ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಭಾರತೀಯ ಮಾರುಕಟ್ಟೆಯಲ್ಲಿ ಹಲವು ಬಗೆಯ ಐಷಾರಾಮಿ ಸೂಪರ್ ಕಾರುಗಳು ಲಭ್ಯವಿದೆ. ಈ ಐಷಾರಾಮಿ ಸೂಪರ್ ಕಾರುಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು, ಉದ್ಯಮಿಗಳು ಖರೀದಿಸುತ್ತಾರೆ. ಆದರೆ ಸಾಮಾನ್ಯ ಜನರಿಗೆ ಈ ಕಾರುಗಳನ್ನು ಖರೀದಿಸುವ ಬಯಕೆ ಇದ್ದರೂ, ಇವುಗಳು ಬಹಳ ದುಬಾರಿಯಾಗಿದೆ.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಇದರಿಂದ ಹಲವಾರು ಜನರು ಸಾಮಾನ್ಯ ಕಾರುಗಳನ್ನು ಐಷಾರಾಮಿ ಸೂಪರ್ ಕಾರುಗಳ ಮಾದರಿಯಂತೆ ಮಾಡಿಫೈಗೊಳಿಸುತ್ತಾರೆ. ಇದೇ ರೀತಿ ಅಸ್ಸಾಂನ ಕರಿಮ್‌ಗಂಜ್ ಜಿಲ್ಲೆಯ ಮೋಟಾರು ಮೆಕ್ಯಾನಿಕ್ ಹಳೆಯ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಮಾದರಿಯಂತೆ ಮಾಡಿಫೈಗೊಳಿಸಿದ್ದಾರೆ. ಇಟಾಲಿಯನ್ ಸ್ಪೋರ್ಟ್ಸ್ ಕಾರು ಲ್ಯಾಂಬೊರ್ಗಿನಿ ಮಾದರಿಯಂತೆ ಮಾಡಿಫೈಗೊಳಿಸಲು ಸುಮಾರು ಎಂಟು ತಿಂಗಳುಗಳ ಕಾಲಾವಧಿಯನ್ನು ತೆಗೆದುಕೊಂಡಿದೆ.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಅಸ್ಸಾಂನ ಕರಿಮ್‌ಗಂಜ್ ಜಿಲ್ಲೆಯ ಭಂಗಾ ಬಜಾರ್ ಪ್ರದೇಶದಲ್ಲಿ ಗ್ಯಾರೇಜ್ ನಡೆಸುತ್ತಿರುವ 31 ವರ್ಷದ ನೂರುಲ್ ಹಕ್ ಫಾಸ್ಟ್ & ಫ್ಯೂರಿಯಸ್ ಚಿತ್ರದ ದೊಡ್ಡ ಅಭಿಮಾನಿಯಾಗಿದ್ದಾರೆ. ಕಳೆದ ವರ್ಷ ಕರೋನಾದಿಂದ ಲಾಕ್ ಡೌನ್ ಹೇರಿದ್ದಾಗ ಇವರು ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಕಾರಿನಂತೆ ಮಾಡಿಫೈಗೊಳಿಸಲು ಅವರು ನಿರ್ಧಾರಿಸುತ್ತಾರೆ.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಅಲ್ಲದೇ ಲಾಕ್ ಡೌನ್ ಸಮಯದಲ್ಲಿ ಇವರಿಗೆ ಇತರ ಯಾವುದೇ ಕೆಲಸವಿರಲಿಲ್ಲ. ಇದರಿಂದ ನೂರುಲ್ ಹಕ್ ಸೆಕೆಂಡ್ ಹ್ಯಾಂಡ್ ಮಾರುತಿ ಸ್ವಿಫ್ಟ್ ಖರೀದಿಸಿ ಅದರ ಬಾಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತಾರೆ, ನಂತರ ಅವರು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಲ್ಯಾಂಬೊರ್ಗಿನಿ ಕಾರಿನ ಭಾಗಗಳನ್ನು ನಿರ್ಮಿಸಲು ಪ್ರಾರಂಭಿಸಿದರು.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಇವರು ಲವು ಕಚ್ಚಾ ವಸ್ತುಗಳನ್ನು ಖರೀದಿಸಿದರು. ಇನ್ನು ಈ ಕಾರಿಗೆ ಅಂತಿಮ ರೂಪ ನೀಡುವವರಿಗೆ ರೂ.6,20,000 ಗಳಷ್ಟು ಖರ್ಚು ಮಾಡಿದ್ದಾರೆ. ಅವರು ಮಾಡಿಫೈಗೊಳಿಸಿದ ಲ್ಯಾಂಬೊರ್ಗಿನಿ ಕಾರಿನ ಚಿತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದರು.