುಮಾನಗಳಿದ್ದು, ಈ ಲೇಖನದಲ್ಲಿ ಟ್ಯೂಬ್‌ಲೆಸ್ ಟೈರುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಈ ಸದ್ಯ ಅತ್ಯಂತ ಹೆಚ್ಚು ಗಮನಸೆಳೆದಿರುವ ಈ ಟ್ಯೂಬ್ ಲೆಸ್ ಟೈರುಗಳ ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

1. ಸಾಮಾನ್ಯವಾಗಿ ಉಪಯೋಗಿಸುವಂತಹ ಟೈರುಗಳಂತೆಯೇ ಕಾಣುವ ಟ್ಯೂಬ್‌ಲೆಸ್ ಟೈರುಗಳು ಒಳಭಾಗದಲ್ಲಿ ಟ್ಯೂಬ್ ಹೊಂದಿರುವುದಿಲ್ಲ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

2. ಟ್ಯೂಬ್ ಇರುವ ಚಕ್ರಗಳೊಂದಿಗೆ ಹೋಲಿಸಿದಾಗ ಟ್ಯೂಬ್ ಇಲ್ಲದ ಚಕ್ರಗಳು ಹೆಚ್ಚು ಸುರಕ್ಷಿತವಾಗಿದ್ದು, ಪಂಕ್ಚರ್ ಆದ ಬಳಿಕವೂ ನಿಯಮಿತ ವೇಗದಲ್ಲಿ ಸರಾಗವಾಗಿ ಸಾಗಬಹುದಾಗಿದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

3. ಈ ಹಿಂದೆ ಬಳಕೆಯಲ್ಲಿದ್ದ ಟ್ಯೂಬ್ ಇರುವ ಚಕ್ರಗಳಲ್ಲಿ ಗಾಡಿ ವೇಗವಾಗಿ ಚಲಿಸುವಾಗ ಘರ್ಷಣೆ ಏರ್ಪಟ್ಟು ಶಾಖ ಉತ್ಪತ್ತಿಯಾಗುವುದರಿಂದ ಮೊನಚಾದ ವಸ್ತು ಚುಚ್ಚಿದರೆ ಚಕ್ರ ಸಿಡಿಯುವ ಆತಂಕ ಕಾಡುತ್ತಿತ್ತು. ಇನ್ನು ಮುಂದೆ ಈ ರೀತಿಯ ತೊಂದರೆ ಎದುರಾಗುವುದಿಲ್ಲ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

4. ಟಯರ್ ಪಂಕ್ಚರ್ ಆಗುವ ಭೀತಿ ಇನ್ನು ಮುಂದೆ ಇರುವುದೇ ಇಲ್ಲ, ಪಂಚರ್ ಆದ್ರೂ ಸಹ ನಿರ್ದಿಷ್ಟ ಅಂತರದವರೆಗೂ ಪ್ರಯಾಣಿಸಲು ಈ ಟೈರ್ ಅವಕಾಶ ನೀಡುತ್ತದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

5. ಟ್ಯೂಬ್ ಲೆಸ್ ಚಕ್ರದಲ್ಲಿ ಚಕ್ರ ಹಾಗೂ ರಿಮ್ ನಡುವೆ ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದರಿಂದ ಪಂಕ್ಚರ್ ಆದ ಬಳಿಕ ಸಣ್ಣ ಪುಟ್ಟ ಹಂಪ್, ಹೊಂಡಗಳನ್ನು ನಿಭಾಯಿಸಬಹುದಾಗಿದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

6. ಟೈರ್ ಒಳಗೆ ಸೀಲೆಂಟ್‌ಗಳಂತಹ ರಾಸಾಯನಿಕಗಳನ್ನು ತುಂಬಬಹುದಾಗಿದ್ದು, ಇದರಿಂದ ಚಕ್ರ ಹೆಚ್ಚು ಬಲಿಷ್ಠವಾಗಲಿದ್ದು, ಚಾಲನೆ ಸಂದರ್ಭಗಳಲ್ಲಿ ಟೈಯರ್ ಪಂಚರ್ ತಪ್ಪಿಸಬಹುದಾಗಿದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

7. ಟ್ಯೂಬ್ ಲೆಸ್ ಚಕ್ರಗಳಲ್ಲಿ ಉಷ್ಣ ನಿರೋಧಕ ರಬ್ಬರ್ ಬಳಕೆ ಮಾಡಲಾಗುತ್ತದೆ. ಇಲ್ಲಿ ಚಕ್ರವನ್ನೇ ರಿಮ್ ಗೆ ಜೋಡಿಸಲಾಗುತ್ತದೆ. ಇದರಿಂದ ಹೆಚ್ಚಿನ ಶಾಖ ಕಡಿಮೆಯಾಗಲಿದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

