ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಪ್ರತಿದಿನ ಜಗತ್ತಿನಾದ್ಯಂತ ಸಾವಿರಾರು ವಾಹನಗಳು ರಸ್ತೆ ಅಪಘಾತಕ್ಕೆ ಒಳಗಾಗುತ್ತವೆ. ಕೇವಲ ರಸ್ತೆ ಅಪಘಾತಗಳು ಮಾತ್ರವಲ್ಲ, ವಿಮಾನಗಳೂ ಸಹ ಅಪಘಾತಕ್ಕೆ ಒಳಗಾಗುತ್ತವೆ. ರಸ್ತೆ ಅಪಘಾತಗಳ ಸಂಖ್ಯೆಗೆ ಹೋಲಿಸಿದರೆ ವಿಮಾನಗಳ ಅಪಘಾತದ ಪ್ರಮಾಣ ಕಡಿಮೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ವಿಮಾನಗಳ ಅಪಘಾತಗಳಾದಾಗ ಜಗತ್ತೇ ಬೆಚ್ಚಿ ಬೀಳುತ್ತದೆ. ಆದರೂ ಆಗಾಗ ವಿಮಾನಗಳು ಅಪಘಾತಕ್ಕೆ ಒಳಗಾಗುವುದನ್ನು ನೋಡುತ್ತಲೇ ಇರುತ್ತೇವೆ. ವಿಮಾನಗಳ ಅಪಘಾತಗಳಿಂದ ಹೆಚ್ಚಿನ ಪ್ರಮಾಣದ ಹಾನಿಯಾಗುವುದರ ಜೊತೆಗೆ ಅಪಾರ ಪ್ರಮಾಣದ ಸಾವು ನೋವುಗಳಾಗುತ್ತವೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ರಸ್ತೆ ಅಪಘಾತಗಳು ಏಕಾಗುತ್ತವೆ ಎಂಬುದು ಸಾಕಷ್ಟು ಜನರಿಗೆ ಗೊತ್ತಿರುತ್ತದೆ. ಆದರೆ ವಿಮಾನಗಳ ಅಪಘಾತಗಳು ಏಕಾಗುತ್ತವೆ ಎಂಬುದು ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಹಲವಾರು ಕಾರಣಗಳಿಗೆ ವಿಮಾನಗಳ ಅಪಘಾತವಾದರೂ, ಅದರಲ್ಲಿ ಮುಖ್ಯವಾದ 5 ಕಾರಣಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಪೈಲಟ್‍‍ನ ತಪ್ಪಿನಿಂದಾಗಿ

ಸಾಮಾನ್ಯವಾಗಿ ವಿಮಾನಗಳು ಪೈಲಟ್‍‍ಗಳ ತಪ್ಪಿನಿಂದಾಗಿ ಅಪಘಾತಕ್ಕೊಳಗಾಗುತ್ತವೆ. 55% ವಿಮಾನ ಅಪಘಾತಗಳು ಪೈಲಟ್‍‍ಗಳ ತಪ್ಪಿನಿಂದಾಗಿ ಸಂಭವಿಸುತ್ತವೆ. ವಿಮಾನಗಳನ್ನು ಚಾಲನೆ ಮಾಡುವುದು ಬಲು ಕಷ್ಟದ ಕೆಲಸ. ಹಲವಾರು ವಿನೂತನವಾದ ಟೆಕ್ನಾಲಜಿಗಳಿದ್ದರೂ ಪೈಲಟ್‍‍ಗಳು ಈ ಕಷ್ಟದ ಕೆಲಸವನ್ನು ಇನ್ನೂ ಮಾಡುತ್ತಿದ್ದಾರೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ವಿಮಾನ ಚಾಲನೆ ಮಾಡುವಾಗ ಪೈಲಟ್‍‍ಗಳು ಹಲವಾರು ಸಂಗತಿಗಳನ್ನು ಗಮನಿಸ ಬೇಕಾಗುತ್ತದೆ. ಯಾವುದೇ ಚಿಕ್ಕ ಸಂಗತಿಯೇ ಆಗಲಿ ಅದನ್ನು ಸರಿಯಾಗಿ ಗಮನಿಸದಿದ್ದರೆ ಭಾರೀ ಪ್ರಮಾಣದ ಅಪಘಾತ ಸಂಭವಿಸುವುದು ಖಚಿತ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಏರ್ ಕಂಟ್ರೋಲರ್‍‍ನಲ್ಲಿನ ತಪ್ಪಿನಿಂದಾಗಿ