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಈ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ನಂತರ ಅವರ ಪ್ರದೇಶದಲ್ಲಿ ಫೇಮೆಸ್ ಆಗಿದ್ದರು. ಇವರನ್ನು ಉದ್ಘಾಟನೆಗಾಗಿ ಅವರನ್ನು ಸ್ಥಳೀಯ ಸಂಸ್ಥೆಯೊಂದು ಇತ್ತೀಚೆಗೆ ಆಹ್ವಾನಿಸಿತ್ತು.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ತಮ್ಮ ಕಾರಿನ ಮಾಡಿಫೈಗೊಳಿಸಿರುವುದು ಕಾನೂನುಬದ್ಧವಾಗಿದೆಯೇ ಎಂಬುವುದು ಖಚಿತವಿಲ್ಲ. ಪೊಲೀಸರು ನನ್ನನ್ನು ಬಂಧಿಸಿ ನನ್ನ ಕಾರನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೂರುಲ್ ಹಕ್ ಹೇಳಿದ್ದಾರೆ.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಈಗಾಗಲೇ ತಮ್ಮ ಆಡಳಿತವನ್ನು ರಾಜ್ಯದಾದ್ಯಂತ ಓಡಿಸಲು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ ಆದರೆ ಅಧಿಕಾರಿಗಳು "ಸರ್ಕಾರ ಮಾತ್ರ ಅನುಮತಿ ನೀಡಬಹುದು" ಎಂದು ಹೇಳಿದ್ದಾರೆ. ಹಕ್ ತನ್ನ ಕಾರನ್ನು ಮಾರಾಟ ಮಾಡಲು ಸಹ ಸಿದ್ದರಾಗಿದ್ದಾರೆ.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಅದರೆ ಆದರೆ ಒಂದು ಷರತ್ತು ಇದೆ. ಅದು ಅವರು ಸ್ಪೋರ್ಟ್ಸ್ ಕಾರುಗಳ ಅಭಿಮಾನಿಯಾಗಿರಬೇಕು. ಈ ಮಾದರಿಯ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯಾಗಿರಬೇಕು. ಅಂತಹ ಸ್ಪೋರ್ಟ್ಸ್ ಕಾರುಗಳ ಪ್ರಿಯರಿಗೆ ಮಾರಾಟ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಸೂಪರ್ ಕಾರಿನಂತೆ ಮಾಡಿಫೈಗೊಳಿಸಿದ ಮೆಕ್ಯಾನಿಕ್

ಸ್ಥಳೀಯ ಆಡಳಿತವು ಈ ಕಾರನ್ನು ಓಡಿಸಲು ನನಗೆ ಅನುಮತಿ ನೀಡಿದರೆ, ನಾನು ಈ ಹೆಚ್ಚಿನ ಮಾದರಿಗಳನ್ನು ಇದೇ ರೀತಿ ಮಾಡಿಫೈಗೊಳಿಸುತ್ತೇನೆ. ಮುಂದಿನ ಫೆರಾರಿ ಕಾರಿನಂತೆ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲು ಬಯಸುತ್ತೇನೆ ಎಂದು ನೂರುಲ್ ಹಕ್ ಹೇಳಿದ್ದಾರೆ.

Most Read Articles

Kannada
English summary
Assam Mechanic Turns Old Maruti Swift Into Lamborghini. Read In Kannada.
Story first published: Saturday, June 19, 2021, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X