Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
ಜನರು ಜೀವನ ಸಾಗಿಸಲು ನಾನಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರು ಮಾಡುವ ಕೆಲಸದಿಂದ ಸಮಾಜದಲ್ಲಿ ಅವರಿಗೆ ಅವರದೇ ಆದ ಗುರುತು ಸಿಗುತ್ತದೆ. ಜಮ್ಮು ಕಾಶ್ಮೀರದ 21 ವರ್ಷದ ಯುವತಿಗೂ ಈ ಮಾತು ಅನ್ವಯಿಸುತ್ತದೆ.

ಈ ಯುವತಿ ಆಟೋ ಡ್ರೈವರ್ ಆಗುವ ಮೂಲಕ ತನ್ನ ತಂದೆಗೆ ಸಹಾಯ ಮಾಡಲು ನಿರ್ಧರಿಸಿದ್ದಾಳೆ. ಮಾಹಿತಿಗಳ ಪ್ರಕಾರ ಈ ಯುವತಿ ಜಮ್ಮು ಕಾಶ್ಮೀರದ ಉಧಂಪುರ್ ಜಿಲ್ಲೆಗೆ ಸೇರಿದವಳು. ಆಕೆಯ ಹೆಸರು ಬಂಜೀತ್ ಕೌರ್ ಎಂದು ತಿಳಿದು ಬಂದಿದೆ. ಆಕೆಯ ತಂದೆ ಶಾಲಾ ವಾಹನ ಚಾಲಕರಾಗಿದ್ದರು.

ಆದರೆ ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಆಕೆಯ ತಂದೆ ಕೆಲಸ ಕಳೆದುಕೊಂಡರು. ಇದರಿಂದಾಗಿ ಅವರ ಜೀವನ ನಿರ್ವಹಣೆ ಕಷ್ಟವಾಯಿತು. ಈ ಹಿನ್ನೆಲೆಯಲ್ಲಿ ಬಂಜೀತ್ ಕೌರ್ ತನ್ನ ತಂದೆಗೆ ಸಹಾಯ ಮಾಡುವ ಉದ್ದೇಶದಿಂದ ಆಟೋ ಓಡಿಸಲು ನಿರ್ಧರಿಸಿದಳು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿರುವ ಬಂಜೀತ್, ನನ್ನ ತಂದೆ ಶಾಲೆಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟವು. ಇದರಿಂದಾಗಿ ಅವರು ಕೆಲಸ ಕಳೆದುಕೊಂಡರು.

ಕೆಲಸ ಕಳೆದುಕೊಂಡ ನಂತರ ಅವರು ಆಟೋರಿಕ್ಷಾ ಓಡಿಸಲು ಶುರು ಮಾಡಿದರು. ಆದರೆ ಇದರಿಂದ ಸಾಕಷ್ಟು ಆದಾಯ ಬರುತ್ತಿರಲಿಲ್ಲ. ಈ ಕಾರಣಕ್ಕೆ ನಾನು ನನ್ನ ತಂದೆಯ ಜೊತೆ ಸೇರಿ ಆಟೋರಿಕ್ಷಾ ಓಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾಳೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತಾನು ಆಟೋ ಓಡಿಸುತ್ತಿದ್ದರೂ ಸಹ ನಾನು ಸೇನೆಗೆ ಸೇರಲು ಬಯಸಿರುವುದರಿಂದ ನನ್ನ ಓದನ್ನು ಮುಂದುವರಿಸುತ್ತಿದ್ದೇನೆ. ನಾನು ಎರಡನೇ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದೇನೆ. ಆಟೋರಿಕ್ಷಾ ಚಾಲನೆ ಮಾಡುವುದು ಅರೆಕಾಲಿಕ ಉದ್ಯೋಗವಾಗಿದೆ ಎಂದು ಆಕೆ ಹೇಳಿದ್ದಾಳೆ.

ನಾವು ಹುಡುಗಿಯರು ಪ್ರತಿ ಸನ್ನಿವೇಶಕ್ಕೂ ಸಿದ್ಧರಾಗಿರಬೇಕು ಎಂದು ಬಂಜೀತ್ ಕೌರ್ ಹೇಳಿದ್ದಾಳೆ. ಆಕೆಯ ಈ ನಿರ್ಧಾರವು ಹಲವಾರು ಜನರ ಮೇಲೆ ಪರಿಣಾಮ ಬೀರಿದೆ ಎಂದು ಅವರ ಕುಟುಂಬವು ಸಂತಸಗೊಂಡಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಹೆಮ್ಮೆಯ ಕ್ಷಣದ ಬಗ್ಗೆ ಮಾತನಾಡಿರುವ ಆಕೆಯ ತಂದೆ ಸರ್ದಾರ್ ಗೋರಖ್ ಸಿಂಗ್, ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದು. ಅವರು ಬಯಸುವ ಯಾವುದೇ ವೃತ್ತಿಯನ್ನು ಆರಿಸಿಕೊಳ್ಳಬಹುದು. ಅದರಲ್ಲಿ 100% ಯಶಸ್ಸನ್ನು ಸಹ ಕಾಣಬಹುದು ಎಂದು ಹೇಳಿದ್ದಾರೆ.

ಕರೋನಾ ಸಾಂಕ್ರಾಮಿಕದ ಕಾರಣ ಜಾರಿಯಾದ ಲಾಕ್ಡೌನ್ ಕಾರಣಕ್ಕೆ ನಾನು ನನ್ನ ಕೆಲಸವನ್ನು ಕಳೆದುಕೊಂಡಾಗ, ನನ್ನ ಮಗಳು ಆಟೋ ರಿಕ್ಷಾ ಚಾಲನೆ ಕಲಿಸುವಂತೆ ನನ್ನನ್ನು ಕೇಳಿದಳು. ನಾನು ಆಕೆಗೆ ನೆರವಾದೆ ಎಂದು ಅವರು ಹೇಳಿದರು.