23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಜಗತ್ತಿನಲ್ಲಿ ಸಾಂಕ್ರಾಮಿಕ ರೋಗದ ನಡುವೆಯೂ ಕಾರುಗಳ ಮಾರಾಟವು ಸಾಗುತ್ತಲೇ ಇದೆ. ಹೊಸ ಕಾರುಗಳ ಜೊತೆಗೆ ಹಳೆಯ ಕಾರುಗಳನ್ನು ಸಹ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ ಬೆಲೆಯ ಕಾರನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಲಾಗಿದೆ. 1966ರ ಫೆರಾರಿ 275 ಜಿಟಿಬಿ ಲಾಂಗ್ ನೋಸ್ ಕಾರ್ ಅನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ 3.08 ಮಿಲಿಯನ್ ಡಾಲರ್ ಅಂದರೆ ರೂ.23.04 ಕೋಟಿಗಳಿಗೆ ಹರಾಜು ಹಾಕಲಾಗಿದೆ. ಈ ಕಾರು ಹರಾಜಿನಲ್ಲಿ 2003ರ ಫೆರಾರಿ ಎಂಜೊವನ್ನು ಹಿಂದಿಕ್ಕಿತು. ಫೆರಾರಿ ಎಂಜೊ ಕಾರ್ ಅನ್ನು 2.64 ಮಿಲಿಯನ್ ಡಾಲರ್ ಅಂದರೆ ರೂ.19.75 ಕೋಟಿಗಳಿಗೆ ಹರಾಜು ಹಾಕಲಾಗಿತ್ತು.

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಕಳೆದ ವಾರ ಈ ಹರಾಜು ಪ್ರಕ್ರಿಯೆಯನ್ನು ದಿ ಗುಡಿಂಗ್ ಅಂಡ್ ಕಂಪನಿ ನಡೆಸಿತು. ಈ ಕಾರಿನ ಬೆಲೆ ಮೂರು ತಿಂಗಳ ಹಿಂದೆ ಹರಾಜು ಹಾಕಿದ ಎಂಜೊ ಕಾರಿನ ಬೆಲೆಯನ್ನು ಮೀರಿಸಿದೆ. ಈ ಕಾರು 2.75 ದಶಲಕ್ಷ ಡಾಲರ್ ಗಳಿಂದ 3.25 ದಶಲಕ್ಷ ಡಾಲರ್ ಗಳವರೆಗೆ ಹರಾಜಾಗಬಹುದೆಂದು ಊಹಿಸಲಾಗಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಆದರೆ ಎಲ್ಲರ ಊಹೆಗಳನ್ನು ಮೀರಿ ಈ ಕಾರು ದಾಖಲೆಯ ಬೆಲೆಗೆ ಹರಾಜಾಗಿದೆ. ಈ ಫೆರಾರಿ ಕಾರು ಕಳೆದ ಐವತ್ತು ವರ್ಷಗಳಿಂದ ಸುಸಜ್ಜಿತವಾಗಿರುವುದೇ ಇಷ್ಟೊಂದು ಬೆಲೆಗೆ ಹರಾಜಾಗಲು ಪ್ರಮುಖ ಕಾರಣವಾಗಿದೆ.

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಈ ಕಾರಿನ ಇಂಟಿರಿಯರ್ ಈಗಲೂ ಸಹ ಹೊಸದರಂತೆಯೇ ಇದೆ. ಈ ಕಾರು ಕೊನೆಯದಾಗಿ ಮಾರಾಟವಾದ ಎರಡು ಅಂತಿಮ ಕ್ಯಾಮ್ 275 ಜಿಟಿಬಿ ಮಾದರಿಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಈ ಕಾರು ಟಾರ್ಕ್ ಟ್ಯೂಬ್ ಡೌನ್‌ಶಿಫ್ಟ್ ಹಾಗೂ 6-ಕಾರ್ಬ್ಯುರೇಟರ್ ಇನ್ ಟೇಕ್ ಗಳನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಸಾಂಕ್ರಾಮಿಕ ರೋಗವಿರಲಿ ಬಿಡಲಿ ಈ ಕಾರು ಎಂದೆಂದಿಗೂ ವಿಶೇಷ ಕಾರು ಎಂದು ದಿ ಗುಡಿಂಗ್ ಅಂಡ್ ಕಂಪನಿಯ ಸಿಇಒ ಹೇಳಿದ್ದಾರೆ. ಅವರು ಈ ಕಾರ್ ಅನ್ನು ವೈರಸ್ ಪ್ರೂಫ್ ಕಾರು ಎಂದು ಕರೆಯುತ್ತಾರೆ.

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಈ ಕಾರು ಒರಿಜಿನಲ್ ಇಂಟಿರಿಯರ್, ಒರಿಜಿನಲ್ ಬಣ್ಣ ಹೊಂದಿದ್ದು, ಹಲವಾರು ವರ್ಷಗಳಿಂದ ಒಬ್ಬರೇ ವ್ಯಕ್ತಿ ಈ ಕಾರಿನ ಮಾಲೀಕತ್ವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಫೆರಾರಿ ಕಂಪನಿಯು ವೇಗದ ಕಾರುಗಳನ್ನು ತಯಾರಿಸುವುದಕ್ಕೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಫೆರಾರಿ ಕಂಪನಿಯ ಕಾರುಗಳು ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತವೆ. ಐವತ್ತಕ್ಕೂ ಹೆಚ್ಚು ವರ್ಷ ಹಳೆಯದಾದ ಈ ಕಾರು ಈಗಲೂ ಉತ್ತಮ ಸ್ಥಿತಿಯಲ್ಲಿದೆ.

23 ಕೋಟಿ ರೂಪಾಯಿಗಳಿಗೆ ಹರಾಜಾಯ್ತು 54 ವರ್ಷ ಹಳೆಯ ಕಾರು

ಗುಡಿಂಗ್ ಅಂಡ್ ಕಂಪನಿಯು ಕ್ಲಾಸಿಕ್ ಕಾರುಗಳನ್ನು ಹರಾಜು ಹಾಕುವುದಕ್ಕೆ ಹೆಸರುವಾಸಿಯಾಗಿದೆ. ಕರೋನಾ ವೈರಸ್ ಸಾಂಕ್ರಾಮಿಕ ಸಮಯದಲ್ಲೂ ಜನರು ದುಬಾರಿ ಕಾರುಗಳ ಹರಾಜಿನಲ್ಲಿ ಪಾಲ್ಗೊಂಡು ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ.

Most Read Articles

Kannada
English summary
54 years old Ferrari car auctioned for Rs 23 crore. Read in Kannada.
Story first published: Friday, August 14, 2020, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X