Just In
- 42 min ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- 45 min ago ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ: ಫೋರ್ಸ್ ಗೂರ್ಖಾ 5-ಡೋರ್ ಬಿಡುಗಡೆಗೆ ಸಜ್ಜು
- 50 min ago 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- 2 hrs ago ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
Don't Miss!
- News ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು: ಕಾರಣವೇನು?
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Movies ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ!
ಟೊಯೊಟಾ ಕಂಪನಿಯು ಕ್ವಾಲಿಸ್ ಕಾರಿನ ಬಿಡುಗಡೆಯೊಂದಿಗೆ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತ್ತು. ಕ್ವಾಲಿಸ್ ಬಿಡುಗಡೆಯಾದ ಅಲ್ಪಾವಧಿಯಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು. ಈ ಕಾರಣಕ್ಕೆ ಭಾರತದ ರಸ್ತೆಗಳಲ್ಲಿ ಕ್ವಾಲಿಸ್ ಕಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.
ಟೊಯೊಟಾ ಕಂಪನಿಯು ಹಲವು ವರ್ಷಗಳ ಹಿಂದೆಯೇ ಕ್ವಾಲಿಸ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತು. ಈ ಕಾರಿನ ಬದಲಿಗೆ ಟೊಯೊಟಾ ಇನೋವಾ ಕಾರನ್ನು ಬಿಡುಗಡೆಗೊಳಿಸಿತು. ಕ್ವಾಲಿಸ್ ಕಾರಿನಂತೆ ಇನೋವಾ ಕಾರು ಸಹ ಜನಪ್ರಿಯವಾಯಿತು. ಟೊಯೊಟಾ ಕಂಪನಿಯು ಕ್ವಾಲಿಸ್ ಕಾರನ್ನು 2 ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತ್ತು.
ಈ 2 ಎಂಜಿನ್ ಆಯ್ಕೆಗಳಲ್ಲಿ 2.4 ಲೀಟರಿನ ಡೀಸೆಲ್ ಹಾಗೂ 2 ಲೀಟರಿನ ಪೆಟ್ರೋಲ್ ಎಂಜಿನ್ ಗಳು ಸೇರಿದ್ದವು. ಟೊಯೊಟಾ ಕಂಪನಿಯು ಈ 2 ಎಂಜಿನ್ಗಳೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್ಬಾಕ್ಸ್ ಗಳನ್ನು ಜೋಡಿಸಿತ್ತು.
ಟೊಯೊಟಾ ಕಂಪನಿಯು ಕ್ವಾಲಿಸ್ ಕಾರನ್ನು ಹಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದ್ದರೂ ಕೆಲವರು ಇನ್ನೂ ಈ ಕಾರನ್ನು ಹೊಸದರಂತೆ ನಿರ್ವಹಿಸುತ್ತಿದ್ದಾರೆ. 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್ ಕಾರು ಇನ್ನೂ ಹೊಸದರಂತೆ ಕಾಣುತ್ತಿದೆ.
ಈ ಬಗ್ಗೆ ಮನೋರಮಾ ಆನ್ಲೈನ್ ವೀಡಿಯೊವನ್ನು ಅಪ್ ಲೋಡ್ ಮಾಡಿದೆ. ಈ ವಾಹನದ ಮಾಲೀಕರು ಗಣೇಶ್ ಕುಮಾರ್. ನಟರಾಗಿದ್ದ ಗಣೇಶ್ ಕುಮಾರ್ ಈಗ ರಾಜಕಾರಣಿಯಾಗಿದ್ದಾರೆ.
