ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ಕಾರು ಹೊಂದಿಲ್ಲದವರು ಕಾರು ಹೊಂದಿರುವವರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವುದು ಸಹಜ. ಆದರೆ ಕಾರುಗಳನ್ನು ಮೆಂಟೇನ್ ಮಾಡುವುದು ಎಷ್ಟು ಕಷ್ಟ ಎಂಬುದು ಕಾರುಗಳನ್ನು ಹೊಂದಿರುವವರಿಗೆ ಮಾತ್ರ ಗೊತ್ತು.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ಕಾರಿನಿಂದ ಹಲವು ಉಪಯೋಗಗಳಿದ್ದರೂ, ಕಾರು ರಿಪೇರಿಗೆ ಬಂದಾಗ ಹಲವು ಸಾವಿರ ರೂಪಾಯಿಗಳು ಕೈಬಿಟ್ಟು ಹೋಗುವುದು ಖಚಿತ. ಕಾರುಗಳ ರಿಪೇರಿಗೆ ತಗುಲುವ ಸಾವಿರಾರು ರೂಪಾಯಿ ಖರ್ಚಿನಿಂದಾಗಿ ಕಾರು ಮಾಲೀಕರು ಕಂಗಲಾಗುತ್ತಿದ್ದಾರೆ. ಕೆಲವು ಸರಳ ವಿಧಾನಗಳನ್ನು ಅನುಸರಿಸುವುದರಿಂದ ಕಾರಿನ ರಿಪೇರಿ ಮೇಲೆ ವಿಪರೀತ ಖರ್ಚಾಗುವುದನ್ನು ತಪ್ಪಿಸಬಹುದು.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ವಿನಾಕಾರಣ ಮೆಕಾನಿಕ್ ಬಳಿಗೆ ಹೋಗುವುದನ್ನು ತಪ್ಪಿಸಿ

ನೀವು ಪದೇ ಪದೇ ಕಾರು ಮೆಕಾನಿಕ್ ಬಳಿಗೆ ಹೋಗುವ ಮುನ್ನ ಹತ್ತು ಬಾರಿ ಯೋಚಿಸಿ. ಸಣ್ಣ ಪುಟ್ಟ ರಿಪೇರಿಗಳಿಗೂ ಸಹ ಮೆಕಾನಿಕ್ ದೊಡ್ಡ ಮೊತ್ತವನ್ನು ಕೀಳುತ್ತಿರಬಹುದು.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ಸಣ್ಣ ಪುಟ್ಟ ತೊಂದರೆಗಳಿದ್ದರೆ ಅವುಗಳನ್ನು ಆದಷ್ಟು ನೀವೇ ಸರಿಪಡಿಸಲು ಪ್ರಯತ್ನಿಸಿ. ಕಾರು ಹೊಂದಿದ ಮೇಲೆ ಅವುಗಳಲ್ಲಿರುವ ಮೂಲ ಸಂಗತಿಗಳನ್ನು ತಿಳಿದಿದ್ದರೆ ಒಳ್ಳೆಯದು. ಕಾರು ರಿಪೇರಿಯನ್ನು ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲದಿದ್ದರೂ, ಕೆಲವೊಂದು ಚಿಕ್ಕ ರಿಪೇರಿಗಳನ್ನು ಮಾಡಬಹುದು.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ಕಾರು ಬ್ಯಾಟರಿಯನ್ನು ಬದಲಾವಣೆ, ಬ್ರೇಕ್ ಲೈಟ್‍ ಬದಲಾವಣೆ, ವೈಪರ್ ಬ್ಲೇಡ್ ಬದಲಾವಣೆ, ಆಯಿಲ್ ಹಾಗೂ ಫಿಲ್ಟರ್ ಬದಲಾವಣೆಯಂತಹ ಕೆಲಸಗಳನ್ನು ನಾವೇ ಮಾಡಿಕೊಳ್ಳಬಹುದು. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ನಂತರ ಸುಲಭವಾಗಲಿದೆ.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ಉಪಯೋಗಕ್ಕೆ ಬರುವ ಹಳೆಯ ಬಿಡಿಭಾಗಗಳನ್ನು ಹುಡುಕಿ

