100 ಕೋಟಿಗಿಂತಲೂ ಹೆಚ್ಚು ಮೊತ್ತಕ್ಕೆ ಫೆರಾರಿ ಕಾರು ಹರಾಜು

By Nagaraja

ಇತ್ತೀಚೆಗಷ್ಟೇ ಸಾಗಿದ ಗುಡ್‌ವುಡ್ ಫೇಸ್ಟಿವಲ್‌ ಆಫ್ ಸ್ಪೀಡ್‌ನಲ್ಲಿ ಮಗದೊಂದು ದಾಖಲೆ ಸೃಷ್ಟಿಯಾಗಿದೆ. ಹೌದು, 1945ರ ಫೆರಾರಿ 375 ಪ್ಲಸ್ ಕಾರು ಬರೋಬ್ಬರಿ 18.2 ಮಿಲಿಯನ್ ಅಮೆರಿಕನ್ ಡಾಲರ್‌ (ಅಂದಾಜು 109 ಕೋಟಿ ರು.) ಮೊತ್ತಕ್ಕೆ ಹರಾಜಾಗಿದೆ.

ಇದು ಇಡೀ ವಿಶ್ವದಲ್ಲೇ ಹರಾಜಿಗೆ ಮಾರಾಟವಾಗಿರುವ ಮೂರನೇ ಅತಿ ದುಬಾರಿ ಕಾರೆನಿಸಿಕೊಂಡಿದೆ. 'ದಿ ಫಿಯರ್ಸಮ್ ಫೋರ್ ನೈನ್' ಎಂದೆನಿಸಿಕೊಂಡಿರುವ ಫೆರಾರಿಯ ಈ ರೇಸ್ ಕಾರು ಸಂಸ್ಥೆಯಿಂದ ನಿರ್ಮಾಣವಾಗಿರುವ ಅತಿದೊಡ್ಡ 4.9 ಲೀಟರ್ ವಿ12 ಎಂಜಿನ್ ಹೊಂದಿದೆ.


ಲಿಮ್ಯಾನ್ಸ್ ಹಾಗೂ ಮಿಲ್ಲಿ ಮಿಗ್‌ಲಿಯಾಗಳಂತಹ ಪ್ರಖ್ಯಾತ ರೇಸ್‌ಗಳನ್ನು ಭಾಗವಹಿಸಿರುವ ಈ ಐಕಾನಿಕ್ ಕಾರುಗಳನ್ನು ಚಾಲಕ ದಂತಕಥೆಗಳಾದ ಉರ್ಬೆರ್ಟೊ ಮ್ಯಾಗ್‌ಓಲಿ ಹಾಗೂ ಜೋಸ್ ಫ್ಲೊಯ್ಲನ್ ಗೋನ್ಸಾಲೆಜ್ ಚಲಾಯಿಸಿದ್ದಾರೆ.

ಇದುವರೆಗಿನ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 10 ಕಾರುಗಳು ಇಂತಿದೆ:

1. 1954ರ ಮರ್ಸಿಡಿಸ್ ಬೆಂಝ್ ಡಬ್ಲ್ಯು195 ಫಾರ್ಮುಲಾ 1 ಸಿಂಗಲ್ ಸೀಟರ್ - 29.65 ಮಿಲಿಯನ್ ಅಮೆರಿಕನ್ ಡಾಲರ್
2. 1967ರ ಫೆರಾರಿ 275 ಜಿಟಿಬಿ 4 ಎಸ್ ಎನ್.ಎ.ಆರ್.ಟಿ ಸ್ಪೈಡರ್ - 17.5 ಮಿಲಿಯನ್ ಅಮೆರಿಕನ್ ಡಾಲರ್
3. 1954 ಫೆರಾರಿ 4.9 ಲೀಟರ್ 375 ಪ್ಲಸ್ - 18.2 ಮಿಲಿಯನ್ ಅಮೆರಿಕನ್ ಡಾಲರ್
4. 1957 ಫೆರಾರಿ ಟೆಸ್ಟಾ ರೊಸ್ಸಾ ಪ್ರೊಟೊಟೈಪ್ - 16.39 ಮಿಲಿಯನ್ ಅಮೆರಿಕನ್ ಡಾಲರ್
5. 1964 ಫೆರಾರಿ 250 ಎಲ್‌ಎಂ - 14.3 ಮಿಲಿಯನ್ ಅಮೆರಿಕನ್ ಡಾಲರ್.
6. 1953 ಫೆರಾರಿ 340/375 ಎಂಎಂ ಬರ್ಲಿನೆಟ್ಟಾ - 12.8 ಮಿಲಿಯನ್ ಅಮೆರಿಕನ್ ಡಾಲರ್
7. 1957 ಫೆರಾರಿ 250 ಟೆಸ್ಟಾ ರೊಸ್ಸಾ - 12.4 ಮಿಲಿಯನ್ ಅಮೆರಿಕನ್ ಡಾಲರ್
8. 1936 ಮರ್ಸಿಡಿಸ್ ಬೆಂಝ್ 540 ಕೆ ಸ್ಪೆಷಲ್ ರೊಡಸ್ಟರ್ - 11.77 ಮಿಲಿಯನ್ ಅಮೆರಿಕನ್ ಡಾಲರ್
9. 1960 ಫೆರಾರಿ 250 ಜಿಟಿ ಎಲ್‌ಡಬ್ಲ್ಯುಬಿ ಕ್ಯಾಲಿಫೋರ್ನಿಯಾ ಸ್ಪೈಡರ್ ಕಾಂಪಿಟಿನೈಜ್ - 11.2 ಮಿಲಿಯನ್ ಅಮೆರಿಕನ್ ಡಾಲರ್
10. 1968 ಫೋರ್ಡ್ ಜಿಟಿ40 ಗಲ್ಫ್-ಮಿರಾಜ್ ಲೈಟ್‌ವೇಟ್ ರೇಸಿಂಗ್ ಕಾರು - 11 ಮಿಲಿಯನ್ ಅಮೆರಿಕನ್ ಡಾಲರ್

Most Read Articles

Kannada
English summary
A 1945 Ferrari 375-Plus was sold at the auction for USD 18.2 million in Goodwood's festival of speed that happened the past weekend. This makes it the third most expensive car ever sold at an auction.
Story first published: Monday, July 7, 2014, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X