YouTube

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಭಾರತದಲ್ಲಿ ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ರಾಜಸ್ತಾನದ ಬರನ್ ಮೂಲದ 19 ವರ್ಷದ ವಿದ್ಯಾರ್ಥಿಯೊಬ್ಬ ಕೇವಲ ರೂ. 50,000 ಸಾವಿರ ವೆಚ್ಚದಲ್ಲಿ ಡ್ರೈವರ್‍ ಲೆಸ್ ಟ್ರಾಕ್ಟರ್ ಮಾದರಿಯನ್ನು ತಯಾರಿಸಿರ

ಭಾರತದಲ್ಲಿ ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ರಾಜಸ್ತಾನದ ಬರನ್ ಮೂಲದ 19 ವರ್ಷದ ವಿದ್ಯಾರ್ಥಿಯೊಬ್ಬ ಕೇವಲ ರೂ. 50,000 ಸಾವಿರ ವೆಚ್ಚದಲ್ಲಿ ಡ್ರೈವರ್‍ ಲೆಸ್ ಟ್ರಾಕ್ಟರ್ ಮಾದರಿಯನ್ನು ತಯಾರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಮೊನ್ನೆಯಷ್ಟೇ ದ್ವಿತಿಯ ಪಿಯುಸಿ ಮುಗಿಸಿ ಮೊದಲನೆಯ ವರ್ಷದ ಬಿಎಸ್‍‍ಸಿ ವ್ಯಾಸಾಂಗ ಮಾಡುತ್ತಿರುವ 19 ವರ್ಷದ ಯೋಗೇಶ್ ನಗರ್ ಎಂಬಾತನೇ ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಬಹುದಾದ ಟ್ರ್ಯಾಕ್ಟರ್ ಮಾದರಿಯನ್ನು ಆವಿಷ್ಕಾರ ಮಾಡಿದ್ದು, ಆಟೋ ಮೊಬೈಲ್ ಉದ್ಯಮದಲ್ಲಿ ಸದ್ಯ ಹೊಸ ಚರ್ಚೆಯನ್ನು ಹಾಕಿದ್ದಾನೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಕೃಷಿ ಅವಲಂಬಿತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಯೋಗೇಶ್‍ ನಗರ್ ತಂದೆಯವರು ಕಳೆದ ಕೆಲ ವರ್ಷಗಳ ಹಿಂದಷ್ಟೇ ಟ್ರ್ಯಾಕ್ಟರ್ ಒಂದನ್ನು ಖರೀದಿ ಮಾಡಿದ್ದರು. ಆದ್ರೆ ಅನಾರೋಗ್ಯದಿಂದ ಹಿನ್ನೆಲೆ ಯೋಗೇಶ್‍ ತಂದೆ ಯವರು ಟ್ರಾಕ್ಟರ್ ಚಾಲನೆ ಮಾಡುವುದನ್ನೇ ಬಿಟ್ಟಿದ್ದರಂತೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಇದೇ ಕಾರಣಕ್ಕೆ ವಿದ್ಯಾಭ್ಯಾಸಕ್ಕೆಂದು ಹೋಗಿದ್ದ ನಗರಕ್ಕೆ ಹೋಗಿದ್ದ ಯೋಗೇಶ್ ತನ್ನ ಹಳ್ಳಿಗೆ ವಾಪಸ್ ಬಂದು ವ್ಯವಸಾಯವನ್ನು ಮುಂದುವರೆಸಲು ತೀರ್ಮಾನಿಸಿದ. ಹೀಗೆ 2 ತಿಂಗಳು ಕಳೆದ ನಂತರ ಡ್ರೈವರ್ ರಹಿತ ಟ್ರ್ಯಾಕ್ಟರ್ ಅನ್ನು ನಿರ್ಮಾಣ ಮುಂದಾಗಿದ್ದಲ್ಲದೇ ತನ್ನ ರಜಾ ದಿನದ ಅವಧಿಯಲ್ಲೇ ಹೊಸ ಆವಿಷ್ಕಾರವನ್ನು ಪೂರ್ಣಗೊಳಿಸಿದ್ದಾನೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಇದಕ್ಕೂ ಮುನ್ನ ಮನಗ ಹೊಸ ಆವಿಷ್ಕಾರದ ಬಗ್ಗೆ ವಿಷಯ ತಿಳಿದ ಯೋಗೇಶ್ ತಂದೆ ಬಾಬು ನಗರ್ ಅವರು ಮಗನ ಸಾಧನೆಗೆ ಪ್ರೋತ್ಸಾಹಿಸಲು 2 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಲ್ಲದೇ ಉಳಿದ ಹಣವನ್ನು ಸ್ನೇಹಿತರು, ಬಂಧುಗಳ ಬಳಿ ಸಾಲ ಮಾಡಿ ಹಣ ಹೊಂದಿಸಿದ್ದರಂತೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಈ ವೇಳೆ ಆವಿಷ್ಕಾರಕ್ಕಾಗಿ ಬೇಕಾದ ಎಲ್ಲ ಸಲಕರಣೆ ಖರೀದಿಸಿದ ಯೋಗೇಶ್, ಹಗಲು ರಾತ್ರಿಗಳ ಲೆಕ್ಕವಿಲ್ಲದೇ 6 ತಿಂಗಳ ಕಾಲ ಈ ಆವಿಷ್ಕಾರ ಮಾಡಿದ್ದಲ್ಲದೇ ತನ್ನಲ್ಲಿರುವ ಪ್ರತಿಭೆಯನ್ನು ಉಪಯೋಗಿಸಿ ಡ್ರೈವರ್ ಲೆಸ್ ಟ್ಯಾಕ್ಟರ್ ಅನ್ನು ನಿರ್ಮಾಣ ಮಾಡಿದ್ದಾನೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ವಿಜ್ಞಾನದಲ್ಲಿ ಪಿಯು ಶಿಕ್ಷಣ ಪಡೆದಿರುವ ಯೋಗೇಶ್ ತಯಾರು ಮಾಡಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ರಸ್ತೆಯಲ್ಲಿ ಚಲಿಸುತ್ತಿದ್ದನ್ನು ನೋಡಿ, ಆಶ್ಚರ್ಯಗೊಂಡ ಗ್ರಾಮಸ್ಥರು, ಇದು ನಿಜವೊ ಇಲ್ಲ ಮಾಯಾ ಜಾಲವೊ ಎಂಬ ಗೊಂದಲಕ್ಕೆ ಸಿಲುಕಿದ್ದರು.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಯೋಗೇಶ್ ತಯಾರು ಮಾಡಿರುವ ಡ್ರೈವರ್ ಲೆಸ್ ಟ್ರ್ಯಾಕ್ಟರ್ ರೀಮೋಟ್‍ನಿಂದ ನಿಯಂತ್ರಿಸಬಹುದಾಗಿದ್ದು, 1.5 ಕಿಲೋಮೀಟರ್ ದೂರದವರೆಗೂ ಈ ಟ್ರ್ಯಾಕ್ಟರ್ ಅನ್ನು ನಿಯಂತ್ರಣ ಮಾಡಬಹುದು ಎನ್ನಲಾಗಿದೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಈ ಟ್ರ್ಯಾಕ್ಟರ್ ಅನ್ನು ಓಡಿಸಲು ಚಾಲಕನ ಅವಶ್ಯಕತೆ ಇಲ್ಲ. ಇದರಲ್ಲಿನ ಆಕ್ಸಿಲೇಟರ್, ಗೇರ್ ಬದಲಾವಣೆ ಮತ್ತು ಬ್ರೇಕ್ ಒತ್ತಲು ಕೂಡಾ ಚಾಲಕನ ಅವಶ್ಯಕತೆಯಿಲ್ಲ. ಜೊತೆಗೆ ಇವೆಲ್ಲವನ್ನು ಕೇವಲ ರಿಮೋಟ್‍‍ನಿಂದಲೇ ನಿಯಂತ್ರಿಸಬಹುದಾದ ಆವಿಷ್ಕಾರವನ್ನು ಯೋಗೇಶ್ ಮಾಡಿದ್ದಾನೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಕೃಷಿಯು ದೇಶದ ಬೆನ್ನೆಲುಬಾಗಿದ್ದು, ಟ್ರಾಕ್ಟರ್‍‍ಗಳು ರೈತರಿಗೆ ವ್ಯವಸಾಯದ ಸಮಯದಲ್ಲಿ ಹೆಚ್ಚು ಸಹಾಯಕಾರಿಯಾಗಿದೆ. ಹೀಗಿರುವಾಗ ಯೋಗೇಶ್ ಸಿದ್ದಪಡಿಸಿರುವ ಡ್ರೈವರ್ ಲೆಸ್ ಟ್ರ್ಯಾಕ್ಟರ್‍ ಮಾದರಿಗೆ ಸರ್ಕಾರದಿಂದ ಧನಸಹಾಯ ಮತ್ತು ಪ್ರೋತ್ಸಾಹದ ಅಗತ್ಯತೆಯಿದೆ.

