ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಭಾರತದಲ್ಲಿ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳನ್ನು ಕೇವಲ ಅನುಭವಿ ಪುರುಷ ಚಾಲಕರು ಮಾತ್ರ ಸುಲಭವಾಗಿ ಚಾಲನೆ ಮಾಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವ ಹಲವಾರು ಮಹಿಳಾ ಚಾಲಕರಿದ್ದಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈ ಯುವತಿ

ಭಾರತದಲ್ಲಿ ಟ್ರಕ್ ಚಾಲನೆ ಮಾಡುವ ಮಹಿಳಾ ಚಾಲಕರ ಸಂಖ್ಯೆ ಕೇವಲ ಬೆರಳಣಿಕೆಯಷ್ಟು ಮಾತ್ರ. ಇತ್ತೀಚೆಗೆ ಕೇರಳದ 24 ವರ್ಷದ ಯುವತಿಯೊಬ್ಬರು ಪೆಟ್ರೋಲಿಯಂ ಟ್ಯಾಂಕರ್ ಚಾಲನೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಕೇರಳದ ತ್ರಿಶೂರ್ ಜಿಲ್ಲೆಯ ಡೆಲಿಶಾ ಡೇವಿಸ್ ಅವರೇ ಟ್ರಕ್ ಚಾಲನೆ ಮಾಡಿ ಸುದ್ದಿಯಲ್ಲಿರುವವರು. ಎಂಕಾಂ ವಿದ್ಯಾರ್ಥಿನಿಯಾದ ಡೆಲಿಶಾ ಡೇವಿಸ್ ಚಿಕ್ಕ ವಯಸ್ಸಿನಿಂದಲೇ ಡ್ರೈವಿಂಗ್ ಬಗ್ಗೆ ಉತ್ಸಾಹ ಹೊಂದಿದ್ದರು.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನ ಚಾಲನೆಯನ್ನು ಕಲಿತ ನಂತರ ಅವರು ಹೆಚ್ಚು ಸವಾಲಿನಿಂದ ಕೂಡಿರುವ ಟ್ರಕ್ ಚಾಲನೆ ಕಲಿಯಲು ಮುಂದಾದರು. ಡೆಲಿಶಾಳ ತಂದೆ ಕಳೆದ 42 ವರ್ಷಗಳಿಂದ ಇಂಧನ ಟ್ಯಾಂಕರ್ ಚಾಲನೆ ಮಾಡುತ್ತಿದ್ದು, ತಮ್ಮ ಮಗಳ ಕನಸಿಗೆ ನೀರೆದಿದ್ದಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಡೆಲಿಶಾ ಡೇವಿಸ್ ಟ್ಯಾಂಕರ್ ಕಳೆದ ಮೂರು ವರ್ಷಗಳಿಂದ ಟ್ಯಾಂಕರ್ ಚಾಲನೆ ಮಾಡುತ್ತಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಚಾಲನೆ ಮಾಡುತ್ತಿದ್ದ ವೇಳೆ ಮೋಟಾರು ವಾಹನ ಇಲಾಖೆಯ ಅಧಿಕಾರಿಯೊಬ್ಬರು ತಪಾಸಣೆ ನಡೆಸಿದ್ದಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಆಗ ಡೆಲಿಶಾ ಭಾರೀ ವಾಹನ ಚಾಲನೆ ಮಾಡಲು ಹೊಂದಿದ್ದ ಪರವಾನಗಿ ತೋರಿಸಿದ್ದಾರೆ. ಡೆಲಿಶಾ ಅಪಾಯಕಾರಿ ವಾಹನಗಳನ್ನು ಚಾಲನೆ ಮಾಡಲು ಪರವಾನಗಿ ಪಡೆದಿರುವ ಕೇರಳದ ಏಕೈಕ ಮಹಿಳಾ ಚಾಲಕಿಯಾಗಿದ್ದಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಈ ಬಗ್ಗೆ ಮಾತನಾಡಿದ ಡೆಲಿಶಾ, ಸಾರಿಗೆ ಇಲಾಖೆ ಅಧಿಕಾರಿಗಳು ನನ್ನ ಉತ್ಸಾಹವನ್ನು ಅಭಿನಂದಿಸಿ, ನಾನು ವಾಹನ ಚಾಲನೆ ಮಾಡುವುದು ವಾಹನ ಚಲಾಯಿಸಲು ಹೆದರುವ ಮಹಿಳೆಯರಿಗೆ ಪ್ರೇರಣೆಯಾಗಲಿದೆ ಎಂದು ಶುಭ ಕೋರಿದರು ಎಂದು ತಿಳಿಸಿದರು.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಅವರು ಕೊಚ್ಚಿಯ ಇರುಂಬನಂ ರಿಫೈನರಿಯಿಂದ ಮಲಪ್ಪುರಂನ ಇಂಧನ ಕೇಂದ್ರಕ್ಕೆ ಇಂಧನ ಸಾಗಿಸುತ್ತಾರೆ. ಇರುಂಬನಂನಿಂದ ಮಲಪ್ಪುರಂವರೆಗಿನ ದೂರವು 300 ಕಿ.ಮೀಗಳಿಗಿಂತ ಹೆಚ್ಚು. ಈ ಮಾರ್ಗದಲ್ಲಿ ಅವರು ವಾರಕ್ಕೆ ಮೂರು ಬಾರಿ ಸಂಚರಿಸುತ್ತಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಡೆಲಿಶಾ 16 ವರ್ಷದವರಿದ್ದಾಗಲೇ ಟ್ಯಾಂಕರ್ ಚಾಲನೆ ಮಾಡಲು ಕಲಿತಿದ್ದರು. ಅವರು 18ನೇ ವಯಸ್ಸಿನಲ್ಲಿ ಚಾಲನಾ ಪರವಾನಗಿ ಹಾಗೂ 20ನೇ ವಯಸ್ಸಿನಲ್ಲಿಅಪಾಯಕಾರಿ ವಾಹನಗಳ ಚಾಲನಾ ಪರವಾನಗಿ ಪಡೆದರು.