ಅವರು ಈಗ ಕೇರಳದ ಕೊಲ್ಲಂ ಜಿಲ್ಲೆಯ ಪಥನಪುರಂ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ರಾಜಕೀಯ ಪ್ರವೇಶಿಸುವ ಮೊದಲು ಅಂದರೆ 2000ರಲ್ಲಿ ಟೊಯೊಟಾ ಕ್ವಾಲಿಸ್ ಕಾರನ್ನು ಖರೀದಿಸಿದ್ದರು. ಗಣೇಶ್ ಕುಮಾರ್ ಅವರ ಆಪ್ತ ಸ್ನೇಹಿತರೊಬ್ಬರು ಟೊಯೊಟಾ ಕ್ವಾಲಿಸ್ ಕಾರು ಖರೀದಿಸಿದ್ದರು.
ಅದರಲ್ಲಿ ಪ್ರಯಾಣಿಸಿದ ಗಣೇಶ್ ಕುಮಾರ್ ರವರಿಗೆ ಕೂಡ ಕ್ವಾಲಿಸ್ ಖರೀದಿಸಬೇಕು ಎಂಬ ಆಲೋಚನೆ ಬಂದಿದೆ. ಕ್ವಾಲಿಸ್ ಕಾರಿನಲ್ಲಿದ್ದ ಗುಣಮಟ್ಟ ಹಾಗೂ ಆರಾಮದಾಯಕ ಪ್ರಯಾಣವು ಅವರನ್ನು ಆಕರ್ಷಿಸಿದೆ. ಈ ಕಾರಣಕ್ಕೆ ಅವರು ಸಹ ಕ್ವಾಲಿಸ್ ಕಾರನ್ನು ಖರೀದಿಸಿದರು.
ಆರಂಭದಲ್ಲಿ ಅವರು ಅಪರೂಪಕ್ಕೆ ಈ ಕ್ವಾಲಿಸ್ ಕಾರನ್ನು ಹೊರ ತೆಗೆಯುತ್ತಿದ್ದರು. ಈ ಕಾರಣಕ್ಕೆ ಅವರ ರಾಜಕೀಯ ವಿರೋಧಿಗಳು ಗಣೇಶ್ ಕುಮಾರ್ ಖರೀದಿಸಿರುವ ಕ್ವಾಲಿಸ್ ದುಬಾರಿಯಾಗಿದ್ದು, ಈ ಕಾರಿನ ಬೆಲೆ ರೂ.20ಲಕ್ಷದಿಂದ ರೂ.25 ಲಕ್ಷಗಳಾಗಿದೆ ಎಂಬ ವದಂತಿಗಳನ್ನು ಹಬ್ಬಿಸಿದ್ದರು.
ಆದರೆ ಆ ಸಮಯದಲ್ಲಿ ಗಣೇಶ್ ಕುಮಾರ್ ಖರೀದಿಸಿದ ಟೊಯೊಟಾ ಕ್ವಾಲಿಸ್ ಕಾರಿನ ಬೆಲೆ ರೂ.6ರಿಂದ ರೂ.7 ಲಕ್ಷಗಳಾಗಿತ್ತು. ಖರೀದಿಸಿ 20 ವರ್ಷಗಳಾಗಿದ್ದರೂ ಸಹ ಈ ಕಾರು ಇನ್ನೂ ಮೂಲ ಬಣ್ಣವನ್ನೇ ಹೊಂದಿದೆ. ಗಣೇಶ್ ಕುಮಾರ್ ಈ ಕಾರು ಎಂದಿಗೂ ಯಾವುದೇ ಸಮಸ್ಯೆ ನೀಡಿಲ್ಲವೆಂದು ಹೇಳಿದ್ದಾರೆ.
ಗಣೇಶ್ ಕುಮಾರ್ ಈ ಕಾರನ್ನು ಚೆನ್ನಾಗಿ ನಿರ್ವಹಿಸಿದ್ದು, ಕಾರಿನಲ್ಲಿರುವ ಬಹುತೇಕ ಭಾಗಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಗಣೇಶ್ ಕುಮಾರ್ ಈ ಕ್ವಾಲಿಸ್ ಕಾರನ್ನು ತಮ್ಮ ದೈನಂದಿನ ಬಳಕೆಗಾಗಿ ಬಳಸುತ್ತಿದ್ದಾರೆ.