ಇದಲ್ಲದೇ ಯೋಗೇಶ್ ಮತ್ತೊಂದು ಯಂತ್ರ ಮಾದರಿಯನ್ನು ಸಿದ್ದಗೊಳಿಸಿದ್ದು, ಯಾರಾದರೂ ಕಳ್ಳರು ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರೆ ಮನೆ ಮಾಲೀಕರೊಂದಿಗೆ ಸಂಪರ್ಕಿಸುವ ಒಂದು ಆ್ಯಂಟಿ ಥೆಫ್ಟ್ ಯಂತ್ರವನ್ನು ಸಹ ಸಿದ್ದಗೊಳಿಸಿದ್ದಾನೆ.

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಜೊತೆಗೆ ಹೊಸ ಹೊಸ ಆವಿಷ್ಕಾರ ಮಾಡುವಲ್ಲಿ ಮುಂದಿರುವ ವಿದ್ಯಾರ್ಥಿ ಯೋಗೇಶ್ ಸ್ಮಾರ್ಟ್ ಪವರ್ ಸೇವರ್ ಅನ್ನು ವಿನ್ಯಾಸಗೊಳಿಸಿದ್ದು, ಇದರ ಸಹಾಯದಿಂದ ಕೋಣೆಯಲ್ಲಿ ಯಾರು ಇಲ್ಲದಿರುವಾಗ ಸ್ವಯಂಚಾಲಿತವಾಗಿ ದೀಪಗಳನ್ನು ಆರಿಸುವ ಶಕ್ತಿಯನ್ನು ಪಡೆದಿರುವ ಸಾಧನವನ್ನು ಸಹ ಸಿದ್ದಪಡಿಸಿದ್ದಾನೆ.

Most Read Articles

Kannada
Read more on tractor rajasthan
English summary
19-year-old son of a farmer builds ‘DRIVER-LESS’ tractor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X