ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಕರೋನಾ ವೈರಸ್ ಹಬ್ಬುವ ಭೀತಿಯಿಂದ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಂಚಾರ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಸುಮಾರು ಎರಡು ತಿಂಗಳ ನಂತರ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಸಲಾಯಿತು. ಲಾಕ್‌ಡೌನ್ ಸಡಿಲಿಕೆಯ ನಂತರ ಭಾರತದ ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಬಸ್ ಸೇವೆಗಳು ಪುನರಾರಂಭಗೊಂಡಿವೆ. ಗೋವಾ ಸರ್ಕಾರವು ಸಹ ತನ್ನ ರಾಜ್ಯದಲ್ಲಿ ಬಸ್ ಸೇವೆಗಳನ್ನು ಆರಂಭಿಸಿದೆ. ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ ನಂತರ ಗೋವಾದಲ್ಲಿ ಬಸ್ ಸೇವೆಯನ್ನು ಪುನರಾರಂಭಿಸಲಾಯಿತು.

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಆದರೆ ಗೋವಾ ರಾಜ್ಯದಲ್ಲಿ ಬಸ್‌ಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರು ಮೊದಲಿನಷ್ಟು ಆಸಕ್ತಿ ತೋರುತ್ತಿಲ್ಲ. ಬದಲಿಗೆ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿದಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಬಸ್‌ಗಳಲ್ಲಿ ಪ್ರಯಾಣಿಸಿದರೆ ತಮಗೂ ಸಹ ಸೋಂಕು ತಗುಲಬಹುದೆಂಬ ಭೀತಿಯಿಂದಾಗಿ ಜನರು ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ ಗೋವಾ ಸರ್ಕಾರದ ಕದಂಬ ಸಾರಿಗೆ ನಿಗಮವು (ಕೆಟಿಸಿ) ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಕದಂಬ ಸಾರಿಗೆ ನಿಗಮವು ಗೋವಾ ರಾಜ್ಯ ಸರ್ಕಾರದ ಒಡೆತನದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕದಂಬ ಸಾರಿಗೆ ನಿಗಮದ ಅಧಿಕಾರಿಗಳು 50%ನಷ್ಟು ಪ್ರಯಾಣಿಕರೊಂದಿಗೆ ಬಸ್‌ಗಳ ಕಾರ್ಯಾಚರಣೆಯನ್ನು ಆರಂಭಿಸುವ ಯೋಜನೆಯನ್ನು ಹೊಂದಲಾಗಿತ್ತು. ಆದರೆ ಸದ್ಯಕ್ಕೆ ಬಸ್ ಗಳಲ್ಲಿ ಕೇವಲ 25%ನಷ್ಟು ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಎಲ್ಲಕ್ಕಿಂತ ಮುಖ್ಯವಾಗಿ ಜನರು ಮನೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿಲ್ಲ. ಪ್ರತಿ ಬಸ್‌ನಲ್ಲಿ ಸರಾಸರಿ 10 ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಅದು ಸಹ ಪಿಕ್ ಅವರ್ ಗಳಲ್ಲಿ ಮಾತ್ರ. ಇತರ ಸಮಯಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿರುತ್ತದೆ.

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಶನಿವಾರಗಳಂದು ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕುಸಿಯುತ್ತಿದೆ. ಸರ್ಕಾರಿ ನೌಕರರು ಶನಿವಾರದಂದು ಪ್ರಯಾಣಿಸದಿರುವುದೇ ಇದಕ್ಕೆ ಕಾರಣ. ಸದ್ಯಕ್ಕೆ ಪ್ರತಿದಿನ 175 ರಿಂದ 180 ಬಸ್‌ಗಳು ಮಾತ್ರ ಚಲಿಸುತ್ತವೆ. ಲಾಕ್‌ಡೌನ್ ಜಾರಿಯಾಗುವ ಮುನ್ನ ಪ್ರತಿದಿನ 350 ಬಸ್‌ಗಳು ಸಂಚರಿಸುತ್ತಿದ್ದವು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಕರೋನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರು ಸಂಚರಿಸುವುದು ಕಡಿಮೆಯಾಗಲಿದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಸ್ವಂತ ವಾಹನಗಳ ಬಳಕೆ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿದ್ದವು. ಈಗ ಗೋವಾದಲ್ಲಿ ಸಾರ್ವಜನಿಕ ಸಾರಿಗೆ ಕ್ಷೀಣಿಸಿ, ಸ್ವಂತ ವಾಹನಗಳ ಬಳಕೆ ಹೆಚ್ಚಾಗಿದೆ.

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಇದೇ ವೇಳೆ ಕರೋನಾ ವೈರಸ್ ಕಾರಣದಿಂದಾಗಿ ಕಾರು ಹಾಗೂ ಬೈಕುಗಳ ಮಾರಾಟವು ಹೆಚ್ಚಲಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಅದರಂತೆ ಲಾಕ್‌ಡೌನ್ ನಂತರ ವಾಹನಗಳ ಮಾರಾಟವು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಮುಂಬರುವ ದಿನಗಳಲ್ಲಿ ವಾಹನ ಮಾರಾಟ ಪ್ರಮಾಣವು ಮತ್ತಷ್ಟು ಹೆಚ್ಚಾಗಲಿದೆ ಎಂಬುದು ವಾಹನ ತಯಾರಕ ಕಂಪನಿಗಳ ನಿರೀಕ್ಷೆಯಾಗಿದೆ. ಕರೋನಾ ವೈರಸ್ ಕಾರಣಕ್ಕೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಕಾರಣದಿಂದಾಗಿ ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲಿ ವಾಹನಗಳ ಮಾರಾಟವು ತೀವ್ರವಾಗಿ

ಕುಸಿದಿತ್ತು.

ಕರೋನಾ ವೈರಸ್ ಎಫೆಕ್ಟ್: ಜನರಿಲ್ಲದೇ ಭಣಗುಡುತ್ತಿವೆ ಬಸ್ಸುಗಳು

ಆದರೆ ಈಗ ಅದೇ ಕರೋನಾ ವೈರಸ್‌ನಿಂದಾಗಿ ವಾಹನಗಳ ಮಾರಾಟ ಪ್ರಮಾಣವು ಏರಿಕೆಯಾಗುತ್ತಿದೆ. ಗೋವಾದಲ್ಲಿ ಮಾತ್ರವಲ್ಲದೆ ಭಾರತದ ವಿವಿಧ ರಾಜ್ಯಗಳಲ್ಲಿಯೂ ಸಹ ಜನರು ಬಸ್‌ಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಬಸ್ ಮಾಲೀಕರು ನಷ್ಟವನ್ನು ಅನುಭವಿಸುತ್ತಿದ್ದಾರೆ.

ಚಿತ್ರಕೃಪೆ: ಕೆಟಿಸಿ

Most Read Articles

 

Kannada
English summary
KTC sees drastic drop in passenger count due to Covid 19 effect. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X