ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಅಪ್ರಾಪ್ತ ವಯಸ್ಕರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಭಾರತದಲ್ಲಿ ದೊಡ್ಡ ಅಪರಾಧವಾಗಿದೆ. ಇದರ ವಿರುದ್ಧ ಕಾನೂನುಗಳಿವೆ. ಆದರೂ ಕೆಲವು ತಂದೆ ತಾಯಿಯರು ಚಾಲನಾ ಪರವಾನಗಿ ಪಡೆಯುವ ಕಾನೂನುಬದ್ಧ ವಯಸ್ಸನ್ನು ಇನ್ನೂ ತಲುಪದ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಲು ಪ್ರೋತ್ಸಾಹ ನೀಡುತ್ತಾರೆ.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಇಂತಹುದೇ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ. ಬಾಲಕನೊಬ್ಬ ಕಾರು ಚಾಲನೆ ಮಾಡುತ್ತಿರುವ ದೃಶ್ಯವನ್ನು ಇನ್ನೊಂದು ಕಾರಿನಲ್ಲಿದ್ದವರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೊವನ್ನು ಟ್ವಿಟರ್‍‍ನಲ್ಲಿ ಶೇರ್ ಮಾಡಿರುವ ಟೈಗರ್ ನೀಲೇಶ್‍‍ರವರು ಈ ಘಟನೆಯು ಹೈದರಾಬಾದ್‍‍ನಲ್ಲಿರುವ ರಿಂಗ್ ರಸ್ತೆಯಲ್ಲಿ ನಡೆದಿರುವುದಾಗಿ ತಿಳಿಸಿದ್ದಾರೆ.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಇದರ ಜೊತೆಗೆ ಈ ಘಟನೆ ನಡೆದಿರುವ ದಿನಾಂಕ ಹಾಗೂ ಸಮಯವನ್ನು ಸಹ ನಮೂದಿಸಿ, ಹೈದರಾಬಾದ್ ಸಂಚಾರಿ ಪೊಲೀಸ್ ಹಾಗೂ ಸಿಟಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಈ ವೀಡಿಯೊದಲ್ಲಿರುವ ಬೆಚ್ಚಿ ಬೀಳಿಸುವ ಸಂಗತಿಯೆಂದರೆ, ಬಾಲಕನು ಸ್ಟಿಯರಿಂಗ್‍‍ನಿಂದ ಮಾರುತಿ ಸುಜುಕಿ ಆಲ್ಟೋ ಕಾರ್ ಅನ್ನು ನಿಯಂತ್ರಿಸುತ್ತಿರುವುದು.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಈ ವೀಡಿಯೊ ಮಾಡುತ್ತಿರುವ ವ್ಯಕ್ತಿಯು ಬಾಲಕನ ಮುಖವನ್ನು ಸಹ ಸೆರೆಹಿಡಿದಿದ್ದಾರೆ. ಕಾರ್ ಅನ್ನು ಚಲಾಯಿಸುತ್ತಿರುವ ಬಾಲಕನ ವಯಸ್ಸು ಸುಮಾರು 10 ವರ್ಷಗಳಿರಬಹುದು. ಈ ವಯಸ್ಸಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಕಾರ್ ಅನ್ನು ಚಲಾಯಿಸುವುದು ಬಲು ಅಪಾಯಕಾರಿ.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಬಾಲಕನು ಡ್ರೈವ್ ಮಾಡುತ್ತಿರುವ ಕಾರಿನಲ್ಲಿ ಇನ್ನೂ ಹಲವಾರು ಜನರಿದ್ದಾರೆ. ಅವರು ಬಾಲಕನ ಮನೆಯವರಾಗಿರುವ ಸಾಧ್ಯತೆಗಳಿವೆ. ರಿಂಗ್ ರೋಡಿನಿಂದ ಹೊರ ಹೋಗುವುದಕ್ಕಿಂತ ಮುಂಚೆ ಕಾರ್ ಅನ್ನು ನಿಲ್ಲಿಸಿ ಬೇರೆಯವರು ಕಾರ್ ಅನ್ನು ಡ್ರೈವ್ ಮಾಡಿದ್ದಾರೆ.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಪೊಲೀಸರಿಗೆ ಸಿಕ್ಕಿ ಬೀಳಬಾರದೆಂಬುದು ಇದರ ಹಿಂದಿರುವ ಉದ್ದೇಶವಾಗಿದೆ. ಈ ವೀಡಿಯೊ ಇಂಟರ್‍‍ನೆಟ್‍‍ನಲ್ಲಿ ವೈರಲ್ ಆದ ತಕ್ಷಣ, ಹೈದರಾಬಾದಿನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಟ್ವೀಟಿಗೆ ಹಲವರನ್ನು ಟ್ಯಾಗ್ ಮಾಡಿ ರೀಟ್ವೀಟ್ ಮಾಡಿದ್ದಾರೆ.