ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು ಸಂಚಾರಿ ನಿಯಮಗಳ ಪ್ರಕಾರ ತಪ್ಪು ಎಂಬುವುದು ಗೊತ್ತಿದ್ದರೂ ಸಹ ಬಹುತೇಕ ವಾಹನ ಚಾಲಕರು ನಿಯಮ ಪಾಲನೆ ಮಾಡುವುದೇ ಇಲ್ಲ. ಜೊತೆಗೆ ಅಪ್ರಾಪ್ತ ವಯಸ್ಸಿನ ಬಾಲಕರು ಕೂಡಾ ಬೈಕ್ ಚಾಲನೆ ಮಾಡುವುದು ಹೆಚ್ಚಾಗಿದ್ದು, ಇದರ ವಿರುದ್ಧ ಭರ್ಜರಿ ಕಾರ್ಯಚಾರಣೆ ನಡೆಸಿರುವ ಟ್ರಾಫಿಕ್ ಪೊಲೀಸರು 171 ಅಪ್ರಾಪ್ತ ಬಾಲಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ಪ್ರವೃತ್ತಿಗಳನ್ನು ತಪ್ಪಿಸಲು ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ ಬೈಕ್ ಸವಾರಿ ಮಾಡುತ್ತಿದ್ದ ಅಪ್ರಾಪ್ತರ ವಿರುದ್ಧ ಹೈದ್ರಾಬಾದ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಕೆಲ ದಿನಗಳ ಹಿಂದಷ್ಟೇ ಹೈದ್ರಾಬಾದ್‌ನಲ್ಲಿಯೇ ಅಪ್ರಾಪ್ತ ಮಕ್ಕಳಿಗೆ ಬೈಕ್ ಚಾಲನೆ ಮಾಡಲು ಬಿಟ್ಟಿದ್ದ ತಪ್ಪಿಗೆ ಬರೋಬ್ಬರಿ 200ಕ್ಕೂ ಪೋಷಕರನ್ನು ಜೈಲಿಗೆ ಕಳುಹಿಸಿದ್ದ ಪೊಲೀಸರು, ಇದೀಗ ಮತ್ತೊಮ್ಮೆ ವಿಶೇಷ ಕಾರ್ಯಚರಣೆ ನಡೆಸುವ ಮೂಲಕ ಕೇವಲ ಎರಡು ದಿನದಲ್ಲಿ ಬರೋಬ್ಬರಿ 171 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಸಂಚಾರಿ ನಿಯಮದ ಪ್ರಕಾರ 18 ವರ್ಷದೊಳಗಿನ ಯುವಕರು ಬೈಕ್ ಚಾಲನೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಹೀಗಿರುವಾಗ ಸಂಚಾರಿ ನಿಯಮ ಮಿರಿ ಬೈಕ್ ರೈಡ್ ಮಾಡುವುದಲ್ಲದೇ ಸ್ಪೀಡ್ ರೈಡಿಂಗ್, ವೀಲ್ಹಿಂಗ್, ಡ್ರ್ಯಾಗ್ ರೇಸ್ ಮಾಡುತ್ತಿರುವ ಅಪ್ರಾಪ್ತ ಬೈಕ್ ಸವಾರರು ಹಲವಾರು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಇದರಿಂದ ಹೈದ್ರಾಬಾದ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ನಗರದ ವಿವಿಧ ಭಾಗಗಳಲ್ಲಿ ಏಪ್ರಿಲ್ 22 ಮತ್ತು 23ರಂದು ಬರೋಬ್ಬರಿ 171 ಕೇಸ್‌ಗಳನ್ನು ದಾಖಲಿಸಿರುವುದ್ದಲ್ಲದೇ ಠಾಣೆಗೆ ಪೋಷಕರನ್ನು ಕರೆಯಿಸಿ ಖಡಕ್ ವಾರ್ನ್ ಮಾಡಿದ್ದಾರೆ. ಜೊತೆಗೆ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡಿರುವ ಪೊಲೀಸರು, ಲೈಸೆನ್ಸ್ ಸಿಗುವ ತನಕ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳ ಕೈಗೆ ವಾಹನ ನೀಡಬಾರದೆಂದು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಒಂದು ವೇಳೆ ಅಪ್ರಾಪ್ತ ಬೈಕ್ ಸವಾರರು ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ ಅವರ ಪೋಷಕರನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿರುವ ಪೊಲೀಸರು, ಅಪ್ರಾಪ್ತ ಯುವಕರ ಬೈಕ್ ಸವಾರಿ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಇನ್ನು ಕೆಲವು ತಿಂಗಳು ಕಾಲ ಮುಂದುವರಿಸುವ ಸೂಚನೆ ನೀಡಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಮೋಟಾರ್ ವೆಹಿಕಲ್ ಆಕ್ಟ್ 180ರ ಪ್ರಕಾರ, ಅಪ್ರಾಪ್ತ ಬೈಕ್ ಸವಾರಿಗೆ ರೂ. 500 ದಂಡ ಇಲ್ಲವೇ 3 ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದರಿಂದ ಬಹುತೇಕರು ದಂಡ ಪಾವತಿಸಿ ಜೈಲು ಶಿಕ್ಷೆಯಿಂದ ಬಚಾವ್ ಆಗುತ್ತಿದ್ದಾರೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ!

