ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಬ್ರಿಟನ್ ಮೂಲದ ಎಂಜಿ ಹೆಕ್ಟರ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ವಾಹನವಾಗಿ ಹೆಕ್ಟರ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಎಂಜಿ ಹೆಕ್ಟರ್ ಕಂಪನಿಯು ಬ್ರಿಟನ್ ಮೂಲದಾಗಿದ್ದರೂ ಚೀನಾ ದೇಶದ ವಾಹನವಾಗಿದೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಎಂಜಿ ಹೆಕ್ಟರ್ ಚೀನಾದ ಕಂಪನಿಗಳಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಚೀನಾದಲ್ಲಿ ಸೈಕ್ ಗ್ರೂಪ್ ಕಂಪನಿಯು ಎಂಜಿ ಹೆಕ್ಟರ್ ಎಸ್‍‍ಯುವಿಯನ್ನು ಬೌಜುನ್ 530 ಎಸ್‍‍ಯುವಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಇದೇ ಬೌಜುನ್ 530 ಎಸ್‍‍ಯುವಿಯನ್ನು ಭಾರತದಲ್ಲಿ ಎಂಜಿ ಹೆಕ್ಟರ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಎಂಜಿ ಹೆಕ್ಟರ್ ಭಾರತದ ಮೊದಲ ಕನೆಕ್ಟಿವಿಟಿ ಕಾರ್ ಆಗಿದೆ. ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಕಾರು ಇನ್ಫೋಟೇನ್‍‍ಮೆಂಟ್ ಡಿವೈಸ್ ಮೂಲಕ ನೇರವಾಗಿ ಇಂಟರ್‍‍ನೆಟ್‍‍ಗೆ ಆಕ್ಸೆಸ್ ನೀಡುತ್ತದೆ. ಇದರ ಜೊತೆಗೆ ಕಾರಿನಲ್ಲಿ ಪ್ರಯಾಣಿಸುವವರಿಗೆ ಹಲವು ರೀತಿಯ ಮನರಂಜನೆಯನ್ನು ನೀಡುತ್ತದೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಈ ಕಾರಿನಲ್ಲಿರುವ ಪ್ರೀಮಿಯಂ ಹಾಗೂ ಲಗ್ಷುರಿ ಅಂಶಗಳಿಂದಾಗಿ ಈ ಕಾರು ಅತಿ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಈ ಕಾರಣಕ್ಕೆ ಭಾರತೀಯರು ಈ ಕಾರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಬೇರೆ ಕಾರುಗಳಿಗೆ ಹೋಲಿಸಿದರೆ ಈ ಕಾರು ಕಡಿಮೆ ಬೆಲೆಯನ್ನು ಸಹ ಹೊಂದಿದೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಈ ಕಾರಣಗಳಿಗೆ ಈ ಕಾರಿನ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಕಾರಣಕ್ಕೆ ಎಂಜಿ ಮೋಟಾರ್ಸ್ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಕಾಯುವ ಅವಧಿಯು ಕಡಿಮೆಯಾಗಿದೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಎಂಜಿ ಹೆಕ್ಟರ್ ಕಾರಿನ ಮರ್ಯಾದೆ ಹೋಗುವ ಹಲವು ಘಟನೆಗಳು ನಡೆಯುತ್ತಿವೆ. ಆಗಾಗ ಎಂಜಿ ಹೆಕ್ಟರ್‍‍ನ ಎಂಜಿನ್‍‍ನಲ್ಲಿ ದೋಷವಿರುವ ಬಗ್ಗೆ ವರದಿಯಾಗುತ್ತಿರುತ್ತವೆ. ಈ ಹಿಂದೆ ಖರೀದಿಸಿದ ಕೆಲವೇ ದಿನಗಳಲ್ಲಿ ಹೆಕ್ಟರ್ ಕಾರಿನ ರೂಫ್‍‍ನಲ್ಲಿ ಮಳೆ ನೀರು ಹರಿದಿದ್ದ ಬಗ್ಗೆ ವರದಿಯಾಗಿತ್ತು.