TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವಾಹನ ಚಾಲನೆ ವೇಳೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮುನ್ನ..!
ಅಪಘಾತಕ್ಕೆ ಕಾರಣಗಳೇ ಬೇಕಿಲ್ಲ. ಅಲ್ಲಿ ಯಾವ ಅದೃಷ್ಟವೂ ನಿಮ್ಮನ್ನು ಬಚಾವ್ ಮಾಡಲು ಸಾಧ್ಯವಿಲ್ಲ. ನಿಮ್ಮ ಡ್ರೈವಿಂಗ್ ಸರಿಯಿದ್ದ ಮಾತ್ರಕ್ಕೆ ಸುರಕ್ಷಿತವಾಗಿ ಗುರಿ ಮುಟ್ಟುವಿರಿ ಎಂಬುವುದಕ್ಕೂ ಯಾವ ಗ್ಯಾರಂಟಿ ಇಲ್ಲ. ಯಾಕೆಂದ್ರೆ ನಿಮ್ಮ ಎದುರುಗಡೆಯಿಂದ ಬರುವ ವಾಹನ ಸವಾರರ ಎಡವಿಟ್ಟಿನಿಂದಾಗಿಯೂ ಅಪಘಾತ ಸಂಭವಿಸಬಹುದಾಗಿದೆ.
ಹೀಗಾಗಿ 'ರಸ್ತೆ ಸುರಕ್ಷತೆ' ಎಂಬುದು ಒಂದಿಬ್ಬರು ಮಾತ್ರ ಪಾಲಿಸಬೇಕಾದ ನಿಯಮಗಳಲ್ಲ. ಪ್ರತಿಯೊಬ್ಬ ಸವಾರರು ಅತ್ಯುತ್ತಮ ಚಾಲನೆಯನ್ನು ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ವಾಹನ ಚಾಲನೆ ವೇಳೆ ಅನುಸರಿಸಬೇಕಾದ ಕೆಲವು ಮೂಲಭೂತ ಅಂಶಗಳನ್ನು ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ನಂಬಿಕೆ ನಮ್ಮದ್ದು.
ವಾಹನದ ಸುಸ್ಥಿತಿಯನ್ನು ಪರೀಕ್ಷಿಸಿ
ವಾಹನ ಚಾಲನೆಗೂ ಮುನ್ನ ನಿಮ್ಮ ವಾಹನದ ಸುಸ್ಥಿತಿಯನ್ನು ಸರಿಯಾಗಿ ಪರೀಕ್ಷಿಸುವುದು ಒಳೀತು. ಇಲ್ಲವಾದ್ರೆ ವಾಹನ ಚಾಲನೆ ಆಗುವ ತಾಂತ್ರಿಕ ಸಮಸ್ಯೆಗಳು ಕೆಲವೊಮ್ಮೆ ನಿಮ್ಮ ಪ್ರಾಣಕ್ಕೂ ಸಂಚಕಾರ ತರಬಲ್ಲವು.
ಪಾನಮತ್ತರಾಗಿ ಗಾಡಿ ಚಾಲನೆ ಬೇಡ
ನೀವು ಕುಡಿದಿದ್ದರೆ, ಆಯಾಸ ಗೊಂಡಿದ್ದರೆ, ಅನಾರೋಗ್ಯವಿದ್ದರೆ ವಾಹನ ಓಡಿಸಬೇಡಿ. ಈ ವೇಳೆ ನಿಮಗೆ ಅಷ್ಟೇ ಅಲ್ಲದೇ ಇತರೆ ಅಮಾಯಕರ ಪ್ರಾಣಕ್ಕೂ ಸಂಕಷ್ಟ ತಪ್ಪಿದ್ದಲ್ಲ.
ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ
ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಿ. ಯಾಕೆಂದ್ರೆ ಕೆಲವು ಕಾರುಗಳಲ್ಲಿ ಸಿಲ್ಟ್ ಬೆಲ್ಟ್ ಸರಿಯಾಗಿ ಧರಿಸದೇ ಇದ್ದಲ್ಲಿ ಏರ್ಬ್ಯಾಗ್ ಕಾರ್ಯನಿರ್ವಹಿಸುವುದಿಲ್ಲ. ಇದು ಅಪಘಾತ ಪ್ರಕರಣಗಳಲ್ಲಿ ಸಾಬೀತಾಗಿದೆ.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ
ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ. ಹೆಲ್ಮೆಟ್ ಕಡ್ಡಾಯ ಎಂದ ತಕ್ಷಣ ರಸ್ತೆ ಬದಿ ಮಾರಾಟಕ್ಕೆ ಇಟ್ಟಿರುವ ಕಳಪೆ ಹೆಲ್ಮೆಟ್ ಬಳಕೆ ಬೇಡವೇ ಬೇಡ. ಹಣ ಖರ್ಚು ಆದ್ರು ಪರವಾಗಿಲ್ಲ ಒಂದು ಗುಣಮಟ್ಟದ ಹೆಲ್ಮೆಟ್ ಧರಿಸಿ. ಯಾಕೆಂದ್ರೆ ನಿಮ್ಮ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತೆ.
ಮೊಬೈಲ್ ಬಳಕೆ ಬೇಡ
ಈಗಿನ ವಾಹನ ಸವಾರರಿಗೆ ವಾಹನ ಚಾಲನೆ ಮಾಡುತ್ತಲೇ ಮೊಬೈಲ್ ಮಾಡುವುದು ಹವ್ಯಾಸವಾಗಿ ಹೋಗಿದೆ. ದಯವಿಟ್ಟು ವಾಹನ ಓಡಿಸುವಾಗ ಮೊಬೈಲ್ ಫೋನ್ ಉಪಯೋಗಿಸಬೇಡಿ. ಒಂದು ವೇಳೆ ಅಗತ್ಯವಿದ್ದಲ್ಲಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಮಾತನಾಡಿದ ನಂತರವಷ್ಟೇ ಮುಂದುವರಿಯಿರಿ.