ಡೆಲಿಶಾ ಬೆಳಿಗ್ಗೆ 4 ಗಂಟೆಗೆ ಆಯಿಲ್ ರಿಫೈನರಿಯನ್ನು ತಲುಪಿ ಟ್ಯಾಂಕರ್ ತುಂಬಿದ ನಂತರ ಬೆಳಿಗ್ಗೆ 9.30ರ ವೇಳೆಗೆ ಮಲಪ್ಪುರಂನ ತಿರುವೂರಿಗೆ ಪ್ರಯಾಣವನ್ನು ಆರಂಭಿಸುತ್ತಾರೆ. ತಿರುವೂರಿನ ಇಂಧನ ಕೇಂದ್ರದಲ್ಲಿ ಇಂಧನವನ್ನು ಇಳಿಸಿದ ನಂತರ ಮಧ್ಯಾಹ್ನ 3-4ರ ವೇಳೆಗೆ ಮನೆ ತಲುಪುತ್ತಾರೆ.

ಅಪಾಯಕಾರಿ ವಾಹನ ಚಾಲನಾ ಪರವಾನಗಿ ಪಡೆದಿರುವ ಏಕೈಕ ಮಹಿಳಾ ಚಾಲಕಿ ಈಕೆ

ಡೆಲಿಶಾ ಸಂಜೆ ನಡೆಯುವ ತಮ್ಮ ಸ್ನಾತಕೋತ್ತರ ತರಗತಿಗಳಿಗೆ ಹಾಜರಾಗುತ್ತಾರೆ. ಡೆಲಿಶಾರವರಿಗೆ ಮಲ್ಟಿ-ಆಕ್ಸಲ್ ವೋಲ್ವೋ ಬಸ್ ಚಾಲನೆ ಮಾಡಬೇಕೆಂಬ ಕನಸಿದೆ. ಅದಕ್ಕಾಗಿ ಅದರ ಪರವಾನಗಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಚಿತ್ರ ಕೃಪೆ: ಕ್ರಕ್ಸ್

Most Read Articles

Kannada
English summary
24 year old Delisha Davis is the only woman to get driving license for hazardous vehicle driving. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X