8. ಟೈಯರ್ ಒಳಗೆ ಸುರಿಯಲಾಗುವ ಸೀಲೆಂಟ್ ದ್ರವದ ಮತ್ತೊಂದು ಉಪಯೋಗವೆಂದರೆ, ಇದು ಪಂಕ್ಚರ್ ಆದ ಬಳಿಕ ತನ್ನಿಂದತಾನೇ ಪಂಕ್ಚರ್ ಆದ ಜಾಗದಿಂದ ಗಾಳಿ ಹೊರ ಹೋಗದಂತೆ ನೋಡಿಕೊಳ್ಳುತ್ತದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

9. ಟ್ಯೂಬ್ ಲೆಸ್ ಚಕ್ರಗಳಲ್ಲಿ ಗಾಳಿ ಇಡೀ ಚಕ್ರವನ್ನೇ ತುಂಬಿಕೊಂಡಿರುವುದರಿಂದ ಪಂಕ್ಚರ್ ಆದ ಜಾಗದಲ್ಲಿ ಮಾತ್ರ ಸಣ್ಣ ಪ್ರಮಾಣದಲ್ಲಿ ಗಾಳಿ ಹೊರ ಹೋಗುತ್ತದೆ. ಇದರಿಂದ ಪಂಕ್ಚರ್ ವೇಳೆಯಲ್ಲಿ ಟಯರ್ ಸ್ಪೋಟಿಸುವ ಭಯವಿರುವುದಿಲ್ಲ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

10. ಚಕ್ರ ಪಂಕ್ಚರ್ ಆದ್ದಲ್ಲಿ ಸಂದರ್ಭದಲ್ಲಿ ಟ್ಯೂಬ್ ಲೆಸ್ ಚಕ್ರಗಳಲ್ಲಿ ಗಾಳಿಯು ಸಣ್ಣ ಪ್ರಮಾಣದಲ್ಲಿ ಮಾತ್ರ ಹೊರ ಹೋಗುವುದು. ಇದರಿಂದ ಚಕ್ರ ಸಿಡಿಯುವ ಭೀತಿ ಕಾಡುವುದಿಲ್ಲ. ಅಲ್ಲದೆ ಗಾಡಿಯು ಚಾಲಕನ ನಿಯಂತ್ರಣದಲ್ಲಿರುತ್ತದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

11. ಟ್ಯೂಬ್ ಇರುವ ಚಕ್ರಗಳಿಗೆ ಹೋಲಿಸಿದಾಗ ಟ್ಯೂಬ್ ಲೆಸ್ ಚಕ್ರಗಳು ಭಾರ ಕಡಿಮೆಯಾಗಿರುತ್ತದೆ. ಇದು ಕೂಡಾ ಅತ್ಯುತ್ತಮ ಇಂಧನ ಕ್ಷಮತೆ ನೀಡಲು ಸಹಕಾರಿಯಾಗಲಿದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

12. ಟ್ಯೂಬ್ ಇರುವ ಚಕ್ರಗಳಲ್ಲಿ ಅತಿ ವೇಗವಾಗಿ ಸಂಚರಿಸುವಾಗುವಾಗ ಶಾಖ ಉತ್ಪತ್ತಿಯಾಗುವುದು ಸರ್ವೇಸಾಮಾನ್ಯ, ಇದರಿಂದಾಗಿ ಟ್ಯೂಬ್ ಮೆತ್ತಗಾಗಲಿದ್ದು, ಟೈರ್ ಪಂಕ್ಚರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

13. ದೂರ ಪ್ರಯಾಣಿಕ್ಕೆ ಹೊರಟಿರುವ ರಸ್ತೆ ಮಧ್ಯದಲ್ಲಿ ಎದುರಾಗುವ ಪಂಕ್ಚರ್ ತೊಂದರೆಯನ್ನು ಟ್ಯೂಬ್‌ಲೆಸ್ ಟಯರ್‌ಗಳ ಮೂಲಕ ತಪ್ಪಿಸಬಹುದಾಗಿದೆ. ಇದು ಪಂಕ್ಚರ್ ಆದ ಬಳಿಕವೂ ಕಡಿಮೆ ಒತ್ತಡದಲ್ಲೂ ಗಾಡಿಯನ್ನು ನಿಭಾಯಿಸುತ್ತದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

14. ವಿಶ್ಲೇಷಕರ ಪ್ರಕಾರ ಟ್ಯೂಬ್ ಲೆಸ್ ಚಕ್ರಗಳನ್ನು ರಸ್ತೆಯನ್ನು ಹೊಂದಿಕೊಂಡು ಸಂಚರಿಸುವುದರಿಂದ ವಾಹನಗಳ ಇಂಧನ ಕ್ಷಮತೆ ಜೊತೆ ಕಾರು ಸಮತೋಲನ ಕಾಯ್ದುಕೊಳ್ಳಲಿದೆ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