ಪೈಲಟ್‍‍ಗಳು ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ಏರ್ ಕಂಟ್ರೋಲರ್‍‍ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಏರ್ ಟ್ರಾಫಿಕ್ ಕಂಟ್ರೋಲರ್‍‍ಗಳು ಒಂದೇ ಬಾರಿಗೆ ಹಲವು ಏರ್‍‍ಕ್ರಾಫ್ಟ್ ಗಳಿಗೆ ಮಾಹಿತಿಯನ್ನು ನೀಡುತ್ತಿರುತ್ತವೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಈ ಕಂಟ್ರೋಲರ್‍‍ಗಳು ಹವಾಮಾನ, ಇಂಧನ, ವಿಮಾನಗಳನ್ನು ಯಾವಾಗ, ಎಲ್ಲಿ ಇಳಿಸಬೇಕು ಎಂಬ ಹಲವಾರು ಸಂಗತಿಗಳನ್ನು ನಿಭಾಯಿಸಬೇಕಾಗುತ್ತದೆ. ಈ ಏರ್ ಟ್ರಾಫಿಕ್ ಕಂಟ್ರೋಲರ್‍‍ಗಳು ಮಾಡುವ ಒಂದೇ ಒಂದು ಸಣ್ಣ ತಪ್ಪಿನಿಂದಾಗಿ ವಿಮಾನಗಳು ಅಪಘಾತಕ್ಕೆ ಒಳಗಾಗುತ್ತವೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಹವಾಮಾನ

ಕೆಟ್ಟ ಹವಾಮಾನವಿರುವಾಗ ರಸ್ತೆಗಳಲ್ಲಿ ಚಲಿಸುವುದರಿಂದ ಅಪಘಾತಗಳು ಸಂಭವಿಸುವುದು ಸಾಮಾನ್ಯ. ಅದೇ ರೀತಿ ಕೆಟ್ಟ ರೀತಿಯ ಹವಾಮಾನವಿರುವಾಗ ವಿಮಾನಗಳೂ ಸಹ ಅಪಘಾತಕ್ಕೆ ಒಳಗಾಗುತ್ತವೆ. ವಿಮಾನಯಾನ ಉದ್ಯಮದ ಪರಿಣಿತರ ಪ್ರಕಾರ 13%ನಷ್ಟು ಅಪಘಾತಗಳು ಕೆಟ್ಟ ಹವಾಮಾನದಿಂದಾಗಿ ಸಂಭವಿಸುತ್ತವೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ತಾಂತ್ರಿಕ ದೋಷದಿಂದಾಗಿ

ವಿಜ್ಞಾನದ ಬಹು ದೊಡ್ಡ ಸಾಧನೆಯೆಂದರೆ ವಿಮಾನಗಳ ಆವಿಷ್ಕಾರ. ವಿಮಾನಗಳಲ್ಲಿ ನೂರಾರು ಸಿಸ್ಟಂಗಳಿರುತ್ತವೆ. ಈ ಸಿಸ್ಟಂಗಳಲ್ಲಿ ಯಾವುದಾದರೂ ದೋಷ ಕಂಡು ಬಂದರೆ, ವಿಮಾನಗಳು ಅಪಘಾತವಾಗುವ ಸಾಧ್ಯತೆಗಳಿವೆ. 17%ನಷ್ಟು ವಿಮಾನ ಅಪಘಾತಗಳು ತಾಂತ್ರಿಕ ದೋಷದಿಂದಾಗಿ ಉಂಟಾಗುತ್ತವೆ ಎಂದು ಹೇಳಲಾಗಿದೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಇತರ ಕಾರಣಗಳು

ಇವುಗಳ ಹೊರತಾಗಿ ಇನ್ನಿತರ ಕಾರಣಗಳಿಂದಾಗಿ ವಿಮಾನಗಳು ಅಪಘಾತಕ್ಕೆ ಒಳಗಾಗುತ್ತವೆ. ಅವುಗಳಲ್ಲಿ ಕಳಪೆ ನಿರ್ವಹಣೆಗಳೂ ಸೇರಿವೆ. 8%ನಷ್ಟು ವಿಮಾನ ಅಪಘಾತಗಳು ಕಳಪೆ ನಿರ್ವಹಣೆಯಿಂದಾಗಿ ಸಂಭವಿಸುತ್ತವೆ. ಇದರ ಜೊತೆಗೆ ಕಳಪೆ ರನ್‍‍ವೇಗಳೂ ಸಹ ವಿಮಾನ ಅಪಘಾತಗಳಿಗೆ ಕಾರಣವಾಗುತ್ತವೆ.

ಈ 5 ಕಾರಣಗಳಿಂದಲೇ ವಿಮಾನ ಅಪಘಾತ ಹೆಚ್ಚು..!

ಇಲ್ಲಿ ಹಕ್ಕಿಗಳ ಬಗ್ಗೆಯೂ ಸಹ ಹೇಳಬೇಕಾಗುತ್ತದೆ. ಹಕ್ಕಿಗಳು ಸಹ ವಿಮಾನಗಳ ಅಪಘಾತಗಳಿಗೆ ಕಾರಣವಾಗುತ್ತವೆ. ಯಾವುದಾದರೂ ಪಕ್ಷಿ ವಿಮಾನದ ವಿಂಡ್ ಸ್ಕ್ರೀನ್ ಅಥವಾ ಎಂಜಿನ್‍‍ಗೆ ಡಿಕ್ಕಿ ಹೊಡೆದಾಗ, ಅದರಿಂದ ವಿಮಾನದ ಅಪಘಾತಗಳಾಗುತ್ತವೆ.

Most Read Articles

Kannada
English summary
5 most common causes of airplane accidents - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X