15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

By Nagaraja

ಇದನ್ನು ಓದಿದಾಗ ನಿಮ್ಮ ಕುತೂಹಲ ಮೂಡಬಹುದು. ತೈವಾನ್‌ನಲ್ಲಿ ಮೊದಲ ಪಗಾನಿ ಹ್ಯೂರಾ ಕಾರನ್ನು ಮಾಲಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಇನ್ನು ಕೆಲವು ವರ್ಷಗಳ ಕಾಲ ಈ ದುಬಾರಿ ಕಾರನ್ನು ರಸ್ತೆಗಿಳಿಸುವಂತಿಲ್ಲ ? ಇದನ್ನು ಕೇಳದಾಗ ನಿಮ್ಮಲ್ಲಿ ಅಚ್ಚರಿ ಮೂಡಬಹುದು.

ಇವನ್ನೂ ಓದಿ: ತಪ್ಪಿದ ವಿಮಾನ ದುರಂತ

ಹೌದು, ಇದು ತೈವಾನ್‌ನಿಂದ ವರದಿಯಾಗಿರುವ ಸುದ್ದಿ. ದುಬಾರಿ ಪಗಾನಿ ಹ್ಯೂರಾ ಕೊಡುಗೆಯಾಗಿ ಗಿಟ್ಟಿಸಿಕೊಂಡಿರುವ ಬಾಲಕ 15ರ ಹರೆಯವನಾಗಿದ್ದಾನೆ. ಅಂದರೆ ಇನ್ನಷ್ಟೇ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳಬೇಕಾಗಿರುವ ಬಾಲಕನಿಗೆ ದುಬಾರಿ ಕಾರು ಹುಟ್ಟುಹಬ್ಬದ ಕೊಡುಗೆಯಾಗಿ ಲಭಿಸಿದೆ.

15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

ಈ 15ರ ಬಾಲಕ ಇನ್ನಷ್ಟೇ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳಬೇಕಾಗಿರುವುದರಿಂದ ಸದ್ಯಕ್ಕೆ ಪಗಾನಿ ರಸ್ತೆಗಿಳಿಯುವುದು ಅಸಾಧ್ಯದ ಮಾತಾಗಿದೆ. ಅಲ್ಲದೆ ಈ ಹಳದಿ ಚೆಲುವೆ ವಿನ್ಯಾಸದಲ್ಲಿ ಇನ್ನಷ್ಟು ಪರಿಷ್ಕರಣೆ ನಿರೀಕ್ಷಿಸಬಹುದಾಗಿದೆ.

ಚಿತ್ರ ಕೃಪೆ: ಫೇಸ್ ಬುಕ್

15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

ಅಷ್ಟಕ್ಕೂ ನಿಮಗೂ ಪಗಾನಿ ಹ್ಯೂರಾ ಬಗ್ಗೆ ಗೊತ್ತಿಲ್ಲವಾದರೆ ನಾವು ಚೊಕ್ಕ ವಿವರಣೆ ಕೊಡಲಿದ್ದೇವೆ. 2011ರಲ್ಲಿ ಪರಿಚಯವಾಗಿರುವ ಮರ್ಸಿಡಿಸ್ ಎಎಂಜಿ ಎಂ158 ವಿ12 ಟ್ವಿನ್ ಟರ್ಬೊ ಎಂಜಿನ್ ನಿಯಂತ್ರಿತ ಪಗಾನಿ ಭರ್ಜರಿ 730 ಅಶ್ವಶಕ್ತಿ (1000 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಚಿತ್ರ ಕೃಪೆ: ಫೇಸ್ ಬುಕ್

15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

ಇದರ ಮೂಲ ದರ 1,06,000 ಯುರೋಗಳಾಗಿವೆ. ಅಂದರೆ ನೀವು ಕೆಲವೊಂದು ಬದಲಾವಣೆ ಬಯಸುವುದಾದ್ದಲ್ಲಿ ಬೆಲೆ ಇನ್ನಷ್ಟು ದುಬಾರಿಯಾಗಲಿದೆ.

ಚಿತ್ರ ಕೃಪೆ: ಫೇಸ್ ಬುಕ್

15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

ತೈವಾನ್‌ನ ನಿವಾಸಿಯಾಗಿರುವ 15ರ ಬಾಲಕನಿಗೆ ಹುಟ್ಟುಹಬ್ಬದ ಕೊಡುಗೆಯಾಗಿ ಪಗಾನಿ ಲಭಿಸಿದೆ. ಅಷ್ಟೇ ಯಾಕೆ ಐಷಾರಾಮಿ ಪಗಾನಿ ಹ್ಯೂರಾ ಗಿಟ್ಟಿಸಿಕೊಂಡ ಮೊದಲ ತೈವಾನ್ ಪ್ರಜೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾನೆ.

ಚಿತ್ರ ಕೃಪೆ: ಫೇಸ್ ಬುಕ್

15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

ಇನ್ನು ಕಾರಲ್ಲಿ ಅನೇಕ ಕಸ್ಟಮೈಸ್ಡ್ ಆಯ್ಕೆಗಳಿದ್ದು ಜೊತೆಗೆ ಚಿನ್ನ, ಕಪ್ಪು, ಲಿಕ್ವಿಡ್ ಸಿಲ್ವರ್‌ಗಳಂತಹ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಇವೆಲ್ಲಕ್ಕೂ ಹೆಚ್ಚುವರಿ ವೆಚ್ಚ ತಗುಲಲಿದೆ.

ಚಿತ್ರ ಕೃಪೆ: ಫೇಸ್ ಬುಕ್

15ರ ಬಾಲಕನಿಗೆ ಪಗಾನಿ ಹ್ಯೂರಾ ಹುಟ್ಟುಹಬ್ಬದ ಕೊಡುಗೆ

ಒಟ್ಟಿನಲ್ಲಿ ಪಗಾನಿ ಹ್ಯೂರಾ ಗಿಟ್ಟಿಸಿಕೊಂಡಿರುವ ಬಾಲಕನ ಮನೋಸ್ಥಿತಿ ಹೇಗಿದೆ ಎಂಬುದು ಮಾತ್ರ ಇದುವರೆಗೆ ತಿಳಿದು ಬಂದಿಲ್ಲ.

ಚಿತ್ರ ಕೃಪೆ: ಫೇಸ್ ಬುಕ್

Most Read Articles

Kannada
English summary
The first Pagani Huayra has just been delivered in Taiwan, but it appears that the vehicle will not be driven, at least for now. No, it is not broken but the person who received the supercar is actually a 15 years old boy and he doesn’t have a driving license.
Story first published: Thursday, August 21, 2014, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X