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ನಂತರ ಕುಶಾಯ್‍‍ಗುಡಾ ಸಂಚಾರಿ ಪೊಲೀಸ್ ಠಾಣೆಯವರು ಈ ಕಾರಿನ ಮಾಲೀಕನಿಗೆ ವಿಧಿಸಲಾದ ದಂಡದ ರಸೀದಿಗಳನ್ನು ಅಪ್‍‍ಲೋಡ್ ಮಾಡಿದ್ದಾರೆ. ಪೊಲೀಸರು ಬಾಲಕನಿಗೆ ಕಾರು ಚಲಾಯಿಸಲು ಅವಕಾಶ ಕೊಟ್ಟ ಪೋಷಕರ ವಿರುದ್ಧ ಯಾವುದಾದರೂ ಕ್ರಮಗಳನ್ನು ಕೈಗೊಂಡಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ನೀಡಿಲ್ಲ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಕಾರಿನ ಮಾಲೀಕರಿಗೆ ಪೊಲೀಸರು ರೂ.2,000 ದಂಡ ವಿಧಿಸಿದ್ದಾರೆ. ಇದರಲ್ಲಿ ಅವಿಧೇಯತೆ ತೋರಿದ್ದಕ್ಕಾಗಿ ರೂ.500, ಅಪಾಯಕಾರಿ ಚಾಲನೆಗಾಗಿ ರೂ.1,000 ಹಾಗೂ ಬಾಲಕನು ಕಾರು ಚಾಲನೆ ಮಾಡಿದ್ದಕ್ಕಾಗಿ ರೂ.500 ದಂಡ ವಿಧಿಸಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಇದರ ಜೊತೆಗೆ ಈ ಹಿಂದೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿಧಿಸಲಾಗಿರುವ ದಂಡದ ಮೊತ್ತಗಳೂ ಸೇರಿವೆ. ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ದಂಡ ವಿಧಿಸಿ, ಜೈಲು ಶಿಕ್ಷೆ ವಿಧಿಸಬಹುದಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಕಳೆದ ವರ್ಷ, ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಓಡಿಸಲು ಅವಕಾಶ ನೀಡಿದ್ದ ಅನೇಕ ಪೋಷಕರನ್ನು ಜೈಲಿಗೆ ಕಳುಹಿಸಲಾಗಿತ್ತು. ಇಂತಹ ಘಟನೆಗಳಲ್ಲಿ ಪೋಷಕರಿಗೆ ಶಿಕ್ಷೆಯಾಗದಿದ್ದರೆ, ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ವಾಹನಗಳನ್ನು ಅಪ್ರಾಪ್ತ ವಯಸ್ಕರು ಚಾಲನೆ ಮಾಡುವುದು ಅಪಾಯಕಾರಿ. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಬೇಕೆಂದು ಬಯಸಿದರೆ, ಖಾಸಗಿ ಟ್ರ್ಯಾಕ್‌ಗಳಿಗೆ ಹೋಗಿ ವಾಹನ ಚಲಾಯಿಸಬಹುದು.

ರಿಂಗ್ ರೋಡ್‍‍‍ನಲ್ಲಿ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ

ಖಾಸಗಿ ಟ್ರ್ಯಾಕ್‌ಗಳಲ್ಲಿ ಚಾಲನೆ ಮಾಡಲು ಯಾವುದೇ ಲೈಸೆನ್ಸ್ ಬೇಕಾಗಿಲ್ಲ. ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನಗಳನ್ನು ಚಾಲನೆ ಮಾಡುವುದು ಕಾನೂನು ಬಾಹಿರ.

Source: TigerNeelesh/Twitter

Most Read Articles

Kannada
English summary
10 year old kid spotted driving car on Ring Road Cops issue challan - Read in Kannada
Story first published: Wednesday, December 11, 2019, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more