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಆದ್ರೆ ಹೈದ್ರಾಬಾದ್ ಪೊಲೀಸರು ಇದನ್ನು ತಡೆಯಲು ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಒಂದನೇ ಬಾರಿ ಸಿಕ್ಕಿಬಿದ್ದಲ್ಲಿ ದಂಡ ವಸೂಲಿ ಜೊತೆಗೆ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳುವ ಪೊಲೀಸರು, ಎರಡನೇ ಬಾರಿ ಸಿಕ್ಕಿಬಿಳುವ ಅಪ್ರಾಪ್ತ ಬೈಕ್ ಸವಾರರಿಗೆ ಭರ್ಜರಿಯಾಗಿ ಬಿಸಿ ಮುಟ್ಟಿಸುತ್ತಿದ್ದಾರೆ.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ದಂಡದ ಜೊತೆಗೆ ಅಪ್ರಾಪ್ತರಿಗೆ ಬೈಕ್ ನೀಡಿದ ತಪ್ಪಿಗೆ ಪೋಷಕರನ್ನು 1 ದಿನದ ಮಟ್ಟಿಗೆ ಜೈಲಿಗೂ ಕಳುಹಿಸುತ್ತಿರುವ ಪೊಲೀಸರು, ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗೆ ಸಾಕಷ್ಟು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೂ ಕೂಡಾ ಅಪ್ರಾಪ್ತರ ಬೈಕ್ ಸವಾರಿ ಪ್ರಕರಣಗಳು ಮಾತ್ರ ಅಷ್ಟೇ ಪ್ರಮಾಣದಲ್ಲಿ ದಾಖಲಾಗುತ್ತಿವೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಕಠಿಣ ನಿಯಮಗಳನ್ನು ಸದ್ಯದಲ್ಲೇ ಜಾರಿ ತರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡುವ ಮುನ್ನ ಎಚ್ಚರವಾಗಿರುವುದು ಒಳಿತು.

ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಇದರಿಂದಾಗಿ ಎಚ್ಚರ ವಹಿಸಬೇಕಿರುವ ಪೋಷಕರು ಮಕ್ಕಳಿಗೆ ಬೈಕ್ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಬೈಕ್ ನೀಡಿ. ಜೊತೆಗೆ ಅಪ್ರಾಪ್ತ ಮಕ್ಕಳು ಬೈಕ್ ಚಾಲನೆ ಮಾಡುವುದರ ಮೇಲೆ ನಿಗಾ ಇರಿಸುವುದಲ್ಲದೇ, ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಉತ್ತಮ.

Most Read Articles

Kannada
English summary
172 Minors Booked For Under-age Driving In Hyderabad. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X