15. ರಿಮ್ ಹಾಗೂ ಚಕ್ರದ ನಡುವೆ ಗಾಳಿಯು ಶೇಖರಣೆಯಾಗುವುದರಿಂದ ಗಾಡಿಗೆ ಅತ್ಯುತ್ತಮ ಸ್ಥಿರತೆ ಹೆಚ್ಚಾಗಲಿದ್ದು, ಇದರಿಂದ ಪಂಕ್ಚರ್ ಆದಾಗಲೂ ಸಹ ಗಾಳಿ ಹೊರ ಹೋಗುವ ಪ್ರಮಾಣ ಕಡಿಮೆ ಇರಲಿದ್ದು, ಇದರಿಂದ ವೇಗವಾಗಿ ಚಲಿಸುವಾಗಲೂ ಗಾಡಿಯು ನಿಯಂತ್ರಣ ತಪ್ಪುವ ಭಯವಿರುವುದಿಲ್ಲ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

1. ಟ್ಯೂಬೆಲೆಸ್ ಚಕ್ರದಲ್ಲಿ ಗಾಳಿಯು ರಿಮ್ ಹಾಗೂ ಚಕ್ರದ ನಡುವೆ ಹಿಡಿದಿಟ್ಟುಕೊಳ್ಳುವುದರಿಂದ ಇದನ್ನು ಬದಲಾಯಿಸಲು ವಿಶೇಷ ಹೈಡ್ರಾಲಿಕ್ ಪರಿಕರದ ಅಗತ್ಯವಿರುತ್ತದೆ. ಹಾಗಾಗಿ ಇದನ್ನು ಬದಲಾಯಿಸಿಕೊಳ್ಳುವ ನುರಿತ ಮೆಕ್ಯಾನಿಕ್ ಬಳಿಯಿಂದ ಮಾತ್ರ ಸಾಧ್ಯ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

2. ಟಯರ್ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ಪಂಚರ್ ಭಯ ಮಾತ್ರ ತಪ್ಪಿಸಲು ಸಾಧ್ಯವಿಲ್ಲ. ಇಲ್ಲಿ ಟ್ಯೂಬ್ ಲೆಸ್ ಚಕ್ರಗಳನ್ನು ಹೊರ ತೆಗೆಯಲು ವಿಶೇಷವಾದ ಹೈಡ್ರಾಲಿಕ್ ಉಪಕರಣವನ್ನು ಬಳಕೆ ಮಾಡಲಾಗುತ್ತದೆ. ಇದು ದೇಶದಲ್ಲಿ ವ್ಯಾಪಕವಾಗಿ ಕಂಡುಬಂದಿಲ್ಲ.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

3. ಟ್ಯೂಬ್ ಲೆಸ್ ಚಕ್ರಗಳಲ್ಲಿ ರಿಮ್ ಹಾಗೂ ಚಕ್ರಗಳು ಹೊಂದಿಕೊಳ್ಳುವ ಜಾಗದಲ್ಲಿ ಡ್ಯಾಮೇಜ್ ಆದ್ದಲ್ಲಿ ಸಂಪೂರ್ಣ ಚಕ್ರವನ್ನೇ ಬದಲಾಯಿಸಬೇಕಾಗುತ್ತದೆ. ಇಲ್ಲಿ ಯಾವುದೇ ವಿಧದ ಡ್ಯಾಮೇಜ್ ಕಂಟ್ರೋಲ್ ಕೆಲಸ ಮಾಡುವುದಿಲ್ಲ. ಇನ್ನೊಂದೆಡೆ ಟ್ಯೂಬ್ ಚಕ್ರಗಳಲ್ಲಿ ಟ್ಯೂಬ್ ಮಾತ್ರ ಬದಲಾಯಿಸಿದರಾಯಿತು.

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ.?

4. ಟ್ಯೂರ್ ಇರುವ ಚಕ್ರಗಳಿಗೆ ಹೋಲಿಸಿದಾಗ ಟ್ಯೂಬ್ ಲೆಸ್ ಚಕ್ರಗಳು ಸ್ವಲ್ಪ ದುಬಾರಿಯೆನಿಸುತ್ತದೆ. ಆಧುನಿಕ ಕಾರುಗಳ ಟ್ಯೂಬ್ ಲೆಸ್ ಟಯರ್ ಚಕ್ರಗಳಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಗಳಂತಹ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಇದು ಹೆಚ್ಚು ಸುರಕ್ಷಿತವೆನಿಸಿದರೂ ದುಬಾರಿಯೆನಿಸುತ್ತದೆ.

Most Read Articles

Kannada
Read more on auto tips
English summary
Tubeless tyre advantages and disadvantages.
Story first published: Saturday, May 12, 2018, 9:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X