ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ದೇಶದಲ್ಲಿ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ತೈಲ ಬೆಲೆ ಏರಿಕೆ ಹಾಗೂ ಇಂಧನ ಚಾಲಿತ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಳದಿಂದಾಗಿ ಜನರು ಇವಿ ವಾಹಗಳತ್ತ ಮುಖ ಮಾಡುತ್ತಿದ್ದಾರೆ. ವಾಹನ ಪೋರ್ಟಲ್‌ನ ಮಾಹಿತಿಯ ಪ್ರಕಾರ, 3 ಆಗಸ್ಟ್ 2022 ರಂತೆ ದೇಶದಲ್ಲಿ 13,92,265 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ವ್ಯವಹಾರಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಅವರು ಎಲೆಕ್ಟ್ರಿಕ್ ವಾಹನಗಳ ಕುರಿತು ಮಾಹಿತಿ ನೀಡಿ, ತ್ರಿಚಕ್ರ ವಾಹನಗಳು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿವೆ ಎಂದು ತಿಳಿಸಿದರು.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು 7,93,370 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ನೋಂದಣಿಯಾಗಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಂಖ್ಯೆ 54,4643 ಯುನಿಟ್ ಆಗಿದೆ. ಅದೇ ಸಮಯದಲ್ಲಿ, ನೋಂದಾಯಿತ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ 54,252 ಯುನಿಟ್ ಆಗಿದೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಜ್ಯ ಸಚಿವರು ತಮ್ಮ ಉತ್ತರದಲ್ಲಿ ಸದನಕ್ಕೆ ತಿಳಿಸಿದರು. ದೇಶದಲ್ಲಿ ಬ್ಯಾಟರಿ ಸೆಲ್ ಉದ್ಯಮವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮೇ 12, 2021 ರಂದು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್ಐ ಸ್ಕೀಮ್) ಅನ್ನು ಪ್ರಾರಂಭಿಸಿದೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನ ಮತ್ತು ಘಟಕಗಳ ಉದ್ಯಮಕ್ಕೆ ಬಜೆಟ್‌ನಲ್ಲಿ 25,938 ಕೋಟಿ ರೂ. ಮೀಸಲಿಡಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳನ್ನು ತಯಾರಿಸುವ ಅನೇಕ ಕಂಪನಿಗಳು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್‌ನಿಂದ ಪ್ರಯೋಜನ ಪಡೆಯುತ್ತವೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಬಳಸುವ ಚಾರ್ಜಿಂಗ್ ಸ್ಟೇಷನ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಸರ್ಕಾರವು ಶೇ18 ರಿಂದ 5 ಕ್ಕೆ ಇಳಿಸಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬ್ಯಾಟರಿ ಚಾಲಿತ ವಾಹನಗಳಿಗೆ ಹಸಿರು ಲೈಸೆನ್ಸ್ ಪ್ಲೇಟ್‌ಗಳನ್ನು ನೀಡಲಾಗುವುದು ಮತ್ತು ಪರ್ಮಿಟ್ ಶುಲ್ಕದಿಂದ ವಿನಾಯಿತಿ ನೀಡಲಾಗುವುದು ಎಂದು ಪ್ರಕಟಿಸಿದೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ತೆಗೆದುಹಾಕಲು ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಆರಂಭಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇನ್ನು ಎರಡ್ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳಿಗೆ ಸರಿಸಮವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಪ್ರಸ್ತುತ, ಇಂಧನ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಬೆಲೆ ತುಂಬಾ ಹೆಚ್ಚಾಗಿದೆ, ಇದರಿಂದಾಗಿ ಜನರು ಅವುಗಳನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾದರೆ, ಜನರು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಪ್ರಸ್ತುತ, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಕೇವಲ ಶೇ5 ರಷ್ಟಿದೆ, ಆದರೆ ಪೆಟ್ರೋಲ್ ವಾಹನಗಳ ಮೇಲೆ ಶೇಕಡಾ 48 ಆಗಿದೆ. ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಲ್ಲಿ ಬಳಸಲಾಗುವ ಲಿಥಿಯಂನ ಹೆಚ್ಚಿನ ಬೆಲೆಯು ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ, ಆದರೆ ಭವಿಷ್ಯದಲ್ಲಿ ಲಿಥಿಯಂನ ಹೆಚ್ಚಿನ ಉತ್ಪಾದನೆಯು ಬೆಲೆಯನ್ನು ಕಡಿಮೆ ಮಾಡುತ್ತದೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಇಳಿಕೆ ಕಾಣಲಿದೆ. ಪ್ರಸ್ತುತ, ಭಾರತದ ಲಿಥಿಯಂ ಬ್ಯಾಟರಿ ಅಗತ್ಯತೆಯ ಶೇ 81 ರಷ್ಟನ್ನು ಸ್ಥಳೀಯ ಉತ್ಪಾದಕರು ಪೂರೈಸುತ್ತಿದ್ದಾರೆ. ಪರ್ಯಾಯ ಬ್ಯಾಟರಿ ತಂತ್ರಜ್ಞಾನಗಳ ಅಭಿವೃದ್ಧಿಯ ಕುರಿತು ಸಂಶೋಧನೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಪ್ರಗತಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.

ದೇಶದಲ್ಲಿ 13 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಶೇ50 ರಷ್ಟು ಇ-ಆಟೋಗಳದ್ದೇ ಅಬ್ಬರ

2030 ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಖಾಸಗಿ ಕಾರುಗಳಿಗೆ ಶೇ30, ವಾಣಿಜ್ಯ ಕಾರುಗಳಿಗೆ ಶೇ70, ಬಸ್‌ಗಳಿಗೆ ಶೇ 40 ಮತ್ತು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಶೇ 80 ಎಂದು ಕೇಂದ್ರ ಸರ್ಕಾರ ನಿರೀಕ್ಷಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಕಲ್ಲಿದ್ದಲಿನ ಬದಲು ಸೌರ ಮತ್ತು ಬಯೋಮಾಸ್‌ನಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಹೈಡ್ರೋಜನ್ ಫ್ಯೂಯಲ್ ಸೆಲ್ ಗಳ ಮೂಲಕವೂ ವಾಹನಗಳನ್ನು ಓಡಿಸುವಂತೆ ಗ್ರೀನ್ ಹೈಡ್ರೋಜನ್ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

Most Read Articles

Kannada
English summary
13 lakh electric vehicles registered in the country
Story first published: Saturday, August 6, 2022, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X