ಟ್ರಾಫಿಕ್ ನಿಯಮಗಳನ್ನು ಪಾಲಿಸಿ.
ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ವಾಹನ ಸಂಖ್ಯೆ ಹೆಚ್ಚುತ್ತಿದ್ದಂತೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಕೂಡಾ ಹೆಚ್ಚುತ್ತಲೇ ಇದೆ. ಇದು ಅಪಘಾತಗಳಿಗೆ ಮೂಲ ಕಾರಣವಾಗಿದ್ದು, ದಯವಿಟ್ಟು ಅವಸರದಲ್ಲಿ ವಾಹನ ಚಾಲನೆ ಬೇಡವೇ ಬೇಡ.
ಅತಿಯಾದ ವೇಗ ಸುರಕ್ಷಿತವಲ್ಲ.
ಮೇಲೆ ಹೇಳಿದ ಹಾಗೆ ಅವಸರದಲ್ಲಿ ಆಫೀಸ್, ಮನೆ ತೆರಳುವ ಬದಲು ಸಮಯ ಪಾಲನೆ ಮಾಡುವ ಮೂಲಕ ಸುರಕ್ಷತೆಯ ಚಾಲನೆಗೆ ಆದ್ಯತೆ ನೀಡಿ. ಮತ್ತೊಂದು ವಿಚಾರ ಅಂದ್ರೆ ಇಂದಿನ ಯುವಕರಿಗೆ ಸ್ಪೀಡ್ ಬೈಕ್ ಮತ್ತು ಕಾರ್ ಕ್ರೆಜ್ ಹೆಚ್ಚಾಗುಯಾಗುತ್ತಿದ್ದು, ಇದರಿಂದಲೇ ದಿನಂಪ್ರತಿ ನೂರಾರು ಜನ ಪ್ರಾಣ ಹಾನಿಗಿಡಾಗುತ್ತಿದ್ದಾರೆ.
ರಸ್ತೆ ಚಿಹ್ನೆಗಳನ್ನು ಪಾಲಿಸಿ
ವಾಹನ ಚಾಲನೆ ವೇಳೆ ಪ್ರತಿಯೊಬ್ಬ ಚಾಲಕರು ಸಹ ನಿಲ್ಲುವ, ತಿರುಗುವ ಸೂಚನೆಗಳನ್ನು ಕೊಡಲು ಮರೆಯದಿರಿ. ಒಂದು ವೇಳೆ ತಿರುವ ಪ್ರದೇಶಗಳಲ್ಲಿ ಇಂಡಿಕೇಟರ್ ನೀಡದೆ ಇದ್ದಲ್ಲಿ ದೊಡ್ಡ ಗ್ರಾತದ ವಾಹನಗಳು ಡಿಕ್ಕಿ ಹೊಡೆದಲ್ಲಿ ಕಥೆ ಅಷ್ಟೆ.
ರಸ್ತೆ ಪಥ ಪಾಲಿಸಿ
ಇದೊಂದು ತುಂಬಾ ಮುಖ್ಯ ವಿಚಾರ ಎಂದ್ರೆ ತಪ್ಪಾಗುವುದಿಲ್ಲ. ವಾಹನ ಸವಾರರು ಎಡಬದಿಯಲ್ಲೇ ವಾಹನ ಓಡಿಸಿ. ಜೊತೆಗೆ ತುರ್ತು ವಾಹನಗಳು ಬಂದಿಲ್ಲಿ ಸುಗಮ ಸಂಚಾರಕ್ಕೆ ಮಾರ್ಗ ನೀಡುವುದಲ್ಲದೇ ಪಾದಚಾರಿಗಳಿಗೂ ಮಾನ್ಯತೆ ಕೊಡುವುದನ್ನ ಮರೆಯಬೇಡಿ.
ಜಾಗರೂಕ ಚಾಲನೆ
ಇನ್ನೊಂದು ಮುಖ್ಯ ಚಾಲನಾ ಸಲಹೆ ಅಂದ್ರೆ, ಶಾಲೆಗಳು, ಆಸ್ಪತ್ರೆಗಳ ಮುಂಭಾಗದಲ್ಲಿ ಎಚ್ಚರದಿಂದ ವಾಹನ ಓಡಿಸಿ. ನೀವು ಮಾಡುವ ಒಂದೊಂದು ಸಣ್ಣ ತಪ್ಪು ಕೂಡಾ ಇತರರ ಜೀವಗಳು ಬಲಿಯಾಗಬೇಕಾದ ಸನ್ನಿವೇಶಗಳು ಎದುರಾಗಬಹುದು.
ಓವರ್ಟೇಕ್ ಬೇಡ
ಸಾಮಾನ್ಯ ರಸ್ತೆಗಳಲ್ಲಿ ಓವರ್ಟೇಕ್ ಮಾಡುವ ರೀತಿಯಲ್ಲಿ ತಿರುವು, ಸೇತುವೆ ಹಾಗೂ ಫ್ಲೈಓವರ್ಗಳಲ್ಲಿ ಓವರ್ಟೇಕ್ ಮಾಡಲೇಬೇಡಿ. ಒಂದು ವೇಳೆ ಇಂತಹ ಪ್ರದೇಶಗಳಲ್ಲಿ ಓವರ್ಟೇಕ್ ಮಾಡಿದಲ್ಲಿ ಯಮರಾಜ ನಿಮ್ಮನ್ನು ಕೂಡಾ ಓವರ್ಟೇಕ್ ಮಾಡಬಹುದು.