13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೊಯೊಟಾ ಕಾರುಗಳು ವಿಶ್ವಾಸಾರ್ಹವಾಗಿದ್ದು, ಹಲವು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಈ ಕಾರಣದಿಂದಾಗಿ ಬೆಲೆ ಹೆಚ್ಚಾದರೂ ಸಹ ಬಹುತೇಕ ಜನರು ಟೊಯೊಟಾ ಕಾರುಗಳನ್ನೇ ಖರೀದಿಸುತ್ತಾರೆ.

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೊಯೊಟಾ ಕಾರುಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯವಾಗಿವೆ. ಟೊಯೊಟಾ ಕಂಪನಿಯ ಇನೋವಾ ಭಾರತದ ಜನಪ್ರಿಯ ಕಾರುಗಳಲ್ಲಿ ಒಂದು. ಟೊಯೊಟಾ ಇನೋವಾ ಕಾರುಗಳು ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿವೆ. ಟೊಯೊಟಾ ಇನೋವಾ ಕಾರುಗಳು ಯಾವುದೇ ತೊಂದರೆಗಳಿಲ್ಲದೆ ಭಾರತೀಯ ರಸ್ತೆಗಳಲ್ಲಿ ಲಕ್ಷಾಂತರ ಕಿ.ಮೀ ಚಲಿಸಬಲ್ಲವು.

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಹಿಂದೆ ಇದೇ ರೀತಿಯ ಹಲವು ಸುದ್ದಿಗಳನ್ನು ಪ್ರಕಟಿಸಲಾಗಿತ್ತು. ಟೊಯೊಟಾ ಇನೋವಾ ಕಾರೊಂದು 6 ಲಕ್ಷ ಕಿ.ಮೀಗಳಷ್ಟು ದೂರ ಚಲಿಸಿದ ಬಗ್ಗೆ ಪ್ರಕಟಿಸಲಾಗಿತ್ತು. ಇದರ ಜೊತೆಗೆ 8 ಲಕ್ಷ ಕಿ.ಮೀಗಿಂತ ಹೆಚ್ಚು ದೂರ ಚಲಿಸಿದ ಟೊಯೊಟಾ ಕ್ವಾಲಿಸ್ ಕಾರಿನ ಬಗ್ಗೆಯೂ ಪ್ರಕಟಿಸಲಾಗಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈಗ ಟೊಯೊಟಾ ಇನೋವಾ ಕಾರೊಂದು 10 ಲಕ್ಷ ಕಿ.ಮೀಗಿಂತ ಹೆಚ್ಚು ಸಂಚರಿಸಿದ್ದರೂ ಇನ್ನೂ ಉತ್ತಮ ಸ್ಥಿತಿಯಲ್ಲಿರುವ ಬಗ್ಗೆ ವರದಿಯಾಗಿದೆ. ಟೊಯೊಟಾದ ಅಧಿಕೃತ ಡೀಲರ್ ಅನಿಮಲಿಸ್ ಟೊಯೊಟಾ, ಈ ಇನೋವಾ ಕಾರಿನ ಫೋಟೋವನ್ನು ಬಿಡುಗಡೆಗೊಳಿಸಿದೆ.

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಟೊಯೊಟಾ ಇನೋವಾ ಕಾರು 10 ಲಕ್ಷ ಕಿ.ಮೀ ಚಲಿಸಿದರೂ ಯಾವುದೇ ತೊಂದರೆಯಿಲ್ಲದೆ ಚಲಿಸುತ್ತಿದೆ ಎಂದು ವರದಿಯಾಗಿದೆ. ಈ ಕಾರು 10 ಲಕ್ಷ ಕಿ.ಮೀ ಚಲಿಸಿದ ಮೊದಲ ಟೊಯೊಟಾ ಇನೋವಾ ಕಾರ್ ಆಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರು ಖಾಸಗಿ ನಂಬರ್ ಪ್ಲೇಟ್ ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಲಕ್ಷಾಂತರ ಕಿ.ಮೀ ಸಂಚರಿಸುವ ಟೊಯೊಟಾ ಇನೋವಾ ಕಾರುಗಳು ಸಾಮಾನ್ಯವಾಗಿ ಕಮರ್ಷಿಯಲ್ ನಂಬರ್ ಪ್ಲೇಟ್ ಗಳನ್ನು ಹೊಂದಿರುತ್ತವೆ. ಆ ಕಾರುಗಳನ್ನು ಕ್ಯಾಬ್ ಗಳಾಗಿ ಬಳಸುವುದರಿಂದ ಅವು ಲಕ್ಷಾಂತರ ಕಿ.ಮೀ ಚಲಿಸುತ್ತವೆ.

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರು ವೆಲ್ಮುರುಗನ್‌ ಎಂಬುವವರಿಗೆ ಸೇರಿದ್ದು, 2007ರ ಜುಲೈ ತಿಂಗಳಿನಲ್ಲಿ ಈ ಕಾರನ್ನು ನೋಂದಾಯಿಸಲಾಗಿದೆ. 13 ವರ್ಷ ಹಳೆಯದಾದ ಈ ಕಾರು ಪ್ರತಿವರ್ಷ ಸುಮಾರು 80,000ಕ್ಕೂ ಕಿ.ಮೀಗಳಷ್ಟು ಚಲಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

10 ಲಕ್ಷ ಕಿ.ಮೀ ಚಲಿಸಿರುವ ಈ ಟೊಯೊಟಾ ಇನೋವಾ ಕಾರಿನಲ್ಲಿ 2.5 ಲೀಟರಿನ ಟಿ -4 ಡಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಹೆಚ್ಚಿನ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ.

13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾಲ ಕಾಲಕ್ಕೆ ಸರಿಯಾಗಿ ಕಾರುಗಳನ್ನು ಸರ್ವೀಸ್ ಮಾಡಿಸುವ ಮೂಲಕ ಕಾರುಗಳು ಹೆಚ್ಚು ದೂರ ಚಲಿಸುವಂತೆ ನೋಡಿಕೊಳ್ಳಬಹುದು.

Most Read Articles

Kannada
English summary
13 year old Toyota Innova travelled 10 lakh kms. Read in Kannada.
Story first published: Wednesday, September 23, 2020, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X