Just In
- 10 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 12 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
- 12 hrs ago ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮಾರ್ಪಾಡಾದ ಬಡವರ ಮಾರುತಿ ಆಲ್ಟೋ ಕಾರಿಗೆ ನೆಟ್ಟಿಗರು ಫಿದಾ
- 13 hrs ago ಈ ಕಾರಿನ ವಿಡಿಯೋ ಬಿಡುಗಡೆ ಮಾಡಿದ ಟೊಯೋಟಾ: ಫ್ರಾಂಕ್ಸ್ ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ!
Don't Miss!
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- News Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Finance ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸೊರೆಗೈದ ವಿಮಾನ ಶೈಲಿಯ ವಿಂಟೇಜ್ ವಾಹನ
ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ವಾಹನ ಲೋಕದಲ್ಲಿ ಅನೇಕ ಚಿತ್ರ-ವಿಚಿತ್ರಗಳ ವಾಹನಗಳ ನಿರ್ಮಾಣವಾಗಿದೆ. ಇವುಗಳಲ್ಲಿ ಹಲವು ವಾಹನಗಳು ವಿಶಿಷ್ಟತೆಯನ್ನು ಮೂಡಿಸಿದರೂ ವಾಹನ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿದೆ.
ವಾಹನ
ಕ್ಷೇತ್ರದಲ್ಲಿ
ವಿಭಿನ್ನತೆ
ಸೃಷ್ಟಿಸಿರುವ
ಇಂತಹದೊಂದು
ವಾಹನವನ್ನು
ನಾವಿಂದು
ಪರಿಚಯಿಸಲಿದ್ದೇವೆ.
ಇದರ
ಹೆಸರೇ
'ಸಮ್
ಥಿಂಗ್'.
ಮೊದಲ
ನೋಟದಲ್ಲೇ
ಇದು
ವಾಹನ
ಪ್ರೇಮಿಗಳ
ಮನಸೊರೆಗೈಯುತ್ತಿದೆ.
1962ರ ಕಾಲಘಟ್ಟದಲ್ಲಿ ಡ್ರೈ ಲೇಕ್ ರೇಸ್ ನಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಜೆರ್ರಿ ಸಿಲ್ವರ್ ಸ್ಟೈನ್, ಜೂಲಿಯನ್ ಡೋಟಿ ಮತ್ತು ಅರ್ನಾಲ್ಡ್ ಬಿರ್ನರ್ ಎಂಬವರು ಸೇರಿ ಸಮ್ ಥಿಂಗ್ ವಾಹನವನ್ನು ನಿರ್ಮಿಸಿದ್ದರು.
ಬಳಿಕ 1989ರ ವರೆಗೆ ರೇಸ್ ಗಳಲ್ಲಿ ಭಾಗವಹಿಸಿರುವ ಈ ವಾಹನವು, ವಾಹನ ಲೋಕದ ಬೆಲೆಬಾಳುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಪ್ರಸ್ತುತ ಹರಾಜಿಗಿಡಲಾಗಿದೆ.
ವಿಮಾನ ಶೈಲಿಯ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿದ್ದು, ವಾಹನದೊಳಗೂ ಬೇಕಾದಷ್ಟು ಸ್ಥಳಾವಕಾಶವನ್ನು ಕೊಡಲಾಗಿದೆ. ವಿಮಾನ ಶೈಲಿಯ ಕಾಕ್ ಪಿಟ್ ಸಹ ಇದರಲ್ಲಿದೆ.
ಇವೆಲ್ಲದರ ಹೊರತಾಗಿ ಇದೊಂದು ನೈಜ ರೇಸ್ ಕಾರು ಎಂಬುದು ಗಮನಾರ್ಹವೆನಿಸುತ್ತದೆ.
ವಿಂಟೇಜ್ ವಾಹನಗಳ ಸಾಲಿಗೆ ಸೇರಿರುವ ಸಮ್ ಥಿಂಗ್ ವಾಹನದಲ್ಲಿ ಸಮಕಾಲೀನ ಸುರಕ್ಷಾ ವೈಶಿಷ್ಟ್ಯಗಳಿರುವುದಿಲ್ಲ. ಅಂದರೆ ಏರ್ ಬ್ಯಾಗ್ ಆಗಲಿ, ಮಿರರ್ ಅಥವಾ ಹೆಡ್ ಲೈಟ್ ಗಳ ಸೇವೆ ಇದರಲ್ಲಿಲ್ಲ.
ಎರಡನೇ ಮಹಾಯುದ್ಧದಿಂದ ಸ್ಪೂರ್ತಿ ಪಡೆದ ಟ್ಯಾಂಕ್ ರಚನೆಯನ್ನು ನೀಡಲಾಗಿದೆ. ವರ್ಧಿತ ಟ್ಯೂಬ್ ಲರ್ ಫ್ರೇಮ್ ಜೊತೆಗೆ ಪ್ಯಾನೆಲ್ ಗಳಿರಲಿದೆ.
1989ನೇ ಇಸವಿಯ ಬಳಿಕ ಓಡಾಟ ನಡೆಸದಿದ್ದರೂ ಈಗಲೂ ತನ್ನ ಮಹತ್ವವನ್ನು ಕಾಪಾಡಿಕೊಂಡಿರುವ ವಾಹನವು ಇಲ್ಲಿಯ ವರೆಗೂ ಅಸ್ತಿತ್ವವನ್ನು ಕಾಪಾಡುತ್ತಾ ಬಂದಿದೆ.
ಸದ್ಯ ಕಾರನ್ನು ಹರಾಜಿಡಲಾಗಿದ್ದು, ಭಾರಿ ಮೊತ್ತವನ್ನು ಸಂಗ್ರಹಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.