ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಮರ್ಸಿಡಿಸ್ ಬೆಂಝ್ ಕಾರುಗಳು ತಂತ್ರಜ್ಞಾನ ಹಾಗೂ ವಿಶ್ವ ದರ್ಜೆಯ ಗುಣಮಟ್ಟದಿಂದಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ. ಇತ್ತೀಚೆಗೆ ಹಳೆಯ ಮರ್ಸಿಡಿಸ್ ಬೆಂಝ್ ಡಬ್ಲ್ಯು 123 300 ಟಿಡಿ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಈ ಮರ್ಸಿಡಿಸ್ ಬೆಂಝ್ ಕಾರು 42 ವರ್ಷ ಹಳೆಯದಾಗಿದ್ದು, ಇದುವರೆಗೂ 7,82,000 ಮೈಲುಗಳಷ್ಟು ಅಂದರೆ ಸುಮಾರು 12.6 ಲಕ್ಷ ಕಿ.ಮೀಗಳಷ್ಟು ಚಲಿಸಿದೆ. ಇತ್ತೀಚೆಗೆ ಈ ಕಾರ್ ಅನ್ನು ಎಕ್ಸಿಬಿಷನ್ ಒಂದರಲ್ಲಿ ಪ್ರದರ್ಶಿಸಲಾಗಿತ್ತು. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಈ ಕಾರಿನ ಮಾಲೀಕರು ಕಾರ್ ಅನ್ನು ಆನ್​ಲೈನ್ ಮೂಲಕ ಹರಾಜಿಗಿಟ್ಟಿದ್ದಾರೆ.

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಪ್ರೀಮಿಯಂ ರೆಡ್ ಬಣ್ಣದಲ್ಲಿರುವ ಈ ಕಾರು ಇನ್ನೂ ಒಳ್ಳೆಯ ಕಂಡಿಷನ್'ನಲ್ಲಿದ್ದು, ಉತ್ತಮವಾಗಿ ಚಲಿಸುತ್ತಿದೆ. ಈ ಕಾರಿನ ಇಂಟಿರಿಯರ್ ಕೇಸರಿ ಬಣ್ಣವನ್ನು ಹೊಂದಿದೆ. ಈ ಕಾರಿನ ಮೂಲ ಮಾಲೀಕರು ಈ ಕಾರ್ ಅನ್ನು ಈಗ ಕಾರ್ ಅನ್ನು ಹರಾಜಿಗಿಟ್ಟಿರುವವರಿಗೆ 2006ರಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಮಾರಾಟವಾದ ನಂತರ ಈ ಕಾರು 2 ಲಕ್ಷ ಕಿ.ಮೀ ಸಂಚರಿಸಿದೆ. ಈ ಕಾರನ್ನು ಮೆಂಟೆನ್ ಮಾಡಿರುವ ಕ್ರೆಡಿಟ್ ಇಬ್ಬರೂ ಮಾಲೀಕರಿಗೂ ಸಲ್ಲಬೇಕು. ಇಷ್ಟು ವರ್ಷಗಳ ಬಳಕೆಯ ನಂತರವೂ ಈ ಕಾರಿನಲ್ಲಿ ಸಣ್ಣ ಸ್ಕ್ರಾಚ್ ಹಾಗೂ ಸಣ್ಣ ಪ್ರಮಾಣದ ತುಕ್ಕುಗಳಾಗಿವೆ.

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಈ ಕಾರಿನ ಇಂಟಿರಿಯರ್ ಅನ್ನು ಸಹ ಉತ್ತಮವಾಗಿ ಮೆಂಟೆನ್ ಮಾಡಲಾಗಿದೆ. ಕಾರಿನ ಇಂಟಿರಿಯರ್ ಕ್ಲಾಸಿಕ್ ಲುಕ್ ಹೊಂದಿದೆ. ಆಗಿನ ಕಾಲದಲ್ಲಿದ್ದ ಫೀಚರ್'ಗಳನ್ನು ಈ ಕಾರಿನಲ್ಲಿ ನೀಡಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಈ ಕಾರಿನಲ್ಲಿ ಎಡಗೈ ಡ್ರೈವ್ ಸ್ಟೀಯರಿಂಗ್ ನೀಡಲಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಬ್ರೌನ್ ಲೆದರ್ ಸೀಟುಗಳು ಈ ಕಾರಿಗೆ ಕ್ಲಾಸಿಕ್ ಲುಕ್ ನೀಡುತ್ತವೆ. ಈ ಕಾರಿನಲ್ಲಿ ನಾಲ್ಕು ವೆಂಟ್, ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಹಾಗೂ ಮ್ಯೂಸಿಕ್ ಸಿಸ್ಟಂಗಳನ್ನು ನೀಡಲಾಗಿದೆ.

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

42 ವರ್ಷಗಳ ನಂತರವೂ ಈ ಕಾರಿನ ಇಂಟಿರಿಯರ್'ನಲ್ಲಿರುವ ಯಾವುದೇ ಉಪಕರಣಗಳಿಗೆ ಹಾನಿಯಾಗಿಲ್ಲ. ಮರ್ಸಿಡಿಸ್ ಬೆಂಝ್ ಡಬ್ಲ್ಯು 123 ಎಸ್‌ಯುವಿಯಾಗಿದ್ದು 1970ರ ದಶಕದಲ್ಲಿ ಬಹಳ ಜನಪ್ರಿಯವಾಗಿತ್ತು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಈ ಕಾರಿನಲ್ಲಿ ರೂಫ್ ರೇಲ್, ಎಲೆಕ್ಟ್ರಿಕ್ ವಿಂಡೋ, ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸೆಂಟ್ರಲ್ ಲಾಕಿಂಗ್‌ನಂತಹ ಹಲವಾರು ಫೀಚರ್'ಗಳನ್ನು ಅಳವಡಿಸಲಾಗಿದೆ.

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಈ ಫೀಚರ್'ಗಳನ್ನು ಆ ಸಮಯದಲ್ಲಿ ಅತ್ಯಾಧುನಿಕ ಫೀಚರ್'ಗಳೆಂದು ಪರಿಗಣಿಸಲಾಗಿತ್ತು. ಮರ್ಸಿಡಿಸ್ ಬೆಂಝ್ ಡಬ್ಲ್ಯು 123 ಎಸ್‌ಯುವಿಯಲ್ಲಿ 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆನ್​ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು

ಈ ಎಂಜಿನ್ 77 ಬಿಹೆಚ್‌ಪಿ ಪವರ್ ಹಾಗೂ 155 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು ರೇರ್ ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ.

ಮೂಲ: ಬ್ರಿಂಗ್ ಎ ಟ್ರೈಲರ್

Most Read Articles

Kannada
English summary
42 years old Mercedes Benz car which has traveled around 12 lakh kms put on auction. Read in Kannada.
Story first published: Friday, May 14, 2021, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X