ನಿಮ್ಮ ಫೇವರಿಟ್ ಎಫ್1 ತಂಡ ಯಾವುದು?

By Nagaraja

ಈ ಹಿಂದಿನ ಆವೃತ್ತಿಗಳಂತೆ ಈ ಬಾರಿಯ ಫಾರ್ಮುಲಾ ಒನ್ ರೇಸಿಂಗ್ ಚಾಂಪಿಯನ್‌ಶಿಪ್ ನಿಕಟ ಸ್ಪರ್ಧೆಯಿಂದ ಕೂಡಿರಲಿದೆ. ಎಲ್ಲ 11 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅತೀವ ಉತ್ಸಾಹದಲ್ಲಿದ್ದು, ಈಗಾಗಲೇ ಮೊದಲ ಸುತ್ತಿನ ಟೆಸ್ಟಿಂಗ್ ಮುಗಿಸಿದೆ.

ಅಂತೆಯೇ ಫಾರ್ಮುಲಾ ಒನ್ ರೇಸಿಂಗ್‌ಗೆ ಮೆರಗು ನೀಡಲು ನೂತನ ರೇಸಿಂಗ್ ಕಾರುಗಳ ಆಗಮನವಾಗಿದೆ. ಈ ನೂತನ ಕಾರುಗಳು ರೇಸಿಂಗ್ ಟ್ರ್ಯಾಕ್‌ನಲ್ಲಿ ಯಾವ ರೀತಿ ನಿರ್ವಹಣೆ ನೀಡಲಿದೆ ಎಂಬದು ಕುತೂಹಲಕ್ಕೆ ಕಾರಣವಾಗಿದೆ.

ಮಾರ್ಚ್ 17ರಂದು ಆಸ್ಟ್ರೇಲಿಯನ್ ಜಿಪಿಯೊಂದಿಗೆ ಈ ಬಾರಿಯ ಎಫ್1 ರೇಸಿಂಗ್ ಆರಂಭವಾಗಲಿದೆ. ಇದರಂತೆ ಎಲ್ಲ ತಂಡಗಳು ತಮ್ಮ ಕಾರಿನ ನಿರ್ವಹಣೆಯತ್ತ ಗಮನ ಹರಿಸಿವೆ.

ಇತ್ತೀಚೆಗಷ್ಟೇ ಅನಾವರಣಗೊಂಡಿದ್ದ 2013 ರೇಸಿಂಗ್ ಕಾರುಗಳನ್ನು ನೀವು ಮಿಸ್ ಮಾಡಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ವೀಕ್ಷಿಸುವ ಅವಕಾಶವನ್ನು ಮಾಡಿಕೊಡಲಿದ್ದೇವೆ. 2013 ಫಾರ್ಮುಲಾ ಒನ್ ಕಾರುಗಳು ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

Ferrari F138

Ferrari F138

ವಿಶ್ವದ ಮುಂಚೂಣಿಯ ಫೆರಾರಿ ಈಗಾಗಲೇ ಎಫ್1 ಕಾರನ್ನು ಅನಾವರಣಗೊಳಿಸಿದೆ. ಇದು ಎಫ್138 ಎಂದು ಅರಿಯಲ್ಪಡಲು ಪ್ರತ್ಯೇಕ ಕಾರಣವಾಗಿದೆ. ಯಾಕೆಂದರೆ ಇದರಲ್ಲಿ 13 ಎಂಬುದು 2013 ಸಂಕೇತವಾಗಿದ್ದು ಹಾಗೆಯೇ 8 ಕಳೆದ ಸಾಲಿನ ಬಳಕೆಯಾದ ವಿ8 ಎಂಜಿನ್ ಆಗಿದೆ. ರೆಡ್ ಬುಲ್ ತಂಡಕ್ಕಾಗಿ ಫೆರ್ನಾಂಡೊ ಅಲನ್ಸೊ ಹಾಗೂ ಪಿಲಿಪ್ ಮಸ್ಸಾ ರೇಸ್ ಟ್ರ್ಯಾಕ್‌ಗಿಳಿಯಲಿದ್ದಾರೆ.

 Caterham CT03

Caterham CT03

ಬ್ರಿಟಿಷ್ ಕಾರು ಬ್ರಾಂಡ್ ಆದ ಕ್ಯಾಟರಾಮ್ ಈಗಾಗಲೇ ಸಿಟಿ03 ಅನಾವರಣಗೊಳಿಸಿದೆ. ಈ ಸೀಸನ್‌ನಲ್ಲಿ ಚಾರ್ಲ್ಸ್ ಪಿಕ್ ಹಾಗೂ ಗಿಡೊ ವ್ಯಾನ್ ಡೆರ್ ಗಾರ್ಡೆ ನೆರವಿಗೆ ಬರಲಿದ್ದಾರೆ.

Lotus E21

Lotus E21

2013 ಸಾಲಿನ ಮೊದಲ ಎಫ್1 ಕಾರನ್ನು ಲೋಟಸ್ ಅನಾವರಣಗೊಳಿಸಿತ್ತು. ಕಿಮಿ ರೈಕಾನೆನ್ ಈ ಕಾರಿನ ಮುಖಾಂತರ ಎರಡನೇ ಚಾಂಪಿಯನ್‌ಶಿಪ್ ಗೆಲ್ಲುವ ಇರಾದೆಯಲ್ಲಿದ್ದಾರೆ.

