ದ್ವಿಚಕ್ರ ವಾಹನ ವಿಮೆ: ನಿಮಗೆ ತಿಳಿದಿರಬೇಕಾದ ವಿಷ್ಯಗಳು

ದ್ವಿಚಕ್ರ ವಾಹನಕ್ಕೊಂದು ವಿಮಾ ಪಾಲಿಸಿ ಇರಲೇಬೇಕು. ದ್ವಿಚಕ್ರ ವಾಹನ ಡ್ಯಾಮೇಜ್ ಆದ್ರೆ ಅಥವಾ ಕಳ್ಳತನವಾದ ಸಂದರ್ಭದಲ್ಲಿ ವಿಮಾ ಪಾಲಿಸಿ ಆಪತ್ಬಾಂಧವ. ದ್ವಿಚಕ್ರ ವಾಹನ ವಿಮಾ ಪಾಲಿಸಿ ಕುರಿತು ಸಾಮಾನ್ಯ ನೀತಿ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ದ್ವಿಚಕ್ರ ವಾಹನ ವಿಮಾ ಪಾಲಿಸಿ ಮತ್ತು ಕಾಯಿದೆ ಕುರಿತು ಕೊಂಚ ಮಾಹಿತಿ ತಿಳಿದುಕೊಳ್ಳೋಣ. ಇಂಡಿಯಾ ಮೋಟರ್ ಟಾರೀಫ್ ಆಕ್ಟ್ 2002ರ ಎರಡನೇ ಪರಿಚ್ಛೇಧದಲ್ಲಿ 1938ರ ವಿಮಾ ಕಾಯಿದೆ ಮಾಹಿತಿಯಿದೆ.

ಈ ಕಾಯಿದೆಯಡಿ ವಿಮಾ ಪಾಲಿಸಿಯಲ್ಲಿ ಸಾಮಾನ್ಯವಾಗಿ ಎರಡು ಬಗೆಗಳಿವೆ.

ಬಾಧ್ಯತೆ ಪಾಲಿಸಿ(ಲಿಯಾಬಿಲಿಟಿ ಓನ್ಲಿ ಪಾಲಿಸಿ): ಈ ವಿಮೆ ಪ್ರಕಾರ ಮೂರನೇ ಪಾರ್ಟಿ ಗಾಯಗೊಂಡರೆ/ಮೃತನಾದರೆ ಅಥವಾ ಆಸ್ತಿಪಾಸ್ತಿ ನಷ್ಟ ಅನುಭವಿಸಿದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ದ್ವಿಚಕ್ರ ವಾಹನ ಮಾಲೀಕ ಅಥವಾ ಸವಾರನಿಗೆ ವೈಯಕ್ತಿಕ ಅಪಘಾತ ಪರಿಹಾರವುವೂ ಬಾಧ್ಯತೆ ಅಥವಾ ಹೊಣೆಗಾರಿಕೆ ಪಾಲಿಸಿಯಡಿ ಬರುತ್ತದೆ.

ಪ್ಯಾಕೇಜ್ ಪಾಲಿಸಿ: ಈ ವಿಮೆಯಡಿ ವಾಹನ ನಷ್ಟ ಮತ್ತು ಹಾನಿಗೂ ಪರಿಹಾರ ನೀಡಲಾಗುತ್ತದೆ.

ವಿಮೆ ಪಡೆಯುವುದು ಹೇಗೆ? ಯಾವೆಲ್ಲ ಎಚ್ಚರಿಕೆ ಅನುಸರಿಸಬೇಕು? ಹೀಗೆ ದ್ವಿಚಕ್ರ ವಾಹನ ವಿಮೆಯಲ್ಲಿ ತಿಳಿದುಕೊಳ್ಳಬೇಕಾದ ಹಲವು ವಿಷ್ಯಗಳಿವೆ. ಹೆಚ್ಚಿನ ಮಾಹಿತಿಗೆ ನಾಳೆಯ ದಿನಕ್ಕೊಂದು ಸಲಹೆ ಮಾಲಿಕೆ ನೋಡಿ.

Most Read Articles

Kannada
English summary
Two Wheeler Insurance India. How to claim 2 Wheeler Insurance in India. There are two types of policies available in India. To cover Act liability and to cover both own damage losses etc Package Policy.
Story first published: Wednesday, March 14, 2012, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X