ಕಾರಿನಲ್ಲಿರುವ ಯಾವುದೇ ಬಿಡಿಭಾಗ ಹಾಳಾಗಿದ್ದರೆ, ಅದನ್ನು ಹೊಸ ಬಿಡಿಭಾಗದಿಂದ ಬದಲಿಸುವ ಬದಲು, ಸಂಪೂರ್ಣವಾಗಿ ಹಾಳಾಗಿರದ ಹಳೆಯ ಬಿಡಿಭಾಗದಿಂದ ಬದಲಿಸುವುದು ಒಳ್ಳೆಯದು. ಹೆಚ್ಚಿನ ಪ್ರಮಾಣದ ಕಾರು ಮಾಲೀಕರಿಗೆ ಇದರ ಬಗ್ಗೆ ತಿಳಿಯದ ಕಾರಣ ಹೆಚ್ಚು ಹಣವನ್ನು ಪಾವತಿಸುತ್ತಿದ್ದಾರೆ.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ಹಳೆಯ ಬಿಡಿಭಾಗಗಳನ್ನು ಖರೀದಿಸುವ ಮುನ್ನ ಹೆಚ್ಚು ಜಾಗರೂಕತೆ ವಹಿಸಿದರೆ ಆಯಿತು. ಈ ರೀತಿಯ ಬಿಡಿಭಾಗಗಳನ್ನು ಖರೀದಿಸುವ ಮುನ್ನ ತಮ್ಮ ಆಪ್ತ ಹಾಗೂ ನಂಬಿಕಸ್ಥ ಮೆಕಾನಿಕ್‍‍ಗಳ ನೆರವನ್ನು ಪಡೆಯಿರಿ. ಇವುಗಳ ಬೆಲೆ ಕಡಿಮೆ ಇರುವುದರಿಂದ ಹೆಚ್ಚು ಹಣವನ್ನು ಉಳಿಸಬಹುದು.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ತೊಂದರೆ ಏನು ಎಂಬುದನ್ನು ತಿಳಿಯಿರಿ

ಕಾರು ರಿಪೇರಿಗೆ ಹೋದ ತಕ್ಷಣ ಕೆಲವು ಮೆಕಾನಿಕ್‍‍ಗಳು ಇಲ್ಲದೇ ಇರುವ ತೊಂದರೆಗಳನ್ನೆಲ್ಲಾ ಹೇಳಿ ದುಡ್ಡು ಕೀಳಲು ನೋಡುತ್ತಾರೆ. ಇಲ್ಲದೇ ಇರುವ ರಿಪೇರಿಯ ಬಗ್ಗೆ ಹೇಳಿ ರಿಪೇರಿ ಮಾಡಲಾಗಿದೆ ಎಂದು ದುಡ್ಡು ಕೀಳುವವರೇ ಹೆಚ್ಚು. ಆದ ಕಾರಣ ಏನು ತೊಂದರೆ ಎಂಬುದನ್ನು ಮೊದಲು ಪತ್ತೆ ಹಚ್ಚಿ ಅದಕ್ಕೆ ಪರಿಹಾರ ಹುಡುಕುವುದು ಒಳ್ಳೆಯದು.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ನಂಬಿಕಸ್ಥ ಮೆಕಾನಿಕ್ ಹುಡುಕಿ

ಎಲ್ಲಾ ಮೆಕಾನಿಕ್‍‍ಗಳು ದುಡ್ಡು ಕೀಳುವುದಿಲ್ಲ. ಕೆಲವು ಒಳ್ಳೆಯ ಮೆಕಾನಿಕ್‍‍ಗಳು ಸಹ ಇರುತ್ತಾರೆ. ಅಂತಹವರನ್ನು ಹುಡುಕಿ ನಿಮ್ಮ ಕಾರ್ ಅನ್ನು ರಿಪೇರಿಗೆ ನೀಡುವುದು ಒಳ್ಳೆಯದು. ಇವರ ಬದಲಿಗೆ ಮೋಸ ಮಾಡುವ ಮೆಕಾನಿಕ್‍‍ಗಳ ಕೈಗೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಕಾರು ರಿಪೇರಿಯಲ್ಲಿ ಹಣ ಉಳಿಸುವ ಸರಳ ವಿಧಾನಗಳಿವು..!

ತೊಂದರೆ ಆಗದಂತೆ ಎಚ್ಚರ ವಹಿಸುವುದು ಒಳ್ಳೆಯದು

ಪ್ರಿವೆನ್ಷನ್ ಇಸ್ ಬೆಟರ್ ದೆನ್ ಕ್ಯೂರ್ ಎಂಬಂತೆ ಕಾಯಿಲೆಗೆ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬರದಂತೆ ತಡೆದರೆ ಒಳ್ಳೆಯದು. ಕಾರುಗಳನ್ನು ಸರಿಯಾಗಿ ಮೆಂಟೆನ್ ಮಾಡಿದರೆ ಪದೇ ಪದೇ ಕಾರ್ ಅನ್ನು ಮೆಕಾನಿಕ್ ಬಳಿಗೆ ಕೊಂಡೊಯ್ಯುವುದು ತಪ್ಪುತ್ತದೆ.

Most Read Articles

Kannada
English summary
Tips to save money on car repair. Read in Kannada.
Story first published: Wednesday, January 29, 2020, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X