Marussia MR02

Marussia MR02

ಫಾರ್ಮುಲಾ ಒನ್ ಚಾಂಪಿಯನ್‌ಶಿಪ್‌ಗೆ ಮಾರುಸ್ಸಿಯಾ ಹೊಸ ಎಂಟ್ರಿ ಆಗಿದೆ. ಲೂಯಿಜ್ ರಾಜಿಯಾ ಹಾಗೂ ಮ್ಯಾಕ್ಸ್ ಚಿಲ್ಟನ್ ಈ ಬಾರಿಯ ಚಾಂಪಿಯನ್‌ಶಿಪ್ ಮುನ್ನಡೆಸಲಿದ್ದಾರೆ.

Sahara Force India VJM06

Sahara Force India VJM06

ಫಾರ್ಮುಲಾ ಒನ್ ರೇಸಿಂಗ್‌ನಲ್ಲಿ ಹಲವು ಕನಸುಗಳನ್ನು ಹೊತ್ತುಕೊಂಡು ವಿಜಯ್ ಮಲ್ಯ ಒಡೆತನದ ಫೋರ್ಸ್ ಒನ್ ಕಣಕ್ಕಿಳಿಯಲಿದೆ.

McLaren MP4-28

McLaren MP4-28

ಲೆವಿಸ್ ಹ್ಯಾಮಿಲ್ಟನ್ ಸಾನಿಧ್ಯವಿಲ್ಲದೆ ಮೆಕ್‌ಲ್ಯಾರೆನ್ ಎಂಪಿ4-28 ಕಣಕ್ಕಿಳಿಯಲಿದೆ. ಈ ಬ್ರಿಟಿಷ್ ತಂಡವೀಗ ಜಾನ್ಸನ್ ಬಟ್ಟನ್ ಹಾಗೂ ಸರ್ಜಿಯೊ ಪೆರೆಜ್ ಎಂಬ ಎರಡು ನೂತನ ಚಾಲಕರನ್ನು ಆಶ್ರಯಿಸಿಕೊಂಡಿದೆ.

Red Bull RB9

Red Bull RB9

ಹಾಲಿ ಚಾಂಪಿಯನ್ ಆಗಿರುವ ರೆಡ್ ಬುಲ್ ಆರ್ಬಿ9 ಮೂಲಕ ಕಳೆದ ಬಾರಿಯ ಸಾಧನೆಯನ್ನು ಪುನರಾವರ್ತಿಸುವ ಇರಾದೆಯಲ್ಲಿದೆ. ಸೆಬಾಸ್ಟಿಯನ್ ವೆಟಲ್ ಹಾಗೂ ಮಾರ್ಕ್ ವೆಬರ್ ತಂಡದ ಜತೆಗಿರಲಿದ್ದಾರೆ.

Mercedes-Benz W04

Mercedes-Benz W04

2013ನೇ ಸಾಲಿಗೆ ಮೆಕಲ್ ಶೂಮೆಕರ್ ಸ್ಥಾನಕ್ಕೆ ಲೆವಿಸ್ ಹ್ಯಾಮಿಲ್ಟನ್ ಅವರನ್ನು ಬದಲಾಯಿಸಲಾಗಿದೆ. ಹ್ಯಾಮಿಲ್ಟನ್ ನಿರ್ವಹಣೆಯನ್ನು ನಾವೀಗ ಕಾದು ನೋಡಬೇಕಾಗಿದೆ. ನಿಕೊ ರೋಸ್‌ಬರ್ಗ್ ತಂಡದ ಎರಡನೇ ಚಾಲಕರಾಗಿದ್ದಾರೆ.

Sauber C32

Sauber C32

ಫೆರಾರಿ ವಿ8 ಎಂಜಿನ್‌ನಿಂದ Sauber C32ನಿಂದ ನಿಯಂತ್ರಿಸಲ್ಪಡಲಿದೆ. ಈ ತಂಡವು ನಿಕೊ ಹಲ್ಕನ್‌ಬರ್ಗ್ ಹಾಗೂ ಎಸ್ಟೆಬನ್ ಗುಟಿರೆಜ್ ಎಫ್1 ಚಾಲಕರನ್ನು ಹೊಂದಿದೆ.

Scuderia Toro Rosso STR8

Scuderia Toro Rosso STR8

ರೆಡ್ ಬುಲ್ ರೇಸಿಂಗ್ ತಂಡದ ಸಿಸ್ಟರ್ ಎಂದು ಪರಿಗಣಿಸಲ್ಪಟ್ಟಿರುವ ಈ ತಂಡ 2013ನೇ ಅವಧಿಯಲ್ಲಿ ಕಮಾಲ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
The 2013 Formula 1 season will be an exciting one. All the 11 teams participating in the 2013 championship have unveiled their cars and have already started the first round of testing. The Formula 1 cars have emerged out of their wind tunnels and have hit the test track.
Story first published: Tuesday, February 19, 2013, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X