ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಭಾರತದ ಬಹುತೇಕ ಭಾಗಗಳಲ್ಲಿ ಇಂದಿಗೂ ಸಹ ಸರಿಯಾದ ವಾಹನಗಳ ಸೌಲಭ್ಯವಿಲ್ಲದೇ ಜನ ಪರದಾಡುತ್ತಿದ್ದಾರೆ. ವಾಹನಗಳ ಸೌಲಭ್ಯವಿದ್ದರೂ ಸರಿಯಾದ ಸಮಯಕ್ಕೆ ಬಾರದೇ ಅಥವಾ ಕೆಲವು ಸಲ ಬರದೇ ಇರುವ ಕಾರಣ ಜನ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣಿಸುತ್ತಾರೆ.

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಬೇರೆ ದಾರಿ ಇಲ್ಲದೇ ಅಪರೂಪಕ್ಕೊಮ್ಮೆ ಬರುವ ವಾಹನಗಳಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸಿ ಅಪಾಯವನ್ನು ತಂದು ಕೊಳ್ಳುತ್ತಿದ್ದಾರೆ. ತೆಲಂಗಾಣ ಪೊಲೀಸರು ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ್ದು, ಈ ವೀಡಿಯೊದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ವೀಡಿಯೊವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ. ಈ ವೀಡಿಯೊದಲ್ಲಿರುವ ಆಟೋದಲ್ಲಿ ಸುಮಾರು 24 ಜನ ಪ್ರಯಾಣಿಸಿದ್ದಾರೆ.

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಈ ಆಟೋವನ್ನು ತಡೆದು ನಿಲ್ಲಿಸುವ ಪೊಲೀಸ್ ಸಿಬ್ಬಂದಿ ಆಟೋದಿಂದ ಹೊರ ಬಂದು , ಸಾಲಿನಲ್ಲಿ ನಿಂತು ಫೋಟೊಗೆ ಪೋಸ್ ನೀಡಲು ಸೂಚಿಸಿದ್ದಾರೆ. ಪೋಸ್ಟ್ ಮಾಡಲಾಗಿರುವ ವೀಡಿಯೊದಲ್ಲಿ ಜನರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಚಿಸುವ ಹೊರತಾಗಿ ಬೇರೆ ಮಾಹಿತಿಗಳನ್ನು ನೀಡಲಾಗಿಲ್ಲ.

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ವೈರಲ್ ಆಗಿರುವ ಈ ವೀಡಿಯೊ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ವೀಡಿಯೊ ಬಗ್ಗೆ ಕಾಮೆಂಟ್ ಮಾಡಿರುವ ಅನೇಕರು ಹೆಚ್ಚಿನ ಸಾರ್ವಜನಿಕ ವ್ಯವಸ್ಥೆಯನ್ನು ನೀಡುವಂತೆ ಆಗ್ರಹಿಸಿದ್ದಾರೆ. ಜನರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದ್ದಾರೆ.

ತಮ್ಮ ಸುರಕ್ಷತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಈ ರೀತಿಯಾಗಿ ಕಿಕ್ಕಿರಿದ ಆಟೊಗಳಲ್ಲಿ ಪ್ರಯಾಣಿಸಬಾರದು ಎಂದು ಕರೀಂನಗರ ಪೊಲೀಸ್ ಕಮೀಷನರ್ ಟ್ವೀಟ್ ಮಾಡಿದ್ದಾರೆ. ರಿಕ್ಷಾ ಚಾಲಕ ಹಾಗೂ ಮಕ್ಕಳು ಸೇರಿದಂತೆ ಆಟೋದಲ್ಲಿದ್ದ ಉಳಿದ ಪ್ರಯಾಣಿಕರು, ಪೊಲೀಸರು ಆಟೋದಿಂದ ಹೊರಗೆ ಬರಲು ಹೇಳುತ್ತಿದ್ದಂತೆ ಭಯಗೊಂಡಿರುವುದನ್ನು ಕಾಣಬಹುದು.

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಆಟೋದಿಂದ ಹೊರಗೆ ಬಂದ ಅವರನ್ನು ಫೋಟೊಗೆ ಪೋಸ್ ನೀಡುವಂತೆ ಹೇಳಲಾಯಿತು. ಈ ವೀಡಿಯೊ ಸಾವಿರಾರು ಜನರ ಗಮನ ಸೆಳೆದಿದೆ. ಹಲವರು ಪೊಲೀಸ್ ಕಮಿಷನರ್‍‍ರವರ ನಡೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈ ಪ್ರದೇಶಕ್ಕೆ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯವನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ವೈರಲ್ ಆಗಿರುವ ಪ್ರತಿಕ್ರಿಯೆಗಳನ್ನು ನೋಡಿದರೆ, ಸಾರಿಗೆ ಸೌಲಭ್ಯದ ಕೊರತೆಯು ಜನರು ಕಿಕ್ಕಿರಿದ ವಾಹನಗಳಲ್ಲಿ ಸಂಚರಿಸುವುದಕ್ಕೆ ಪ್ರಮುಖ ಕಾರಣವಾಗಿದೆ. ರಿಕ್ಷಾಗಳಲ್ಲಿ ಮಾತ್ರವಲ್ಲದೇ, ಬಸ್ಸುಗಳಲ್ಲಿಯೂ ಸಹ ಜನ ಕಿಕ್ಕಿರಿದು ಪ್ರಯಾಣಿಸುವುದನ್ನು ನೋಡಿದ್ದೇವೆ.

MOST READ: ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಕೆಲವರು ಬಸ್‍‍ಗಳಲ್ಲಿ ಪ್ರಯಾಣಿಸುವಾಗ ಬಸ್ಸುಗಳ ಮೇಲೆಯೇ ಕುಳಿತು ಪ್ರಯಾಣಿಸುತ್ತಾರೆ. ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಹಾಗೂ ಜನರು ನಿಯಮಗಳನ್ನು ಉಲ್ಲಂಘಿಸುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯಸಭೆಯಲ್ಲಿ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಹೊಸ ವಾಹನ ತಿದ್ದುಪಡಿ ಮಸೂದೆಯು ಕಠಿಣ ನಿಯಮಗಳನ್ನು ಹೊಂದಿದ್ದು, ನಿಯಮ ಉಲ್ಲಂಘನೆಗಾಗಿ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ಈ ಘಟನೆಯ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Most Read Articles

Kannada
English summary
24 Passengers Travelling in One Autorickshaw - Read in Kannada
Story first published: Monday, August 12, 2019, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X