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಜೊತೆಗೆ ಅಲ್ಲಲ್ಲಿ ಎಂಜಿನ್‍‍ಗೆ ಬೆಂಕಿ ಬಿದ್ದ ಘಟನೆಗಳು ವರದಿಯಾಗಿದ್ದವು. ಹರಿಯಾಣದಲ್ಲಿ 19 ದಿನಗಳ ಹಿಂದೆ ಖರೀದಿಸಲಾಗಿದ್ದ ಎಂಜಿ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದಿದೆ. ಅದೂ ಸಹ ಮಧ್ಯ ರಸ್ತೆಯಲ್ಲಿ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಇದಕ್ಕೂ ಮೊದಲು, ಡಿಸೆಂಬರ್ ತಿಂಗಳಿನಲ್ಲಿ ಮಧ್ಯ ರಸ್ತೆಯಲ್ಲಿಯೇ ಎಂಜಿ ಹೆಕ್ಟರ್ ಕಾರಿಗೆ ಬೆಂಕಿ ಬಿದ್ದಿದ್ದ ಘಟನೆ ವರದಿಯಾಗಿತ್ತು. ಈಗ ಒಂದು ತಿಂಗಳ ನಂತರ ಮತ್ತೊಮ್ಮೆ ಇದೇ ರೀತಿಯ ಘಟನೆ ನಡೆದಿದೆ. ಈ ಘಟನೆಗಳು ಕಾರಿನ ಘನತೆಗೆ ಧಕ್ಕೆ ತರಲಿವೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಹರಿಯಾಣದಲ್ಲಿ ನಡೆದಿರುವ ಘಟನೆಯು ಹೆಕ್ಟರ್ ಮಾಲೀಕರ ತಪ್ಪಿನಿಂದ ಸಂಭವಿಸಿದೆ. ಈ ಕಾರು ಹರಿಯಾಣದ ವ್ಯಕ್ತಿಯೊಬ್ಬರಿಗೆ ಸೇರಿದೆ. ಆ ವ್ಯಕ್ತಿ ಈ ಕಾರಿನಲ್ಲಿ ಹೆಚ್ಚುವರಿಯಾದ ಆಕ್ಸೆಸರೀಸ್‍‍ಗಳನ್ನು ಅಳವಡಿಸಿದ್ದಾರೆ. ಈ ಕಾರಣಕ್ಕೆ ಕಾರಿಗೆ ಬೆಂಕಿ ಬಿದ್ದಿರಬಹುದು ಎಂದು ಅವರು ಹೇಳಿದ್ದಾರೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಈ ಕುರಿತು ಅವರು ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಎಂಜಿ ಕಂಪನಿಯು ಬೆಂಕಿ ಬಿದ್ದ ತಕ್ಷಣವೇ ತಮ್ಮನ್ನು ಸಂಪರ್ಕಿಸಿತು. ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ರೀತಿಯ ನೆರವನ್ನು ನೀಡಿತು ಎಂದು ಆ ವ್ಯಕ್ತಿ ಹೇಳಿದ್ದಾರೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಈ ಪತ್ರದಿಂದ ಹೆಕ್ಟರ್ ಕಾರಿನ ಗುಣಮಟ್ಟದ ಬಗ್ಗೆ ಇದ್ದ ವದಂತಿಗಳಿಗೆ ತೆರೆಬಿದ್ದಿದೆ. ಸ್ಥಳಕ್ಕೆ ಧಾವಿಸಿದ್ದ ಅಗ್ನಿ ಶಾಮಕ ದಳವು ಬೆಂಕಿಯನ್ನು ಆರಿಸಲು ಪ್ರಯತ್ನ ಪಟ್ಟಿದೆ. ಆದರೆ ಕಾರಿನ ಮುಂಭಾಗವು ಸಂಪೂರ್ಣವಾಗಿ ನಾಶವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಬೆಂಕಿ ಬಿದ್ದ ಕಾರು ಹೆಕ್ಟರ್ ಪಿಇ 1.5 ಟಿ‍‍ಸಿ‍‍ಡಿ ಶಾರ್ಪ್ ಮಾದರಿಯಾಗಿದೆ. ಇದು ಹೆಕ್ಟರ್‍‍ನಲ್ಲಿರುವ ಟಾಪ್ ಎಂಡ್ ಮಾದರಿಯಾಗಿದೆ. ಈ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.13.48 ಲಕ್ಷಗಳಿಂದ ರೂ.17.18 ಲಕ್ಷಗಳಾಗಿದೆ.

ಬೆಂಕಿಗೆ ಆಹುತಿಯಾದ ಹೊಸ ಎಂಜಿ ಹೆಕ್ಟರ್ ಕಾರು

ಎಂಜಿ ಹೆಕ್ಟರ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಕಾರಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದರ ಜೊತೆಗೆ ಎಂಜಿ ಹೆಕ್ಟರ್‍‍ನಲ್ಲಿರುವಂತಹ ಎಂಜಿನ್‍‍ಗಳನ್ನು ಜೀಪ್ ಕಂಪಾಸ್ ಹಾಗೂ ಮಹೀಂದ್ರಾ ಎಕ್ಸ್ ಯುವಿ 500ಗಳಲ್ಲಿ ಅಳವಡಿಸಲಾಗಿದೆ.

Most Read Articles

Kannada
English summary
19 days old MG Hector gets fire in Haryana. Read in Kannada.
Story first published: Thursday, January 23, 2020, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X